ಕಾರ್ಮಿಕ ಕಾರ್ಡ್ ಇದ್ದವರು ಇನ್ಮುಂದೆ ಉಚಿತ ಪ್ರಯಾಣ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತ.? ಕಾರ್ಮಿಕ ಕಾರ್ಡ್ ಗೆ ತಿಲಾಂಜಲಿ ಇಟ್ಟ ರಾಜ್ಯ ಸರ್ಕಾರ.!

 

WhatsApp Group Join Now
Telegram Group Join Now

ಕಳೆದ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಪೈಕಿ ಕಾರ್ಮಿಕರಿಗಾಗಿ ನೀಡಿದ್ದ ಉಚಿತ ಪಾಸ್ 1 ಲಕ್ಷ ಕಾರ್ಮಿಕರಿಗೆ ವಿತರಣೆಯಾಗಿತ್ತು. ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಆಗಿದ್ದ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕ ಫಲಾನುಭವಿಗಳು ಈ ಉಚಿತ ಬಸ್ ಪಾಸ್ ಅನುಕೂಲತೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 45 km ವರೆಗೆ ಉಚಿತವಾಗಿ ಪ್ರಯಾಣ ಮಾಡಬಹುದಾಗಿತ್ತು.

ಆರು ತಿಂಗಳವರೆಗೆ ಈ ವ್ಯವಸ್ಥೆ ಮಾಡಿ ನಂತರ ನವೀಕರಣಗೊಳಿಸಿದವರಿಗೆ ಇನ್ನಷ್ಟು ಅವಧಿಗೆ ಅದನ್ನು ವಿಸ್ತರಿಸಲಾಗುತ್ತಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಈ ಕಾರ್ಯ ಸ್ಥಗಿತಗೊಂಡಿದೆ. ಮಾರ್ಚ್ 31ನೇ ತಾರೀಖಿನಿಂದ ನವೀಕರಣ ಕಾರ್ಯ ನಡೆಯುತ್ತಿಲ್ಲ, ಹಾಗಾಗಿ ಸರ್ಕಾರದ ಈ ಯೋಜನೆ ನಿಂತು ಹೋಯ್ತಾ ಎನ್ನುವ ಅನುಮಾನಗಳು ಹುಟ್ಟು ಕೊಂಡಿವೆ.

ತಮ್ಮ ಸ್ಥಳದಿಂದ ಕೆಲಸದ ಕಾರಣಕ್ಕಾಗಿ ಮತ್ತೊಂದು ಸ್ಥಳಕ್ಕೆ ಹೋಗುವುದು ಕಟ್ಟಡ ಕಾರ್ಮಿಕರಿಗೆ ಅನಿವಾರ್ಯವಾಗಿತ್ತು. ಪ್ರತಿದಿನ ಸಂಚಾರ ಮಾಡುವವರು ಹಾಗೂ ವಲಸೆ ಕಾರ್ಮಿಕರಿಗೆ ಪ್ರಯಾಣದ ವೆಚ್ಚವು ಹೊರೆ ಆಗಿತ್ತು, ಇದನ್ನು ಮನಗಂಡ ಸರ್ಕಾರವು ಈ ರೀತಿ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿತ್ತು.

ಇದರಿಂದ ಕಾರ್ಮಿಕರ ಮನದಲ್ಲೂ ಕೂಡ ಸಂತಸ ಮೂಡಿತ್ತು. ಯೋಜನೆ ಜಾರಿಗೆ ಬಂದಾಗಲಿಂದಲೂ ಸಾಕಷ್ಟು ಕಾರ್ಮಿಕರು ಇದರ ಪ್ರಯೋಜನ ಎದುಕೊಂಡಿದ್ದರು. ಮೊದಲಿಗೆ ಬೆಂಗಳೂರು ಮಹಾನಗರದ BMTC ಬಸ್ ಗಳಲ್ಲಿ ಸಂಚಾರ ಮಾಡುವ ಕಾರ್ಮಿಕರಿಗೆ ಈ ಅನುಕೂಲತೆ ಮಾಡಿಕೊಡಲಾಗಿದ್ದರು ನಂತರ ದಿನಗಳಲ್ಲಿ ಇದರ ಅಗತ್ಯತೆ ಅರಿತು ಅದನ್ನು KSRTC ಗೂ ಕೂಡ ವಿಸ್ತರಿಸಲಾಗಿತ್ತು. ಇದರಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಕಾರ್ಮಿಕರೆಲ್ಲರಿಗೂ ಅನುಕೂಲ ಆಗುತ್ತಿತ್ತು.

ಮಾರ್ಚ್ 31ಕ್ಕೆ ಸಮಯ ಮೀರಿ ನವೀಕರಿಸಲು ಹೋದವರಿಗೆ ಶಾ’ಕ್ ಆಗಿದೆ. ಯಾಕೆಂದರೆ ಸರ್ಕಾರವು ಪಾಸ್ ನವೀಕರಿಸುವುದನ್ನು ಮತ್ತು ಹೊಸ ಪಾಸ್ ನೀಡುವುದನ್ನು ತಡೆ ಹಿಡಿದಿದೆ. ಸರ್ಕಾರದ ಈ ನಿರ್ಧಾರ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಜನ ಈಗ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭಾ ಎಲೆಕ್ಷನ್ ನಡೆದು ಹೊಸ ಸರ್ಕಾರ ರಚನೆ ಆಗುತ್ತಿದೆ.

ಆದ್ದರಿಂದ ಕಳೆದ ಸರ್ಕಾರವು ಜಾರಿಗೆ ತಂದ ಈ ಯೋಜನೆ ನಿಂತಿದೆಯಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ಇದೆ. ಅವುಗಳ ಜೊತೆಗೆ ಹಿಂದೆ ಕಾರ್ಮಿಕರಿಗಾಗಿ ಇದ್ದ ಉಚಿತ ಪಾಸ್ ವ್ಯವಸ್ಥೆಯನ್ನು ಕೂಡ ಮುಂದುವರಿಸಿ ಎಂದು ಪಟ್ಟು ಹಿಡಿದಿದ್ದಾರೆ.

ಸರ್ಕಾರಿ ಜಾರಿಯಾದ ಮೇಲೆ ಹಳೆ ಸರ್ಕಾರದ ಹಲವು ಯೋಜನೆಗಳು ನಿಂತು ಹೋಗುವುದು ಕಾಲದಿಂದಲೂ ರೂಢಿ ಆಗಿದೆ. ಸರ್ಕಾರ ಕಾರ್ಮಿಕರ ಕಾರ್ಡಿಗೆ ನೀಡಿರುವ ಈ ಅನುಕೂಲತೆಯ ಆಳ ಮತ್ತು ಅವಶ್ಯಕತೆ ಅರಿತು ಇದನ್ನು ಮುಂದುವರಿಸುತ್ತದೆಯೋ ಅಥವಾ ತನ್ನ ಹೊಸ ಗ್ಯಾರಂಟಿ ಕಾರ್ಡ್ ಗಳ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹಳೆ ಯೋಜನೆಗೆ ತಿಲಾಂಜಲಿ ಇಡಲಿದೆಯೋ ಎನ್ನುವ ವಿಷಯಕ್ಕೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. ಇದರ ಬಗ್ಗೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now