ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕ ಇಲಾಖೆ ಕರ್ನಾಟಕ ಸರ್ಕಾರ ಇವರ ವತಿಯಿಂದ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಇದರ ಬಗ್ಗೆ ಘೋಷಣೆ ಕೂಡ ಮಾಡಲಾಗುತ್ತದೆ. ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕರಾಗಿರುವ ಎಲ್ಲರೂ ಸಹ ಲೇಬರ್ ಕಾರ್ಡ್ ಹೊಂದಿದ್ದರೆ ಈ ಅನುಕೂಲ ಪಡೆಯಬಹುದಾಗಿದೆ.
ಈ ಮೂಲಕ ರಾಜ್ಯದಾದ್ಯಂತ ಯಾವುದೇ ಬಸ್ಸುಗಳಲ್ಲಿ ಉಚಿತವಾಗಿ ಕೂಡ ಪ್ರಯಾಣಿಸಬಹುದಾಗಿದೆ. ಮಹಿಳೆ ಹಾಗೂ ಪುರುಷ ಇಬ್ಬರೂ ಕಾರ್ಮಿಕರು ಕೂಡ ಈ ಯೋಜನೆಯ ಉಪಯೋಗ ಪಡೆಯಬಹುದಾಗಿದೆ. ಈಗಾಗಲೇ ಇದಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಪ್ರಕ್ರಿಯೆ ಕೂಡ ಆರಂಭ ಆಗಿದ್ದು ಎಷ್ಟು ದಿನದ ಒಳಗೆ ಅರ್ಜಿ ಸಲ್ಲಿಸಬೇಕು ಹಾಗೂ ಯಾವಾಗ ಇದು ನಿಮ್ಮ ಕೈ ಸೇರುತ್ತದೆ ಎನ್ನುವ ಇನ್ನಿತ್ಯಾದಿ ಮಾಹಿತಿಗಳು ಇಲ್ಲಿವೆ ನೋಡಿ.
ಸರ್ಕಾರ ಮಾಡಿರುವ ಅತ್ಯುತ್ತಮ ಯೋಜನೆಗಳಲ್ಲಿ ಒಂದಾದ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಅನುಕೂಲವಾಗುತ್ತಿರುವ ಈ ಕಾರ್ಮಿಕ ಉಚಿತ ಬಸ್ ಪಾಸ್ ಗೆ ಅರ್ಜಿ ಹಾಕಲು ಈ ರೀತಿ ಮಾಡಬೇಕು. ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಆಗಿರುವ ಕಾರ್ಮಿಕರು ಮಾತ್ರ ಈ ಉಚಿತ ಬಸ್ ಪಾಸ್ ಅನುಕೂಲತೆಯನ್ನು ಪಡೆಯಬಹುದಾಗಿದೆ.
ಈ ಬಸ್ ಪಾಸ್‌ಗಳನ್ನು ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಸರಕಾರದ ಈ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅಲ್ಲಿ ವಿತರಣೆ ಮಾಡಲಿದೆ. ಸರ್ಕಾರವು 2022 – 23 ನೇ ಸಾಲಿನ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಿ ಜಾರಿಗೆ ತಂದಿತ್ತು.
ಈಗ ಈ ರಿಯಾಯಿತಿ ಬಸ್ ಪಾಸ್ ಉಪಯೋಗಿಸಿಕೊಂಡು 45 ಕಿ.ಮೀ ವರೆಗೆ ಉಚಿತವಾಗಿ ಸಂಚಾರ ಮಾಡಬಹುದಾಗಿದೆ. ಇದನ್ನು ರಾಜ್ಯದ್ಯಂತ ವಿಸ್ತರಿಸಲು ಸರ್ಕಾರ ಅನುಮೋದನೆ ಸಹ ನೀಡಿದೆ. 2023 – 24ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಅಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಈ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಬಸ್ ಯೋಜನೆಯಿಂದ.
ಈಗಾಗಲೇ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಪೇಟೆ, ನೆಲಮಂಗಲ ಸೇರಿದಂತೆ ಬೆಂಗಳೂರು ಗ್ರಾಮಾಂತರ ವಲಯದಲ್ಲಿಯೇ ಸುಮಾರು 48 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದರ ಅನುಕೂಲ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಇದರಿಂದ ಅವರ ಸಾರಿಗೆ ವೆಚ್ಚ ಉಳಿತಾಯ ಆಗುತ್ತಿದೆ. ಈವರೆಗೆ 45kmವರೆಗೆ ಈ ಬಸ್ ಪಾಸ್ ಇಂದ ಉಚಿತವಾಗಿ ಸಂಚರಿಸಬಹುದಾಗಿದೆ, ಅದರ ಅನುಕೂಲವನ್ನು ಲೇಬರ್ ಕಾರ್ಡ್ ಮತ್ತು ಉಚಿತ ಪಾಸ್ ಇರುವ ಎಲ್ಲಾ ಕಾರ್ಮಿಕರು ಪಡೆಯುತ್ತಿದ್ದಾರೆ.
ಆದರೆ ಇದನ್ನು ಇದನ್ನು ರಾಜ್ಯದಾದ್ಯಂತ ವಿಸ್ತರಿಸಬೇಕು ಎನ್ನುವ ಕೂಗು ಕಾರ್ಮಿಕ ವಲಯದಿಂದ ಬಲವಾಗಿ ಕೇಳಿ ಬರುತ್ತಿದೆ. ಬೆಂಗಳೂರಿಗೆ ರಾಜ್ಯದ ಹೊರವಲಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಈ ರೀತಿ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರು ಕೆಲಸಕ್ಕಾಗಿ ಬರುತ್ತಾರೆ. ಅವರಿಗೆಲ್ಲ ಇದುವರೆಗೆ ಬಸ್ ಸಾರಿಗೆ ವೆಚ್ಚಕ್ಕಾಗಿ ಅಥವಾ ಆಟೋ ಅಥವಾ ಇನ್ನಿತರ ವಾಹನಗಳ ಚಾರ್ಜ್ ಗಾಗಿ ಹಣ ವ್ಯರ್ಥವಾಗುತ್ತಿತ್ತು. ಸರ್ಕಾರ ಈ ಯೋಜನೆ ರೂಪಿಸುವುದು ಅವರೆಲ್ಲರ ಪಾಲಿಗೆ ವರದಾನವಾಗಿದೆ.
ಇದರಿಂದ ರಾಜ್ಯದ ಇತರೆ ಭಾಗದಲ್ಲಿ ಇರುವ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೂ ಕೂಡ ಬಹಳ ಅನುಕೂಲ ಆಗುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸಬೇಕು ಎನ್ನುವುದು ಈ ಕಾರ್ಮಿಕ ವಲಯದ ಒಕ್ಕೊರಳ ಆಶಯ. ಈ ವಿಷಯದ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.