ಕೇಂದ್ರ ಸರ್ಕಾರವು (Central Government) ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (Rashtreeya Grameena Udyoga Khathri Yojane) ದೇಶದ ಎಲ್ಲರ ಗಮನವನ್ನು ಸೆಳೆದಿದೆ. ಗ್ರಾಮೀಣ ಭಾಗದ ಯುವಜನತೆಗೆ ಉದ್ಯೋಗಾವಕಾಶ ನೀಡಿ ಜೊತೆಗೆ ಗ್ರಾಮಗಳ ಅಭಿವೃದ್ಧಿಯತ್ತ ತೊಡಗಿಸಿಕೊಳ್ಳುವಲ್ಲಿ ಈ ಯೋಜನೆ ನೆರವಾಗುತ್ತಿದೆ.
ಈ ಯೋಜನೆಯಿಂದ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ, ಜಾನುವಾರುಗಳಿಗೆ ಕುಡಿಯುವ ನೀರಿನ ಘಟಕ ನಿರ್ಮಾಣ, ರೈತನ ಜಮೀನಿನಲ್ಲಿ ಕೃಷಿ ಹೊಂಡ, ಜಾನುವಾರುಗಳಿಗೆ ಶೆಡ್ ನಿರ್ಮಾಣ ಇನ್ನೂ ಮುಂತಾದ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗುತ್ತದೆ. ನರೇಗಾ ಜಾಬ್ ಕಾರ್ಡ್ ಪಡೆದು ನೋಂದಣಿಯಾದ ಯುವಕರಿಗೆ ಒಂದು ವರ್ಷಕ್ಕೆ ನೂರು ದಿನಗಳ ಉದ್ಯೋಗ ಖಾತ್ರಿ ಭರವಸೆಯನ್ನು ನೀಡಲಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿರ್ಮಾಣಕ್ಕೆ 4 ಲಕ್ಷ ಸಹಾಯಧನ ಬಿಡುಗಡೆ, ಆಸಕ್ತ ರೈತರು ಅರ್ಜಿ ಸಲ್ಲಿಸಿ.!
ಇವರ ಉದ್ಯೋಗಕ್ಕೆ ನೀಡುವ ವೇತನವನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (IBPS) ಮೂಲಕ ಮಾಡಲು ಸರ್ಕಾರ ನಿರ್ಧರಿಸಿ. ಇದರ ಅಳವಡಿಕೆಗೆ ನೀಡಿದ್ದ ಗಡುವನ್ನು ಮೂರು ಬಾರಿ ಈವರೆಗೆ ವಿಸ್ತರಣೆ ಮಾಡಿದೆ. ಆಗಸ್ಟ್ 31 ನೇ ತಾರೀಕನ್ನು ಕೊನೆಯ ದಿನಾಂಕ ಮತ್ತೆ ಈ ಕಾಲಾವಕಾಶವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
ಜನವರಿ 2024ರಲ್ಲಿಯೇ ನರೇಗಾ (NAREGA) ಯೋಜನೆಯಡಿ ದಾಖಲಾದವರಿಗೆ ಕೂಲಿ ಪಾವತಿಸಲು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಎಲ್ಲಾ ಕಾರ್ಮಿಕರಿಗೂ ಆಧಾರ್ ಲಿಂಕ್ (Aadhar link) ಮಾಡಲು ಸೂಚನೆ ನೀಡಲಾಗಿತ್ತು, ಮೊದಲಿಗೆ ಫೆಬ್ರವರಿ 1ರವರೆಗೆ ಗಡುವು ನೀಡಿ ಬಳಿಕ ಈ ಇದನ್ನು ಮಾರ್ಚ್ 31 ರ ವರೆಗೆ ವಿಸ್ತರಿಸಿತು.
ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಮಹಿಳೆಯರ ಖಾತೆಗೆ ವರ್ಗಾವಣೆ ಆಗಿದೆ.! ಈ ವಿಧಾನದಲ್ಲಿ ಚೆಕ್ ಮಾಡಿ ನೋಡಿ.!
ಜೂ.30ರವರೆಗೆ ಮತ್ತೊಮ್ಮೆ ಅವಕಾಶ ನೀಡಿ ಕೊನೆಯದಾಗಿ ಈಗ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಿದೆ. ಮತ್ತೆ ಯಾವ ಕಾರಣಕ್ಕೂ ಈ ಕಾಲವಕಾಶವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸರ್ಕಾರದ ಈ ನಿಯಮ ಖಾಲಿಯಾದ ಮೇಲೆ ಇದುವರೆಗೆ 90% ರಷ್ಟು ಸಕ್ರಿಯ ನರೇಗಾ ಕಾರ್ವಿುಕರು ತಮ್ಮ ಖಾತೆಯನ್ನು ಈಗಾಗಲೇ ಆಧಾರ್ನೊಂದಿಗೆ ಜೋಡಣೆ ಮಾಡಿದ್ದಾರೆ.
ಹಾಗಾಗಿ ಇನ್ನುಳಿದವರಿಗೆ ಇದು ಕಡೆ ಅವಕಾಶ ಈ ಕಾಲಮಿತಿಯನ್ನು ಮತ್ತೆ ಮುಂದೂಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಚಿವಾಲಯದ ಪ್ರಕಾರ ಇಲ್ಲಿಯ ತನಕ ಒಟ್ಟು 12.17 ಕೋಟಿ ಆಧಾರ್ ಸಂಖ್ಯೆ ದೃಢೀಕರಿಸಲಾಗಿದೆ. 77.81 ಪ್ರತಿಶತದಷ್ಟು ಜನರು ABPS ಗೆ ಅರ್ಹರಾಗಿದ್ದಾರೆ. ಮೇ 2023 ರೀಂದ ABPS ವಿಧಾನದ ಮೂಲಕವೇ ಸುಮಾರು 88% ವೇತನ ನೀಡಲಾಗಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಇಂದಿನಿಂದ ಗ್ಯಾಸ್ ಸಿಲಿಂಡರ್ ಮೇಲೆ 400 ರೂಪಾಯಿ ಕಡಿತ ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ.!
ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಮುಂಗಾರು ಅಧಿವೇಶನ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ( Minister Giriraj Singh) ನೀಡಿರುವ ಲಿಖಿತ ಉತ್ತರ ಪ್ರಕಾರ ಸುಮಾರು 1.13ಕೋಟಿ ನರೇಗಾ ಕಾರ್ವಿುಕರಿದ್ದಾರೆ ಬ್ಯಾಂಕ್ ಖಾತೆಗಳಿವೆ. ಇದರಲ್ಲಿ ಯೋಜನೆಯಡಿ ಸಕ್ರಿಯರಾಗಿರುವ ಸುಮಾರು 8% ರಷ್ಟು ಬ್ಯಾಂಕ್ ಖಾತೆಗಳು ಮಾತ್ರ ಆಧಾರ್ನೊಂದಿಗೆ ಜೋಡಣೆಯಾಗಿಲ್ಲ.
ಅದರಲ್ಲೂ ಈಶಾನ್ಯ ರಾಜ್ಯಗಳಲ್ಲೇ ಈ ಪ್ರಕ್ರಿಯೆ ಹಿಂದೆ ಉಳಿದಿದೆ ಎಂದು ತಿಳಿಸಿ ವಿವರ ನೀಡಿದ್ದಾರೆ. ಈ ಪ್ರಕಾರ ಅಸ್ಸಾಂನಲ್ಲಿ 42%, ಅರುಣಾಚಲ ಪ್ರದೇಶದಲ್ಲಿ 23%, ಮೇಘಾಲಯದಲ್ಲಿ 70%, ನಾಗಾಲ್ಯಾಂಡ್ನಲ್ಲಿ 37%ರಷ್ಟು ಕಾರ್ವಿುಕರ ಖಾತೆ ಆಧಾರ್ನೊಂದಿಗೆ ಲಿಂಕ್ ಆಗಿಲ್ಲ ಎಂದು ಶೇಕಡವಾರು ವಿವರ ನೀಡಿದ್ದಾರೆ.