ಸಾರ್ವಜನಿಕರು ಇನ್ನು ಮುಂದೆ ಇ-ಸ್ವತ್ತು, ಖಾತೆ ಬದಲಾವಣೆ ಮುಂತಾದ ಕೆಲಸಗಳಿಗಾಗಿ ನಗರಸಭೆ ಕಚೇರಿಗಳಿಗೆ ತಿಂಗಳುಗಟ್ಟಲೇ ಅಲೆಯಬೇಕಾದ ಅವಶ್ಯಕತೆ ಇಲ್ಲ, ಯಾಕೆಂದರೆ ಪೌರಾಡಳಿತ ಇಲಾಖೆಯು e-AASTHI ಎನ್ನುವ ಹೊಸ ತಂತ್ರಾಂಶವನ್ನು ಸಿದ್ದಪಡಿಸಿದೆ. ಇದರ ಮೂಲಕ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ಸೇವೆಗಳಿಗೆ ಆನ್ಲೈನ್ (online application) ಮೂಲಕವೇ ಅರ್ಜಿ ಸಲ್ಲಿಸಿ ಏಳು ದಿನಗಳಲ್ಲಿಯೇ ನಿಮ್ಮ ಕೆಲಸವನ್ನು ಪೂರ್ತಿ ಮಾಡಿಕೊಳ್ಳಬಹುದು.
ಇನ್ನು ಮುಂದೆ ಆಸ್ತಿಗೆ ಸಂಬಂಧಿಸಿದಂತಹ ಕೆಲಸಗಳಾದ ಇ-ಸ್ವತ್ತು, ಖಾತೆ ಬದಲಾವಣೆ ಇವುಗಳಿಗೆ ಮಾಲೀಕರು ಕೈಬರಹದಲ್ಲಿ ಪತ್ರ ಬರೆದು ಸಲ್ಲಿಸುವ ಅವಶ್ಯಕತೆ ಇಲ್ಲ. e-AASTHI ವೆಬ್ ಸೈಟ್ ಮೂಲಕ ಆನ್ಲೈನಲ್ಲಿ ಸರಾಗವಾಗಿ ಕಾಗದರಹಿತ ವ್ಯವಹಾರವಾಗಿ ಈ ಡಿಜಿಟಲ್ ಫ್ಲಾಟ್ ಫಾರ್ಮ್ ಮೂಲಕ ಇದೆಲ್ಲವೂ ನಡೆಯಲಿದೆ.
ರಾಜ್ಯ ಪೌರಾಣಿತ ಇಲಾಖೆಯು (Municipal administration) ಈ ತಂತ್ರಾಂಶವನ್ನು ಆಗಸ್ಟ್ 15ರಂದು ಅನುಷ್ಠಾನಗೊಳಿಸಿದೆ. ಸೆಪ್ಟೆಂಬರ್ 1 ರಿಂದ ಇದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದ್ದು ಇದರ ಮೂಲಕ ಮೊದಲನೇ ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಗೆ ಬರುವ ಮಹಾನಗರ ಪಾಲಿಕೆ, ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿಯಲ್ಲಿ ನಡೆಯುವ ಖಾತೆ ಬದಲಾವಣೆ, ಇ-ಸ್ವತ್ತು, ಹೊಸ ಆಸ್ತಿ ಗುರುತಿನ ಸಂಖ್ಯೆ, ಹಕ್ಕು ಬದಲಾವಣೆ ಹಾಗೂ ಹಕ್ಕು ವಿಭಜನೆಗೆ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ಎಲ್ಲಾ ಸೇವೆಗಳಿಗೂ (Property services) ಕೂಡ ಮಾಲೀಕರು ಆನ್ಲೈನಲ್ಲಿಯೇ ಅರ್ಜಿ ಸಲ್ಲಿಸಬಹುದು.
ಈ ರೀತಿ ಸಲ್ಲಿಕೆಯಾಗುವ ಅರ್ಜಿಗಳು ನೇರವಾಗಿ ಬಿಲ್ ಕಲೆಕ್ಟರ್ ಲಾಗಿನ್ ಗೆ ಹೋಗಿ ಬೀಳಲಿವೆ. ಬಿಲ್ ಕಲೆಕ್ಟರ್ ಅರ್ಜಿ ಪರಿಶೀಲಿಸಿ, ಸ್ಥಳ ಪರಿಶೀಲನೆ ಮಾಡಿ ಮೂರು ದಿನಗಳಲ್ಲಿ ಅವರು ಇದಕ್ಕೆ ಉತ್ತರಿಸಲಿದ್ದಾರೆ ನಂತರ ಕಂದಾಯ ನಿರೀಕ್ಷಕರ ಲಾಗಿನ್ ಗೆ ಹೋಗುತ್ತದೆ. ಕಂದಾಯ ಅಧಿಕಾರಿಗಳ ಪರಿಶೀಲನೆ ಮಾಡಿ ನಂತರ ಎರಡು ದಿನಗಳಲ್ಲಿ ಮುಂದಕ್ಕೆ ಕಳುಹಿಸಬೇಕು. ಅದು ಆಯುಕ್ತರ ಲಾಗಿನ್ ಗೆ ಹೋಗುತ್ತದೆ.
ಹೀಗೇ 7 ದಿನಗಳಲ್ಲಿ ಅರ್ಜಿ ವಿಲೇವಾರಿ ಆಗುವಂತೆ e-AASTHI ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ಯಾರ ಬಳಿ ಎಷ್ಟು ದಿನ ಅರ್ಜಿ ಇರಬಹುದು ಎಂದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಾಗಿ ಮೊದಲು ಬಂದ ಅರ್ಜಿಗಳು ಮೊದಲು ವಿಲೇವಾರಿ ಆಗುವಂತೆ ಯಾರ ಲಾಗಿನ್ ಅಲ್ಲೂ ಕೂಡ ಹೆಚ್ಚು ದಿನ ಅರ್ಜಿಗಳು ಉಳಿಯದಂತೆ ಈ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ಆದರೆ ಖಾತೆ ಬದಲಾವಣೆ ಅರ್ಜಿ ವಿಲೇವಾರಿಗೆ ಮಾತ್ರ 45 ದಿನಗಳು ಹಿಡಿಯಲಿದೆ, ಕಟ್ಟಡ ಪರವಾನಗಿ ಮತ್ತು ವಾಣಿಜ್ಯ ಪರವಾನಗಿ ವಿಲೇವಾರಿಗೂ ಮುಂದಿನ ವಾರಗಳಲ್ಲಿ ಗಡುವು ನಿರ್ಧಾರವಾಗಲಿದೆ.
e-AASTHI ಅರ್ಜಿ ಸಲ್ಲಿಸುವ ವಿಧಾನ:-
● https://eaasthi.mrc.gov.in/ ವೆಬ್ ಸೈಟ್ ಗೆ ಭೇಟಿ ನೀಡಿ, e-AASTHI Citizen application ಲಿಂಕ್ ಮಾಡಿ ನೋಂದಣಿಯಾಗಿ ನಂತರ ಲಾಗ್ ಇನ್ ಆಗಿ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಹೋದವರಿಗೆ ಅನುಕೂಲತೆ ಮಾಡಿಕೊಳ್ಳಲು ಮಹಾನಗರ ಪಾಲಿಕೆ ನಗರಸಭೆ ಪುರಸಭೆ ಕಚೇರಿ ಆವರಣದಲ್ಲಿ ಸಹಾಯವಾಣಿ ಕೇಂದ್ರ ಕೂಡ ತೆರೆಯಲಾಗುತ್ತಿದೆ.
● ಕರ್ನಾಟಕ ಒನ್ ಕೇಂದ್ರದಲ್ಲೂ ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಬೇಕಾಗುವ ದಾಖಲೆಗಳು:-
● ಆಸ್ತಿ ಗುರುತಿನ ಸಂಖ್ಯೆ (PID) ಕಡ್ಡಾಯ
● ಆಸ್ತಿ ಮೇಲಿನ ಹಕ್ಕು ನಿರೂಪಿಸುವ ದಾಖಲೆ ಪತ್ರಗಳಲ್ಲಿ ಯಾವುದಾದರೂ ಒಂದು
● ಆಸ್ತಿ ತೆರಿಗೆ ಪಾವತಿಸಿರುವ ರಶೀದಿ
● ಖಾತೆ ಪ್ರಮಾಣ ಪತ್ರ
● ಸ್ವತ್ತಿಗೆ ಸಂಬಂಧಿಸಿದ ವಿವರಗಳು ಹಾಗೂ ದಾಖಲೆ ಪತ್ರಗಳು.