ರೇಷನ್ ಕಾರ್ಡ್ (Ration Card) ಎನ್ನುವುದು ಈಗ ಬಹಳ ಅತ್ಯಗತ್ಯ ದಾಖಲೆಯಾಗಿದೆ. ಯಾಕೆಂದರೆ ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ (Annabhagya and Gruhalakshmi Rationcard based Schemes) ಹಣ ಪಡೆಯಬೇಕು ಎಂದರೆ ರೇಷನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ಸರಿಯಾಗಿ ಇರಬೇಕು.
ಇದಲ್ಲದೆ ರೈತ, ಕಾರ್ಮಿಕ ಹೀಗೆ ಆಯಾ ವರ್ಗಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸುವ ಯೋಜನೆಗಳ ಅನುಧಾನಗಳನ್ನು ಪಡೆಯಬೇಕು ಎಂದರು ಕೂಡ ಅಗತ್ಯ ದಾಖಲೆಯಾಗಿ ರೇಷನ್ ಕಾರ್ಡ್ ನ್ನು ಕೇಳಲಾಗುತ್ತದೆ. ಅದರಲ್ಲೂ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಇದರಲ್ಲಿ ಹೆಚ್ಚಿನ ರಿಯಾಯಿತಿ ಇರುತ್ತದೆ, ವೈದ್ಯಕೀಯ ಖರ್ಚು ವೆಚ್ಚಗಳು ಹಾಗೂ ಶೈಕ್ಷಣಿಕ ಖರ್ಚು ವೆಚ್ಚಗಳಲ್ಲಿ ಈಗಾಗಲೇ BPL ರೇಷನ್ ಕಾರ್ಡ್ ಹೊಂದಿರುವವರು ರಿಯಾಯಿತಿ ಪಡೆಯುತ್ತಿರುವ ಉದಾಹರಣೆಯನ್ನು ಕೂಡ ನಾವು ಕಾಣಬಹುದಾಗಿದೆ.
ರೇಷನ್ ಕಾರ್ಡ್ ಗೆ ಇಷ್ಟೊಂದು ಪ್ರಾಮುಖ್ಯತೆ ಬಂದ ಕೂಡಲೇ ಸರ್ಕಾರಗಳು ಕೂಡ ರೇಷನ್ ಕಾರ್ಡ್ ಗೆ ಹೊಸ ರೂಪ (New Model Rationcard) ಕೊಡಲು ಚಿಂತನೆ ನಡೆಸುತ್ತಿವೆ. ಪಡಿತರ ಚೀಟಿ ಪಡೆಯುವುದಕ್ಕೆ ಮೀಸಲಾಗಿದ್ದರೆ ರೇಷನ್ ಕಾರ್ಡ್ ಇನ್ನು ಮುಂದೆ ಅದಕ್ಕಿಂತಲೂ ಹೆಚ್ಚು ಕಾರ್ಯಗಳಿಗೆ ಅನುಕೂಲಕ್ಕೆ ಬರಬೇಕು ಎನ್ನುವ ಉದ್ದೇಶದಿಂದ.
ಸರ್ಕಾರ ಕೈಗೊಂಡಿರುವ ಒಂದು ಕ್ರಮದ ಬಗ್ಗೆ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (KFCSD Minister K.H Muniyappa) ರವರು ಇತ್ತೀಚೆಗೆ ನಡೆದ ಒಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡೂವರೆ ವರ್ಷಗಳಿಂದಲೂ ಕೂಡ ಲಕ್ಷಾಂತರ ಜನ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಹಾಕಿ ಕಾದು ಕುಳಿತಿದ್ದಾರೆ.
ಇಂಥವರಿಗೆ ಸದ್ಯದಲ್ಲಿಯೇ ಅವರ ಅರ್ಜಿಗಳ ವಿಲೇವಾರಿ ಮಾಡಿ APL ಕಾರ್ಡ್ ಹಾಗೂ BPL ಕಾರ್ಡ್ ಎಂದು ವಿತರಣೆ ಮಾಡಲಾಗುವುದು ಎನ್ನುವ ಭರವಸೆಯನ್ನು ನೀಡಿದ ಸಚಿವರು ಇದೇ ಸಮಯದಲ್ಲಿ ಹೊಸ ರೇಷನ್ ಕಾರ್ಡ್ ನಲ್ಲಿ ಇರಬಹುದಾದ ಬದಲಾವಣೆಗಳ ಬಗ್ಗೆಯೂ ತಿಳಿಸಿದ್ದಾರೆ.
ಹೊಸ ರೇಷನ್ ಕಾರ್ಡ್ ಬಿಡುಗಡೆ ಆದ ನಂತರ ಅಂದ್ರೆ ಸ್ಮಾರ್ಟ್ ಕಾರ್ಡ್ (Smartcard) ಮಾದರಿಯ ರೇಷನ್ ಕಾರ್ಡ್ ಈಗ ಪಡಿತರ ಚೀಟಿಯಿಂದ ಸಿಗುತ್ತಿರುವ ಪ್ರಯೋಜನಗಳಿಗಿಂತ ಇನ್ನಷ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡಿ ಇನ್ನು ಹಲವು ಕಡೆ ಬಳಕೆಗೆ ಬರಲಿದೆ. ಹೊಸ ರೇಷನ್ ಕಾರ್ಡ್ ಮಾದರಿ ಬಿಡುಗಡೆ ಆದರೆ ಅನ್ನಭಾಗ್ಯ ಯೋಜನೆಯ ಪ್ರಯೋಜನ ಮಾತ್ರವಲ್ಲದೆ.
ಏರ್ಪೋರ್ಟ್ ನಲ್ಲಿ, ಬ್ಯಾಂಕ್ ಗಳಲ್ಲಿ, ಐಡಿ ಕಾರ್ಡ್, ಬ್ಯಾಂಕ್ ನ ಇತರ ಸೇವೆ ಪಡೆದುಕೊಳ್ಳಲು ಸ್ಮಾರ್ಟ್ ಕಾರ್ಡ್ ರೀತಿಯಲ್ಲಿ ಬಳಸಿಕೊಳ್ಳಬಹುದು. ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಇರುವುದರಿಂದ ಇನ್ನು ಮುಂದೆ ಪಡಿತರ ಚೀಟಿ ಆಧಾರ್ ಕಾರ್ಡ್ ನಂತೆಯೇ ಬಹಳ ಮುಖ್ಯವಾದ ದಾಖಲೆ ಎನಿಸಿ ಹೆಚ್ಚು ಕಡಿಮೆ ಆಧಾರ್ ಕಾರ್ಡ್ ರೀತಿ ಎಲ್ಲಡೆಯೂ POI & POA ಬಳಕೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೂಡ ಈಗಷ್ಟೇ ಪಡಿತರ ವಿತರಣೆ ವಿಚಾರದಲ್ಲಿ ಹೊಸ ಬದಲಾವಣೆ ತಂದಿದೆ. ನ್ಯಾಯಬೆಲೆ ಅಂಗಡಿಯಲ್ಲಿ (Fareprice Shop) ಪಡಿತರ ಪಡೆದುಕೊಂಡ ನಂತರ ಡಿಜಿಟಲ್ ಪ್ರಿಂಟ್ ರಶೀದಿ (digital print bill) ಕೊಡಲು ಕೇಂದ್ರ ಸರ್ಕಾರ ಸರ್ಕಾ ಆದೇಶ ನೀಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಇರುತ್ತದೆ, ಜೊತೆಗೆ ರಾಜ್ಯ ಸರ್ಕಾರದ ಅನುದಾನದ ಬಗ್ಗೆಯೂ ಪ್ರಿಂಟ್ ಮಾಡಲಾಗುತ್ತದೆ ಗ್ರಾಹಕನಿಗೆ ಪಡಿತರ ವಿತರಣೆ ವಿಚಾರದಲ್ಲಿ ಆಗುತ್ತಿರುವ ಮೋ’ಸವನ್ನು ತಡೆಯಲು ಇದು ಅನುಕೂಲವಾಗುತ್ತದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.