ಪೋಸ್ಟ್ ಆಫೀಸ್ ನಲ್ಲಿ ನೀವು ಈಗ ಅಂಚೆ ಸೇವೆಗಳು ಮಾತ್ರವಲ್ಲದೇ ಬ್ಯಾಂಕಿಂಗ್ ಸೇವೆಯನ್ನು ಕೂಡ ಪಡೆಯಬಹುದಾಗಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಿಡಿದು ಹಣ ಟೇವಣಿ ಇಡುವುದು, ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಹಣ ಹೂಡುವುದು ಸೇರಿದಂತೆ ನೆಟ್ ಬ್ಯಾಂಕಿಂಗ್ , ATM ಕಾರ್ಡ್ ಇತ್ಯಾದಿ ಅನುಕೂಲತೆಗಳನ್ನು ಮಾಡಿ ಕೊಟ್ಟು ಯಾವುದೇ ಒಂದು ಬ್ಯಾಂಕ್ ಗಿಂತಲೂ ಕಡಿಮೆ ಇಲ್ಲದಂತೆ ಅಂಚೆ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ.
ಈಗ ಇದಕ್ಕೆ ಮತ್ತೊಂದು ವಿಷಯ ಸೇರ್ಪಡೆ ಆಗುತ್ತಿತ್ತು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ಹಾಗೂ RD ಖಾತೆ ಹೊಂದಿರುವವರ ಪಾಲಿಗೆ ಇದು ಸಿಹಿಸುದ್ದಿ ಆಗಲಿದೆ. ಪೋಸ್ಟ್ ಆಫೀಸ್ನಲ್ಲಿ ಉಳಿತಾಯ ಖಾತೆ ಹೊಂದಿರುವುದರ ಜೊತೆಗೆ RD ಖಾತೆಯನ್ನೂ ಕೂಡ ಅನೇಕರು ತೆರೆದಿರುತ್ತಾರೆ. ಈ RD ಖಾತೆ ಎಂದರೆ ಪ್ರತಿ ತಿಂಗಳು ಒಂದು ನಿಶ್ಚಿತ ಮೊತ್ತದ ಠೇವಣಿಯನ್ನು ಈ ಖಾತೆಗೆ ತುಂಬಿಸುವುದು.
ಯಾವುದೇ ವಯಸ್ಸಿನ ಮಿತಿ ಇಲ್ಲದೆ ಅಪ್ತಾಪ್ತರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಈ RD ಖಾತೆಯನ್ನು ತೆರೆದು ಕನಿಷ್ಠ 100 ರೂಪಾಯಿ ಇಂದ ಗರಿಷ್ಠ ಮಿತಿ ಇಲ್ಲದೆ ಎಷ್ಟು ಬೇಕಾದರೂ RD ಖಾತೆಯಲ್ಲಿ ಹಣವನ್ನು ಪ್ರತಿ ತಿಂಗಳ ಹೂಡಿಕೆ ಮಾಡಬಹುದು. ಈ RD ಖಾತೆಯ ಮೆಚುರಿಟಿ ಅವಧಿ ಐದು ವರ್ಷಗಳು. ಮಧ್ಯೆ ಯಾವುದೇ ಸಮಯದಲ್ಲಿ ನೀವು ಹಣ ಕಟ್ಟುವುದು ನಿಲ್ಲಿಸಿದರು ಕೂಡ 5 ವರ್ಷಗಳಾದ ಬಳಿಕವೇ ನಿಮಗೆ ನಿಮ್ಮ ಹಣ ವಾಪಸ್ ಸಿಗುವುದು.
5 ವರ್ಷಗಳಾದ ಬಳಿಕ ಇದಕನ್ವಯವಾಗುವ ಬಡ್ಡಿಯ ಆಧಾರದ ಮೇಲೆ ನಿಮಗೆ ರಿಟರ್ನ್ಸ್ ಸಿಗುತ್ತದೆ ಸಣ್ಣ ಉಳಿತಾಯ ಮಾಡುವವರ ಪಾಲಿಗೆಗಂತೂ ಈ ಯೋಜನೆ ವರದಾನವಾಗಿದ್ದು ಈವರೆಗೆ ದೇಶದ ಕೋಟ್ಯಾಂತರ ಮೆಚ್ಚುಗೆಯ ಯೋಜನೆ ಆಗಿದೆ. ಈ ರೀತಿ RD ಖಾತೆ ಹೊಂದಿದ್ದವರು ಇಷ್ಟೆಲ್ಲ ಅನುಕೂಲತೆ ಜೊತೆಗೆ ಈಗ ಮತ್ತೊಂದು ಅನುಕೂಲತೆಯನ್ನು ಕೂಡ ಪಡೆಯಬಹುದಾಗಿದೆ.
ಅಂಚೆ ಇಲಾಖೆಯಲ್ಲಿ ಈಗ ಸಾಲ ಯೋಜನೆಗಳು ಕೂಡ ಲಭ್ಯವಿತ್ತು RD ಖಾತೆ ಹೊಂದಿರುವವರು ಈ ಸಾಲ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. RD ಖಾತೆ ಹೊಂದಿರುವವರು ಖಾತೆ ತೆರೆದ ಒಂದು ವರ್ಷದ ಬಳಿಕ ಆ ಖಾತೆ ಆಧಾರದ ಮೇಲೆ ಕಡಿಮೆ ಬಡ್ಡಿ ದರಕ್ಕೆ ಅಂಚೆ ಕಚೇರಿಯಲ್ಲಿಯೇ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ವೈಯಕ್ತಿಕ ಸಾಲವನ್ನು ನೀಡುವ ಮೂಲಕ ಅಂಚೆಕಛೇರಿ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಇನ್ನಷ್ಟು ಸನಿಹವಾಗಿದೆ.
ಅತಿ ಕಡಿಮೆ ದಾಖಲೆ ಪತ್ರಗಳೊಂದಿಗೆ ಅಂಚೆ ಕಛೇರಿ RDಖಾತೆ ಹೊಂದಿರುವವರು ಗರಿಷ್ಠ ರೂ.45,000 ವರೆಗೆ ತಮ್ಮ ಹೂಡಿಕೆ ಆಧಾರದ ಮೇಲೆ ಸಾಲ ಸೌಲಭ್ಯವನ್ನು ಪಡೆಯಬಹುದು. RD ಖಾತೆಯನ್ನು ಜಂಟಿಯಾಗಿ ತೆರೆಯಲು ಕೂಡ ಅನುಕೂಲತೆ ಇರುವುದರಿಂದ ಜಂಟಿ ಖಾತೆ ತೆರೆದವರು ಕನಿಷ್ಠ ರೂ. 90,000 ದವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಈ ಸಾಲವನ್ನು ಪಡೆಯಬಹುದಾಗಿದೆ.
ಈವರೆಗೆ ಯೋಜನೆಗಳಲ್ಲೇ ಬಹಳ ವಿಶೇಷವಾದ ಅನುಕೂಲತೆ ಈ ವೈಯಕ್ತಿಕ ಸಾಲ ಯೋಜನೆ ಎನಿಸಿದ್ದು ಇದರ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋದು ಅಂಚೆ ಇಲಾಖೆ ಅಧಿಕೃತ ವೆಬ್ಸೈಟ್ ಗಳಲ್ಲಿ ಸರ್ಚ್ ಮಾಡಿ ಅಥವಾ ನೇರವಾಗಿ ನಿಮ್ಮ ಗ್ರಾಮದ ಅಂಚೆಠಾಣೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ.