ವಾಹನ ಚಾಲನೆ ಮಾಡುವವರಿಗೆ ಡ್ರೈವಿಂಗ್ ಲೈಸೆನ್ಸ್ (Driving license) ಒಂದು ಪ್ರಮುಖ ದಾಖಲೆ. ಯಾಕೆಂದರೆ ಸಂಚಾರಿ ನಿಯಮದ ಪ್ರಕಾರ ವಾಹನಗಳ ದಾಖಲೆ ಇಲ್ಲದೆ ವಾಹನ ಬಳಸುವುದು ಎಷ್ಟು ತಪ್ಪು ಅದೇ ರೀತಿ ವಾಹನ ಚಾಲನೆ ಪರವಾನಗಿ ಎಂದರೆ ಡ್ರೈವಿಂಗ್ ಲೈಸೆನ್ಸ್ ಪಡೆಯದೆ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಕೂಡ ಕಾನೂನುಬಾಹಿರ ಚಟುವಟಿಕೆ, ಇದಕ್ಕೆ ದಂಡ ಕೂಡ ಬೀಳುತ್ತದೆ.
ಕೆಲವೊಮ್ಮೆ ನಮ್ಮ ಡ್ರೈವಿಂಗ್ ಲೈಸೆನ್ಸ್ ಮನೆಯಲ್ಲೇ ಬಿಟ್ಟು ವಾಹನ ತೆಗೆದುಕೊಂಡು ರಸ್ತೆಗೆ ಇಳಿದಿರುತ್ತೇವೆ, ಅಂತಹ ಸಮಯದಲ್ಲಿ ಪೊಲೀಸ್ ತಡೆದರೆ ಏನು ಮಾಡಬೇಕು ಗೊತ್ತಾ? ಮತ್ತು ನಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದ್ದರೆ ಅದರ ನಂಬರ್ ಕೂಡ ನಮ್ಮ ಬಳಿ ಇರದಂತೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡಿದ್ದರೆ ಅದನ್ನು ಪಡೆಯುವುದು ಹೇಗೆ ಗೊತ್ತಾ? ಈ ಅಂಕಣದಲ್ಲಿ ಇಂತಹ ಪ್ರಮುಖ ವಿಷಯದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
16 ನೇ ಕಂತಿನ ಕಿಸಾನ್ ಹಣ ಬಿಡುಗಡೆ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಈ ರೀತಿ ಚೆಕ್ ಮಾಡಿ.!
* Ministry of Road transport and Highways ವೆಬ್ ಸೈಟ್ ಆದ https://parivahan.gov.in ಈ ವೆಬ್ಸೈಟ್ ಗೆ ಭೇಟಿ ಕೊಡಿ.
* ಮುಖಪುಟದಲ್ಲಿ License related services, Vehicle related Services ಹೀಗೆ ಹಲವಾರು ವಿಭಾಗಗಳು ಇರುತ್ತವೆ.
ಇದರಲ್ಲಿ License Related Services ಎನ್ನುವ ವಿಭಾಗದಲ್ಲಿ Driver / learner License ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿ. ಬಳಿಕ transport department, Government of Karnataka ಇಂಟರ್ ಫೇಸ್ ಓಪನ್ ಆಗುತ್ತದೆ.
* Menu bar ನಲ್ಲಿ others ಎನ್ನುವುದರ ಮೇಲೆ ಕ್ಲಿಕ್ ಮಾಡಿ ಹಲವಾರು ಸರ್ವಿಸ್ ಆಪ್ಷನ್ ಇರುತ್ತದೆ. ಅದರಲ್ಲಿ search related applications ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಇದರಲ್ಲಿ ನಿಮ್ಮ DL ನಂಬರ್ ಗೊತ್ತಿದ್ದು DL ಕಳೆದುಕೊಂಡಿದ್ದರೆ ಆ DL ನಂಬರ್, date of birth ಮತ್ತು Captcha ಹಾಕಿ Submit ಕೊಟ್ಟು ವಿವರಗಳನ್ನು ಸ್ಕ್ರೀನ್ ಮೇಲೆ ನೋಡಬಹುದು. ಮತ್ತು ನೀವು ಪೊಲೀಸರು ಕೇಳಿದಾಗ ಇದನ್ನೇ ಅವರಿಗೆ ತೋರಿಸಬಹುದು.
ಗ್ಯಾಸ್ ಸಿಲಿಂಡರ್ ಸಬ್ಸಿಡಿ HP Gas ರೂ.600, ಭಾರತ್ ರೂ.400, ಇಂಡಿಯನ್ ಗ್ಯಾಸ್ ರೂ.300, ನಿಮಗೆ ಹಣ ಬಂತಾ ಇಲ್ವಾ.? ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!
* ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಂಬರ್ ಕೂಡ ತಿಳಿಯದೆ ಇದ್ದರೆ ನೀವು ಅಪ್ಲಿಕೇಶನ್ ಹಾಕಿದ್ದ ನಂಬರ್ ಇದ್ದರೆ ಆ ಅಪ್ಲಿಕೇಶನ್ ನಂಬರ್ ಹಾಕಿ ಕೂಡ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು. ಡ್ರೈವಿಂಗ್ ಲೈಸೆನ್ಸ್ ಮಾತ್ರ ಅಲ್ಲದೆ ಲರ್ನಿಂಗ್ ಲೈಸೆನ್ಸ್ ಅನ್ನು ಕೂಡ ಇದೇ ಮಾದರಿಯಲ್ಲಿ ಅಪ್ಲಿಕೇಶನ್ ನಂಬರ್ ಅಥವಾ ಲರ್ನಿಂಗ್ ಲೈಸನ್ಸ್ ನಂಬರ್ ಹಾಕಿ ಹುಟ್ಟಿದ ದಿನಾಂಕ ಹಾಕಿ ಪಡೆದುಕೊಳ್ಳಬಹುದು.
* ಇದೇ ವೆಬ್ಸೈಟ್ನಲ್ಲಿ ಹೊಸದಾಗಿ ಭೌತಿಕವಾದ ಅಥವಾ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಕೂಡ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ನೀವು ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದೀರೋ ಅಥವಾ ಕಳೆದು ಹೋಗಿರುವ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುತ್ತಿದ್ದೀರೋ ಎನ್ನುವುದನ್ನು ಸರಿಯಾಗಿ ತಿಳಿಸಿ ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಮತ್ತೊಮ್ಮೆ ನಿಮ್ಮ ಡ್ರೈವಿಂಗ್ ಲೈಸನ್ಸ್ ಪಡೆದುಕೊಳ್ಳಬಹುದು.
ನೀವೇನಾದರೂ ಭೌತಿಕವಾದ ಡ್ರೈವಿಂಗ್ ಲೈಸನ್ಸ್ ಪಡೆಯುವುದಾದರೆ ಅದು ನಿಮ್ಮ ಆಧಾರ್ ಕಾರ್ಡ್ ವಿಳಾಸಕ್ಕೆ ತಲುಪುತ್ತದೆ.
* ನೀವು ಡಿಜಿ ಲಾಕ್ ಆಪ್ ನಲ್ಲಿ (Digi lock app) ಡ್ರೈವಿಂಗ್ ಲೈಸೆನ್ಸ್ ಅನ್ನು ಸೇವ್ ಮಾಡಿ ಇಟ್ಟುಕೊಳ್ಳುವುದರಿಂದ ಎಲ್ಲೆಲ್ಲಿ ಭೌತಿಕವಾದ ಡ್ರೈವಿಂಗ್ ಲೈಸೆನ್ಸ್ ದಾಖಲೆಯಾಗಿ ಕೇಳಲಾಗುತ್ತದೆ ಅಲ್ಲೆಲ್ಲ ಡಿಜಿಟಲ್ ರೂಪದ DL ತೋರಿಸಬಹುದು ಮತ್ತು ಇದು ಮಾನ್ಯವಾಗುತ್ತದೆ ಎಂದು ಸರ್ಕಾರವೇ ತಿಳಿಸಿದೆ.