ದೇಶದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ (aspirants) ಸಿಹಿ ಸುದ್ದಿ ಇದೆ, ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಆಸೆ ಹೊಂದಿರುವವರಿಗೆ ಇದು ಸದಾವಕಾಶ. SBI (SBI PO Recruitments 2023) ತನ್ನಲ್ಲಿ ಖಾಲಿ ಇರುವ 2,000 ಕ್ಕೂ ಹೆಚ್ಚು ಪ್ರೋಬೇಷನರಿ ಆಫೀಸರ್ಸ್ (Probationary officers) ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ.
ಈ ಕುರಿತಾದ ಅಧಿಕೃತ ನೋಟಿಫಿಕೇಶನ್ ಕೂಡ ಹೊರ ಬಿದ್ದಿದ್ದು, SBI ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿದೆ. ಈ ಹುದ್ದೆಗಳನ್ನು ಹೊಂದಲು ಇಚ್ಚಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆಯಬಹುದು. ಅರ್ಜಿ ಸಲ್ಲಿಸುವುದಕ್ಕೆ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿ ಕುರಿತು ಮಾನದಂಡಗಳಿದ್ದು ಇದೆಲ್ಲದರ ಬಗ್ಗೆ ಪ್ರಕಟಣೆಯಲ್ಲಿ ಸವಿವರವಾಗಿ ವಿವರಿಸಲಾಗಿದೆ.
ಇನ್ಮುಂದೆ ATM ಕಾರ್ಡ್ ಇಲ್ಲದೆ ಕೇವಲ UPI ಬಳಸಿ ATM ನಿಂದ ಕ್ಯಾಶ್ ಪಡೆಯಬಹುದು.!
ನಾವು ಸಹ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ.
ಉದ್ಯೋಗ ಸಂಸ್ಥೆ:- SBI
ಹುದ್ದೆ:- ಪ್ರೊಫೆಷನರಿ ಆಫಿಸರ್ಸ್
ಒಟ್ಟು ಹುದ್ದೆಗಳ ಸಂಖ್ಯೆ:- 2,000
ಉದ್ಯೋಗ ಸ್ಥಳ:- ಭಾರತದೆಲ್ಲೆಡೆ…
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.36,000 ರಿಂದ ರೂ.63,840 ವೇತನ ಸಿಗಲಿದೆ.
ಶೈಕ್ಷಣಿಕ ವಿದ್ಯಾರ್ಹತೆ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಭಾಗದಲ್ಲಿ ಪದವಿ ಪಡೆದಿರಬೇಕು.
● ಪದವಿ ಅಂತಿಮ ವರ್ಷ ಅಥವಾ ಅಂತಿಮ ಸೆಮಿಸ್ಟರ್ ನಲ್ಲಿ ಇರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಆದರೆ ಸಂದರ್ಶನ ಅಥವಾ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ದಾಖಲೆಯನ್ನು ಒದಗಿಸಬೇಕಾಗುತ್ತದೆ.
● ಹಾಗಾಗಿ 31.12.2023ರ ವರೆಗೆ ಪದವಿ ಉತ್ತೀರ್ಣರಾಗಿ ಆ ಕುರಿತು ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಪಡೆಯುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಸೂಕ್ತ.
ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಬಿಗ್ ಶಾಕ್, ಇನ್ಮುಂದೆ ಉಚಿತ ಪ್ರಯಾಣ ಮಾಡಲು ಹಣ ಕೊಡಲೇಬೇಕು.!
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು
ವಯೋಮಿತಿ ಸಡಿಲಿಕೆ:-
● SC / ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.
ಅರ್ಜಿ ಶುಲ್ಕ:-
● ಸಾಮಾನ್ಯ, EWS, OBC ಅಭ್ಯರ್ಥಿಗಳಿಗೆ ರೂ.750
● ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
● ಅಭ್ಯರ್ಥಿಗಳು ಆನ್ಲೈನ್ ಪೇಮೆಂಟ್ ವಿಧಾನದಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:-
● ಅಭ್ಯರ್ಥಿಗಳು ನೇರವಾಗಿ SBI ನ ಅಧಿಕೃತ ವೆಬ್ಸೈಟ್ ಆದ sbi.co.in ಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬಹುದು.
● ಅರ್ಜಿ ಫಾರಂ ನಲ್ಲಿ ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಶುಲ್ಕ ಪಾವತಿ ಮಾಡಿದ ನಂತರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿ ಆಗುತ್ತದೆ. ಇ-ರಶೀದಿ ಹಾಗೂ ಅರ್ಜಿ ಸಲ್ಲಿಕೆ ಪ್ರಿಂಟೌಟ್ ನ್ನು ತಪ್ಪದೆ ಪಡೆದುಕೊಳ್ಳಿ.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 07.09.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 27.09.2023