
ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಸತಿ ಯೋಜನೆಯ ಅಡಿಯಲ್ಲಿ ಮನೆ ಇಲ್ಲದವರಿಗೆ ಉಚಿತವಾಗಿ ಮನೆಯನ್ನು ಕೊಡುತ್ತಿದ್ದು. ಈ ಒಂದು ಯೋಜನೆಗೆ ಹೇಗೆ ಅರ್ಜಿಯನ್ನು ಹಾಕುವುದು? ಹಾಗೂ ಯಾರು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅರ್ಹರು? ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಪ್ರತಿಯೊಬ್ಬರಿಗೂ ಕೂಡ ಮನೆಯನ್ನು ಕಟ್ಟಬೇಕು ಎಂಬ ಆಸೆ ಇರುತ್ತದೆ ಆದರೆ ಪ್ರತಿಯೊಬ್ಬರೂ ಕೂಡ ಮನೆಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ ಕೆಲವೊಬ್ಬರಿಗೆ ಮನೆಯನ್ನು ಕಟ್ಟುವುದಕ್ಕೆ ಜಾಗ ಇರುವುದಿಲ್ಲ ಅದೇ ರೀತಿ. ಇನ್ನು ಕೆಲವೊಬ್ಬರಿಗೆ ಹಣದ ಕೊರತೆ ಇರುತ್ತದೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಇರುವುದರಿಂದ ಮನೆಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಅವರ ಕನಸು ಕನಸಾಗಿಯೇ ಉಳಿಯುತ್ತದೆ.
ಆದರೆ ಈಗಿನ ಸಮಯದಲ್ಲಿ ಅಂದರೆ ಮೇಲೆ ಹೇಳಿದಂತೆ ಯಾರು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅರ್ಹರಿರುತ್ತಾರೋ ಅಂತವರು ಈ ಯೋಜನೆಯನ್ನು ಉಪಯೋಗಿಸಿ ಕೊಳ್ಳಬಹುದಾಗಿದೆ ಹಾಗೂ ಅವರು ತಮ್ಮ ಕನಸನ್ನು ಕೂಡ ಈಡೇರಿಸಿ ಕೊಳ್ಳಬಹುದು. ಹಾಗಾದರೆ ಅಂಥವರು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು? ಯಾವುದೆಲ್ಲ ನಿಯಮಗಳನ್ನು ಅವರು ಅನುಸರಿಸಬೇಕು ಎಂದು ನೋಡುವುದಾದರೆ.
ಮೊದಲನೆಯದಾಗಿ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಎಂದು ತಿಳಿದುಕೊಳ್ಳೋಣ. ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ನೀವೇನಾದರೂ ಅಂಗವಿಕಲತೆಯಿಂದ ಬಳಲುತ್ತಿದ್ದರೆ ಅಂಥವರು ವೈದ್ಯಕೀಯ ಇಲಾಖೆ ವತಿಯಿಂದ ನೀಡಲಾದ ಪತ್ರದ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ ಹಾಗೂ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ವೋಟರ್ ಐಡಿ ರೇಷನ್ ಕಾರ್ಡ್ ಪ್ರತಿ, ಹಾಗೂ ಕನಿಷ್ಟ ಐದು ವರ್ಷಗಳ ಅವಧಿಯಿಂದ ನೀವು ಬೆಂಗಳೂರು ನಗರದಲ್ಲಿ ವಾಸವಾಗಿರುವುದಕ್ಕೆ ಕಂದಾಯ ಇಲಾಖೆಯ ಕಡೆಯಿಂದ ಒಂದು RD ನಂಬರ್ ಕೊಡುತ್ತಾರೆ ಇದರ ಪ್ರಮಾಣ ಪತ್ರವನ್ನು ಕೂಡ ಲಗತ್ತಿಸಬೇಕಾಗುತ್ತದೆ.
ಇಷ್ಟು ದಾಖಲಾತಿಗಳು ಇದ್ದವರು ಮಾತ್ರ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅರ್ಹರಿರುತ್ತಾರೆ. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವ ವಿಧಾನ ಯಾವುದು ಎಂದು ನೋಡಿದರೆ ಇದು ಕಡ್ಡಾಯವಾಗಿ ಆನ್ಲೈನ್ ನಲ್ಲಿ ಅರ್ಜಿಯನ್ನು ಹಾಕುವ ವಿಧಾನವಾಗಿದ್ದು. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವೆಬ್ಸೈಟ್ ನಲ್ಲಿ ಈ ಒಂದು ಅರ್ಜಿಯನ್ನು ಸಲ್ಲಿಸುವಂಥದ್ದು. ಆನ್ಲೈನ್ ಮುಖಾಂತರ ಅಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ಸಲ್ಲಿಸುವುದರ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು.
ಪ್ರತಿಯೊಬ್ಬರೂ ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೂ ಇದರಲ್ಲಿ ಯಾವುದೇ ರೀತಿಯ ಬಡ್ಡಿಯನ್ನು ಕಟ್ಟುವ ಅವಶ್ಯಕತೆ ಇಲ್ಲ ಹಾಗೂ ಕೆಲವೊಂದಷ್ಟು ಜಾತಿಯವರಿಗೆ ಇಂತಿಷ್ಟು ಎಂಬಂತೆ ಸಬ್ಸಿಡಿ ಹಣವು ಕೂಡ ಬರುತ್ತದೆ ಅದರಂತೆ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 3.5 ಲಕ್ಷ ಸಬ್ಸಿಡಿ ಹಣ ಬಂದರೆ, ಜನರಲ್ ಕ್ಯಾಟಗರಿ ಅವರಿಗೆ 2.7 ಲಕ್ಷ ಸಬ್ಸಿಡಿ ಹಣವಾಗಿ ಸಿಗುತ್ತದೆ.
ಅದೇ ರೀತಿ ಪ್ರತಿಯೊಬ್ಬರೂ ಗಮನಿಸಬೇಕಾದ ಮುಖ್ಯ ಅಂಶ ಏನು ಅಂದರೆ ಈ ಒಂದು ಯೋಜನೆಯ ಅರ್ಜಿಯನ್ನು ಹಾಕುವವರ ವಾರ್ಷಿಕ ಆದಾಯ 3 ಲಕ್ಷ ಒಳಗಿರಬೇಕು ಅಂತವರು ಮಾತ್ರ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅರ್ಹರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.