ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಇರುತ್ತದೆ. ಕೆಲವರು ತಾವು ಉಳಿಸಿದ ಹಣವನ್ನು ತಮ್ಮ ಸಂದರ್ಭಗಳಿಗೆ ಖರ್ಚು ಮಾಡಿದರೆ ಕೆಲವರಿಗೆ ದೀಢೀರ್ ಎಂದು ಎದುರಾಗುವ ಖರ್ಚುಗಳು ಸಾಲಕ್ಕೆ ಕೈ ಚಾಚುವಂತೆ ಮಾಡುತ್ತವೆ. ಪರಿಚಯವಿರುವ ಎಲ್ಲಾ ಕಡೆ ವಿಚಾರಿಸಿದರೂ ಕೆಲವೊಮ್ಮೆ ನಮಗೆ ಬೇಕಾದಷ್ಟು ಹಣ ಸಿಗುವುದಿಲ್ಲ.
ಫೈನಾನ್ಸ್ ಕಂಪನಿಗಳು, ಬ್ಯಾಂಕ್ ಗಳು, ಲೇವಾದೇವಿ ವ್ಯವಹಾರ ಮಾಡುವವರಿಂದ ಸಾಲ ಪಡೆಯಬಹುದು ಆದರೆ ಕೆಲವೊಮ್ಮೆ ಅಷ್ಟು ಕಾಯಲು ಸಮಯ ಇರುವುದಿಲ್, ಕ್ಷಣಮಾತ್ರದಲ್ಲಿ ಹಣ ಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಹಣ ಬೇಕಾದರೆ ಈಗ ನಾವು ಹೇಳುವ ಈ ವಿಧಾನದ ಮೂಲಕ ಅಪ್ಲೈ ಮಾಡಿ ಕ್ಷಣಮಾತ್ರದಲ್ಲಿ ಹಣ ಪಡೆದುಕೊಳ್ಳಿ.
ಆದರೆ ಈ ರೀತಿ ಸಾಲ ಪಡೆದುಕೊಳ್ಳುವುದಕ್ಕೂ ಮುನ್ನ ಅದಕ್ಕೆ ವಿಧಿಸಿರುವ ಬಡ್ಡಿದರದ ಹಾಗೂ ಇನ್ನಿತರ ನಿಯಮಗಳ ಬಗ್ಗೆ ಎಚ್ಚರಿಕೆ ವಹಿಸಿ. ಇಲ್ಲವಾದರೆ ಇದೇ ಶೂಲವಾಗಿ ನಿಮ್ಮನ್ನು ಕಾಡಬಹುದು. ನಿಮಗೆ ಈ ಎಲ್ಲಾ ಕಂಡಿಶನ್ ಗಳಿಗೂ ಒಪ್ಪಿಗೆ ಇದ್ದರೆ ನಿಧಾನವಾಗಿ ಯೋಚಿಸಿ ಸಾಲ ಪಡೆದುಕೊಳ್ಳಿ. ಈ ಅಂಕಣದಲ್ಲಿ ಈ ರೀತಿಯ ಅವಕಾಶಗಳಿವೆ ಎನ್ನುವುದರ ವಿವರವಷ್ಟೇ ತಿಳಿಸುತ್ತಿದ್ದೇವೆ.
ಐದು ನಿಮಿಷದಲ್ಲಿ ಲೋನ್ ಕೊಡುವ ಟಾಪ್ 10 ಅಪ್ಲಿಕೇಶನ್ಗಳು:
● Zest Money:
ಈ ಅಪ್ಲಿಕೇಶನ್ ನಲ್ಲಿ ಪಡೆಯುವ ಹಣಕ್ಕೆ 36% ಬಡ್ಡಿ ವಿಧಿಸಲಾಗುತ್ತದೆ ಹಾಗೂ ಕೆಲವೇ ನಿಮಿಷಗಳಲ್ಲಿ 1000 ಇಂದ ಹಿಡಿದು 10 ಲಕ್ಷ ರೂಪಾಯಿಗಳ ವರೆಗೂ ಲೋನ್ ಸಿಗುತ್ತದೆ.
● Money View:
ಈ ಅಪ್ಲಿಕೇಶನ್ ನಲ್ಲಿ 16%-39% ಬಡ್ಡಿ ವಸೂಲಿ ಮಾಡುತ್ತಾರೆ ಆದರೆ ಶೀಘ್ರವಾಗಿ 5000 ಇಂದ 5 ಲಕ್ಷಗಳವರೆಗೆ ಸಾಲ ಪಡೆದುಕೊಳ್ಳಬಹುದು.
● Lazy Pay:
ಈ ಅಪ್ಲಿಕೇಶನ್ ನ ಮೂಲಕ ಪಡೆವ ಸಾಲಕ್ಕೆ 15%-32% ರವರೆಗೆ ಬಡ್ಡಿ ನಿಗದಿಯಾಗಿದೆ. 10,000 ಇಂದ 1 ಲಕ್ಷಗಳವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದು.
● Fibe:
ಈ ಅಪ್ಲಿಕೇಶನ್ ನಲ್ಲಿ 30% ವರೆಗೆ ಬಡ್ಡಿ ನಿಗದಿಯಾಗಿರುತ್ತದೆ. 3000 ಇಂದ 5 ಲಕ್ಷ ರೂ. ವರೆಗೆ ಕ್ಷಣಮಾತ್ರದಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ.
● Home Credit:
ಹೋಂ ಕ್ರೆಡಿಟ್ ಅಪ್ಲಿಕೇಶನ್ ಮೂಲಕ ಪಡೆವವರೆಗೂ ಸಾಲಕ್ಕೆ 19%-56% ಬಡ್ಡಿ ಅನ್ವಯವಾಗುತ್ತದೆ. ನೀವು 10,000 ದಿಂದ
2.40 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಪಡೆಯಬಹುದು.
● Cashbean:
ಈ ಅಪ್ಲಿಕೇಶನ್ ನಲ್ಲಿ ಪಡೆಯುವ ಸಾಲಕ್ಕೆ 26% ಬಡ್ಡಿದರ ಅನ್ವಯವಾಗುತ್ತದೆ. 1500 ರೂ. ನಿಂದ ಗರಿಷ್ಠ 60,000 ರೂ. ವರೆಗೆ ನೀವು ಸಾಲ ಪಡೆಯಬಹುದು.
● Kissht:
ಈ ಲೋನ್ ಅಪ್ಲಿಕೇಶನ್ ನಲ್ಲಿ ನೀವು 10,000 ಯಿಂದ ಪ್ರಾರಂಭಿಸಿ 1 ಲಕ್ಷಗಳವರೆಗೂ ಕೂಡ ಹಣವನ್ನು ಲೋನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.
● Nira:
ಈ ಅಪ್ಲಿಕೇಶನ್ ನಡಿ ಪಡೆಯುವ ಸಾಲಕ್ಕೆ 24%-36% ಬಡ್ಡಿ ಕಟ್ಟಬೇಕಾಗುತ್ತದೆ. ಸುಲಭವಾಗಿ 5,000 ದಿಂದ 1 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು.
● mPokket:
ಈ ಅಪ್ಲಿಕೇಶನ್ ನ ಮೂಲಕ ಪಡೆಯುವ ಸಾಲಕ್ಕೆ 52% ವರೆಗೂ ಬಡ್ಡಿ ವಿಧಿಸಲಾಗುತ್ತದೆ. 500 ರಿಂದ 30,000 ರೂ. ವರೆಗೆ ಸಾಲ ಪಡೆಯಬಹುದು.
● Kreditbee:
ಈ ಅಪ್ಲಿಕೇಶನ್ ಮೂಲಕ ಪಡೆಯುವ ಸಾಲಕ್ಕೆ 29.95 ಬಡ್ಡಿ ದರ ನಿಗದಿಪಡಿಸಲಾಗಿದೆ. ಈ ಅಪ್ಲಿಕೇಶನ್ ಬಹಳ ಹಳೆಯದಾಗಿತ್ತು ಅತ್ಯಂತ ಸರಳವಾಗಿ 1,000 ದಿಂದ 2 ಲಕ್ಷದವರೆಗೆ ಸಾಲ ಪಡೆಯಬಹುದು.