ಕರ್ನಾಟಕ ಸರ್ಕಾರವು ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಯೋಜನೆಯು (Gruhalakshmi) ಕೂಡ ಒಂದು. ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರವು ಮಹಿಳೆಯರ ಆರ್ಥಿಕ ಸಮಾನತೆ ಮತ್ತು ಲಿಂಗ ಸಮಾನತೆ ಕಾಪಾಡುವ ಉದ್ದೇಶದಿಂದ ಜಾರಿಗೆ ತಂದಿದೆ.
ಕುಟುಂಬದಲ್ಲಿ ಮುಖ್ಯಸ್ಥೆ ಆಗಿರುವ ಮಹಿಳೆಗೆ (HOF Women) ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ನೀಡುವ ಯೋಜನೆ ಇದಾಗಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ಮೊದಲನೇ ಕಂತಿನ ಹಣ ಬಿಡುಗಡೆಯಾಗಿ ಇದುವರೆಗೆ ಯಶಸ್ವಿಯಾಗಿ ಯೋಜನೆಗೆ ಆರು ತಿಂಗಳು ತುಂಬಿದೆ.
ಫೆಬ್ರವರಿ ಅಂತ್ಯದ ಒಳಗಡೆ 6ನೇ ಕಂತಿನ ಹಣವು ಎಲ್ಲಾ ಮಹಿಳೆಯರ ಖಾತೆಗೆ ತಲುಪಲಿದ್ದು ಇನ್ನು ಹಣ ತಲುಪದೇ ಇರುವ ಮಹಿಳೆಯರು ಆರು ಮತ್ತು ಏಳನೇ ಕಂತಿನ ಹಣ ಬಿಡುಗಡೆ ಹಣ ಪಡೆಯಲು ಕೆಲ ಪರಿಹಾರಗಳನ್ನು ಸೂಚಿಸಲಾಗಿದೆ.
ಈ ಸುದ್ದಿ ಓದಿ:-ಹೊಂ ಲೋನ್ ( ಗೃಹಸಾಲ ) ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಈ ರೂಲ್ಸ್ ತಿಳಿದುಕೊಳ್ಳಿ.!
ಅಂಕಿ ಅಂಶಗಳ ಪ್ರಕಾರ ರಾಜ್ಯದ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಸಂಪೂರ್ಣವಾಗಿ ಎಲ್ಲಾ ಮಹಿಳೆಯರ ಖಾತೆಗೂ 100% ಹಣ ಜಮೆ ಆಗಿಲ್ಲ. ಡಿಸೆಂಬರ್ ತಿಂಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Camp) ಏರ್ಪಡಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗಿದೆ.
ಈಗಿರುವ ಸರ್ವೆ ಪ್ರಕಾರ 90% ಮಹಿಳೆಯರು ಮಾತ್ರ ಹಣ ಪಡೆಯಲಾಗುತ್ತಿದ್ದು, 10%ರಷ್ಟು ಮಹಿಳೆಯರು ಇನ್ನೂ ಸಹ ಸಮಸ್ಯೆಯಲ್ಲಿಯೇ ಇದ್ದಾರೆ. ಮಹಿಳೆಯರಿಗೆ ಹಣ ಪಡೆಯಲು ಕಾರಣವಾಗಿರುವ ಸಾಮಾನ್ಯ ಸಮಸ್ಯೆಗಳು ಇಂತಿವೆ.
* ಬ್ಯಾಂಕ್ ಖಾತೆಗೆ ಆಕ್ಟಿವ್ ಇಲ್ಲದೆ ಇರುವುದು ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗದೆ ಇರುವುದರಿಂದ DBT ಮೂಲಕ ಹಣ ವರ್ಗಾವಣೆಯಾಗಲು ಸಾಧ್ಯವಾಗುತ್ತಿಲ್ಲ.
* ರೇಷನ್ ಕಾರ್ಡ ಇ-ಕೆವೈಸಿ ಆಗದೇ ಇರುವುದು
* ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ನೀಡಲಾಗಿದ್ದ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರ ಇವುಗಳಲ್ಲಿ ಕುಟುಂಬದ ಮುಖ್ಯಸ್ಥೆ ಹೆಸರಿನಲ್ಲಿ ವ್ಯತ್ಯಾಸಗಳಾಗಿರುವುದು ಅಥವಾ ದಾಖಲೆಗಳಲ್ಲಿ ಇನ್ನಿತರ ದೋಷಗಳಿರುವುದು
* ಸರ್ಕಾರದ ಕೆಲ ತಾಂತ್ರಿಕ ದೋಷಗಳ ಕಾರಣದಿಂದಾಗಿ ಹಣ ವರ್ಗಾವಣೆ ಆಗಲು ತೊಂದರೆಗಳಾಗಿವೆ.
ಈ ಸುದ್ದಿ ಓದಿ:-ಗ್ರಾಮ-ಒನ್ ಕೇಂದ್ರ ತೆರೆಯಲು ಸರ್ಕಾರದಿಂದ ಅರ್ಜಿ ಆಹ್ವಾನ, ಬೇಕಾಗುವ ದಾಖಲೆಗಳೇನು.? ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ…
ಗೃಹಲಕ್ಷ್ಮಿ ಯೋಜನೆಗೆ ಕುಟುಂಬದಲ್ಲಿ ಯಾವುದೇ ಸದಸ್ಯ ಆದಾಯ ತೆರಿಗೆ ಪಾವತಿದಾರನಾಗಿದ್ದರೆ ಅಥವಾ ಸರ್ಕಾರಿ ಉದ್ಯೋಗಿದ್ದರೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಇದನ್ನು ಮೀರಿ ಅನೇಕರು ಅರ್ಜಿ ಸಲ್ಲಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇದನ್ನು ಪತ್ತೆ ಹಚ್ಚಿ ಪಟ್ಟಿ ಮಾಡಿರುವ ಲಿಸ್ಟ್ ನಲ್ಲಿ ತಾಂತ್ರಿಕ ದೋಷಗಳಿಂದ ಕೆಲ ಅರ್ಹ ಫಲಾನುಭವಿಗಳ ಹೆಸರು ಕೂಡ ಸೇರಿದೆ.
ಈ ಕಾರಣದಿಂದ ಗೃಹಲಕ್ಷ್ಮಿ ಹಣ ಬರದೆ ಇದ್ದರೆ ಹತ್ತಿರದ ಶಿಶು ಕಲ್ಯಾಣ ಇಲಾಖೆಗೆ ತಾವು ಆದಾಯ ತೆರಿಗೆ ಪಾವತಿದಾರನಲ್ಲ ಎನ್ನುವ ದೃಢೀಕರಣ ಪತ್ರ ಕಳುಹಿಸಿದರೆ ಸಮಸ್ಯೆ ಪರಿಹಾರ ಆಗಲಿದೆ. ಇದನ್ನು ಹೊರತುಪಡಿಸಿ ಇನ್ಯಾವುದೇ ಸಮಸ್ಯೆಗಳಿದ್ದರೂ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಇರುವ CDPO ಅಧಿಕಾರಿಗಳಿಗೆ.
ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಮತ್ತು ಗೃಹಲಕ್ಷ್ಮಿ ಅರ್ಜಿ ಸ್ವೀಕೃತಿ ಪ್ರತಿ ಇತ್ಯಾದಿಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ ಅವರು ಸಮಸ್ಯೆ ತಿಳಿಸಿ ಅಥವಾ ಪರಿಹರಿಸಿ ಏಳನೇ ಕಂತಿನ ಹಣ ಬಿಡುಗಡೆ ವೇಳೆಗೆ ನಿಮ್ಮ ಖಾತೆಗೆ ಹಣ ಸಿಗುವಂತೆ ಮಾಡಲಿದ್ದಾರೆ.