ಕಾರ್ ಇದ್ದವರಿಗೆ ರಾತ್ರೋರಾತ್ರಿ ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್, ದೇಶದಾದ್ಯಂತ ಅನ್ವಯ.!

 

WhatsApp Group Join Now
Telegram Group Join Now

ದೇಶದಲ್ಲಿ ಹಲವಾರು ಬಾರಿ ಕಾನೂನು ಬದಲಾಗಿದೆ, ಮತ್ತು ಕಾನೂನಿನ ತಿದ್ದುಪಡಿಗಳು ಆಗಿವೆ. ಇದೆಲ್ಲದರ ಮೂಲ ಉದ್ದೇಶ ದೇಶದ ನಾಗರಿಕರ ಹಿತರಕ್ಷಣೆಯೇ ಆಗಿದೆ. ಸದ್ಯಕ್ಕೆ ದೇಶದಲ್ಲಿ ಹೆಚ್ಚಿನ ಜನರು ಸಂಚಾರಿ ನಿಯಮಗಳು ಮತ್ತು ಮೋಟಾರು ವಾಹನ ಕಾಯಿದೆಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ.

ಯಾಕೆಂದರೆ ಕಳೆದ ವರ್ಷಗಳಲ್ಲಿ ಸಾಕಷ್ಟು ಈ ವಿಷಯಗಳಲ್ಲಿ ಬದಲಾವಣೆ ಆಗಿದೆ, ಜೊತೆಗೆ ಪದೇಪದೇ ಸರ್ಕಾರವು ಈ ಮೋಟಾರ್ ವಾಹನ ಕಾಯ್ದೆ ಮತ್ತು ವಾಹನ ಚಾಲಕರಿಗೆ ಹಲವಾರು ರೂಲ್ಸ್ ಗಳನ್ನು ಮಾಡುವ ಮೂಲಕ ಕಾನೂನನ್ನು ಬಿಗಿಗೊಳಿಸುತ್ತಾ ಇರುವುದು ಉದ್ದೇಶ ಒಳಿತೇ ಇದ್ದರೂ ವಾಹನ ಮಾಲೀಕರಿಗೆ ಹಾಗೂ ವಾಹನ ಸವಾರರಿಗೆ ಬಾರಿ ಕಿ’ರಿ’ಕಿ’ರಿ ಆಗುತ್ತಿದೆ.

ಟ್ರಾಫಿಕ್ ರೂಲ್ಸ್ ಸ್ ಗಳ ಉಲ್ಲಂಘನೆ ಆದಾಗ ದಂಡ ತೆರುವುದು ಪ್ರತಿ ವಾಹನ ಚಾಲಕನಿಗೂ ಸಹಜವಾಗಿ ಅಭ್ಯಾಸ ಆಗಿ ಹೋಗಿದೆ ಎನ್ನುವಷ್ಟು ದಾಖಲೆ ಮೊತ್ತದಲ್ಲಿ ಪ್ರತಿ ವರ್ಷವೂ ಕೂಡ ನಮ್ಮ ದೇಶದಲ್ಲಿ ದಂ’ಡ ಸಂಗ್ರಹಣೆ ಆಗುತ್ತಿದೆ. ಅದರಲ್ಲೂ ಕೆಲವರಂತು ಪದೇಪದೇ ಮಾಡಿದ ತಪ್ಪನ್ನೇ ಮಾಡಿ ಫೈನ್ ಕಟ್ಟುವುದನ್ನು ರೂಢಿ ಮಾಡಿಕೊಂಡು ಬಿಟ್ಟಿದ್ದಾರೆ.

ಹಾಗೆಯೇ ಟ್ರಾಫಿಕ್ ಪೊಲೀಸರು ಕೂಡ ಇವರಿಗೆ ಬುದ್ಧಿ ಕಲಿಸಬೇಕು ಎಂದು ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ. ವ್ಯಕ್ತಿ ಒಂದು ವಾಹನವನ್ನು ಖರೀದಿಸಿದ ದಿನದಿಂದಲೇ ಆ ವಾಹನಕ್ಕೆ ಸಂಬಂಧಪಟ್ಟ ನಿಯಮಗಳು ಮತ್ತು ಆತ ಅದನ್ನು ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರ ಮಾಡಲು ಬಳಸಿದಾಗ ಅದರ ಕುರಿತು ಇರುವ ಕಾನೂನು, ಅದಕ್ಕಿರುವ ನಿಯಮಗಳು ಎಲ್ಲವನ್ನು ಪರಿಪಾಲಿಸಿಯೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

ಇಷ್ಟು ಮಾತ್ರ ಎಂದು ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಈಗ ಅದರ ಜೊತೆ ಹೊಸ ರೂಲ್ಸ್ ಒಂದು ಸೇರ್ಪಡೆ ಆಗಿದೆ. ನೀವೇನಾದರೂ ಕಾರಿನಲ್ಲಿ ಬೇರೆಯವರಿಗೆ ಡ್ರಾಪ್ ಕೊಟ್ಟರೆ ಆಗಲೂ ಕೂಡ ಫೈನ್ ಕಟ್ಟಬೇಕಾಗುತ್ತದೆ. ಅಂತಹದ್ದೆ ಒಂದು ಪ್ರಕರಣ ಈಗ ಮುಂಬೈಯಲ್ಲಿ ದಾಖಲಾಗಿದೆ. ಯಾಕೆಂದರೆ ಈತ ಯಾವುದೇ ಸಂಚಾರ ನಿಯಮವನ್ನ ಉಲ್ಲಂಘಿಸಿಲ್ಲ ಆದರೂ ಸಹ ಪೊಲೀಸರು ಈತನಿಗೆ 2000ರೂ. ದಂಡವನ್ನು ಹಾಕಿದ್ದಾರೆ.

ಇದಕ್ಕೆ ಕೊಟ್ಟಿರುವ ಕಾರಣ ಅಪರಿಚಿತರಿಗೆ ಡ್ರಾಪ್ ಕೊಟ್ಟಿದ್ದು. ಇದು ನಿಮಗೆ ಅಚ್ಚರಿ ಎನಿಬಹುದು ಆದರೆ ಮುಂಬೈನ ಟ್ರಾಫಿಕ್ ಪೊಲೀಸರು ಹೊಸ ನಿಯಮದಡಿ ಈ ರೀತಿ ದಂಡ ಕಟ್ಟಿಸಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಕಾರು ಚಾಲಕ ಅಪರಿಚಿತರಿಗೆ ಡ್ರಾಪ್ ಕೊಟ್ಟಿದ್ದಾರೆ. ಆದರೆ ಈ ರೀತಿ ಡ್ರಾಪ್ ಕೊಟ್ಟಿದ್ದು ತಪ್ಪು ಎಂದು ಹೇಳಿ ಅಲ್ಲಿನ ಪೊಲೀಸರು ಚಾಲಕನಿಗೆ ದಂ’ಡ ಹಾಕಿದ್ದಾರೆ.

ಆತನು ಕೂಡ ನಾನು ಯಾವ ತಪ್ಪನ್ನು ಮಾಡಿಲ್ಲ ಅವರು ಬಹಳ ಹೊತ್ತಿನಿಂದ ವಾಹನಕ್ಕಾಗಿ ಕಾಯುತ್ತಿದ್ದರು ಅದನ್ನು ಗಮನಿಸಿದ್ದೆ. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಅವರನ್ನು ಕಾರಿನಲ್ಲಿ ಕೂರಿಸಿಕೊಂಡೆ ಎಂದು ಹೇಳಿದರು ಕೂಡ ಈ ರೀತಿ ಪರಿಚಯ ಇಲ್ಲದ ವ್ಯಕ್ತಿಯನ್ನು ಕಾರಿನಲ್ಲಿ ಕರೆದೊಯ್ಯುವುದು ಕಮರ್ಷಿಯಲ್ ರೀತಿಯಲ್ಲಿ ವಾಹನ ಬಳಸಿದ ರೀತಿ ಆಗುತ್ತದೆ, ಆ ರೀತಿ ಮಾಡುವುದು ತ’ಪ್ಪು ಎಂದು ಹೇಳಿದ್ದಾರೆ.

ಜೊತೆಗೆ ಪೊಲೀಸರು ಪರಿಸರ ನಡೆಸಿದಾಗ ಕಾರಿನಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಕೂಡ ನಡೆದಿರಲಿಲ್ಲ ಆದರೂ ಒಪ್ಪದ ಪೊಲೀಸರು 2000 ರೂ. ದಂಡವನ್ನು ಕಟ್ಟಿಸಿಕೊಂಡು ಆತನನ್ನು ಕಳುಹಿಸಿದ್ದಾರೆ. ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗುತ್ತಿದೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ತಪ್ಪಾ ಎನ್ನುವ ಅನುಮಾನವನ್ನು ಕೂಡ ಹುಟ್ಟು ಹಾಕಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now