ಈಗ ಸರ್ಕಾರದ (government) ಎಲ್ಲಾ ಕೆಲಸ ಕಾರ್ಯಗಳು ಡಿಜಿಟಲೀಕರಣಗೊಂಡಿರುವುದರಿಂದ (Digitalizes) ಎಲ್ಲದಕ್ಕೂ ಕೂಡ ಆನ್ಲೈನ್ (online) ಮೂಲಕ ಅರ್ಜಿ ಹಾಕುವ ಅಭ್ಯಾಸವಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳಿಗೆ ಕೂಡ ಅದರದ್ದೇ ಆದ ವೆಬ್ಸೈಟ್ ಇದ್ದು ಕಚೇರಿಗಳಿಗೆ ಹೋಗಿ ಸಮಯ ಹಾಗೂ ಹಣ ವ್ಯರ್ಥ ಮಾಡಿಕೊಳ್ಳುವ ಬದಲು ನೇರವಾಗಿ ವೆಬ್ಸೈಟ್ ವಿಳಾಸಕ್ಕೆ ತಮ್ಮಲ್ಲಿರುವ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಭೇಟಿ ಕೊಟ್ಟು ಆ ಸೇವೆಗಳನ್ನು ಪಡೆಯಬಹುದು.
ಈ ವಿಧಾನದಲ್ಲಿ ಸರ್ಕಾರದ ಒಂದು ದಾಖಲೆ ಪಡೆಯುವ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಭಾರತದ ಚುನಾವಣಾ ಆಯೋಗ ನೀಡುವ ಗುರುತಿನ ಚೀಟಿಯ (Voter ID) ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ ಮತದಾನ ಮಾಡುವ ಸಮಯದಲ್ಲಿ ಮಾತ್ರವಲ್ಲ ಇನ್ನೂ ಅನೇಕ ಸಮಯಗಳಲ್ಲಿ ಕೂಡ ಈ ವೋಟರ್ ಐಡಿ ಕೇಳುತ್ತಾರೆ. 18 ವರ್ಷ ಆದ ಬಳಿಕ ಪ್ರತಿಯೊಬ್ಬರಿಗೂ ಕೂಡ ಮತದಾನ ಮಾಡುವ ಹಕ್ಕು ಬರುತ್ತದೆ.
ಗುರುತಿನ ಚೀಟಿಯಾಗಿ ವೋಟರ್ ಐಡಿ ನೀಡುತ್ತಾರೆ ಆದರೆ ವೋಟರ್ ಐಡಿ ಇದ್ದವರು ಮಾತ್ರ ಮತದಾನ ಮಾಡಲು ಅರ್ಹರು ಎನ್ನುವ ನಿಯಮ ಇಲ್ಲ ಅದರ ಬದಲು ಈಗ ಬೇರೆ ದಾಖಲೆಗಳನ್ನು ಕೂಡ ತೋರಿಸಿ ವೋಟ್ ಮಾಡಲು ಅವಕಾಶ ನೀಡಲಾಗಿದೆ. ಆದರೂ ಕೂಡ ಭಾರತದ ಚುನಾವಣಾ ಆಯೋಗ ನೀಡುವ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು.
ಒಂದು ಬಾರಿ ಗುರುತಿನ ಚೀಟಿ ಪಡೆದ ಮೇಲೂ ಅದರಲ್ಲಿ ಅನೇಕ ತಿದ್ದುಪಡಿ ಮಾಡಿಸಬೇಕಾದ ಪರಿಸ್ಥಿತಿ ಬರುತ್ತದೆ, ಹೆಸರು, ವಿಳಾಸ ಬದಲಾವಣೆ ಅಥವಾ ಭಾವಚಿತ್ರ ಬದಲಾಯಿಸಲು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲೂ ಕೂಡ ಈ ವೆಬ್ಸೈಟ್ ಬಳಸಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು. ಸರ್ಕಾರಕ್ಕೆ ಇದಕ್ಕಾಗಿ ಹೊಂದಿದ್ದ ವೆಬ್ ಸೈಟನ್ನು ಈಗ ಸ್ವಲ್ಪ ಬದಲಾಯಿಸಲಾಗಿದೆ. ಬದಲಾದ ವಿಧಾನದ ಪ್ರಕಾರ ಹೇಗೆ ಮೊಬೈಲ್ ಮೂಲಕವೇ, ವೋಟರ್ ಐಡಿ ತಿದ್ದುಪಡಿ ಮಾಡಿಕೊಳ್ಳಬಹುದು. ಅಥವಾ ಹೊಸ ವೋಟರ್ ಐಡಿಗಾಗಿ ಅರ್ಜಿ ಹಾಕಬಹುದು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
● ಮತದಾರ ಸೇವಾ ಪೋರ್ಟಲ್ (Mathadara seva portal) ಕೊಡುವ ಮೂಲಕ ನೀವು ತಿದ್ದುಪಡಿಗಳು ಸರಿಪಡಿಸಿಕೊಳ್ಳಬಹುದು ಅಥವಾ ಹೊಸದಾಗಿ ಅರ್ಜಿ ಹಾಕುವುದಕ್ಕೆ, ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಲು, ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಪರಿಶೀಲನೆ ಮಾಡಲು ಕೂಡ ಇಲ್ಲಿ ಅವಕಾಶವಿದೆ. ಈ ವೆಬ್ ಸೈಟ್ ಗೆ ಭೇಟಿ ಕೊಡು ಮೂಲಕ ವೋಟರ್ ಐಡಿ ಸಂಬಂಧಿತ ಗೊಂದಲಗಳಿಗೆ ಉತ್ತರ ಹಾಗೂ ಸಮಸ್ಯೆಗಳಿಗೆ ಪರಿಹಾರದ ಮಾಹಿತಿ ಕೂಡ ಸಿಗುತ್ತದೆ.
● Sign in ಎನ್ನುವ ಆಪ್ಷನ್ ಅಲ್ಲಿ ಕ್ಲಿಕ್ ಮಾಡಿದರೆ ನಿಮಗೆ ಲಾಗಿನ್ ಐಡಿ (Login ID) ಮತ್ತು ಪಾಸ್ವರ್ಡ್ (Passwaprd) ಕೇಳುತ್ತದೆ. ಈಗಾಗಲೇ Register ಆಗಿದ್ದರೆ ಅದನ್ನು ಬಳಸಿ ಲಾಗಿನ್ ಆಗಬಹುದು. ಇಲ್ಲವಾದಲ್ಲಿ mobile num. ಮತ್ತು Captcha code ನಮೂದಿಸಿ ರಿಜಿಸ್ಟರ್ ಆಗಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಪಡೆದು ಮುಂದುವರಿಯಬಹುದು.
● ಲಾಗಿನ್ ಆದ ಮೇಲೆ ಒಂದು ಅಫೀಷಿಯಲ್ ಪೇಜ್ ಕಾಣುತ್ತದೆ ಅದರಲ್ಲಿ ಸ್ಕ್ರೋಲ್ ಮಾಡುತ್ತಾ ಬಂದರೆ ನಿಮಗೆ ಹಲವು ಆಪ್ಷನ್ಗಳು ಸಿಗುತ್ತವೆ. ಅದರಲ್ಲಿ ನಿಮ್ಮ ವೋಟರ್ ಐಡಿ ಸಮಸ್ಯೆ ಸಂಬಂಧಿತ ಆಪ್ಷನ್ ಕ್ಲಿಕ್ ಮಾಡಿ ಅದರ ಮುಂದಿನ ಕ್ರಮಗಳನ್ನು ಪೂರೈಸಿ ಸಮಸ್ಯೆ ಪರಿಹಾರ ಮಾಡಿಸಿಕೊಳ್ಳಬಹುದು.