ಹೊಸದಾಗಿ ಮದುವೆಯಾಗುವ ದಂಪತಿಗಳಿಗೆ ಸರ್ಕಾರದಿಂದ ಸಿಗಲಿದೆ 50,000 ಸಹಾಯಧನ.!

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಅನೇಕ ಧಾರ್ಮಿಕ ಸಂಘ ಸಂಸ್ಥೆಗಳು, ಟ್ರಸ್ಟಿಗಳು ಮತ್ತು ಸರಕಾರದ ಮುಜರಾಯಿ ಇಲಾಖೆಗೆ ಸೇರುವ ದೇವಸ್ಥಾನಗಳ ಆಡಳಿತ ಮಂಡಳಿ ಕೂಡ ಸಾಮೂಹಿಕ ವಿವಾಹ ಕಾರ್ಯಕ್ರ‌ಮವನ್ನು ಏರ್ಪಡಿಸುತ್ತವೆ. ನಿಗದಿತ ದಿನಕ್ಕಿಂತ ಮುಂಚೆ ನೋಂದಾಯಿಸಿಕೊಂಡ ನೂತನ ವಧುವರರಿಗೆ ವಸ್ತ್ರ ಮತ್ತು ಬಂಗಾರದ ಮಂಗಳಸೂತ್ರವನ್ನು ಉಚಿತವಾಗಿ ನೀಡಿ ಸಂಪ್ರದಾಯಬದ್ಧವಾಗಿ ಕಡಿಮೆ ಖರ್ಚಿನಲ್ಲಿ ಕುಟುಂಬದವರ ಆಶೀರ್ವಾದದೊಂದಿಗೆ ಮದುವೆ ಮಾಡಿಸಲಾಗುತ್ತದೆ.

WhatsApp Group Join Now
Telegram Group Join Now

ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಈ ಪದ್ಧತಿಗೆ ಸರ್ಕಾರವು ಕೂಡ ನೆರವಾಗಿ 2015-16ನೇ ಸಾಲಿನ ಬಜೆಟ್ ಸಮಯದಲ್ಲಿ ಸರಳ ವಿವಾಹ ಯೋಜನೆಯನ್ನು ಘೋಷಣೆ ಮಾಡಿತ್ತು. ಆ ಸಮಯದಲ್ಲಿ ಕೂಡ ಮಾನ್ಯ ಹಾಲಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯರವರೇ ಈ ಬಜೆಟ್ ಘೋಷಿಸಿದ್ದರು.

ಈ ಸುದ್ದಿ ಓದಿ:- ಹೊಸ ಪಡಿತರ ಚೀಟಿ ವಿತರಣೆ.! ಈ ದಿನ ಸಿಗಲಿದೆ ಹೊಸ ರೇಷನ್ ಕಾರ್ಡ್.!

ಈಗ ಮತ್ತೊಮ್ಮೆ ಯೋಜನೆಯ ವಿಷಯ ಮುನ್ನಲೆಗೆ ಬಂದಿದೆ. ಈ ಬಾರಿ ಸರಳ ವಿವಾಹವಾಗುವಂತಹ ಜೋಡಿಗಳಿಗೆ ಪ್ರೋತ್ಸಾಹ ಧನ ನೀಡಬೇಕು ಎನ್ನುವ ಕೋರಿಕೆಗಳು ಧಾರ್ಮಿಕ ಮುಖಂಡರಿಂದ ಕೇಳಿ ಬಂದಿದೆ. ಇವರ ಮನವಿಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿಗಳು ಸರಳ ವಿವಾಹ ಯೋಜನೆಯಲ್ಲಿ ಸಾಮೂಹಿಕ ಮದುವೆ ಆಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ 50,000 ಸಹಾಯಧನವನ್ನು ನೀಡಲು ನಿರ್ಧರಿಸಿದ್ದಾರೆ.

ಇದಕ್ಕೆ ಸರಳ ವಿವಾಹ ಯೋಜನೆ ಎಂದು ಹೆಸರಿಟ್ಟು ಜೋಡಿಗಳ ಖಾತೆಗೆ ನೇರವಾಗಿ DBT ಮೂಲಕ ಹಣ ವರ್ಗಾವಣೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ರೀತಿ ಸರಳ ವಿವಾಹ ಯೋಜನೆಯಡಿ ನೋಂದಾಯಿಸಿಕೊಳ್ಳಲು ಅನೇಕ ಕಂಡಿಷನ್ ಗಳು ಇದ್ದು ಯಾರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಎನ್ನುವುದರ ವಿವರ ಹೀಗಿದೆ ನೋಡಿ.

ಸರಳ ವಿವಾಹ ಯೋಜನೆಯ ಷರತ್ತುಗಳು:-

* ಯೋಜನೆಯು ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಮಾತ್ರ ಲಭ್ಯ ಹಾಗಾಗಿ ದಂಪತಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ್ದವರಾಗಿದ್ದು ಸಾಮೂಹಿಕ ವಿವಾಹ ಕಾರ್ಯಕ್ರಮದಡಿ ಮದುವೆ ಆಗಿರಬೇಕು.
* ಕನಿಷ್ಠ 10 ಜೋಡಿಗಳು ಆದರೂ ಇದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜೋಡಿಗಳು ಮದುವೆಯಾಗಿಬೇಕು.
* ವಧುವಿಗೆ ಕನಿಷ್ಟ 18 ವರ್ಷ ಹಾಗೂ ವರನಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು.

* ಬಾಲ್ಯ ವಿವಾಹ ನಿಷೇಧ, ಮತ್ತು ಈ ರೀತಿ ಮದುವೆಯಾಗಿ ಅರ್ಜಿ ಸಲ್ಲಿಸುವವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು
* ಇಬ್ಬರ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಹೆಚ್ಚಿರಬಾರದು.
* ಜೋಡಿಗಳದ್ದು ಮೊದಲನೇ ಮದುವೆ ಆಗಿರಬೇಕು. ಎರಡನೇ ಮದುವೆ ಅಥವಾ ಮರು ಮದುವೆ ಆದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಈ ಸುದ್ದಿ ಓದಿ:- ಫೈನಾನ್ಸ್, ಹೋಂ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್, ಇನ್ನಿತರ ಸಾಲ ತೆಗೆದುಕೊಂಡಿದ್ದೀರಾ.? ಚಿಂತೆ ಮಾಡ್ಬೇಡಿ ಕಾನೂನಾತ್ಮಕ ಪರಿಹಾರ ಇಲ್ಲಿದೆ ನೋಡಿ.!

* ಜಿಲ್ಲಾ ನೋಂದಣಿ ಕಛೇರಿಯಲ್ಲಿ ಈಗಾಗಲೇ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್ ಗಳು, ಸಂಘಗಳು, ಸೊಸೈಟಿಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು.
* ವಿವಾಹ ನೋಂದಣಿ ಮಾಡಿಸಿ ಪ್ರಮಾಣ ಪತ್ರವನ್ನು ಕೂಡ ಜೋಡಿ ಪಡೆದಿರಬೇಕು.

* ಮದುವೆ ಆದ ಬಳಿಕ ವಿಳಾಸದ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು.
* ಆಯೋಜನರಿಂದ ಸಾಮೂಹಿಕ ವಿವಾಹ ಫೋಟೋ ಪಡೆದುಕೊಂಡು ಅರ್ಜಿಯ ಜೊತೆಗೆ ಲಗತ್ತಿಸಬೇಕು.
* ಬೇರೆ ಜಾತಿಯ ವಧು ಅಥವಾ ವರರನ್ನು ಮದುವೆ ಆಗಿದ್ದರೆ ಅಂತರ್ ಜಾತಿ ವಿವಾಹದ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಈ ಸುದ್ದಿ ಓದಿ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್, ತಪ್ಪದೇ ಇಂದೇ ಅರ್ಜಿ ಸಲ್ಲಿಸಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now