ಎಲ್ಲರೂ ಕೂಡ ಆಂಜನೇಯ ಸ್ವಾಮಿಯನ್ನು ಬಲದ ಸಂಕೇತ ಶಕ್ತಿಯ ಸಂಕೇತ ಎಂದು ನಂಬುತ್ತಾರೆ ಹೌದು. ಪ್ರತಿಯೊಂದು ಕಡೆಯಲ್ಲಿಯೂ ಕೂಡ ಪ್ರತಿಯೊಂದು ಹಳ್ಳಿಯಲ್ಲಿಯೂ ಕೂಡ ಆಂಜನೇಯ ಸ್ವಾಮಿಯ ದೇವಸ್ಥಾನ ಇರುವುದನ್ನು ನಾವು ಕಾಣುತ್ತೇವೆ. ಒಂದೊಂದು ಕಡೆ ಇರುವಂತಹ ದೇವಸ್ಥಾನವು ಒಂದೊಂದು ರೀತಿಯ ಪವಾಡಗಳನ್ನು ಸೃಷ್ಟಿಸುತ್ತದೆ ಎಂದೇ ಅಲ್ಲಿಯ ಜನರು ನಂಬಿರುತ್ತಾರೆ.
ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಯಾವುದೇ ಸಂದರ್ಭದಲ್ಲಿಯೂ ಕೂಡ ಒಮ್ಮೆ ಆಂಜನೇಯ ಎಂದು ಹೇಳಿದರೆ ಸಾಕು ಆ ಕಷ್ಟ ಬಗೆಹರಿಯುತ್ತದೆ ಎನ್ನುವ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದಲೇ ಇತ್ತೀಚಿನ ದಿನದಲ್ಲಿಯೂ ಕೂಡ ಪ್ರತಿಯೊಬ್ಬರೂ ಆಂಜನೇಯ ಸ್ವಾಮಿಯನ್ನು ಎಷ್ಟು ಭಕ್ತಿಯಿಂದ ಪೂಜಿಸಲು ಸಾಧ್ಯವಾಗುತ್ತಿದೆ.
ಅದರಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಆಂಜನೇಯ ಸ್ವಾಮಿ ದೇವಸ್ಥಾನವು ಬಹಳ ವಿಶೇಷವಾಗಿದ್ದು ಪ್ರತಿಯೊಬ್ಬರೂ ಕೂಡ ಈ ಆಂಜನೇಯ ಸ್ವಾಮಿಯನ್ನು ಅಷ್ಟೇ ಭಕ್ತಿಯಿಂದ ಪೂಜಿಸುತ್ತಿದ್ದಾರೆ.
ಹೌದು ಬರುವಂತಹ ಭಕ್ತಾದಿಗಳ ಪ್ರತಿಯೊಂದು ಕಷ್ಟವನ್ನು ಸಹ ದೂರ ಮಾಡುತ್ತಾ ಬಂದಿರುವ ಈ ಆಂಜನೇಯ ಸ್ವಾಮಿಯನ್ನು ಪ್ರತಿನಿತ್ಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ ಅಷ್ಟೊಂದು ಶಕ್ತಿಶಾಲಿಯಾಗಿರುವಂತಹ ಈ ಆಂಜನೇಯ ಸ್ವಾಮಿ ದೇವಸ್ಥಾನ ಇರುವುದಾದರೂ ಎಲ್ಲಿ?.
ಈ ದೇವಸ್ಥಾನದಲ್ಲಿ ಯಾವುದೆಲ್ಲ ರೀತಿಯ ಪವಾಡಗಳು ನಡೆಯುತ್ತಿದೆ? ಹಾಗೂ ಈ ದೇವಸ್ಥಾನದ ವಿಶೇಷತೆಗಳು ಏನು? ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ದೇವಸ್ಥಾನದ ವಿಳಾಸ :- ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಸ್ಥಾನ ಕೊಳಾಲ ಹೋಬಳಿ, ಕೊರಟಗೆರೆ ತಾಲೂಕು, ತುಮಕೂರು ಜಿಲ್ಲೆ.
ಹೌದು ಇದು ದೇವಸ್ಥಾನದ ಸಂಪೂರ್ಣ ವಿಳಾಸವಾಗಿದ್ದು. ಪ್ರತಿನಿತ್ಯ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ ಆದರೆ ಮಂಗಳವಾರ ಶನಿವಾರ ಭಾನುವಾರ ಬಹಳ ವಿಶೇಷವಾದಂತಹ ದಿನವಾಗಿದ್ದು ಈ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ ಎಂದು ಈ ದೇವಸ್ಥಾನದ ಅರ್ಚಕರು ತಿಳಿಸುತ್ತಾರೆ.
ಸಾಮಾನ್ಯವಾಗಿ ಈ ದೇವಸ್ಥಾನ ಇರುವುದು ಬಹಳ ವಿಶೇಷ ಹೌದು ಅದೇನೆಂದರೆ ಸೂರ್ಯ ಮತ್ತು ಆಂಜನೇಯ ಇಬ್ಬರೂ ಕೂಡ ಈ ದೇವಸ್ಥಾನದಲ್ಲಿ ನೆಲೆಗೊಂಡಿದ್ದಾರೆ ಆದ್ದರಿಂದಲೇ ಈ ದೇವಸ್ಥಾನಕ್ಕೆ ಸೂರ್ಯಾಂಜನೇಯ ಸ್ವಾಮಿ ದೇವಸ್ಥಾನ ಎಂದು ಕರೆಯುತ್ತಾರೆ. ಈ ದೇವಸ್ಥಾನವು ವಾಸ್ತು ಪ್ರಕಾರ ಇದ್ದು ಈ ಒಂದು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಧನಾತ್ಮಕ ಶಕ್ತಿ ಎನ್ನುವುದು ಇದೆ ಎಂದು ಇಲ್ಲಿಯ ಜನರು ನಂಬಿದ್ದಾರೆ.
ಹಾಗಾಗಿ ಈ ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳು ಎಲ್ಲಾ ರೀತಿಯ ಕಷ್ಟಗಳನ್ನು ಆಂಜನೇಯ ಸ್ವಾಮಿಯ ಬಳಿ ಹೇಳುತ್ತಾ ಇಲ್ಲಿ ಎಷ್ಟು ವಾರಗಳು ಬರಲು ಸಾಧ್ಯವೊ ಅಷ್ಟು ವಾರ ಬಂದು ಇಲ್ಲಿ ಹರಕೆಯನ್ನು ಕಟ್ಟಿಕೊಂಡು ಹೋಗುತ್ತಾರೆ. ಆನಂತರ ಅವರು ಆ ಹರಕೆಯನ್ನು ಪ್ರತಿ ವರ್ಷ ತೀರಿಸುತ್ತಾರೆ ಎಂದು ಹೇಳಬಹುದು.
ಹೌದು ಯಾವುದೇ ಹಣಕಾಸಿನ ಸಮಸ್ಯೆ ಯಾಗಿರಲಿ, ಮದುವೆ ವಿಚಾರವಾಗಿರಲಿ, ಕೋರ್ಟ್ ಕೇಸ್ ವಿಚಾರವಾಗಿರಲಿ, ಹೀಗೆ ಪ್ರತಿಯೊಂದರ ಬಗ್ಗೆಯೂ ಕೂಡ ನೀವು ಇಲ್ಲಿ ಆಂಜನೇಯ ಸ್ವಾಮಿಯ ಬಳಿ ಹೇಳಿಕೊಂಡು ಅದನ್ನು ಸರಿಪಡಿಸಿ ಕೊಳ್ಳುವಂತೆ ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾ ನೀವು ಇಲ್ಲಿ ಪೂಜೆ ಸಲ್ಲಿಸಬೇಕು.
ಹಾಗೂ ಈ ದೇವಸ್ಥಾನದಲ್ಲಿ ಕೊಡುವಂತಹ ಒಂದು ಹಾಳೆಯ ಮೇಲೆ ಓಂ ಸೂರ್ಯಾಂಜನೇಯ ಸ್ವಾಮಿ ನಮಃ ಎಂದು ಬರೆದು ನಿಮ್ಮ ಹೆಸರು ಜಾತಕ ನಕ್ಷತ್ರ ಹಾಗೂ ನೀವು ಯಾವ ಸಮಸ್ಯೆಯನ್ನು ಹೇಳಿಕೊಂಡಿದ್ದೀರಿ ಹಾಗೂ ಈ ಸಮಸ್ಯೆ ದೂರವಾದ ಮೇಲೆ ಯಾವ ಕಾಣಿಕೆಯನ್ನು ಸಲ್ಲಿಸುತ್ತೀರಿ ಎನ್ನುವುದನ್ನು ಬರೆದು ಆ ದೇವರ ಹುಂಡಿ ಯಲ್ಲಿ ಹಾಕಬೇಕಾಗುತ್ತದೆ.
ಈ ರೀತಿ ಹರಕೆ ಹೊತ್ತಂತಹ ಪ್ರತಿಯೊಬ್ಬರೂ ಕೂಡ ಪ್ರತಿ ವರ್ಷ ದೇವ ಸ್ಥಾನದಲ್ಲಿ ಹರಕೆಯನ್ನು ಒಪ್ಪಿಸುತ್ತಾ ಬಂದಿದ್ದಾರೆ ಆದ್ದರಿಂದ ಈ ದೇವ ಸ್ಥಾನ ಬಹಳ ವಿಶೇಷವಾದಂತಹ ದೇವಸ್ಥಾನವಾಗಿದ್ದು ಪ್ರತಿಯೊಬ್ಬರೂ ಕೂಡ ಈ ದೇವಸ್ಥಾನಕ್ಕೆ ಹೋಗುವುದರ ಮೂಲಕ ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.