ಅಡಿಕೆ ಒಂದು ವಾಣಿಜ್ಯ ಬೆಳೆ ಮತ್ತು ಅಡಿಕೆಯಲ್ಲಿ ಹೆಚ್ಚು ಲಾಭ ಸಿಗುವುದರಿಂದ ಹೆಚ್ಚಿನ ರೈತರು ಅಡಿಕೆ ತೋಟ ಮಾಡಲು ಇಷ್ಟ ಪಡುತ್ತಾರೆ. ಮೊದಲೆಲ್ಲಾ ಕರಾವಳಿ ಭಾಗದಲ್ಲಿ ಮತ್ತು ಮಲೆನಾಡಿನ ಭಾಗದಲ್ಲಿ ಹೆಚ್ಚಾಗಿ ಅಡಿಕೆ ತೋಟಗಳು ಇರುತ್ತಿದ್ದವು ಈಗ ಎಲ್ಲಾ ಕಡೆಗಳಲ್ಲೂ ಕೂಡ ಅಡಿಕೆ ತೋಟಗಳನ್ನು ಕಾಣಬಹುದು ತೆಂಗು ಹಾಗೂ ಅಡಿಕೆ ಬೆಳೆಗೆ ಸಾಮ್ಯತೆ ಇದ್ದರು ಕೆಲವೊಂದು ವಿಷಯದಲ್ಲಿ ವ್ಯತ್ಯಾಸಗಳು ಕೂಡ ಇವೆ.
ತೆಂಗಿಗಿಂತ ಅಡಿಕೆ ಬಹಳ ಸೂಕ್ಷ್ಮ ಎಂದು ಹೇಳಬಹುದು ಹಾಗಾಗಿ ಅಡಿಕೆ ಬೆಳೆಯುವಾಗ ರೈತರು ಲಾಸ್ ಆಗಬಾರದು ಎಂದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಮತ್ತು ಯಾವ ಜೊತೆ ಬೆಳೆಯಲೇಬಾರದು ಹೆಚ್ಚು ಇಳುವರಿ ಬರುವ ಹಾಗೆ ಅಡಿಕೆ ಬೆಳೆಯುವುದು ಹೇಗೆ? ಏನೆಲ್ಲಾ ಗೊಬ್ಬರ ಹಾಕಬೇಕು ಈ ಬಗ್ಗೆ ಕೆಲವೊಂದಿಷ್ಟು ಅಂಶವನ್ನು ಈ ಲೇಖನದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ಅಡಿಕೆ ಮರವನ್ನು ಯಾವಾಗಲು 9 ಅಡಿ ಅಂತರದಲ್ಲಿ ಬೆಳೆಯುತ್ತಾರೆ. ಯಾಕೆಂದರೆ ಒಂದು ಅಡಿಕೆ ಮರದ ಗರಿಯು ಮತ್ತೊಂದು ಅಡಿಕೆ ಮರದ ಗರಿಗೆ ಟಚ್ ಆಗಬಾರದು ಎಂದು. ಇನ್ನು ಅಡಿಕೆ ತಳಿಗಳ ಬಗ್ಗೆ ಹೇಳುವುದಾದರೆ ಈಗ ಸಾಕಷ್ಟು ಬಗೆಯ ತಳಿಗಳು ಇವೆ ಗೊಂದಲ ಇರುವವರು ನಾಲ್ಕೈದು ತಳಿ ಮಿಕ್ಸ್ ಮಾಡಿ ಹಾಕುವುದು ಒಳ್ಳೆಯದು ಆದರೆ ಊರು ತಳಿ ಎಂದು ಹೇಳಲಾಗುವ ಹಳೆ ತಳಿಗಳು ಹೆಚ್ಚು ಸೂಕ್ತ.
ಈ ಸುದ್ದಿ ಓದಿ:- ಮೇವು ಕತ್ತರಿಸುವ ಯಂತ್ರ ಖರೀದಿಸಲು ಸರ್ಕಾರದಿಂದ 50% ಸಬ್ಸಿಡಿ ಸಮೇತ ಸಾಲ ಲಭ್ಯ, ಆಸಕ್ತರು ಅರ್ಜಿ ಸಲ್ಲಿಸಿ.!
ಅದನ್ನು ಆಯಾ ಭಾಗಕ್ಕೆ ತಕ್ಕ ಹಾಗೆ ಪುತ್ತೂರು ತಳಿ, ತೀರ್ಥಹಳ್ಳಿ ತಳಿ ಎಂದು ಹೆಸರಿಟ್ಟು ಕೊಂಡಿದ್ದಾರೆ. ಈ ತಳಿಗಳು ಅತ್ಯುತ್ತಮ ಆದರೆ ಇವು ಎತ್ತರವಾಗಿ ಬೆಳೆಯುತ್ತವೆ ಈಗ ಮರ ಹತ್ತಿ ಅಡಿಕೆ ಕೀಳುವುದಕ್ಕೆ, ಔಷಧಿ ಹಾಕುವುದಕ್ಕೆ ಕಾರ್ಮಿಕರ ಕೊರತೆ ಇರುವುದರಿಂದ ಇಳುವರಿ ಕಡಿಮೆಯಾದರೂ ಮರದ ಆಯಸ್ಸು ಕಡಿಮೆ ಇದ್ದರೂ ಹೈಟ್ ಕಡಿಮೆ ಇರುವ ತಳಿಗಳ ಮೊರೆ ಹೋಗುತ್ತಿದ್ದಾರೆ.
ಈ ತಪ್ಪು ಮಾಡಬಾರದು ಎನ್ನುತ್ತಾರೆ ಈಗಾಗಲೇ ಅಡಿಕೆ ಕೃಷಿಯಲ್ಲಿ ಯಶಸ್ವಿ ಆಗಿರುವ ಪ್ರಗತಿಪರ ರೈತರೊಬ್ಬರು. ಇತ್ತೀಚಿಗೆ ಖಾಸಗಿ ಯುಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನವನ್ನು ನೀಡಿದಂತಹ ಪ್ರಗತಿಪರ ಕೃಷಿಕ ಮುಂಬಾರು ದಿನಕರ ಶೆಟ್ಟಿಯವರು ಹಂಚಿಕೊಂಡ ಅಡಿಕೆ ಬೆಳೆ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.
ಇವರು ಈಗಾಗಲೇ ಸಾವಯುವ ಅಡಿಕೆ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ ಅಡಿಕೆ ಕೃಷಿ ಮಾಡಲು ಇಚ್ಚಿಸುವವರಿಗೆ ಸಲಹೆಗಳನ್ನು ನೀಡುವುದರ ಜೊತೆಗೆ ಸಾವಯವ ಅಡಿಕೆ ತಳಿಯನ್ನು ಕೂಡ ಮಾಡಿಕೊಡುತ್ತಾರೆ ಮತ್ತು ಅದೇ ರೀತಿ ಬೆಳೆಯಲು ಸಲಹೆಯನ್ನು ಕೊಡುತ್ತಾರೆ.
ಈ ಸುದ್ದಿ ಓದಿ:- ಆಧಾರ್ ಲಿಂಕ್ ಆಗದ ಬೆಳೆ ಹಾನಿ ರೈತರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈ ರೀತಿ ಚೆಕ್ ಮಾಡಿ ಲಿಂಕ್ ಮಾಡಿ.!
ಆದರೆ ಈಗಿನ ಕಾಲದಲ್ಲಿ ಇಳುವರಿ ಕಡಿಮೆ ಎನ್ನುವ ಅಭಿಪ್ರಾಯವಿದೆ ಮತ್ತು ಬೆಳೆ ಬರುವುದು ಲೇಟ್ ಆಗುತ್ತದೆ ಎನ್ನುವ ಅಭಿಪ್ರಾಯವಿದೆ ಎನ್ನುವ ಪ್ರಶ್ನೆಗೆ ಗುಣಮಟ್ಟ ಕೂಡ ಅಷ್ಟೇ ಮುಖ್ಯ ಅಲ್ಲವೇ ಎನ್ನುವ ಉತ್ತರ ಕೊಡುತ್ತಾರೆ. ಈಗಿನ ಕಾಲದಲ್ಲಿ ಇಳುವರಿಗಾಗಿ ಸರ್ಕಾರಿ ಗೊಬ್ಬರಗಳನ್ನು ಹಾಕುತ್ತಾರೆ.
ಆದರೆ ಅದರಲ್ಲಿರುವ ಕೆಲ ಅಂಶಗಳಿಂದಲೇ ಅಡಿಕೆ ಮರಗಳಿಗೆ ಕಾಯಿಲೆ ಆಗುತ್ತದೆ ಹಿಂದೆ ಯಾವುದೇ ಔಷಧಗಳನ್ನು ಹಾಕುತ್ತಲೇ ಇರಲಿಲ್ಲ ಬೇಸಿಗೆಯಲ್ಲಿ ತಂಪಾಗಲಿ ಎಂದು ಸುಣ್ಣ ಹೊಡೆಸುತ್ತಿದ್ದರು ಅಷ್ಟೇ ಕೊಟ್ಟಿಗೆ ಗೊಬ್ಬರ ಅಷ್ಟೇ ಬಳಸುತ್ತಿದ್ದು ಅದನ್ನೇ ಅನುಸರಿಸಿದರೆ ರೈತನಿಗೆ ಈಗ ಕಷ್ಟವಾದ್ರೂ ಮುಂದೆ ಒಳ್ಳೆಯದಾಗುತ್ತದೆ ಎಂದು ಸಲಹೆ ಕೊಡುತ್ತಾರೆ.
ಇವರು ಹೇಳಿದ ಮಾತುಗಳಲ್ಲಿ ಅತಿ ಮುಖ್ಯ ಅಂಶವೇನೆಂದರೆ, ಯಾವುದೇ ಕಾರಣಕ್ಕೂ ಅಡಿಕೆ ಬೆಳೆ ಮಧ್ಯೆ ಬಾಳೆ ಹಾಕುವ ತಪ್ಪು ಮಾಡಬೇಡಿ ಎಂದು ಹೇಳುತ್ತಾರೆ. ಯಾಕೆಂದರೆ ಬಾಳೆಗೆ ಹೆಚ್ಚು ನೀರು ಬೇಕು. ಅಡಿಕೆಗೆ ನೀಡಿದ ನೀರನ್ನು ಬಾಳೆ ಎಳೆದುಕೊಂಡು ಬಿಡುತ್ತದೆ ಒಂದು ವೇಳೆ ತೆಂಗು ಹಾಳಾದರೆ ಎರಡು ವರ್ಷ ಬಳಿಕ ಬೇಕಾದರೂ ಒಂದು ಸುಳಿ ಇದ್ದರೆ ಅದನ್ನು ಕಾಪಾಡಿಕೊಳ್ಳಬಹುದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 2000 ಮತ್ತು ಅಕ್ಕಿ ಹಣ ಪಡೆಯಲಾಗದ ಮಹಿಳೆಯರು ಹೀಗೆ ಮಾಡಿ ಸಂಪೂರ್ಣ ಎಲ್ಲಾ ಕಂತಿನ ಹಣ ಬರುತ್ತೆ.!
ಆದರೆ ಅಡಿಕೆಯಲ್ಲಿ ಆ ರೀತಿಯಲ್ಲ. ಒಮ್ಮೆ ಹಾಳಾದರೆ ಮತ್ತೆ ಸರಿ ಮಾಡಲು ಆಗಲ್ಲ ಪೂರ್ತಿ ತೆಗೆದು ಹಾಕಬೇಕಾಗುತ್ತದೆ, ಹಾಗಾಗಿ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ ಎನ್ನುತ್ತಾರೆ. ಇದರ ಜೊತೆಗೆ ಇನ್ನೂ ಅನೇಕ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.