ಹಳೆ ಗಾಡಿಯನ್ನು ಹೊಸ ಚಾರ್ಜ್ ಗಾಡಿಯನ್ನಾಗಿ ಬದಲಾಯಿಸಿ, ಕಡಿಮೆ ಬೆಲೆಯಲ್ಲಿ ಸೂಪರ್ ಕ್ವಾಲಿಟಿ, EV Scooter
ಎಲೆಕ್ಟ್ರಿಕ್ ಗಾಡಿಗಳ ಅಬ್ಬರವು ಎಲ್ಲೆಡೆಯು ಇದೆ, ಪೆಟ್ರೋಲ್ ನ ಬೆಲೆ ಹೆಚ್ಚುತ್ತಿರುವುದರಿಂದ ಜನರೆಲ್ಲರೂ ಎಲೆಕ್ಟ್ರಿಕ್ ಅಂದರೆ ಕರೆಂಟ್ ಚಾರ್ಜಿಂಗ್ ಗಾಡಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕೇವಲ 10 20 ರೂಪಾಯಿ ಬೆಲೆಯ ಕರೆಂಟ್ ಚಾರ್ಜ್ ಮಾಡಿಕೊಂಡು ಬೇಕಾದಲ್ಲಿಗೆ ಸುಲಭವಾಗಿ ಹೋಗಿ ಬಂದು ನಮ್ಮ ಮನೆಗಳಲ್ಲಿಯೇ ಗಾಡಿಯನ್ನು ಚಾರ್ಜ್ ಮಾಡಿಕೊಳ್ಳುವುದು ಇದರ ವಿಶೇಷ ಮತ್ತು ಅನುಕೂಲಕರ ವಿಷಯ.
ಹೌದು ಬಂದುಗಳೇ, 70 ರೂಪಾಯಿಯ ಹಾಸು ಪಾಸಿನಲ್ಲಿದ್ದ ಪೆಟ್ರೋಲ್ ನ ಬೆಲೆಯು ನೂರು ಗಡಿ ದಾಟಿದೆ, ಇದರ ಜೊತೆಗೆ ಇನ್ನಿತರ ಖರ್ಚುಗಳು ಹೆಚ್ಚಾಗಿ, ಪ್ರತಿಬಾರಿ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕ್ ಗೆ ಧಾವಿಸಬೇಕಾಗಿರುವುದು ತಲೆನೋವಿನ ಕೆಲಸ. ಹೀಗಾಗಿ ಪ್ರಪಂಚದಲ್ಲೆಡೆ ಬೊಂಬೆ ಇಡುತ್ತಿರುವ ಎಲೆಕ್ಟ್ರಿಕ್ ವಾಹನಗಳು ಮಾರ್ಕೆಟ್ನಲ್ಲಿ ರಾರಾಜಿಸುತ್ತಿದೆ. ಹಲವಾರು ವಿವಿಧ ಕಂಪನಿಗಳು ತಾ ಮುಂದು ನಾ ಮುಂದು ಎಂಬಂತೆ ಹೊಸ ಹೊಸ ಎಲೆಕ್ಟ್ರಿಕ್ ಚಾರ್ಜ್ ಗಾಡಿಗಳನ್ನು ಲಾಂಚ್ ಮಾಡುತ್ತಿದ್ದಾರೆ.
ಎಲೆಕ್ಟ್ರಿಕ್ ಗಾಡಿಗಳಿಗೆ ಸರ್ಕಾರದ ಸಬ್ಸಿಡಿ
ಎಲೆಕ್ಟ್ರಿಕ್ ಗಾಡಿಗಳನ್ನು ಉತ್ತೇಜಿಸಲು ಸರ್ಕಾರವು ಸಬ್ಸಿಡಿಯನ್ನು ನೀಡುತ್ತಿದೆ, ಇದರ ಮೂಲ ಉದ್ದೇಶ ಪರಿಸರದಲ್ಲಿನ ವಾಯು ಮಾಲಿನ್ಯವನ್ನು ತಡೆಗಟ್ಟುವುದು, ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವುದು. ಕಲುಷಿತ ಗಾಳಿಯನ್ನು ಶುದ್ಧ ಮಾಡುವುದರ ಉದ್ದೇಶವಾಗಿ ಎಲೆಕ್ಟ್ರಿಕ್ ಗಾಡಿಗಳನ್ನು ಗ್ರಾಹಕರು ಕೊಂಡುಕೊಳ್ಳಲು ಸರಕಾರವು ಸ್ವಲ್ಪಮಟ್ಟಿನ ಸಬ್ಸಿಡಿಯನ್ನು ನೀಡುತ್ತಿದೆ. ಎಲೆಕ್ಟ್ರಿಕ್ ಗಾಡಿಯಲ್ಲಿ ಯಾವುದೇ ರೀತಿಯ ಹೊಗೆ ಬಾರದೆ ಇರುವುದರಿಂದ ಪರಿಸರದ ಮೇಲೆ ಪರಿಣಾಮ ಬೀರುವ ವಾಯು ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಹಾಗೂ ಭವಿಷ್ಯದಲ್ಲಿ ಪೆಟ್ರೋಲ್ ಡೀಸೆಲ್ ಮುಂತಾದ ಇಂಧನಗಳು ಖಾಲಿಯಾಗುವ ವರ್ಗಕ್ಕೆ ಸೇರುವ ಸೇರಿರುವ ಇಂಧನಗಳಾಗಿರುವುದರಿಂದ ಈಗಿಲ್ಲಿಂದಲೇ ಭವಿಷ್ಯವನ್ನು ಅಂದಾಜು ಮಾಡಿ ಅವುಗಳಿಗೆ ಹೊಂದಿಕೆಯಾಗಬೇಕಾಗಿರುವುದು ಈ ಪೀಳಿಗೆಯ ಕರ್ತವ್ಯವಾಗಿರುತ್ತದೆ ಹಾಗಾಗಿ ಸರ್ಕಾರವು 25% ಇಂದ 50 % ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.
ನಿಮ್ಮ ಹಳೆ ಹೋಂಡಾ ಆಕ್ಟಿವವನ್ನು ಎಲೆಕ್ಟ್ರಿಕ್ ಗಾಡಿ ಆಗಿ ಬದಲಾಯಿಸಿ !
ಈಗಾಗಲೇ ನಿಮ್ಮ ಬಳಿ ಇರುವ ಹಳೆಯ ಹೋಂಡಾ ಆಕ್ಟಿವಾ ಸ್ಕೂಟಿಯನ್ನು ಎಲೆಕ್ಟ್ರಿಕ್ ಗಾಡಿಯನ್ನಾಗಿ ಸುಲಭವಾಗಿ ಬದಲಾಯಿಸಿಕೊಳ್ಳಬಹುದು, ಈ ಕಂಪನಿಯವರು ನಿಮ್ಮ ಹಳೆ ಗಾಡಿ ಗೆ ಹೊಸದಾಗಿ ಎಲೆಕ್ಟ್ರಿಕ್ ಮೋಟರ್, ಕಂಟ್ರೋಲರ್, ಮತ್ತು ಬ್ಯಾಟರಿಗಳನ್ನು ಅಳವಡಿಸಿ ಸುಲಭವಾಗಿ ಚಾರ್ಜ್ ಮಾಡಿಕೊಂಡು ಬೇಕಾದಲ್ಲಿಗೆ ತೆರಳುವ ಹಾಗೆ ತಯಾರಿ ಮಾಡಿಕೊಡುತ್ತಾರೆ. STARYA ಎಂಬ ಬೆಂಗಳೂರು ಕಂಪನಿಯ ಗ್ರಾಹಕರಿಗೆ ಹೋಂಡಾ ಆಕ್ಟಿವಗಳನ್ನು ಹೊಂದಿರುವವರಿಗೆ ಮಾತ್ರ ಚಾರ್ಜ್ ಗಾಡಿಯನ್ನಾಗಿ ಪರಿವರ್ತಿಸಿ ಕೊಡುತ್ತಿದ್ದಾರೆ, ಈ ಕಂಪನಿಯಲ್ಲಿ ಬೆಂಗಳೂರಿನಲ್ಲಿ ನಾಲ್ಕು ಬ್ರಾಂಚ್ ಗಳನ್ನು ಹೊಂದಿದೆ ನೀವು ಯಾವುದೇ ಬ್ರಾಂಚ್‌ನಲ್ಲಿಯೂ ನಿಮ್ಮ ಗಾಡಿಯನ್ನು ಚಾರ್ಜ್ ಗಾಡಿಯನ್ನಾಗಿ ಬದಲಿಸಿಕೊಳ್ಳಬಹುದು. ಇದಕ್ಕೆ 40,000ಗಳನ್ನು ಇವರು ಚಾರ್ಜ್ ಮಾಡುತ್ತಿದ್ದಾರೆ.
ಎಲೆಕ್ಟ್ರಿಕ್ ಗಾಡಿಗಳಲ್ಲಿ ಪ್ರತಿಷ್ಠಿತ ಬ್ರಾಂಡ್ಗಳಾದ Ola, Ather ನಂತಹ ಕಂಪನಿ ಗಾಡಿಗಳಿಗೆ ಟಕ್ಕರ್ ಕೊಡುವಂತಹ ಸಾಮರ್ಥ್ಯವನ್ನು ಇವರ ಕಂಪನಿಯ ಮೋಟಾರ್ ಕೆಲಸ ಮಾಡಲಿದೆ ಎಂಬುದು ಇವರ ಮಾತು. ಹಾಗಾಗಿ ಬಜೆಟ್ ನಲ್ಲಿ ನಿಮ್ಮ ಹಳೆಯ ಗಾಡಿಯನ್ನು ಎಲೆಕ್ಟ್ರಿಕ್ ಸ್ಕೂಟಿಯನ್ನಾಗಿ ಪರಿವರ್ತಿಸಿಕೊಂಡು ಸುಲಭವಾಗಿ ಮನೆಯಲ್ಲಿ ಚಾರ್ಜ್ ಮಾಡಿಕೊಂಡು ನಿಮ್ಮ ಕುಟುಂಬದವರೊಂದಿಗೆ ಚಲಾಯಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದರ ಮೂಲ ಉದ್ದೇಶ ಪರಿಸರದಲ್ಲಿನ ವಾಯು ಮಾಲಿನ್ಯವನ್ನು ತಡೆಗಟ್ಟುವುದು, ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವುದು.
ಹೆಚ್ಚಿನ ಮಾಹಿತಿಗೆ ಕಂಪೆನಿಯನ್ನು ಸಂಪರ್ಕಿಸಿ ಮತ್ತು ಈ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ.