ಫೆಬ್ರವರಿ 28 ರಂದು 13ನೇ ಕಂತಿನ P.M ಕಿಸಾನ್ ಸಮ್ಮಾನ್ ಯೋಜನೆ ಹಣ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಈ ರೀತಿ ಚೆಕ್ ಮಾಡಿ

ಜ್ಯೋತಿಷ್ಯ ಜಾಹೀರಾತು
ಜ್ಯೋತಿಷ್ಯ ಜಾಹೀರಾತು

ಭಾರತದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ರೈತರಿಗಾಗಿ ನೇರವಾಗಿ ರೈತರ ಖಾತೆಗೆ ಹಣ ಜಮೆ ಆಗುವಂತಹ ಯೋಜನೆಯನ್ನು ಜಾರಿಗೆ ತಂದಿದ್ದರು. ಅದೇ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ. ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ 6,000ರೂ ಮೂರು ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಜಮೆ ಆಗಲಿದೆ.

WhatsApp Group Join Now
Telegram Group Join Now

ಈವರೆಗೆ ಅನೇಕ ಯೋಜನೆಗಳನ್ನು ರೈತರಿಗೆ ತಂದಿದ್ದರು ಅದರ ಮಾಹಿತಿ ಕೊರತೆಯಿಂದಾಗಿ ಅಥವಾ ಮಧ್ಯವರ್ತಿಗಳ ಮೋಸದಿಂದಾಗಿ ರೈತರ ತನಕ ಹಣ ತಲುಪುತ್ತಿರಲಿಲ್ಲ. ಈ ಯೋಜನೆ ಬಂದಮೇಲೆ ದೇಶದಾದ್ಯಂತ 14 ಕೋಟಿ ರೈತರುಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈಗ ನಾಲ್ಕು ವರ್ಷಗಳಿಂದ 12 ಕಂತುಗಳು ಈ ಯೋಜನೆ ಅಡಿ ಹಣ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಆಗಿದೆ.

ಅನೇಕ ಸಂದರ್ಭಗಳಲ್ಲಿ ಮಾನ್ಯ ಪ್ರಧಾನ ಮಂತ್ರಿ ಅವರು ಹಲವು ಕಡೆ ಕಾರ್ಯಕ್ರಮಗಳಿಗೆ ಹೋಗಿ ರೈತರನ್ನು ಭೇಟಿಯಾಗಿ ಅಲ್ಲೇ ಇದಕ್ಕೆ ಚಾಲನೆ ನೀಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬೆಳಗಾವಿಗೆ ಬಂದು ಪ್ರಧಾನಮಂತ್ರಿ ಅವರು ಈ ಯೋಜನೆಯ ಹಣ ಬಿಡುಗಡೆ ಮಾಡಿದ್ದಾರೆ. 13ನೇ ಕಂತಿನ ಈ ಯೋಜನೆ ಹಣಕ್ಕೆ ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ದಿನ ನರೇಂದ್ರ ಮೋದಿ ಅವರ ಕಡೆಯಿಂದ ಚಾಲನೆ ದೊರೆತಿದೆ.

ಇನ್ನು ವಿಶೇಷ ಏನೆಂದರೆ ಬಿ ಎಸ್ ವೈ ಅವರ ಹುಟ್ಟುಹಬ್ಬ ಕೂಡ ಫೆಬ್ರವರಿ 27ರಂದು ಇತ್ತು. ಅದೇ ದಿನದಂದು ಬೆಳಗಾವಿಯಲ್ಲಿ ಬಿಜೆಪಿಯು ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿತ್ತು. ಮೋದಿ ಅವರು ಅಂದು 13ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಎನ್ನುವ ಅನುಮಾನ ನಿಮಗಿದ್ದರೆ ಅಥವಾ ನೀವು ಈಗಾಗಲೇ ಇದಕ್ಕೆ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರೆ ನಿಮಗೆ ಹಣ ಬಂದಿದೆಯ ಎನ್ನುವ ಮಾಹಿತಿಯನ್ನು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಬಹುದು.

ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು ಲಿಂಕ್ ಓಪನ್ ಆದಮೇಲೆ ಕೆಳಗಡೆ ಇರುವ ಫಾರ್ಮರ್ಸ್ ಎನ್ನುವ ಕಾಲಂ ಡ್ಯಾಶ್ ಬೋರ್ಡ್ ಬೆನಿಫಿಶಿಯರಿ ಲಿಸ್ಟ್ ಎಂದು ಕಾಣುವ ಆಪ್ಷನ್ ಅನ್ನು ಕ್ಲಿಕ್ ಮಾಡಿ. ಅದರಲ್ಲಿ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಕೇಳಲಾಗಿರುವ ಕಾಲಂಗಳಲ್ಲಿ ನಿಮ್ಮ ರಾಜ್ಯ ಜಿಲ್ಲೆ ಬ್ಲಾಕ್ ತಾಲೂಕು ಮತ್ತು ಗ್ರಾಮದ ಹೆಸರನ್ನು ತುಂಬಿಸಿದರೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಜನ ರೈತರ ಖಾತೆಗೆ ಈ ಹಣ ವರ್ಗಾವಣೆ ಆಗಿದೆ ಎನ್ನುವ ಸಂಪೂರ್ಣ ಮಾಹಿತಿಯು ಲಭ್ಯವಾಗುತ್ತದೆ.

ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳುವ ಮೂಲಕ ನೀವು ಹಣ ಬಂದಿರುವುದನ್ನು ಕನ್ಫರ್ಮ್ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಇನ್ನೂ ಸಹ ಈ ಯೋಜನೆಗೆ ಅರ್ಹರಾಗಿದ್ದು ಯೋಜನೆಯ ಅನುಕೂಲ ಪಡೆಯುತ್ತಾ ಇಲ್ಲ ಎಂದರೆ ಹತ್ತಿರದಲ್ಲೇ ಇರುವ ಸಿಎಸ್ಸಿ ಕೇಂದ್ರಗಳು ಅಥವಾ ಗ್ರಾಮ ಒನ್ ಇಲ್ಲಿಗೆ ಅಗತ್ಯ ದಾಖಲೆಯೊಂದಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ಇನ್ನು ಮುಂದೆ ನೀವು ಸಹ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಿ ಅನುಕೂಲ ಪಡೆಯಿರಿ.

https://youtu.be/XbGpvbLg7PA

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now