ದೇಶದ ಎಲ್ಲಾ ರೈತರಿಗೂ (Farmers) ಕೂಡ ಕೇಂದ್ರ ಸರ್ಕಾರದ ವತಿಯಿಂದ (Central Government) ಸಿಹಿ ಸುದ್ದಿ ಇದೆ. ಅದೇನೆಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan) 15ನೇ ಕಂತಿನ ಹಣವು ಇದೇ ನವೆಂಬರ್ 15ರ ಮಧ್ಯಾಹ್ನ 3:00 ಗಂಟೆಗೆ ಬಿಡುಗಡೆಯಾಗುತ್ತಿದ್ದು ದೇಶದ 8 ಕೋಟಿ ರೈತರು 15ನೇ ಕಂತಿನ ಹಣ ಪಡೆಯಲು ಅರ್ಹರಾಗಿದ್ದಾರೆ.
ಈ ವಿಚಾರವಾಗಿ ಕರ್ನಾಟಕದ ರೈತರಿಗೆ (Karnataka State farmers) ರಾಜ್ಯ ಸರ್ಕಾರದ ವತಿಯಿಂದ ಒಂದು ಕಂಡಿಷನ್ ಇದೆ. ಇ-ಕೆವೈಸಿ (e-kyc) ಅಪ್ಡೇಟ್ ಆಗಿರದ ರೈತರಿಗೆ 15ನೇ ಕಂತಿನ ಹಣವು ಖಾತೆಗೆ ಜಮೆ ಆಗುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಈ ರೀತಿಯಾಗಿ ಮನವಿ ಮಾಡಿಕೊಂಡಿದೆ.
PM-Kisan ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ. e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ ಈ ಪ್ರಕ್ರಿಯೆ ಪೂರ್ತಿಗೊಳಿಸಲು ರಾಜ್ಯ ಸರ್ಕಾರ ಕೋರಿದೆ. ಮೂರು ವಿಧಾನದಲ್ಲಿ ರೈತರು ತಮ್ಮ e-KYC ಮಾಡಿಸಬಹುದು.
1. ಕೇಂದ್ರ ಸರ್ಕಾರದ PM-Kisan Potal ನ Farmers corner ನಲ್ಲಿ OTP ಆಧಾರಿತ e-KYC ಮಾಡಬಹುದಾಗಿರುತ್ತದೆ.
2. Biometric ಆಧಾರಿತ e-KYC ಯನ್ನು ನಾಗರಿಕ ಸೇವಾ ಕೇಂದ್ರ / ಗ್ರಾಮ ಒನ್ / ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.
3. PM-Kisan ಆಪ್ ನಲ್ಲಿ ಮುಖಚರ್ಯೆ ಗುರುತಿಸುವ ಮೂಲಕ (Face authentication app) e-KYC ಮಾಡಿಸಬಹುದಾಗಿರುತ್ತದೆ.
4. ಇದರೊಂದಿಗೆ ಮತ್ತೊಂದು ಮನವಿಯನ್ನು ಮಾಡಿಕೊಳ್ಳಲಾಗಿದೆ ಅದೇನೆಂದರೆ, ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Adhar seeding to bank account) ಆಗಿರದ ಕಾರಣ ಕಳೆದ ಬಾರಿ ಹಲವು ರೈತರು ಹಣ ಪಡೆಯಲಾಗದೆ ವಂಚಿತರಾಗಿದ್ದರು. ಹಾಗಾಗಿ ರೈತರು ಇದನ್ನು ಸಹ ಧೃಡಪಡಿಸಿಕೊಂಡು ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಆಧಾರ್ ಜೋಡಣೆ ಮಾಡಿಸಲು ಕೋರಿಕೊಳ್ಳಲಾಗಿದೆ.
Eligibility status ಚೆಕ್ ಮಾಡುವ ವಿಧಾನ:-
* ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ, pmkisan.gov.in ಕ್ಲಿಕ್ ಮಾಡಿ ಪಿಎಂ ಕಿಸಾನ್ ಸಮ್ಮಾನ್ ನಿಧಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಭಾರತ ಸರ್ಕಾರ ಅಫೀಶಿಯಲ್ ವೆಬ್ಸೈಟ್ ಓಪನ್ ಆಗುತ್ತದೆ.
* Know your status ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* Reg. no ಬಾಕ್ಸ್ ನಲ್ಲಿ ನಿಮಗೆ ಕೃಷಿ ಇಲಾಖೆಯಿಂದ ನೀಡಿರುವ ರಿಜಿಸ್ಟರ್ ನಂಬರನ್ನು ನಮೂದಿಸಿ ಅಥವಾ ನಿಮ್ಮ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅರ್ಜಿ ಸಂಖ್ಯೆಯನ್ನು ಹಾಕಿ ಕ್ಯಾಪ್ಚಾ ನಮೂದಿಸಿ Get data ಕ್ಲಿಕ್ ಮಾಡಿ.
* ಮುಂದಿನ ಪುಟದಲ್ಲಿ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ವಿಳಾಸ, ನಿಮ್ಮ ಮೊಬೈಲ್ ಸಂಖ್ಯೆ ಇತ್ಯಾದಿ ಡಿಟೇಲ್ಸ್ ಗಳು ಬರುತ್ತವೆ
* Eligibility Status ಆಪ್ಷನ್ ನಲ್ಲಿ land Sending, KYC Status, Aadhar bank account Seeding Status ಈ ಮೂರು ಆಪ್ಶನ್ ಗಳಲ್ಲೂ ಕೂಡ ಹಸಿರು ಬಣ್ಣದಲ್ಲಿ ರೈಟ್ ಮಾರ್ಕ್ ಕ್ಲಿಕ್ ಆಗಿದ್ದರೆ ನಿಮಗೆ ಕಿಸಾನ್ ನಿಧಿ ಯೋಜನೆ ಹಣ ಈ ಕಂತಿನಲ್ಲಿ ಬರುತ್ತದೆ ಎಂದರ್ಥ. ಇದರಲ್ಲಿ ಯಾವುದೇ ಒಂದರಲ್ಲಿ ಕೆಂಪು ಬಣ್ಣದಲ್ಲಿ ಅಡ್ಡ ಗೆರೆ ಹಾಕಿದ್ದರೆ ನೀವು ಆ ಪ್ರಕ್ರಿಯ ಪೂರ್ತಿಗೊಳಿಸಿಲ್ಲ ಹಾಗಾಗಿ ಪ್ರಕ್ರಿಯೆ ಪೂರ್ತಿಗೊಳಿಸಿ ಎಂದರ್ಥ.
reason of Inelligibility ಕ್ಲಿಕ್ ಮಾಡಿ ಡೀಟೇಲ್ಸ್ ತಿಳಿದುಕೊಳ್ಳಬಹುದು.
* ಮುಖಪುಟದಲ್ಲಿ e-KYC ಎನ್ನುವ ಆಪ್ಷನ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಆಧಾರ್ ಕಾರ್ಡ್ ಸಂಖ್ಯೆಯನ್ನು ಎಂಟ್ರಿ search ಕೊಡಿ, e-KYC already done ಎಂದು ಪಾಪ್ ಮೆಸೇಜ್ ಬಂದರೆ e-KYC ಆಗಿದೆ ಎಂದರ್ಥ. ಇಲ್ಲವಾದಲ್ಲಿ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಆ OTP ಸಂಖ್ಯೆಯನ್ನು ನಮೂದಿಸಿದರೆ PM-Kisan e-KYC ಪೂರ್ತಿಯಾಗುತ್ತದೆ.