ಇದೊಂದು ಎಲೆ ಸಾಕು ಎಂತಹ ಚರ್ಮ ಸಮಸ್ಯೆ ಇದ್ದರೂ ಕ್ಷಣಾರ್ಧದಲ್ಲಿ ನಿವಾರಣೆ ಮಾಡುತ್ತೆ.

ನಾವು ಅನೇಕ ರೀತಿಯಾದಂತಹ ಚರ್ಮ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ಚರ್ಮ ವ್ಯಾಧಿಗಳು, ಕಿವಿಯ ಸಂಧಿ ಮತ್ತು ತಲೆಯ ಒಳಗಡೆ ಒಟ್ಟು ಆಗುತ್ತಾ ಇರುತ್ತದೆ ನಮಗೆ ಇದು ತುಂಬಾ ದಿನಗಳಿಂದಲೂ ವಾಸಿಯಾಗದೆ ಇರುವಂತಹ ಚರ್ಮವ್ಯಾಧಿಗೆ ಇದು ತುಂಬಾ ಉಪಯುಕ್ತವಾಗಿದೆ. ಯಾರಿಗೆಲ್ಲ ಕುತ್ತಿಗೆ ಹತ್ತಿರ ಹಾಗೆಯೇ ಬೆನ್ನಿನ ಹತ್ತಿರ ಬಿಳಿಚಿಬ್ಬು ಗಳ ಸಮಸ್ಯೆ ಇರುತ್ತದೆ ಅಂತಹವರಿಗೂ ಸಹ ಈ ಒಂದು ಗಿಡಮೂಲಿಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ನಮಗೆ ಕೆಲವೊಂದು ಹುಳಗಳು ಕಚ್ಚಿದರು ಸಹ ಅದು ತುಂಬ ತಿಂಗಳುಗಳಾದರೂ ನಮಗೆ ವಾಸಿಯಾಗುತ್ತಾ ಇರುವುದಿಲ್ಲ ಅದಕ್ಕೂ ಈ ಗಿಡಮೂಲಿಕೆ ತುಂಬಾ ಉಪಯುಕ್ತ. ಕೈಗಳಲ್ಲಿ, ಕಾಲುಗಳಲ್ಲಿ ಮಂಡಿಯಲ್ಲಿನ ಸೋರಿಯಾಸಿಸ್ ಸಮಸ್ಯೆಯಿಂದ ಕೂಡಿದ್ದರು ಅಂತಹ ಸಮಸ್ಯೆಗು ಸಹಾಯ ಮಾಡುತ್ತದೆ. ಇನ್ನೂ ಅನೇಕ ರೀತಿಯಾದಂತಹ ಚರ್ಮ ಸಮಸ್ಯೆಗಳಿಗೆ ಈ ಒಂದು ಮರ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಅಂತಹ ಮರ ಯಾವುದು ಎಂದು ನೋಡುವುದಾದರೆ ಹೊಂಗೆಮರ ಸಾಮಾನ್ಯವಾಗಿ ನಾವು ಹಳ್ಳಿಯ ಪ್ರದೇಶಗಳಲ್ಲಿ ನೋಡುತ್ತೇವೆ ಇತ್ತೀಚಿನ ದಿನಗಳಲ್ಲಿ ಸಿಟಿಗಳಲ್ಲಿ ಸಹ ಇರುತ್ತದೆ ಆದರೆ ಹೆಚ್ಚಾಗಿ ಇದು ಹಳ್ಳಿಗಳ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹೊಂಗೆ ಮರದ ನೆರಳನ್ನು ತಾಯಿಯ ಮಡಿಲ ನೆರಳು ಎಂದು ಸಹ ಕರೆಯುತ್ತಾರೆ ಅಷ್ಟು ತಂಪಾಗಿರುತ್ತದೆ. ಬೇಸಿಗೆಯಲ್ಲಿ ತುಂಬಾ ಉತ್ತಮವಾದಂತಹ ಗಾಳಿ ನಮಗೆ ಬರಿಸುತ್ತದೆ ಈ ಮರದ ಕೆಳಗಡೆ ಕುಳಿತುಕೊಂಡರೆ ಏನೋ ಒಂತರ ಮನಸ್ಸಿಗೆ ಸಮಾಧಾನ ವಾತಾವರಣ ಉಂಟಾಗುತ್ತದೆ. ಸಿಟಿಯಲ್ಲಿ ಪಾರ್ಕ್ ಇದ್ದರೆ ಅಲ್ಲಿಯು ಈ ಗಿಡ ಹಾಕಿರುತ್ತಾರೆ. ತುಂಬಾ ಜನರು ಈ ಒಂದು ಮರವನ್ನು ನೋಡಿದ್ದರು ಸಹ ಇದರಿಂದ ಆಗುವ ಉಪಯೋಗವನ್ನು ತಿಳಿದುಕೊಂಡಿರುವುದಿಲ್ಲ. ಈ ಹೊಂಗೆಮರ ಹೂಗಳನ್ನು ಬಿಡುತ್ತದೆ ಇದರ ಕಾಯಿಯು ಸಹ ತುಂಬಾ ಉಪಯುಕ್ತ ವಾದಂತಹ ಮನೆಮದ್ದಾಗಿ ಕೆಲಸ ಮಾಡುತ್ತದೆ ಇದರಲ್ಲಿನ ಕಾಯಿಯಲ್ಲಿ ಇರುವಂತಹ ಬೀಜದಿಂದ ಎಣ್ಣೆ ತಯಾರು ಮಾಡುತ್ತಾರೆ.

ಇದರ ಹೂವಿನಿಂದ ಸ್ವಲ್ಪ ಗಮನಿಸುವಂತಹ ಪರಿಮಳ ಬರುತ್ತದೆ ಈ ಮರದ ಬೀಜ, ಎಲೆಗಳು, ಕಾಯಿ ಎಲ್ಲವೂ ಸಹ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಇದು ಎಷ್ಟು ಜನರಿಗೆ ತಂಪಾದ ಗಾಳಿಯನ್ನು ನೀಡುತ್ತದೆಯೋ ಅಷ್ಟೇ ಔಷಧೀಯ ಗುಣಗಳನ್ನು ಹೊಂದಿದೆ. ಬೆಳಿಗ್ಗೆ ಎದ್ದಾಗ ಈ ಒಂದು ಹೊಂಗೆ ಮರದ ಎಲೆಗಳನ್ನು ತೆಗೆದುಕೊಂಡು ಬರಬೇಕು ಈ ಮರದ ಎಲೆಯನ್ನು ತರುವಾಗ ನೀವು ಯಾರ ಬಳಿಯು ಸಹ ಮಾತನಾಡಬಾರದು. ತಂದ ನಂತರ ಚೆನ್ನಾಗಿ ತೊಳೆದು ಕುಟ್ಟೋ ಕಲ್ಲಿನಿಂದ ಕುಟ್ಟಿಕೊಳ್ಳಬೇಕು ಅಥವಾ ಹಾಸು ಕಲ್ಲಿನಿಂದ ಇದನ್ನು ಚೆನ್ನಾಗಿ ಪೇಸ್ಟ್ ಮಾಡಬೇಕು. ಈ ಎಲೆಗಳು ರಸವನ್ನು ಬಿಡುವುದಿಲ್ಲ ನೀವು ಇದನ್ನು ಚೆನ್ನಾಗಿ ನುಣ್ಣಗೆ ಕುಟ್ಟಬೇಕು ನೀವು ಎಳೆಯದಾದ ಎಲೆಗಳನ್ನು ತರಬಾರದು ಅದರಲ್ಲಿ ಅಷ್ಟು ಪವರ್ ಇರುವುದಿಲ್ಲ ಅದರಿಂದ ಚೆನ್ನಾಗಿ ಬಲಿತ ಎಲೆಗಳನ್ನು ನೀವು ತಂದು ಚೆನ್ನಾಗಿ ಪೇಸ್ಟ್ ಮಾಡಬೇಕು ಇದಕ್ಕೆ 2 ಡ್ರಾಪ್ ನಷ್ಟು ನೀರನ್ನು ಮಿಕ್ಸ್ ಮಾಡಿಕೊಳ್ಳಬೇಕು.

ನಂತರ ಮತ್ತೊಮ್ಮೆ ಕುಟ್ಟಿಕೊಳ್ಳಿ ಆಗ ಚೆನ್ನಾಗಿ ರಸ ಬಿಡುತ್ತದೆ ನಂತರ ಅದರಿಂದ ರಸವನ್ನು ತೆಗೆದುಕೊಂಡು ನಿಮಗೆ ಎಲ್ಲಿ ಚರ್ಮ ಸಮಸ್ಯೆ ಉಂಟಾಗಿದೆ ಅಲ್ಲಿಗೆ ಇದನ್ನು ಹಚ್ಚಿಕೊಳ್ಳಬೇಕು. ಈ ರೀತಿಯಾಗಿ ನೀವು ದಿನದಲ್ಲಿ ಎರಡು ಬಾರಿಯಾದರೂ ಇದನ್ನು ಹಚ್ಚಿಕೊಳ್ಳಬಹುದು ನಿಮಗೆ ಎಲ್ಲಿ ಚರ್ಮ ಸಮಸ್ಯೆ ಇದೆ ಅಲ್ಲಿಗೆ ನೀವು ಹಚ್ಚುವಾಗ ಅದನ್ನು ಹೀರಿಕೊಳ್ಳಬೇಕು ನೀವು ಒಂದು ವಾರ ಇದನ್ನು ಮಾಡಿದರೆ ಸಾಕು ಇದರ ರಿಸಲ್ಟ್ ನಿಮಗೆ ಚೆನ್ನಾಗಿ ತಿಳಿಯುತ್ತದೆ. ಅದರಲ್ಲಿಯೂ ಬಿಳಿಚಿಬ್ಬು ಬೆನ್ನು ಮತ್ತು ಕುತ್ತಿಗೆಯ ಭಾಗದಲ್ಲಿ ಇರುತ್ತದೆ ಅಂತಹವರು ಈ ಒಂದು ಮನೆಮದ್ದನ್ನು ಮಾಡಿದರೆ ಅತಿ ವೇಗವಾಗಿ ಕೆಲಸ ಮಾಡುತ್ತದೆ. ನಿಮಗೆ ಎಲ್ಲಿ ಚರ್ಮ ಸಮಸ್ಯೆಯಾಗಿರುತ್ತದೆ ಅಂತಹ ಜಾಗವನ್ನು ನೀವು ಶುಚಿಯಾಗಿ ಮಾಡಿಕೊಂಡು ಅಂದರೆ ತೊಳೆದುಕೊಂಡು ಅಥವಾ ಒಂದು ಬಟ್ಟೆಯಲ್ಲಿ ಚೆನ್ನಾಗಿ ವರಿಸಿಕೊಂಡು ಈ ರಸವನ್ನು ಹಚ್ಚಬೇಕು.

ಹಾಗೆಯೆ ಯಾವುದಾದರೂ ಹುಳ ಕಚ್ಚಿರುವುದು ಗಾಯ ಇದ್ದರೆ ಅದಕ್ಕೂ ಸಹ ಇದನ್ನು ಹಚ್ಚುವುದರಿಂದ ಗಾಯ ಬೇಗ ಒಣಗಲು ಶುರುವಾಗುತ್ತದೆ ಹಾಗೆಯೇ ಬೇಗ ವಾಸಿಯಾಗುತ್ತದೆ. ಈ ಮರದ ಎಲೆಗಳು ಅಷ್ಟೇ ಅಲ್ಲದೆ ಬೀಜವು ಸಹ ಮನೆ ಮದ್ದಾಗಿ ಉಪಯೋಗಿಸುತ್ತಾರೆ ಈ ಬೀಜಗಳಿಂದ ಎಣ್ಣೆಯನ್ನು ತಯಾರು ಮಾಡಲಾಗುತ್ತದೆ. ಈ ಒಂದು ಎಣ್ಣೆಯನ್ನು ನಾವು ಎಲ್ಲಿ ಕೀಲುನೋವು ಬರುತ್ತದೆ ಹಾಗೂ ಕೈಕಾಲುಗಳ ನೋವು, ಕೈ ಕಾಲುಗಳ ಸೆಳೆತ ಇನ್ನಿತರ ನೋವುಗಳಿಗೆ ಈ ಎಣ್ಣೆಯನ್ನು ಹಚ್ಚುವುದರಿಂದ ನಿಮಗೆ ಇರುವಂತಹ ಸಮಸ್ಯೆಗಳು ಅತಿವೇಗವಾಗಿ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಯಾರಿಗೆಲ್ಲ ಹಲ್ಲು ನೋವಿನ ಸಮಸ್ಯೆ ಇರುತ್ತದೆಯೋ ಯಾರಿಗೆ ಹಲ್ಲು ಹುಳುಕಾಗುವುದು, ಒಸಡಿನಲ್ಲಿ ರಕ್ತ ಬರುತ್ತದೆ ಅಂತಹವರು ಈ ಮರದ ಎಲೆಗಳು ಅಥವಾ ಬೀಜವನ್ನು ಚೆನ್ನಾಗಿ ಸುಟ್ಟು ಅದರ ಬೂದಿಯನ್ನು ತಯಾರು ಮಾಡು ಇಟ್ಟುಕೊಂಡು ಅದರಿಂದ ನಮ್ಮ ಹಲ್ಲನ್ನು ಉಜ್ಜುತ್ತಾ ಬಂದರೆ ನಿಮ್ಮ ಹಲ್ಲಿನ ಸಮಸ್ಯೆ ಹಲ್ಲು ನೋವಿನ ಸಮಸ್ಯೆ ಒಸಡಿನ ಸಮಸ್ಯೆ ನಿವಾರಣೆಯಾಗುತ್ತದೆ.

Leave a Comment

%d bloggers like this: