ಮಕ್ಕಳ ಪರ್ಮಿಷನ್ ಇಲ್ಲದೆ ತಂದೆ ಆಸ್ತಿ ಮಾರಾಟ ಮಾಡಬಹುದಾ.? ಇದರ ಬಗ್ಗೆ ಕೋರ್ಟ್ ಕೊಟ್ಟ ತೀರ್ಪು ಏನು ಗೊತ್ತ.?

ಇತ್ತೀಚೆಗೆ ನ್ಯಾಯಾಲಯಗಳಲ್ಲಿ ಆಸ್ತಿಗೆ ಸಂಬಂಧ ಪಟ್ಟ ಹಾಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅವಿಭಚಿತ ಕುಟುಂಬದಲ್ಲಿ ಆಸ್ತಿ ವಿಭಾಗ ಆದಾಗ ಆಗಿರುವ ಹಂಚಿಕೆ ಬಗ್ಗೆ ಅಸಮಾಧಾನ ಇದ್ದಾಗ ಕುಟುಂಬ ಸದಸ್ಯರು ನ್ಯಾಯಾಲಯಗಳಲ್ಲಿ ಧಾವೆ ಮೂಲಕ ನ್ಯಾಯ ಕೇಳುತ್ತಾರೆ. ಕೆಲವೊಂದು ಪ್ರಕರಣದಲ್ಲಿ ಒಪ್ಪಂದದ ಮೇರೆಗೆ ಕುಟುಂಬದಲ್ಲಿಯೇ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿಗಳು ತೀರ್ಮಾನಕ್ಕೆ ಬಂದರೆ ಕೆಲವೊಮ್ಮೆ ಈ ತೀರ್ಪುಗಳ ಬಗ್ಗೆ ಅಸಮಾಧಾನ ಇದ್ದಾಗ ಅವು ನ್ಯಾಯಲಯಗಳಲ್ಲಿ ದಾಖಲಾಗುತ್ತವೆ.

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ತಂದೆ-ಮಗ ಅಥವಾ ತಂದೆ-ಮಗಳು ಕೂಡ ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲುತ್ತಿರುವ ಪ್ರಕರಣಗಳು ಎಲ್ಲರಿಗೂ ಆಶ್ಚರ್ಯವನ್ನು ತರುತ್ತಿವೆ. ಈ ವಿಚಾರವಾಗಿ ಕೆಲವು ಪ್ರಮುಖ ಅಂಶಗಳನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಹಿಂದೂ ಉತ್ತರಾಧಿತ್ವತ ಕಾಯಿದೆ 1956 ಮತ್ತು 2005ರಲ್ಲಿ ತಿದ್ದುಪಡಿ ಆಗಿದೆ. 2005 ರಲ್ಲಿ ತಿದ್ದುಪಡಿ ಆದ ಕಾನೂನಿನ ಪ್ರಕಾರ ಲಿಂಗಬೇಧ ಇಲ್ಲದೆ ಒಬ್ಬ ತಂದೆ ಆಸ್ತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಸಮಾನ ಹಕ್ಕುದಾರರಾಗಿರುತ್ತಾರೆ.

ಈ ವಿಚಾರವಾಗಿ ನ್ಯಾಯಾಲಯದಲ್ಲಿ ಯಾವುದಾದರೂ ಪ್ರಕರಣಗಳು ದಾಖಲಾದಾಗ ಆಸ್ತಿಯ ಮೂಲದ ಆಧಾರದ ಮೇಲೆ ಪ್ರಕರಣಗಳು ಇತ್ಯರ್ಥ ಆಗುತ್ತವೆ. ಅದನ್ನು ಇನ್ನು ವಿವರವಾಗಿ ಹೇಳಬೇಕು ಎಂದರೆ ಒಬ್ಬ ತಂದೆಯು ತನ್ನ ಪಾಲಿನ ಆಸ್ತಿಯನ್ನು ಆತನ ತಂದೆ ಅಥವಾ ಅಜ್ಜನಿಂದ ವಂಶ ಪಾರಂಪರ್ಯವಾಗಿ ಪಡೆದಿದ್ದರೆ ಅದು ಪಿತ್ರಾರ್ಜಿತ ಆಸ್ತಿ ಆಗುತ್ತದೆ. ಆ ಆಸ್ತಿಯಲ್ಲಿ ಆ ಕುಟುಂಬದಲ್ಲಿ ತಂದೆಗೆ ಜನಿಸಿದ ಮಕ್ಕಳು ಹುಟ್ಟಿದಾಗಲೂ ಕೂಡ ಆಸ್ತಿಯ ಮೇಲೆ ಹಕ್ಕನ್ನು ಹೊಂದಿರುತ್ತಾರೆ.

ಇಂತಹ ಆಸ್ತಿಯ ಮೇಲೆ ಮಕ್ಕಳು ಯಾವಾಗ ಬೇಕಾದರೂ ಪಾಲನ್ನು ಕೇಳಿ ಪಡೆಯಬಹುದು. ಇಂತಹ ಆಸ್ತಿಯನ್ನು ಮಾರಾಟ ಮಾಡುವಾಗ ತಂದೆಯು ಕೂಡ ಮಕ್ಕಳ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಲ್ಲವಾದಲ್ಲಿ ಮುಂದಿನ ಪ್ರಕ್ರಿಯೆಗಳು ನಡೆಯುವಾಗ ಮಕ್ಕಳಿಂದ ವಿರೋಧ ವ್ಯಕ್ತವಾದರೆ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಖರೀದಿಸುವವರು ಕೂಡ ಇದನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಾರೆ.

ಹಾಗೆಯೇ ಒಬ್ಬ ತಂದೆಯು ತನ್ನ ಜೀವಿತಾವಧಿಯಲ್ಲಿ ತನ್ನ ಸ್ವಂತ ದುಡಿಮೆಯಿಂದ ಆಸ್ತಿ ಸಂಪಾದನೆ ಮಾಡಿದ್ದರೆ ಆ ಆಸ್ತಿಯನ್ನು ಯಾವಾಗ ಬೇಕಾದರೂ ಯಾರಿಗ ಬೇಕಾದರೂ ದಾನವಾಗಿ ಅಥವಾ ಉಡುಗೊರೆಯಾಗಿ ನೀಡಬಹುದು. ಅದನ್ನು ಅವರು ಮಾರಾಟ ಮಾಡಿದರು ಕೂಡ ಅದನ್ನು ಪ್ರಶ್ನಿಸುವ ಹಕ್ಕಾಗಲಿ ಅಥವಾ ಅದರಲ್ಲಿ ಪಾಲು ಕೇಳುವ ಹಕ್ಕು ಆಗಲಿ ಆ ವ್ಯಕ್ತಿಯ ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಬರುವುದಿಲ್ಲ.

ಅಂತಹ ಸ್ವಯಾರ್ಜಿತ ಆಸ್ತಿಯ ಸಂಪೂರ್ಣ ಅಧಿಕಾರವನ್ನು ತಂದೆಯೇ ಹೊಂದಿರುತ್ತಾರೆ. ಒಂದು ವೇಳೆ ಆ ತಂದೆಯು ಮರಣಕ್ಕೂ ಮುನ್ನ ಆಸ್ತಿಯ ಮೇಲಿನ ಹಕ್ಕನ್ನು ಯಾರಿಗೂ ವರ್ಗಾವಣೆ ಮಾಡದೆ ಅಥವಾ ವೀಲ್ ಕೂಡ ಮಾಡದೆ ಮರಣ ಹೊಂದಿದ್ದರೆ ಆಗ ಆ ವ್ಯಕ್ತಿ ಎಲ್ಲಾ ಮಕ್ಕಳು ಕೂಡ ಆ ಆಸ್ತಿ ಹಕ್ಕಿನ ಮೇಲೆ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ ಈ ವಿಚಾರದ ಬಗ್ಗೆ ಅನೇಕರಿಗೆ ಗೊಂದಲಗಳಿವೆ.

ನಿಮಗೂ ಕೂಡ ಇಂತಹ ಪ್ರಕರಣಗಳಲ್ಲಿ ಪ್ರಶ್ನೆಗಳಿದ್ದರೆ ಹತ್ತಿರದ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ಕೊಟ್ಟು ನಿಮ್ಮ ಸಮಸ್ಯೆಯನ್ನು ವಿವರವಾಗಿ ತಿಳಿಸಿ ಪರಿಹಾರವನ್ನು ಪಡೆದುಕೊಳ್ಳಿ. ಯಾಕೆಂದರೆ ಆಸ್ತಿ ಹಕ್ಕಿನ ಕುರಿತು ಪ್ರತಿಯೊಂದು ಪ್ರಕರಣವೂ ಕೂಡ ವಿಭಿನ್ನವಾಗಿರುತ್ತದೆ ಹಾಗೂ ಫಲಿತಾಂಶ ಕೂಡ ವಿಭಿನ್ನವಾಗಿರುತ್ತದೆ. ವಕೀಲರಿಂದ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎನ್ನುವುದರ ಸರಿಯಾದ ಮಾಹಿತಿ ಸಿಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now