ಕನ್ನಡ ಚಲನಚಿತ್ರ ರಂಗ ಕಂಡಂತಹ ಮೇರು ನಟ ಡಾಕ್ಟರ್ ರಾಜ್‌ಕುಮಾರ್ ಅವರ ಕಿರಿಯ ಪುತ್ರರಾದಂತಹ ಪುನೀತ್ ರಾಜ್‌ಕುಮಾರ್ ಅವರು ಸಹ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಗಾಯಕನಾಗಿ ಹಾಗೆ ನಿರ್ದೇಶಕನಾಗಿ ಪುನೀತ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪುನೀತ್ ಒಬ್ಬ ದೊಡ್ಡ ದೈವ ಭಕ್ತ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಸಾಮಾನ್ಯರಂತೆ ಸಾಕಷ್ಟು ದೇವಾಲಯಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು ನಮ್ಮ ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಇತರ ರಾಜ್ಯಗಳು ಹಾಗೂ ಇತರ ದೇಶಗಳ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷವಾದಂತಹ ಪೂಜೆಯನ್ನು ಸಲ್ಲಿಸುತ್ತಾ ಇದ್ದರೂ. ಇದನ್ನು ನೋಡಿದರೆ ಅವರು ಎಷ್ಟು ದೈವ ಭಕ್ತರು ಎಂದು ಅರಿವಾಗುತ್ತದೆ ದೇವರ ವಿಚಾರದಲ್ಲಿ ಆ ಪರಮಾತ್ಮನನ್ನು ಈ ಪರಮಾತ್ಮ ಎಂದಿಗೂ ಮರೆತಿರಲಿಲ್ಲ.
ಇನ್ನು ಅಪ್ಪು ಅವರ ಇಷ್ಟವಾದಂತಹ ದೈವ ಎಂದರೆ ಅದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ತಮ್ಮ ಎಷ್ಟೇ ಬಿಡುವಿಲ್ಲದ ಸಮಯದಲ್ಲಿಯೂ ಸಹ ಪುನೀತ್ ರಾಜ್‌ಕುಮಾರ್ ಅವರು ಮಂತ್ರಾಲಯಕ್ಕೆ ಆಗಾಗ ಭೇಟಿ ನೀಡುತ್ತಾ ಇದ್ದರು ಮಂತ್ರಾಲಯದಲ್ಲಿ ವಿಶೇಷವಾದಂತಹ ಪೂಜೆಯನ್ನು ಸಲ್ಲಿಸಿ ಆ ದೇವಾಲಯದಲ್ಲಿ ಹಾಡನ್ನು ಸಹ ಹಾಡಿ ತಮ್ಮ ಮನಸ್ಸಿನ ಎಲ್ಲಾ ಭಾರವನ್ನು ನಿವಾರಿಸಿಕೊಳ್ಳುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರ ತಂದೆ ಡಾಕ್ಟರ್ ರಾಜ್‌ಕುಮಾರ್ ಅವರು ಸಹ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳನ್ನು ಶ್ರದ್ಧೆ ಮತ್ತು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತಾ ಇದ್ದರು. ಅದೇ ರೀತಿಯಲ್ಲಿ ಅಪ್ಪು ಅವರು ಸಹ ರಾಘವೇಂದ್ರ ಸ್ವಾಮಿಗಳ ಮೇಲೆ ಅಪಾರವಾದಂತಹ ಭಕ್ತಿಯನ್ನು ಇಟ್ಟುಕೊಂಡಿದ್ದರು.
ಅದೇ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಅವರು ಗುರುವಾರದಂದು ಮಾಂಸವನ್ನು ಸೇವಿಸುತ್ತಾ ಇರಲಿಲ್ಲ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಡಾಕ್ಟರ್ ರಾಜ್‌ಕುಮಾರ್ ಕುಟುಂಬದ ಆರಾಧ್ಯ ದೈವ ವಾಗಿದ್ದು ಅಪ್ಪುಅವರ ಕುಟುಂಬದ ಆರಾಧ್ಯ ದೈವವೂ ಕೂಡ ಆಗಿದ್ದರು. ಹಾಗೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ಕೂಡ ಅಪ್ಪು ಅವರಿಗೆ ತುಂಬಾ ಇಷ್ಟವಾದಂತಹ ದೇವರು, ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಮಾಲಾಧಾರಿಯಾಗಿ ಇರುಮುಡಿ ಹೊತ್ತು ಅಪ್ಪು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನವನ್ನು ಸಹ ಮಾಡಿದ್ದಾರೆ. ತಿರುಪತಿ ವೆಂಕಟೇಶ್ವರನ ಸನ್ನಿಧಿಗು ಸಹ ಆಗಾಗ ಭೇಟಿ ಕೊಡುತ್ತಿದ್ದರು
ಮೈಸೂರಿನ ತಾಯಿ ಚಾಮುಂಡೇಶ್ವರಿ ಬೆಟ್ಟವನ್ನು ಪುನೀತ್ ರಾಜ್‌ಕುಮಾರ್ ಅವರು ಕಾಲ್ನಡಿಗೆಯಲ್ಲಿ ಹತ್ತಿ ಇಳಿಯುತ್ತಾ ಇದ್ದರು. ಆಂಜನೇಯನ ಮೇಲು ಸಹ ಅಪ್ಪು ಅವರಿಗೆ ಭಕ್ತಿ ಇತ್ತು ಧಾರವಾಡದ ನುಗ್ಗೆಕೆರೆ ಹನುಮಂತನ ಮಂದಿರಕ್ಕೂ ಸಹ ಆಗಾಗ ಭೇಟಿ ನೀಡಿ ಪೂಜೆಯನ್ನು ಸಲ್ಲಿಸುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್ ಅವರ ದೈವ ಭಕ್ತಿ ಅಗಾಧ ಅಭಿಮಾನಿಗಳ ರೀತಿಯಲ್ಲಿ ಅಪಾರವಾಗಿತ್ತು ಅಪ್ಪುವಿಗೆ ದೇವರ ಮೇಲೆ ಇಷ್ಟೆಲ್ಲ ಭಕ್ತಿ ಇದ್ದರೂ ಅಪ್ಪುವಿಗೆ ಇನ್ನೂ 10 ನಿಮಿಷಗಳ ಕಾಲವದಿಯನ್ನು ಕೊಟ್ಟಿದ್ದಾರು ಅವರು ಈಗ ನಮ್ಮ ಜೊತೆಯಲ್ಲಿ ಇರುತ್ತಿದ್ದರು. ಇಷ್ಟೆಲ್ಲ ದೈವ ಭಕ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರು ಇಟ್ಟುಕೊಂಡಿದ್ದರು ಸಹ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಪರಿಸ್ಥಿತಿ ಕೈ ಮೀರಿ ಹೋಗಿತ್ತು ಎಂದೇ ಹೇಳಬಹುದು. ಅಪ್ಪು ಅವರ ಈ ದೈವ ಭಕ್ತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.