ಕನ್ನಡದ ಟಾಪ್ ನಟಿಯರಲ್ಲಿ ನಟಿ ರಶ್ಮಿಕ ಮಂದಣ್ಣ ಅವರು ಮೊದಲ ಸ್ಥಾನದಲ್ಲಿದ್ದಾರೆ ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಸಹ ನಟಿಸಿ ತಮ್ಮ ಬೇಡಿಕೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಅವರ ಸಿನಿಮಾಗಳಿಗೋಸ್ಕರ ಅಭಿಮಾನಿಗಳು ಕಾಯುತ್ತಾ ಕುಳಿತಿರುತ್ತಾರೆ, ಅಷ್ಟರ ಮಟ್ಟಿಗೆ ಇವರ ನಟನೆ ಮೂಡಿ ಬರುತ್ತದೆ. ಅಷ್ಟೇ ಅಲ್ಲದೇ ರಶ್ಮಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಕನ್ನಡದಲ್ಲಿ ಅತಿ ಹೆಚ್ಚು ಬಾರಿ ಟ್ರೋಲ್ ಆದಂತಹ ನಟಿ ಎಂದು ಹೇಳಬಹುದು ಸಾಕಷ್ಟು ವಿಷಯಗಳಿಗೆ ರಶ್ಮಿಕಾ ಮಂದಣ್ಣ ಅವರು ಟ್ರೋಲ್ ಆಗಿದ್ದಾರೆ ಇವರ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ ಇವರು ಹಂಚಿಕೊಳ್ಳುವ ಕೆಲವೊಂದು ವಿಡಿಯೋಗಳನ್ನು ಟ್ರೋಲಿಗರು ತೆಗೆದುಕೊಂಡು ಟ್ರೋಲ್ ಮಾಡುವ ಮೂಲಕ ವೈರಲ್ ಮಾಡುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಎಂಬ ಮೊದಲ ಸಿನಿಮಾದಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಅವರು ಹಿಂತಿರುಗಿ ನೋಡಿದ್ದೇ ಇಲ್ಲ ಕನ್ನಡದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಸಹ ಸಾಕಷ್ಟು ಸಿನಿಮಾ ಆಫರ್ ಗಳು ಇವರಿಗೆ ಒದಗಿ ಬರುತ್ತವೆ. ತೆಲುಗು, ತಮಿಳು, ಹಿಂದಿ ಇನ್ನು ಅನೇಕ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ರಶ್ಮಿಕ ಮಂದಣ್ಣ ಅವರು ಸೀರೆಯನ್ನು ಉಟ್ಟರೆ ತುಂಬಾ ಸುಂದರವಾಗಿ ಕಾಣುತ್ತಾರೆ ಹಾಗೆಯೇ ಇವರ ಈ ಲುಕ್ ನೋಡಿದರೆ ಅಭಿಮಾನಿಗಳು ಫಿದಾ ಆಗುತ್ತಾರೆ. ಸಾಕಷ್ಟು ಸ್ಟಾರ್ ನಟರುಗಳ ಜೊತೆಗೆ ತೆರೆಯನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ನಟನೆಯ ಜೊತೆಗೆ ಉತ್ತಮ ನೃತ್ಯಗಾತಿ ಕೂಡ ಹೌದು ತಮ್ಮ instagram ಖಾತೆಯಲ್ಲಿ ಹಲವಾರು ರೀತಿಯ ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತದೆ ಬರುತ್ತಿದ್ದಾರೆ, ಇವರ ವಿಡಿಯೋಗಳಿಗೆ ಸಾಕಷ್ಟು ಲೈಕ್ಸ್ ಗಳು ಕೂಡ ಬರುತ್ತಿದ್ದೆ.
ಅಷ್ಟೇ ಅಲ್ಲದೆ ಇವರು ತಮ್ಮ instagram ಖಾತೆಯಲ್ಲಿ 1.94 ಮಿಲಿಯನ್ಸ್ ನಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದು ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವಂತಹ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರನ್ನು ಯಾವುದೇ ಕಾರ್ಯಕ್ರಮಗಳಲ್ಲಿ ಆದರೂ ಸರಿಯೇ ಸ್ಟೇಜ್ ಮೇಲೆ ಕರೆಸಿ ಅವರಿಂದ ನೃತ್ಯವನ್ನು ಮಾಡಿಸುತ್ತಾರೆ. ದಕ್ಷಿಣ ಭಾರತದಲ್ಲಿ ಖ್ಯಾತಿಯನ್ನು ಪಡೆದು ಕೊಂಡಿರುವಂತಹ ರಶ್ಮಿಕಾ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದು ಇವರ ಕಾಲ್ ಶೀಟ್ ಕಾಗಿ ನಿರ್ದೇಶಕರು ಕಾಯುತ್ತಾ ಕುಳಿತಿರುವಂತಹ ಪರಿಸ್ಥಿತಿ ಎದುರಾಗಿದೆ ಅಷ್ಟರಮಟ್ಟಿಗೆ ಇವರ ಸಿನಿ ಪಯಣ ಮುಂದುವರೆಯುತ್ತಿದೆ.
ಕಾರ್ಯಕ್ರಮ ಒಂದರಲ್ಲಿ ತೆಲುಗಿನ ಖ್ಯಾತ ನೃತ್ಯ ಸಂಯೋಜಕರಾದ ಜಾನಿ ಮಾಸ್ಟರ್ ಅವರಿಗೆ ನಟಿ ರಶ್ಮಿಕಾ ಮಂದಣ್ಣ ಅವರು ನೃತ್ಯವನ್ನು ಹೇಳಿಕೊಡುತ್ತಿರುವಂತಹ ಒಂದು ವಿಡಿಯೋ ಈಗ ಎಲ್ಲಿಡೆ ವೈರಲ್ ಆಗುತ್ತಿದೆ ಈ ವಿಡಿಯೋವನ್ನು ನೋಡಿದಂತಹ ಅಭಿಮಾನಿಗಳು ರಶ್ಮಿಕಾ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕ ಅವರು ನಿಂತರು ಸುದ್ದಿ, ಕೂತರು ಸುದ್ದಿ, ಕುಣಿದರು ಸುದ್ದಿ ಎನ್ನುವಂತೆ ಆಗಿದೆ ಇದು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರ ಸಿನಿ ಜರ್ನಿಯಲ್ಲಿ ಅದ್ಭುತವಾದಂತಹ ಯಾತ್ರೆ ಎಂದೇ ಹೇಳಬಹುದಾಗಿದೆ. ರಶ್ಮಿಕಾ ಮಂದಣ್ಣ ಅವರ ಸಿನಿಮಾ ಯಶಸ್ಸಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.