ರೇಷನ್ ಕಾರ್ಡ್ ಇದ್ದವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದಕ್ಕೆಲ್ಲಾ ಸಬ್ಸಿಡಿ ದೊರೆಯಲಿದೆ ಗೊತ್ತಾ.?

 

WhatsApp Group Join Now
Telegram Group Join Now

ರೇಷನ್ ಕಾರ್ಡ್ ಈಗ ಒಂದು ಪ್ರಮುಖ ದಾಖಲೆ ಆಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಕೊಡುವ ಪಡಿತರವನ್ನು ಪಡೆಯಲು ಈ ಚೀಟಿ ಅಗತ್ಯ ದಾಖಲೆಯಾಗಿದೆ. ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಹಲವಾರು ಮಾರ್ಪಾಡುಗಳಾಗಿದ್ದು ನಕಲಿ ಗ್ರಾಹಕರನ್ನು ಪತ್ತೆ ಹಚ್ಚುವುದಕ್ಕೆ ಹಾಗೂ ನಕಲಿ ಕಾರ್ಡುಗಳನ್ನು ಮನ್ನಾ ಮಾಡುವುದಕ್ಕೆ ಇದಕ್ಕೆ ಪಡಿತರ ಚೀಟಿಯಲ್ಲಿರುವ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

ರೇಷನ್ ಕಾರ್ಡ್ ಬರೀ ಪಡಿತರ ಚೀಟಿ ಪಡೆಯುವುದಕ್ಕೆ ಮಾತ್ರ ಅಲ್ಲ ಇನ್ನು ಅನೇಕ ಕಾರಣಕ್ಕಾಗಿ ಉಪಯೋಗವಾಗುತ್ತಿದೆ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ಈ ರೇಷನ್ ಕಾರ್ಡ್ ಅಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಎಂದು ಇದೆ ಇದರಿಂದ ಅವರು ಬಡತನ ರೇಖೆಗಿಂತ ಮೇಲಿದ್ದಾರ ಅಥವಾ ಕೆಳಗಿದ್ದಾರ ಎಂದು ಸುಲಭವಾಗಿ ಕಂಡುಹಿಡಿಯಬಹುದು. ಹಾಗಾಗಿ ಇದೊಂದು ರೀತಿಯ ವರಮಾನ ಪತ್ರದ ರೀತಿಯು ಆಗಿದೆ ಎಂದೇ ಹೇಳಬಹುದು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳು ಮತ್ತು ಅನುದಾನಗಳನ್ನು ಪಡೆಯುವುದಕ್ಕೆ ರೇಷನ್ ಕಾರ್ಡ್ ದಾಖಲೆಯಾಗಿ ಸಲ್ಲಿಸಲೇ ಬೇಕಾಗಿದೆ. ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಅನೇಕ ಸಮಯಗಳಲ್ಲಿ ರಿಯಾಯಿತಿ ಮತ್ತು ಸಬ್ಸಿಡಿಗಳು ಸಿಗಲಿದೆ. ಆದರೆ ಹೆಚ್ಚಿನ ಜನರಿಗೆ ಮಾಹಿತಿಗಳು ಇರದ ಕಾರಣ ತಮ್ಮಲ್ಲಿ ಬಿಪಿಎಲ್ ಕಾರ್ಡ್ ಇದ್ದರೂ ಕೂಡ ಅದನ್ನು ಸದುಪಯೋಗಪಡಿಸಿಕೊಳ್ಳದೆ ಹಣ ವ್ಯರ್ಥ ಮಾಡಿಕೊಂಡಿರುತ್ತಾರೆ.

ಈ ಲೇಖನದಲ್ಲಿ ಬಿ.ಪಿ.ಎಲ್ ಕಾರ್ಡ್ ಎಂದರೆ ಬಿಲೋ ಪಾವರ್ಟಿ ಲೈನ್ ಅಲ್ಲಿ ಇರುವವರಿಗೆ ಸರ್ಕಾರದಿಂದ ಯಾವ ಯಾವ ಯೋಜನೆಯಲ್ಲಿ ಸಬ್ಸಿಡಿ ಸಿಗುತ್ತದೆ ಎಂದು ತಿಳಿಸುವ ಪ್ರಯತ್ನ ಮಾಡಲಾಗಿದೆ. ಈ ಉಪಯೋಗ ನೀವು ಪಡೆಯಬೇಕು ಎಂದರೆ ಕರ್ನಾಟಕದ ನಾಗರಿಕರಾಗಿದ್ದು, ಯಾವುದಾದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀವು ವಾಸಿಸುತ್ತಿರಬೇಕು. ಜೊತೆಗೆ ನಿಮ್ಮದು ಬಿಪಿಎಲ್ ಕಾರ್ಡ್ ಆಗಿರಲೇಬೇಕು.

ಈ ರೀತಿ ಇದ್ದಾಗ ನೀವು ಕೊಟ್ಟಿಗೆ ನಿರ್ಮಾಣ ಮಾಡುವ ಯೋಜನೆಯಲ್ಲಿ 37000 ರೂಗಳನ್ನು ಸಬ್ಸಿಡಿ ಆಗಿ ಪಡೆಯಬಹುದು, ಜೊತೆಗೆ ಕೊಳವೆಬಾವಿ ಮರುಪೂರಣ 20,000ಗಳನ್ನು ಬಿಪಿಎಲ್ ಕಾರ್ಡ್ ಹೊಂದಿರುವ ರೈತ ಪಡೆಯಬಹುದು. ಬಾವಿಯನ್ನು ತೆರೆಸಲು ಕೂಡ ಸರ್ಕಾರದಿಂದ ಸಬ್ಸಿಡಿ ಮತ್ತು ಭೂಮಿಯನ್ನು ಸಮತಟ್ಟು ಮಾಡಿಸಲು ಎಕೆರೆಗೆ 13,000ಗಳನ್ನು ಬಿಪಿಎಲ್ ಕಾರ್ಡ್ ಹೊಂದಿರುವ ರೈತರು ಪಡೆಯಬಹುದು. ರೈತರು ತಮ್ಮ ಜಮೀನಿನಲ್ಲಿ ಇಂಗು ಗುಂಡಿ ನಿರ್ಮಾಣ ಮಾಡುವುದಾದರೆ 50,000ಗಳಿಗೂ ವರೆಗೆ ಅನುದಾನ ಸಿಗಲಿದೆ.

ಇಷ್ಟೇ ಅಲ್ಲದೆ ಬಿಪಿಎಲ್ ಕಾರ್ಡ್ ಹೊಂದಿರುವವರು ಇನ್ನೂ ಅನೇಕ ಯೋಜನೆಗಳ ಫಲಾನುಭವಿಗಳಾಗಬಹುದು. ಇವರೊಂದಿಗೆ ವಸತಿ ಯೋಜನೆ, ಬದು ನಿರ್ಮಾಣ, ಕಾಂಪೋಸ್ಟ್ ಗುಂಡಿ, ಕೆರೆ ನಿರ್ಮಾಣ, ಹಿಪ್ಪ ನೇರಳೆ ನಿರ್ವಹಣೆ, ಸಸಿ ನೆಡುವುದು, ಶೌಚಾಲಯ ನಿರ್ಮಾಣ, ಅಡಿಕೆ ತೋಟ ನಿರ್ವಹಣೆ, ತೆಂಗು,ಗೇರು, ಕರಿಮೆಣಸು, ಬಾಳೆ ಮುಂತಾದ ಬೆಳೆಗಳಿಗೆ ಅನುದಾನ ಸಿಗಲಿದೆ. ಬಿಪಿಎಲ್ ಕಾರ್ಡ್ ಅಲ್ಲಿ ಸದಸ್ಯರಾಗಿರುವವರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವರ್ಷಕ್ಕೆ ನೂರು ದಿನಗಳ ಕೆಲಸವನ್ನು ಮಹಿಳೆ ಮತ್ತು ಪುರುಷ ಸದಸ್ಯರು ಸಹ ಪಡೆಯಬಹುದಾಗಿದೆ. ಹಲವು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಜೊತೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಶಾಲಾ ಕಾಲೇಜು ಮಕ್ಕಳಿಗೂ ಶೈಕ್ಷಣಿಕ ಶುಲ್ಕದಲ್ಲಿ ಕೆಲ ರಿಯಾಯಿತಿ ಕೂಡ ಸಿಗಲಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now