ಕೇಂದ್ರ ಸರ್ಕಾರವು ಆಗಾಗ ಹೊಸ ಯೋಜನೆಗಳನ್ನು ತರುತ್ತದೆ ಮತ್ತು ಈಗಾಗಲೇ ಇರುವ ಕೆಲವು ಯೋಜನೆಗಳನ್ನು ಪರೀಷ್ಕೃತ ಗೊಳಿಸುತ್ತಲೇ ಇರುತ್ತದೆ. ಈಗ ಸದ್ಯಕ್ಕೆ ದೇಶದಾದ್ಯಂತ ಎಲ್ಲಾ ನಾಗರಿಕರಿಗೂ ಸರಿಯಾದ ಆಹಾರ ವ್ಯವಸ್ಥೆ ಮಾಡಬೇಕು ಎಂದು ನಿರ್ಧಾರ ಕೈ ಗೊಂಡಿರುವ ಸರ್ಕಾರವು ಆ ಕೆಲಸಕ್ಕೆ ಮೂಲ ಆಧಾರವಾಗಿ ರೇಷನ್ ಕಾರ್ಡ್ ಅನ್ನೇ ಪರಿಗಣಿಸಿಕೊಂಡಿದೆ. ಆದರೆ ಪಡಿತರ ಚೀಟಿ ಹಂಚಿಕೆಯಲ್ಲಿ ಅನೇಕ ಲೋಪಗಳಿರುವುದನ್ನು ಮನಗಂಡಿರುವ ಮಾನ್ಯ ಸರ್ಕಾರ ಮೊದಲಿಗೆ ಅದನ್ನು ತಿದ್ದುವ ಕೆಲಸಕ್ಕೆ ಕೈ ಹಾಕಿದೆ.
ಅದಕ್ಕಾಗಿ ಒಂದಲ್ಲ ಒಂದು ಹೊಸ ಅಪ್ಡೇಟ್ ಅನ್ನು ರೇಷನ್ ಕಾರ್ಡ್ ವಿಚಾರವಾಗಿ ತರುತ್ತಲೇದ ಇದೆ. ಆ ನಿಟ್ಟಿನಲ್ಲಿ ರೇಷನ್ ಕಾರ್ಡ್ ಗೆ ಬಯೋಮೆಟ್ರಿಕ್ ಕಡ್ಡಾಯ ಆಗಿದೆ, ಜೊತೆಗೆ ರೇಷನ್ ಕಾರ್ಡ್ ಅಲ್ಲಿ ಇರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡುವುದು ಕೂಡ ಕಡ್ಡಾಯ ಆಗಿ ಹೋಗಿದೆ. ಇದರ ಫಲವಾಗಿ ಈಗಾಗಲೇ ದೇಶದೆಲ್ಲೆಡೆ ಅನೇಕ ನಕಲಿ ರೇಷನ್ ಕಾರ್ಡ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಯಾವಾಗ ಬಯೋಮೆಟ್ರಿಕ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಆಯಿತು ಆಗ ಹೆಚ್ಚಿನ ರೇಷನ್ ಕಾರ್ಡ್ ಹೊಂದಿರುವವರು ಮತ್ತು ನಕಲಿ ಹೆಸರಿನಲ್ಲಿ ರೇಷನ್ ಕಾರ್ಡ್ ಹೊಂದಿರುವವರು ಸಿಕ್ಕಿ ಬಿದ್ದರು. ಇವರ ಅಮಾನ್ಯ ಕಾರ್ಡ್ ಗಳು ರದ್ದಾಯಿತು. ಈಗ ಸರ್ಕಾರ ಹೊರಡಿಸುವ ಹೊಸ ಆದೇಶದ ಮೂಲಕ ಇನ್ನು ಹೆಚ್ಚಿನ ಕಾರ್ಡುಗಳು ರದ್ದಾಗುವ ಸಾಧ್ಯತೆಗಳಿವೆ.
ಗೋವಾ ರಾಜ್ಯ ಸರ್ಕಾರವು ಈಗಾಗಲೇ ಈ ಕ್ರಮವನ್ನು ಕಟ್ಟುನಿಟ್ಟಾಗಿ ತೆಗೆದುಕೊಂಡು ದಾಖಲೆಗಟ್ಟಲೆ ಸಂಖ್ಯೆಯ ಪಡಿತರ ಚೀಟಿಯನ್ನು ರದ್ದು ಮಾಡಿದೆ. ಈಗ ಇದೆ ರೀತಿ ದೇಶದ ಎಲ್ಲಾ ರಾಜ್ಯಗಳು ಕೂಡ ಇದನ್ನು ಸರಿಯಾಗಿ ಪಾಲನೆ ಮಾಡಿದರೆ ಸುಮಾರು 80,000ಕ್ಕೂ ಹೆಚ್ಚು ಕಾರ್ಡ್ ರದ್ದಾಗಬಹುದು. ಆದ್ದರಿಂದ ತಪ್ಪದೇ ಇದರ ಕಡೆ ಗಮನ ಇಟ್ಟು ಓದಿ ಯಾವ ಕಾರಣಕ್ಕಾಗಿ ಗೋವ ಸರ್ಕಾರದ ಕಾರ್ಡುಗಳು ರದ್ದಾಗಿವೆ ಎಂದರೆ.
2024-25ರ ಸಾಲಿನಲ್ಲಿ ಯಾವ ರೇಷನ್ ಕಾರ್ಡ್ ದಾರರು ರೇಷನ್ ಪಡೆದುಕೊಂಡಿರುವುದಿಲ್ಲ ಆ ಕಾರ್ಡುಗಳು ರದ್ದಾಗಿವೆ ಎನ್ನುವುದನ್ನು ಆಹಾರ ನಾಗರಿಕ ಸರಬರಾಜು ಸಂಸ್ಥೆಯ ವ್ಯವಹಾರಗಳ ನಿರ್ದೇಶಕರೇ ದೃಢಪಡಿಸಿದ್ದಾರೆ. ಆದರೆ ಯಾಕೆ ದೇಶದ ನಾಗರಿಕರು ಈ ರೀತಿ ಪಡಿತರ ಚೀಟಿ ಮೂಲಕ ಪಡಿತರ ತೆಗೆದುಕೊಳ್ಳುತ್ತಿಲ್ಲ ಎನ್ನುವುದನ್ನು ನಾವು ತನಿಖೆ ಮಾಡಿ ಅದಕ್ಕೆ ಸಂಬಂಧಪಟ್ಟ ಹಾಗೆ ಒಂದು ಸರಿಯಾದ ನಿರ್ಧಾರಕ್ಕೆ ಬರುತ್ತೇವೆ. ನಾಗರಿಕರು ಈ ವಿಷಯದ ಬಗ್ಗೆ ಸರಿಯಾಗಿ ನಿಗ ಇಡಬೇಕು ಎನ್ನುವುದನ್ನು ಸಹ ಇದರ ಜೊತೆ ಅವರು ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಇನ್ನೂ ಅಪಾರ ಸಂಖ್ಯೆಯ ಬಡ ಜನರು ಇದ್ದಾರೆ. ಇವರಿಗೆಲ್ಲ ಸರ್ಕಾರದಿಂದ ಪಡಿತರ ಚೀಟಿ ಮೂಲಕ ಕೊಡುವ ಧಾನ್ಯವೇ ಆಹಾರದ ಮೂಲ ಆಗಿದೆ. ಕೆಲ ನಕಲಿ ಕಾಡು ಹೋಲ್ಡರ್ ಗಳನ್ನು ಹಿಡಿದು ಹಾಕಿದರೆ ದೇಶದ ಬಡ ಜನರಿಗೆ ಇನ್ನಷ್ಟು ಅನುಕೂಲತೆಗಳು ತಲುಪಲು ಹೆಚ್ಚಿನ ಸಾಧ್ಯತೆ ಹೆಚ್ಚುತ್ತದೆ ಹಾಗಾಗಿ ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಂಡು ಪ್ರತಿಯೊಬ್ಬ ಪಡಿತರ ಚೀಟಿದಾರರಿಗೂ ಈ ವಿಷಯ ತಲುಪುವಂತೆ ಮಾಡಿ.