ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ತಮ್ಮ ಬ್ಯಾಂಕ್ ಖಾತೆಗಳ (Bank account) ಮೂಲಕ ಹಣಕಾಸಿನ ವಹಿವಾಟು ನಡೆಸುತ್ತಿದ್ದಾರೆ. ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಡಲು ಆಗದೆ ಇದ್ದರೂ ಕೂಡ ಬ್ಯಾಂಕ್ ಉಳಿತಾಯ ಖಾತೆಗಳಿಗೆ ಪಡೆದ ATM ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ (Net banking) ವ್ಯವಸ್ಥೆಯಿಂದ ತಮ್ಮ ಹಣಕಾಸಿನ ವಹಿವಾಟನ್ನು ಪೂರ್ತಿಗೊಳಿಸಿಕೊಳ್ಳುತ್ತಿದ್ದಾರೆ.
ಈ ರೀತಿ ಮಾಡುವವರಿಗೆ ಒಂದು ದಿನಕ್ಕೆ ಅವರು ಬಳಸಬಹುದಾದ ಹಣಕಾಸಿನ ಮಿತಿ ಇದ್ದೇ ಇರುತ್ತದೆ. ಇದು ಒಂದೊಂದು ಬ್ಯಾಂಕ್ ಗೃ ಕೂಡ ಪ್ರತ್ಯೇಕ ನಿಯಮವಾಗಿದ್ದು ಈ ಕುರಿತು ಕೂಡ ಕೆಲ ನಿಯಮಗಳು ಇವೆ. ಇವುಗಳನ್ನು ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ತಿಳಿದುಕೊಳ್ಳಬೇಕು ಇಲ್ಲವಾದಲ್ಲಿ ಈ ನಿಯಮವನ್ನು ಮೀರಿ ದಂಡ ತೆರಬೇಕಾಗಿ ಬರಬಹುದು.
ಯಾಕೆಂದರೆ ಆದಾಯ ತೆರಿಗೆ 1961 ಕಾಯ್ದೆ 269ST (Income tax act) ದೇಶದಾದ್ಯಂತ ಅನ್ವಯವಾಗಿದೆ. ಕೇಂದ್ರ ಸರ್ಕಾರವು (Indian Government) 2017ರಲ್ಲಿ ಆದಾಯ ತೆರಿಗೆ ಕಾಯ್ದೆ 269ST ಎನ್ನುವ ನಿಯಮವನ್ನು ಜಾರಿಗೆ ತಂದಿತು. ಈ ನಿಯಮವನ್ನು ಮುರಿದರೆ ಹಣ ನೀಡುವವರ ಬದಲಾಗಿ ಹಣ ಪಡೆದವರಿಗೆ ಸರಿಸಮವಾದ ದಂಡ (fine) ಬೀಳಲಿದೆ.
ಆದಾಯ ತೆರಿಗೆ ಇಲಾಖೆಯ ಈ ಹೊಸ ನಿಯಮ ಹೇಳುವುದೇನೆಂದರೆ, ಯಾವುದೇ ವ್ಯಕ್ತಿ ಒಂದು ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವಂತಿಲ್ಲ. ಕಪ್ಪುಹಣದ ಹರಿವು ಮತ್ತು ಅಕ್ರಮ ಹಣ ವರ್ಗಾವಣೆಯನ್ನು ಆಗುವುದನ್ನು ತಡೆಯುವುದು ಮತ್ತು ತೆರಿಗೆ ವಂಚನೆ ತಪ್ಪಿಸುವ ಉದ್ದೇಶದಿಂದ ಸರ್ಕಾರದ ಈ ಕ್ರಮ ಕೈಗೊಂಡಿದೆ. ಹಾಗಾಗಿ ಯಾವುದೇ ಪರಿಸ್ಥಿತಿಯಲ್ಲೂ ನೀವು 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ತೆಗೆದುಕೊಳ್ಳಬೇಡಿ.
ನಿಮ್ಮ ಊರಿನಲ್ಲಿ ಸರ್ಕಾರಿ ಭೂಮಿ ಗುರುತಿಸುವುದು ಹೇಗೆ.? ನಿಮ್ಮ ಜಮೀನು ಸರಕಾರದ್ದೇ ಆಗುತ್ತೆ ಹೇಗೆ ಗೊತ್ತಾ.?
ನೀವು 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣಕ್ಕೆ ಸ್ವಯಂ ಚೆಕ್ ಅನ್ನು ಬಳಸಿದರೂ ಸಹ ಅದನ್ನು ಬ್ಯಾಂಕ್ ವ್ಯವಹಾರದಲ್ಲಿ ನಗದು ವಹಿವಾಟು ಎಂದೇ ಪರಿಗಣಿಸಲಾಗುತ್ತದೆ. ಆದ ಕಾರಣದಿಂದಾಗಿ ನಿಮಗೆ ದಂಡ ವಿಧಿಸಲಾಗುತ್ತದೆ ನೀವು ಆ ಹಣವನ್ನು ಯಾವುದೇ ರೂಪದಲ್ಲಿ ಪಡೆದಿದ್ದರೆ ಕೂಡ ಅದರ ಮೇಲೆ ದಂಡ ಬೀಳುತ್ತದೆ, ಉಡುಗೊರೆಯಾಗಿ ಸ್ವೀಕರಿಸಿದ ಮೊತ್ತಕ್ಕೂ ಈ ನಿಯಮ ಅನ್ವಯಿಸುತ್ತದೆ.
ಹಾಗಾಗಿ ಯಾವುದೇ ವಿಶೇಷ ಸಂದರ್ಭದಲ್ಲಿಯೂ ಯಾರಿಂದಲೂ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ಉಡುಗೊರೆಯನ್ನು ಸ್ವೀಕರಿಸಬೇಡಿ, ಒಬ್ಬ ವ್ಯಕ್ತಿ ತನ್ನ ಸಂಬಂಧಿಕರಿಂದ ಪಡೆದ ಹಣಕ್ಕೂ ಈ ನಿಯಮ ಅನ್ವಯಿಸುತ್ತದೆ. ಒಂದು ವೇಳೆ ನೀವು ಈ ರೀತಿ ಯಾರಿಂದಲಾದರೂ ಹಣ ಪಡೆಯಲೇಬೇಕು ಎಂದರೆ ಬದಲಿ ಮಾರ್ಗವನ್ನು ಅನುಸರಿಸಬಹುದು.
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ, 10ನೇ ತರಗತಿ ಆಗಿದ್ರೆ ಸಾಕು ಅರ್ಜಿ ಸಲ್ಲಿಸಬಹುದು.!
ಅದು ಹೇಗೆಂದರೆ ನೀವು ಈ ಮೇಲೆ ತಿಳಿಸಿದ ಆ ವಿಧಾನಗಳನ್ನು ಬಿಟ್ಟು ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ, ಪಾವತಿದಾರರ ಚೆಕ್ ಅಥವಾ ಬ್ಯಾಂಕ್ ಡ್ರಾಫ್ಟ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆದುಕೊಳ್ಳಬಹುದು ಆಗ ನಿಮಗೆ ಈ ನಿಯಮ ಹೇರಿಕೆ ಆಗುವುದಿಲ್ಲ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಈ ನಿಯಮದಿಂದ ಬ್ಯಾಂಕಿಂಗ್ ಕಂಪನಿ, ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಅಥವಾ ಸಹಕಾರ ಬ್ಯಾಂಕ್ ಸ್ವೀಕರಿಸಿದ ಮೊತ್ತಕ್ಕೆ ವಿನಾಯಿತಿ ಪಡೆದಿದೆ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 269ST ನ್ನು ಉಲ್ಲಂಘಿಸಿದರೆ ವ್ಯವಹಾರದ ಮೊತ್ತಕ್ಕೆ ಸಮನಾದ ದಂಡವನ್ನು ವ್ಯಕ್ತಿಯ ತೆರಬೇಕಾಗುತ್ತದೆ. ಸೆಕ್ಷನ್ 269ST ಯ ನಿಬಂಧನೆಗಳನ್ನು ಉಲ್ಲಂಘಿಸಿ ನೀವು ರೂ 2,50,000 ಸ್ವೀಕರಿಸಿದರೆ ನಿಮಗೆ 2,50,000 ವರೆಗೆ ದಂಡ ಬೀಳಬಹುದು.