10ನೇ ತರಗತಿ ಉತ್ತೀರ್ಣರಾಗಿರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಅಂಚೆ ಇಲಾಖೆಯಲ್ಲಿ (Post office recruitment) ಖಾಲಿ ಇರುವ ಕೆಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದು. ಸರ್ಕಾರಿ ಹುದ್ದೆ ಪಡೆಯಬೇಕೆನ್ನುವ ಹಂಬಲ ಇರುವವರು, ಉದ್ಯೋಗ ಬದಲಾಯಿಸಬೇಕು ಎನ್ನುವವರು ಈ ಉದ್ಯೋಗಕ್ಕೆ ಪ್ರಯತ್ನಿಸಬಹುದು.
ವಯೋಮಿತಿ ನಿಗದಿಯಲ್ಲಿ ಕೂಡ ಬಾರಿ ಸಡಿಲಿಕೆ ನೀಡಲಾಗಿದ್ದು, ಗರಿಷ್ಠ ವಯೋಮಿತಿ ಸಾಮಾನ್ಯ ಉದ್ಯೋಗಗಳಿಗಿಂತ ಹೆಚ್ಚಿನ ವಿಸ್ತರಣೆ ಇದೆ. ಆದ ಕಾರಣಕ್ಕಾಗಿ ಎಲ್ಲರಿಗೂ ಇದೊಂದು ಸದಾವಕಾಶವಾಗಿದ್ದು ತಪ್ಪದೇ ಈ ಹುದ್ದೆ ಪಡೆಯಲು ಪ್ರಯತ್ನಿಸಿ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಅಂಚೆ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಇರುವ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಉದ್ಯೋಗ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ.
ಒಟ್ಟು ಹುದ್ದೆಗಳ ಸಂಖ್ಯೆ:- 28.
ಹುದ್ದೆಯ ಹೆಸರು:- ಡ್ರೈವರ್.
ಉದ್ಯೋಗ ಸ್ಥಳ:-
● ಚಿಕ್ಕೋಡಿ
● ಕಲಬುರಗಿ
● ಧಾರವಾಡ
● ಗದಗ
● ಕಾರವಾರ
● ಬೆಂಗಳೂರು
● ಮಂಡ್ಯ
● ಮೈಸೂರು
● ಶಿವಮೊಗ್ಗ
● ಉಡುಪಿ
● ಕೋಲಾರ
ವೇತನ ಶ್ರೇಣಿ:-
ಈ ಮೇಲ್ಕಂಡ ಹುದ್ದೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 19,900 ರಿಂದ 63,200 ವೇತನ ಸಿಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
● ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು.
● ಲಘು ಹಾಗೂ ಬಾರಿ ವಾಹನ ಚಾಲನಾ ಪರವಾನಿಗೆ ಪಡೆದಿರಬೇಕು.
● ಲಘು ಹಾಗೂ ಬಾರಿ ವಾಹನ ಚಾಲನೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು.
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 56 ವರ್ಷಗಳು.
ಅರ್ಜಿ ಶುಲ್ಕ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ವಿಧಿಸಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
● ಈ ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
● ಆಸಕ್ತ ಅಭ್ಯರ್ಥಿಗಳು ಅರ್ಜಿ ಮತ್ತು ದಾಖಲೆಗಳ ಜೊತೆಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಇತ್ತೀಚಿನ ಭಾವಚಿತ್ರ ಲಗ್ಗತ್ತಿಸಿ ಸಹಿ ಮಾಡಿ ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಈ ಕೆಳಗೆ ತಿಳಿಸಿದ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಇರುವ ಕಡೆಯ ದಿನಾಂಕದ ಒಳಗೆ ಕಳುಹಿಸಿಕೊಡಬೇಕು.
ರೈತರಿಗೆ ಗುಡ್ ನ್ಯೂಸ್, ರಸಗೊಬ್ಬರಗಳ ಬೆಳೆ ಇಳಿಕೆ, ಯೂರಿಯ ಹಾಗೂ DAP ಬೆಲೆ ಎಷ್ಟಾಗಿದೆ ನೋಡಿ.!
ವಿಳಾಸ:-
ಜನರಲ್ ಮ್ಯಾನೇಜರ್ (HR),
ಮೇಲ್ ಮೋಟಾರ್ ಸರ್ವೀಸ್,
ಬೆಂಗಳೂರು – 560001.
ಆಯ್ಕೆ ವಿಧಾನ:-
● ಚಾಲನಾ ಪರೀಕ್ಷೆ
● ಟ್ರೇಡ್ ಟೆಸ್ಟ್
● ಸಂದರ್ಶನ
● ದಾಖಲೆಗಳ ಪರಿಶೀಲನೆ.
ಹೃದಯಘಾ-ತ ಉಂಟು ಮಾಡುವ ಅಪಾಯಕಾರಿ ಅಂಶಗಳು ಇವು, ಒಮ್ಮೆ ಡಾಕ್ಟರ್ ಅಂಜನಪ್ಪ ಅವರ ಮಾತು ಕೇಳಿ.!
ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಅಂಟಿಸಿ, ಸಹಿ ಮಾಡಿ ತುಂಬಿದ ಅರ್ಜಿ ಫಾರಂ.
● ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳ ಪ್ರತಿ
● ಲಘು ಮತ್ತು ಭಾರಿ ವಾಹನಾ ಚಾಲನ ಪರವಾನಗಿ ಪ್ರತಿ
● ಚಾಲನೆ ಅನುಭವದ ಪ್ರಮಾಣ ಪತ್ರ
● ನಿವಾಸ ದೃಢೀಕರಣ ಪತ್ರದ ಪ್ರತಿ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:- 15.08.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 15.09.2023.