ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಮತ್ತೊಂದು ನೋಟಿಫಿಕೇಶನ್ ಅಪ್ಡೇಟ್ ಇದೆ. ವಿಜಯಪುರದ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಕೃತ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು.
ಈ ಅಧಿಸೂಚನೆಯಲ್ಲಿ ಸೂಚಿಸಿರುವ ಪ್ರಕಾರವಾಗಿ ಅರ್ಹತೆಗಳನ್ನು ಪೂರೈಸುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸುವವರಿಗೆ ಆಸಕ್ತಿ ಹೊಂದಿರುವವರಿಗಾಗಿ ಈ ಲೇಖನದಲ್ಲಿ ಕೆಲವು ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ, ಹೆಚ್ಚಿನ ಮಾಹಿತಿಗಾಗಿ ಸೈನಿಕ ಶಾಲೆ ವಿಜಯಪುರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.
ನೇಮಕಾತಿ ಸಂಸ್ಥೆ:- ಸೈನಿಕ ಶಾಲೆ, ವಿಜಯಪುರ
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 06 ಹುದ್ದೆಗಳು
ಹುದ್ದೆಗಳ ವಿವರ:-
* PGT
* TGT
ಉದ್ಯೋಗ ಸ್ಥಳ:- ವಿಜಯಪುರ
ಈ ಸುದ್ದಿ ಓದಿ:- ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಭಾಗ ಸಿಗುತ್ತ.? ಕನೂನನಲ್ಲಿ ಏನಿದೆ ನೋಡಿ.!
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಹುದ್ದೆ ಅನುಸಾರವಾಗಿ ಒಂದು ಉತ್ತಮ ಮೊತ್ತದ ವೇತನವನ್ನು ನೀಡಲಾಗುತ್ತಿದೆ
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ M.ed/ M.Sc / Ed / B.ed / B.Sc ಪದವಿ ಪಡೆದಿರಬೇಕು
* ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು
ವಯೋಮಿತಿ ಸಡಿಲಿಕೆ:-
* 2A /.2B / 3A / 3B ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳು
* OBC ಅಭ್ಯರ್ಥಿಗಳಿಗೆ 05 ವರ್ಷಗಳು
ಈ ಸುದ್ದಿ ಓದಿ:- 2024ರಲ್ಲಿ 1000sq.ft ಮನೆ ಕಟ್ಟುವುದಾದರೆ ಎಷ್ಟು ಖರ್ಚು ಆಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಅರ್ಜಿ ಸಲ್ಲಿಸುವ ವಿಧಾನ:-
ಈ ಹುದ್ದೆಗಳಿಗೆ ನೇರವಾಗಿ ಸಂದರ್ಶನದ ದಿನ ಭಾಗಿಯಾಗಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು
ಅರ್ಜಿ ಶುಲ್ಕ:-
* ಈ ಸಂದರ್ಶನದಲ್ಲಿ ಭಾಗಿಯಾಗಲು ಯಾವುದೇ ರೀತಿ ಅರ್ಜಿ ಶುಲ್ಕ ಇಲ್ಲ
* ಆದರೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನದ ದಿನ ಈ ಕೆಳಕಂಡ ವಿಳಾಸಕ್ಕೆ ಭೇಟಿಯಾಗಬೇಕು
* ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರವಾಗಿ ಕೆಲ ಪ್ರಮುಖ ದಾಖಲೆಗಳ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು
ಆಯ್ಕೆ ವಿಧಾನ:-
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
* ಕೆಲಸದ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು:-
* 15 ನೇ ಮಾರ್ಚ್, 2024 ರಂದು ಸಂದರ್ಶನ ನಡೆಯುತ್ತದೆ
* ಆ ದಿನದವರೆಗೂ ಯಾವುದೇ ದಿನ ಬೇಕಾದರೂ ಸೈನಿಕ ಶಾಲೆ ಆಡಳಿತ ಮಂಡಳಿಯ ಭೇಟಿ ಕೊಟ್ಟು ನೋಂದಾಯಿಸಿಕೊಳ್ಳಬಹುದು ಅಥವಾ ಆ ದಿನವೂ ಕೂಡ ಅವಕಾಶವಿರುತ್ತದೆ.
ಈ ಸುದ್ದಿ ಓದಿ:- ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಭಾಗ ಸಿಗುತ್ತ.? ಕನೂನನಲ್ಲಿ ಏನಿದೆ ನೋಡಿ.!
ಸಂದರ್ಶನಕ್ಕೆ ಹಾಜರಿರಬೇಕಾದ ವಿಳಾಸ:-
ಸೈನಿಕ ಶಾಲೆ,
ವಿಜಯಪುರ,
ಕರ್ನಾಟಕ – 586108
ಕೇಳಲಾಗುವ ಪ್ರಮುಖ ದಾಖಲೆಗಳು :-
* ಆಧಾರ್ ಕಾರ್ಡ್ ಪ್ರತಿ ಅಥವಾ ಇನ್ಯಾವುದೇ ಗುರುತಿನ ಚೀಟಿಯ ಪ್ರತಿ
* ವಿಳಾಸ ಪುರಾವೆಗೆ ಸಂಬಂಧಪಟ್ಟ ಹಾಗೆ ಯಾವುದಾದರೂ ಒಂದು ದಾಖಲೆಯ ಪ್ರತಿ
* ಕೇಳಲಾಗಿರುವ ವಿದ್ಯಾರ್ಥಿಯ ಶೈಕ್ಷಣಿಕ ಅಂಕಪಟ್ಟಿ ಪ್ರತಿಗಳು ಮತ್ತು ಅದಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರಗಳು
* ಕೆಲಸದ ಅನುಭವ ಹೊಂದಿರುವವರಿಗೆ ಅದಕ್ಕೆ ಸಂಬಂಧಿಸಿದ ದಾಖಲೆ ಪ್ರತಿಗಳು ಅಥವಾ ಪ್ರಮಾಣ ಪತ್ರಗಳು
* ಮೀಸಲಾತಿ ಆಧಾರದ ಮೇಲೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಸಂಬಂಧಪಟ್ಟ ದಾಖಲೆ ಪ್ರತಿಗಳು ಅಥವಾ ಪ್ರಮಾಣ ಪತ್ರಗಳು
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
* ಇತ್ತೀಚಿನ ಭಾವಚಿತ್ರ