ಡಯಾಬಿಟಿಸ್ (Diabetes) ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕಾಡುತ್ತಿರುವ ಒಂದು ಸರ್ವೇಸಾಮಾನ್ಯ ಆರೋಗ್ಯ ಸಮಸ್ಯೆ. ಡಯಾಬಿಟಿಸ್ ಬಂದವರಲ್ಲಿ ಅದು ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಅವರಿಗೆ ನೋವನ್ನುಂಟು ಮಾಡುವ ಸಂಗತಿ ಅವರು ತುಂಬಾ ಅನ್ನ ತಿನ್ನುವಂತಿಲ್ಲ ಎನ್ನುವ ವಿಷಯ.
ಅಕ್ಕಿಯ ಪದಾರ್ಥದಿಂದ (Rice items) ಮಾಡಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಶುಗರ್ ಲೆವೆಲ್ (Sugar level) ಹೆಚ್ಚಾಗುತ್ತದೆ ಎಂದು ಹೆದರಿ ಅವರು ಇದರ ಬದಲಿಗೆ ಗೋಧಿ ಆಹಾರದ ಕಡೆ ಆಕರ್ಷಿತರಾಗುತ್ತಾರೆ. ಗೋಧಿ ಚಪಾತಿಗಳನ್ನು (wheat items) ಅಥವಾ ಗೋಧಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಶುಗರ್ ಲೆವೆಲ್ ಕಂಟ್ರೋಲ್ ಆಗುತ್ತದೆ ಎನ್ನುವುದು ಇವರ ಭಾವನೆ.
UPI ಬಳಸುವವರಿಗೆ ಹೊಸ ನಿಯಮ ಜಾರಿ.! ಫೋನ್ ಪೇ, ಗೂಗಲ್ ಪೇ, ಬಳಕೆ ಮಾಡುವವರು ತಪ್ಪದೆ ಈ ಸುದ್ದಿ ನೋಡಿ.!
ಇದಕ್ಕೆ ಸರಿಯಾದ ಉತ್ತರವನ್ನು ಶುಗರ್ ಇರುವವರಿಗೆ ಅಕ್ಕಿ ಅಥವಾ ಗೋಧಿ ಎರಡರಲ್ಲಿ ಯಾವುದು ಉತ್ತಮ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅಕ್ಕಿ ಮತ್ತು ಗೋಧಿ ಎರಡರಲ್ಲಿ ಇರುವ ಪೋಷಕಾಂಶಗಳ (Nutrients) ಬಗ್ಗೆ ಕಂಪೇರ್ ಮಾಡಿ ನೋಡುವುದಾದರೆ ಅದರ ವಿವರ ಈ ರೀತಿ ಇರುತ್ತದೆ.
ಅಕ್ಕಿ ಹಾಗೂ ಗೋಧಿ ಎರಡರಲ್ಲೂ ಸಹ ಕಾರ್ಬೋಹೈಡ್ರೇಟ್ಸ್ (carbohydrates ) ಪ್ರಮಾಣವೂ ಸಮನಾಗಿ ಇರುತ್ತದೆ, ವಿಟಮಿನ್ಸ್ ಹಾಗೂ ಮಿನರಲ್ (Vitamin and Minerals) ವಿಷಯದಲ್ಲಿ ಕೂಡ ಈ ಎರಡು ಒಂದೇ ಪ್ರಮಾಣದಲ್ಲಿ ಇರುತ್ತದೆ. ಹಾಗಾದರೆ ಈ ಮೂರು ವಿಷಯವನ್ನು ತೆಗೆದುಕೊಳ್ಳುವುದಾದರೆ ಇವೆರಡರಲ್ಲೂ ಯಾವುದೇ ವ್ಯತ್ಯಾಸ ಅಲ್ಲ ಯಾವ ಆಹಾರ ಪದಾರ್ಥವನ್ನು ಸೇವಿಸಿದರು ಅದು ಒಂದೇ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದಾಯಿತು.
ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ವಾ.? ಈ ರೀತಿ ಸ್ಟೇಟಸ್ ಚೆಕ್ ಮಾಡಿ ನೋಡಿ.!
ಇನ್ನುಳಿದ ಪೋಷಕಾಂಶಗಳ ವಿಷಯಕ್ಕೆ ಬರುವುದಾದರೆ ಪ್ರೋಟೀನ್ ಅಂಶ ಗೋಧಿಯಲ್ಲಿ 8% ಇದ್ದರೆ ಅಕ್ಕಿಯಲ್ಲಿ 2% ಇರುತ್ತದೆ. ಆದರೆ ಗೋಧಿಯಲ್ಲಿರುವ ಪ್ರೋಟೀನ್ (protein) ಅಂಶದಲ್ಲಿ ಮುಕ್ಕಾಲು ಭಾಗದಷ್ಟು 8% ಅಲ್ಲಿ 6.2% ಅಷ್ಟು ಗ್ಲೂಕೇನ್ ಇರುತ್ತದೆ. ಇದು ಗೋಧಿಗೆ ಅಂಟಿಕೊಳ್ಳುವ ಗುಣವನ್ನು ಕೊಡುತ್ತದೆ ಹೊರತು ಪೋಷಕಾಂಶಗಳ ವಿಷಯದಲ್ಲಿ ಹೆಚ್ಚೇನು ಬದಲಾವಣೆ ತರುವುದಿಲ್ಲ.
ಹಾಗಾಗಿ ಇದೊಂದು ಎಲಾಸ್ಟಿಕ್ ಆಗಿ ಉಪಯೋಗಕ್ಕೆ ಬರುತ್ತದೆ ಅದನ್ನು ತೆಗೆದು ನೋಡುವುದಾದರೆ ಅಕ್ಕಿ ಹಾಗೂ ಗೋಧಿ ವಿಷಯದಲ್ಲಿ ಪ್ರೋಟೀನ್ ಒಂದೇ ಸಮನಾಗಿರುತ್ತದೆ. ಗೋಧಿಯಲ್ಲಿ ಫ್ಯಾಟ್ (fat) ಅಂಶ 3% ಇದ್ದರೆ ಅಕ್ಕಿಯಲ್ಲಿ ತೀರಾ ಕಡಿಮೆ 0.3% ಇರುತ್ತದೆ. ಇದು ಆಹಾರವನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿರುತ್ತದೆ. ಇನ್ನುಳಿದಂತೆ ಫೈಬರ್ ಅಂಶದ ಬಗ್ಗೆ ನೋಡುವುದಾದರೆ ಗೋಧಿಯಲ್ಲಿ ಇದು 8% ಇದ್ದರೆ ಅಕ್ಕಿಯಲ್ಲಿ 0.4% ಇರುತ್ತದೆ.
ಪೋಸ್ಟ್ ಆಫೀಸಿನ 5 ಬೆಸ್ಟ್ ಸ್ಕೀಮ್ ಗಳು ಇವು, 5,000 ಹೂಡಿಕೆ ಮಾಡಿದರೆ ಸಾಕು ಲಕ್ಷಗಳಲ್ಲಿ ರಿಟರ್ನ್ಸ್ ಪಡೆಯಬಹುದು.!
ಫೈಬರ್ (Fiber) ಆಹಾರದಲ್ಲಿರುವ ಗ್ಲುಕೋಸ್ ಅಂಶ ದೇಹಕ್ಕೆ ಸೇರುವುದನ್ನು ಕಡಿಮೆ ಮಾಡುವುದರಿಂದ ಅತಿ ಹೆಚ್ಚು ಜನ ಇದರ ಮೊರೆ ಹೋಗುತ್ತಾರೆ. ಇಲ್ಲಿ ತಿಳಿದು ಕೊಳ್ಳಲೇಬೇಕಾದ ಮತ್ತೊಂದು ಅಂಶ ಏನೆಂದರೆ ಪಾಲಿಶ್ ಆಗಿರುವ ಗೋಧಿಯ ಹೊರಪದರವನ್ನು ತೆಗೆದರೆ ಮೈದಾ ಪದಾರ್ಥ ವಾಗುತ್ತದೆ. ಅದು ತನ್ನ ಫೈಬರ್ ಅಂಶವನ್ನು ಕಳೆದುಕೊಂಡಿರುತ್ತದೆ.
ಪಾಲಿಶ್ ಮಾಡಿರುವ ಅಕ್ಕಿ ಮಾತ್ರ 0.4% ಫೈಬರ್ ಹೊಂದಿರುತ್ತದೆ, ಆದರೆ ಪಾಲಿಶ್ ಮಾಡದ ಅಕ್ಕಿಯು ಗೋಧಿಗೆ ಸಮವಾಗಿಯೇ ಫೈಬರ್ ಅಂಶ ಹೊಂದಿರುತ್ತದೆ. ಬೋಯಲ್ಡ್ ಅಕ್ಕಿ ಹಾಗೂ ಪಾಲಿಶ್ ಮಾಡಿದ ಅಕ್ಕಿಯನ್ನು ಗೋಧಿ ಗೆ ಸಮ ಎನ್ನಬಹುದು. ಹಾಗಾಗಿ ಹೆಚ್ಚು ಕಡಿಮೆ ಇವೆರಡು ಸಮವಾಗಿ ಆಗುತ್ತದೆ.
ಶುಗರ್ ಇರುವವರು ತಮ್ಮ ಶುಗರ್ ಲೆವೆಲ್ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಇಚ್ಛೆ ಇದ್ದರೆ ಹೊಟ್ಟೆ ಪೂರ್ತಿ ಅನ್ನವನ್ನು ತಿನ್ನುವ ಬದಲು ಅಥವಾ ಪೂರ್ತಿ ಗೋಧಿ ಪದಾರ್ಥಗಳು ತಿನ್ನುವ ಬದಲು ಇದನ್ನು ಕಡಿಮೆ ಮಾಡಿ ಆಹಾರದಲ್ಲಿ ತರಕಾರಿ ಹಾಗೂ ಸೊಪ್ಪಿನ ಪ್ರಮಾಣವನ್ನು ಹೆಚ್ಚು ಮಾಡಬೇಕು ಹಾಗೂ ಸಿರಿಧಾನ್ಯಗಳ ಬಳಕೆ ಮಾಡಬೇಕು.