ಅಕ್ಕಿ, ಗೋಧಿ, ರಾಗಿಹಿಟ್ಟು, ರವೆ, ಬೇಳೆ ಕಾಳುಗಳು ಯಾವುದೇ ದಿನಸಿ ವಸ್ತುಗಳಲ್ಲಿ ಹುಳು ಆಗಬಾರದು, ಬಹಳ ದಿನಗಳವರೆಗೆ ಬಾಳಿಕೆ ಬರಬೇಕು ಅಂದ್ರೆ ಈ ರೀತಿ ಮಾಡಿ ಸಾಕು.!

ಮನೆಗೆ ರೇಷನ್ ತರುವಾಗ ನಾವು ಸ್ವಲ್ಪ ಹೆಚ್ಚಿಗೆ ತರುತ್ತೇವೆ. ತಿಂಗಳಿಗೆ ಆಗುವಷ್ಟು ಸರಿಯಾಗಿ ಅಳತೆ ಮಾಡಲು ತರಲು ಸಾಧ್ಯವಾಗುವುದಿಲ್ಲ, ಕೆಲವೊಮ್ಮೆ 2-3 ತಿಂಗಳಿಗಾಗುವಷ್ಟು ರೇಷನ್ ತಂದು ಇಟ್ಟುಕೊಳ್ಳುತ್ತೇವೆ ಅಕ್ಕಿ, ಬೆಳೆ ಕಾಳುಗಳು, ರಾಗಿ ಹಿಟ್ಟು ಇವುಗಳು ಒಮ್ಮೆ ತೊಂದರೆ ಹಲವು ದಿನಗಳವರೆಗೆ ಇರುತ್ತವೆ.

WhatsApp Group Join Now
Telegram Group Join Now

ಆದರೆ ಇವುಗಳು ಬಹಳ ಬೇಗ ಕೆಟ್ಟು ಹೋಗುತ್ತವೆ. ಇವುಗಳಲ್ಲಿ ಹುಳು ಬರುತ್ತದೆ, ಗೂಡು ಕಟ್ಟುತ್ತದೆ ಇದನ್ನು ಕ್ಲೀನ್ ಮಾಡುವುದೇ ಗೃಹಿಣಿಯರಿಗೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಇದು ಮಾತ್ರ ಅಲ್ಲದೇ ರವೆ, ಅವಲಕ್ಕಿ ಮುಂತಾದ ಅನೇಕ ದಿನಸಿಗಳಲ್ಲಿ ಕೂಡ ಈ ರೀತಿ ಬಹಳ ಬೇಗ ಹುಳು ಆಗಿಬಿಡುತ್ತದೆ ಅಥವಾ ಅದು ಗೂಡು ಕಟ್ಟಿಕೊಳ್ಳುತ್ತದೆ.

ಇದನ್ನು ನೀಟಾಗಿ, ಫ್ರೆಶ್ ಆಗಿ ಕೆಡದಂತೆ ಇಟ್ಟುಕೊಳ್ಳುವುದೇ ಮಹಿಳೆಯರಿಗೆ ದೊಡ್ಡ ಟಾಸ್ಕ್ ಆಗಿದೆ. ಪದಾರ್ಥಗಳು ಕೆಟ್ಟು ಹೋದರೆ ಹಣ ವ್ಯರ್ಥವಾಗುತ್ತದೆಯಲ್ಲಾ ಎಂದು ಗೃಹಿಣಿಯರು ಬಹಳ ಜೋಪಾನ ಮಾಡುತ್ತಾರೆ. ಮನೆಗೆ ರೇಷನ್ ತಂದ ಕೂಡಲೇ ಕ್ಲೀನ್ ಮಾಡಿ ಡಬ್ಬಕ್ಕೆ ತುಂಬಿಸಿ ಇಟ್ಟರೂ ಕೂಡ  ಮತ್ತೆ ಒಳಗೆ ಹುಳುವಾಗಿರುತ್ತದೆ, ಇಲ್ಲ ಗೂಡು ಕಟ್ಟಿರುತ್ತದೆ.

ಇದನ್ನು ಹೇಗೆ ಬಗೆಹರಿಸುವುದು ಎನ್ನುವುದೇ ಅವರಿಗೆ ದೊಡ್ಡ ಟಾಸ್ಕ್. ಯಾಕೆಂದರೆ ಯಾವುದಾದರೂ ಅನಿವಾರ್ಯ ಸಂದರ್ಭದಲ್ಲಿ ಅವಸರವಾಗಿ ಅಡುಗೆ ಮಾಡುವಾಗ ಇದನ್ನೆಲ್ಲ ಕ್ಲೀನ್ ಮಾಡುತ್ತಾ ಕೂದಕಲು ಸಮಯ ಇರುವುದಿಲ್ಲ ಮತ್ತು ಗೊತ್ತಿಲ್ಲದೆ ಅಡುಗೆ ಮಾಡಿಬಿಟ್ಟರೆ ಆರೋಗ್ಯ ಏರುಪೇರಾಗುತ್ತದೆ.

ಹಾಗೇ ಬಿಟ್ಟರೆ ಬಹಳ ಬೇಗ ಎಲ್ಲವೂ ಕೆಟ್ಟು ಹೋಗುತ್ತವೆ ಹಾಗಾಗಿ ಇದನ್ನು ಕೆಡದಂತೆ ನೋಡಿಕೊಳ್ಳಬೇಕು.  ಇದಕ್ಕಾಗಿ ಟಿಪ್ಸ್ ಹುಡುಕುತ್ತಿದ್ದರೆ ನಿಮಗೆ ಉಪಯುಕ್ತವಾಗುವ ಮಾಹಿತಿ ಇಲ್ಲಿದೆ ನೋಡಿ. ಇದನ್ನು ಮಾಡುವುದು ಬಹಳ ಸರಳ ಇದಕ್ಕಾಗಿ ನೀವು ಯಾವುದೇ ಕೆಮಿಕಲ್ ಉಪಯೋಗಿಸುವ ಅವಶ್ಯಕತೆ ಇಲ್ಲ.

ದುಡ್ಡು ಕೊಟ್ಟು ಹೊರಗಡೆಯಿಂದ ತರುವ ಅವಶ್ಯಕತೆಯೂ ಇಲ್ಲ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಇದನ್ನು ಮಾಡಬಹುದು. ನಿಮ್ಮ ಮನೆಯಲ್ಲಿ ಅಡುಗೆ ಮಾಡುವಾಗ ಬೆಳ್ಳುಳ್ಳಿಯನ್ನು ಬಳಸುತ್ತೀರಿ, ಬೆಳ್ಳುಳ್ಳಿ ಬಳಸಲು ಅದರ ಸಿಪ್ಪೆಯನ್ನು ತೆಗೆಯಲೇಬೇಕು.

ಹೀಗೆ ತೆಗೆಯುವಾಗ ಅದನ್ನು ಬಿಸಾಕದೆ ಸ್ಟೋರ್ ಮಾಡಿ ಇಟ್ಟುಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಒಂದು ಹಿಡಿ ಬೆಳ್ಳುಳ್ಳಿ ಸಿಪ್ಪೆ ಹಾಕಿ ಇದಕ್ಕೆ ಒಂದು ಹಿಡಿ ಕರಿಬೇವಿನ ಎಲೆ ಹಾಗೂ 4-5 ಲವಂಗವನ್ನು ಹಾಕಿ ಸ್ವಲ್ಪ ನೀರಿನಲ್ಲಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಬಿಲ್ಲೆಗಳ ರೀತಿ ಮಾಡಿಕೊಂಡು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.

ಬಿಸಿಲಿನಲ್ಲಿ ಎಷ್ಟು ಒಣಗಿಸುತ್ತಿರೋ ಅಷ್ಟು ಒಳ್ಳೆಯದು, ಈಗ ಇದನ್ನು ಒಂದು ಶುದ್ಧವಾದ ಬಿಳಿ ಕಾಟನ್ ಬಟ್ಟೆ ಒಳಗೆ ಹಾಕಿ ಪ್ರತಿಯೊಂದು ಬಿಲ್ಲೆಗೂ ಸಪರೇಟ್ ಆಗಿ ಗಂಟು ಕಟ್ಟಿಕೊಳ್ಳಿ. ಪ್ರತಿ ದಿನಸಿ ಡಬ್ಬದ  ಒಳಗೆ ಒಂದೊಂದು ಇಡಿ ಸಾಕು. ಒಂದು ವರ್ಷದವರೆಗೆ ನಿಮ್ಮ ಆಹಾರ ಪದಾರ್ಥ ಕೆಡುವುದಿಲ್ಲ ಮತ್ತು ಇದು ಸಹ ಒಂದು ವರ್ಷದವರೆಗೆ ಕೆಡುವುದಿಲ್ಲ.

ಒಂದು ವರ್ಷದ ಬಳಿಕ ಇದನ್ನು ಬದಲಾಯಿಸಿ ಇದೇ ರೀತಿ ಬೇರೆ ಬಿಲ್ಲೆಯನ್ನು ಮಾಡಿಕೊಂಡು ಇಡಬಹುದು. ಈ ಉಪಯುಕ್ತ ಮಾಹಿತಿಯು ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಇದನ್ನು ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now