ಇತ್ತೀಚಿನ ದಿನಗಳಲ್ಲಿ ಚೆಕ್ ಬೌನ್ಸ್ ಪ್ರಕರಣಗಳ (Check bounce Case) ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಅಸಲಿಗೆ ಚೆಕ್ ಬೌನ್ಸ್ ಕೇಸ್ ಗಳು ಎಂದರೆ ಏನು ಎಂದು ನೋಡುವುದಾದರೆ ಇಬ್ಬರು ವ್ಯಕ್ತಿಗಳ ನಡುವೆ ಅಥವಾ ಸಂಸ್ಥೆ ನಡುವೆ ಯಾವುದಾದರೂ ವಸ್ತುವಿನ ಅಥವಾ ಇನ್ಯಾವುದೇ ಸೇವೆಗಳು ನಡೆದಾಗ ಸಂಭಾವನೆಯಾಗಿ ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ಕೊಡಬೇಕಾದ ಹಣವನ್ನು ನೀಡಲು ನಗದು ಕೊಡುವ ಬದಲು ಚೆಕ್ ನೀಡಿರುತ್ತಾರೆ.
ಅದನ್ನು ಬ್ಯಾಂಕ್ ಖಾತೆಗೆ ಹಾಕಿದಾಗ ಸಲ್ಲಬೇಕಾದ ಹಣವು ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿರುತ್ತದೆ. ಇದು ಬಹಳ ದೊಡ್ಡ ಅನುಕೂಲತೆ ಆಗಿದ್ದರೂ ಇದನ್ನು ಉಪಯೋಗಿಸಿಕೊಂಡು ಅನೇಕರು ಮೋಸ ಮಾಡುತ್ತಿದ್ದಾರೆ ಅದರ ಬಗ್ಗೆ ಈ ಅಂಕಣದಲ್ಲಿ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇನೆ.
ಚೆಕ್ ಬೌನ್ಸ್ ಪ್ರಕರಣಗಳು ಯಾಕೆ ಉಂಟಾಗುತ್ತದೆ ಎಂದರೆ ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗೆ ಚೆಕ್ ಕೊಟ್ಟು ನಂತರ ಬ್ಯಾಂಕ್ ಗಳಲ್ಲಿ ಸ್ಟಾಪ್ ಪೇಮೆಂಟ್ (stop payment) ಮಾಡಿಸಿರುತ್ತಾರೆ ಅಥವಾ ಚೆಕ್ ಕೊಟ್ಟ ಮೇಲೆ ಆ ಅಕೌಂಟ್ ಕ್ಲೋಸ್ ಮಾಡಿಸಿರುತ್ತಾರೆ, ಇರುವ ಹಣಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ (insufficient payment) ಚೆಕ್ ಬರೆದು ಕೊಟ್ಟಿರುತ್ತಾರೆ ಅಥವಾ ಬೇಕೆಂದರೆ ಸಿಗ್ನೇಚರ್ ವ್ಯತ್ಯಾಸ (Signature differ) ಮಾಡಿಕೊಟ್ಟಿರುತ್ತಾರೆ.
ಇಂತಹ ಸಮಯದಲ್ಲಿ ಚೆಕ್ ಪಡೆದವರು ಹಣ ಪಡೆಯಲು ಸಾಧ್ಯವಾಗುವುದಿಲ್ಲ ಕೆಲವರು ಇದನ್ನು ಹೇಳಿದ ತಕ್ಷಣ ಒಳ್ಳೆಯ ರೀತಿಯಲ್ಲಿ ತಮ್ಮ ಮಿಸ್ಟೇಕ್ ಸರಿಪಡಿಸಿಕೊಂಡು ಹಣ ನೀಡುತ್ತಾರೆ ಆದರೆ ಅನೇಕರು ಇದನ್ನೇ ಅಸ್ತ್ರವಾಗಿ ಬಳಸಿ ಮೋಸ ಮಾಡಲು ಪ್ರಯತ್ನಿಸುತ್ತಾರೆ.
ಅಂತಹ ಸಮಯದಲ್ಲಿ ನೆಗೋಟೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881 (Negotiable Instrument act 1881) ಪ್ರಕಾರ ಕೋರ್ಟ್ ನಲ್ಲಿ ಕೇಸ್ ಹಾಕಬಹುದು. ಇದಿಷ್ಟು ಮಾತ್ರವಲ್ಲದೆ ಜನರು ಯಾವ ರೀತಿ ಸಮಸ್ಯೆ ಪಡುತ್ತಿದ್ದಾರೆ ಎಂದರೆ ಉದಾಹರಣೆಗೆ ನೀವೊಂದು ಕಾರು ಅಥವಾ ಬೈಕ್ ಕೊಂಡುಕೊಳ್ಳುವುದಕ್ಕೆ ಶ್ಯೂರಿಟಿಯಾಗಿ ಒಂದು ಚೆಕ್ ಕೊಟ್ಟಿರುತ್ತೀರಿ.
ನಿಮ್ಮ ಸಾಲವೆಲ್ಲ ಪೂರ್ತಿಯಾದ ಮೇಲೆ ಅವರು ನಿಮಗೆ ನಿಮ್ಮ ಚೆಕ್ ಮರಳಿಸಬೇಕು ಆದರೆ ಕಳೆದು ಹೋಗಿದೆ ಎಂದು ಸುಳ್ಳು ಹೇಳುತ್ತಾರೆ ಇದು ಕಂಪನಿಗಳು ಮಾತ್ರ ಅಲ್ಲದೆ ಸ್ನೇಹಿತರ ಮಧ್ಯೆ ಕೂಡ ನಡೆಯುತ್ತದೆ. ನಾಳೆ ಕೊಡುತ್ತೇನೆ ಎಂದು ಹೇಳಿ ನಂತರ ಹಣವನ್ನೇ ಕೊಟ್ಟಿಲ್ಲ ಎಂದು ಆ ಚೆಕ್ ಸಾಕ್ಷಿಯಾಗಿ ಇಟ್ಟುಕೊಂಡು ಕೇಸ್ ಹಾಕುವವರು ಕೂಡ ಇದ್ದಾರೆ.
ಈ ರೀತಿ ಚೆಕ್ ಬೌನ್ಸ್ ಪ್ರಕರಣಗಳು ನಡೆಯುತ್ತವೆ ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂದರೆ ಮೊದಲಿಗೆ ಕೋರ್ಟ್ ನಿಂದ ಬರುವ ನೋಟಿಸ್ ಗಳನ್ನು ಸ್ವೀಕರಿಸಬೇಕು. ಇದು ಸಿವಿಲ್ ಹಾಗೂ ಕ್ರಿಮಿನಲ್ ಎರಡಕ್ಕೂ ಸೇರುವ ಕೇಸ್ ಆಗಿರುವುದರಿಂದ ಅಮೀನರ ಬದಲು ಪೊಲೀಸರಿಂದ ನೋಟಿಸ್ (Notice through Police) ಬರುತ್ತದೆ.
ಆದರೆ ಅನೇಕರು ಪೊಲೀಸ್ ನೋಟಿಸ್ ಎಂದು ಸ್ವೀಕರಿಸಲು ಹೆದರುತ್ತಾರೆ. ಈ ರೀತಿ ಮಾಡುವುದು ತಪ್ಪು ಯಾವುದೇ ನೋಟಿಸ್ ಬಂದರು ಕೂಡ ಅದನ್ನು ಸ್ವೀಕರಿಸಿ ಒಳಗೆ ಏನಿದೆ ಎಂದು ನೋಡಬೇಕು. ಇದರಲ್ಲಿ ಇರುವ ವಿಷಯದ ಆಧಾರದ ಮೇಲೆ ನೀವು ಮುಂದಿನ ಕ್ರಮ ತೆಗೆದುಕೊಳ್ಳಲು ನಿಮಗೆ ಸಮಯವಕಾಶ ಇರುತ್ತದೆ.
ನೀವು ನೋಟಿಸ್ ತೆಗೆದುಕೊಳ್ಳದೆ ಇದ್ದರೂ ಕೂಡ ತಪ್ಪು ಮಾಡಿದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನೋಟಿಸ್ ಸ್ವೀಕರಿಸಿ ನಿಮ್ಮ ಲಾಯರ್ ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿ. ಚೆಕ್ ಬೌನ್ಸ್ ಪ್ರಕರಣಗಳಲ್ಲಿ ನೋಟಿಸ್ ಕೊಡಲು ಬರುವ ಪೊಲೀಸರು ಅರೆಸ್ಟ್ ಮಾಡುವುದಿಲ್ಲ, ನೋಟಿಸ್ ತಲುಪಿಸುವುದಷ್ಟೇ ಅವರ ಕೆಲಸ ಅವರು ನಿಮ್ಮನ್ನು ಟಚ್ ಕೂಡ ಮಾಡುವುದಿಲ್ಲ ಈ ಪ್ರಕರಣಗಳಲ್ಲಿ ಸುಲಭವಾಗಿ ಬೇಲ್ ಕೂಡ ಸಿಗುತ್ತದೆ.
ಹಣದ ಶ್ಯೂರಿಟಿ ಅಥವಾ ವ್ಯಕ್ತಿ ಶ್ಯೂರಿಟಿ (Suirity) ಕೊಟ್ಟು ಬೇಲ್ ಪಡೆಯಬಹುದು. ಕೋರ್ಟಿಗೆ ಹೋದ ಮೇಲೂ ಒಪ್ಪಂದದ ಮೂಲಕ ಪರಿಹರಿಸಿಕೊಳ್ಳುವುದಾದರೆ ಲೋಕ ಅದಾಲತ್ ಗೆ ಕೇಸ್ ಕಳುಹಿಸುತ್ತಾರೆ. ಒಂದು ವೇಳೆ ಒಪ್ಪದೆ ಕೇಸ್ ಮುಂದುವರಿಸಿದರೆ ಕೇಸ್ ಹಾಕಿರುವವರು ಮಧ್ಯಂತರ ಪರಿಹಾರ (Compensation) ಕೂಡ ಕೇಳಬಹುದು. ಒಂದು ವೇಳೆ ಕೇಸ್ ಹಾಕಿದವರದ್ದೆ ತಪ್ಪೆಂದು ಸಾಬೀತಾದರೆ ಆ ಮಧ್ಯಂತರ ಪರಿಹಾರ ಹಣವನ್ನು ಅಂದಿನ RBI ನ ಬಡ್ಡಿ ಸಮೇತ ಮರಳಿ ನೀಡಬೇಕಾಗುತ್ತದೆ.