ಭಾರತೀಯ ಅಂಚೆ ಇಲಾಖೆಯು(Post office) ತನ್ನ ಅಂಚೆ ಸೇವೆಗಳ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನು ಕೂಡ ಒದಗಿಸುತ್ತದೆ. ಪೋಸ್ಟ್ ಬ್ಯಾಂಕಿಂಗ್ ನಲ್ಲಿ ಹಣವನ್ನು ಉಳಿತಾಯ ಇಡುವುದು, ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಮುಂತಾದ ಅನುಕೂಲತೆಗಳನ್ನು ಪಡೆಯಬಹುದು.
ಅದರಲ್ಲೂ ಕೇಂದ್ರ ಸರ್ಕಾರದ ಯೋಜನೆಯಡಿ ಅಂಚೆ ಕಚೇರಿ ಕಾರ್ಯ ನಿರ್ವಹಿಸುವುದರಿಂದ ಸರ್ಕಾರವು ದೇಶದ ಜನತೆಗಾಗಿ ರೂಪಿಸುವ ಪ್ರತಿಯೊಂದು ಯೋಜನೆಯನ್ನು ಕೂಡ ನೀವು ಅಂಚೆ ಕಛೇರಿಯಲ್ಲಿ ಖರೀದಿಸಿ ಆ ಯೋಜನೆಗಳಡಿ ಹೂಡಿಕೆ ಮಾಡುತ್ತ ಬರಬಹುದು. ಈ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ ಸಹ ಇರುತ್ತದೆ ಮತ್ತು ಒಂದು ಖಚಿತವಾದ ನಿಶ್ಚಿತ ಲಾಭವನ್ನು ಕೂಡ ನೀವು ಅಂತ್ಯದಲ್ಲಿ ನಿಮ್ಮ ಯೋಜನೆಯನುಸಾರ ಪಡೆಯುತ್ತೀರಿ.
ಸದ್ಯಕ್ಕೆ ಅಂಚೆ ಕಚೇರಿಯಲ್ಲಿ ಇಂತಹ ಸಾಕಷ್ಟು ಯೋಜನೆಗಳು ಇವೆ. ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರೀಕರ ಉಳಿತಾಯ ಯೋಜನೆ, ನ್ಯಾಷನಲ್ ಪೆನ್ಷನ್ ಸ್ಕೀಮ್, ಕಿಸಾನ್ ವಿಕಾಸ್ ಪತ್ರ, ಅಂಚೆ ಕಛೇರಿ ಮಾಸಿಕ ಉಳಿತಾಯ ಯೋಜನೆ ಸೇರಿದಂತೆ ಒಟ್ಟು 11 ಬಗೆಯ ಯೋಜನೆಗಳಿವೆ. ಈಗ ಹೊಸ ಮಾದರಿ ಯೋಜನೆಯಾದ ಗ್ರಾಮ ಸುರಕ್ಷ ಯೋಜನೆಯ (Grama Suraksha Scheme) ಹೆಸರಿನ ಈ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಯೋಜನೆ ಹೆಸರು:- ಗ್ರಾಮ ಸುರಕ್ಷಾ ಯೋಜನೆ…
● ಅಂಚೆ ಕಚೇರಿ ಯಾವುದೇ ಯೋಜನೆಯನ್ನು ಖರೀದಿಸಬೇಕು ಎಂದರು ಅವರು ಕಡ್ಡಾಯವಾಗಿ ಭಾರತೀಯ ನಾಗರಿಕರಾಗಿರಬೇಕು.
● ಗ್ರಾಮ ಸುರಕ್ಷಾ ಯೋಜನೆಯನ್ನು 19 ರಿಂದ 55 ವರ್ಷದೊಳಗಿನವರು ಖರೀದಿಸಬಹುದು.
● ಈ ಯೋಜನೆಯ ಕನಿಷ್ಠ ವಿಮಾ ಮೊತ್ತವು ರೂ.10,000
● ಈ ಯೋಜನೆಯ ಕನಿಷ್ಠ ವಿಮಾ ಮೊತ್ತ 50ರೂ.
● ಈ ಯೋಜನೆಯಡಿ 55ನೇ ವಯಸ್ಸಿನವರೆಗೂ ಹೂಡಿಕೆ ಮಾಡಬೇಕು
● ಈ ಯೋಜನೆಯಲ್ಲಿ 19ನೇ ವಯಸ್ಸಿಗೆ 50ರೂ. ಹೂಡಿಕೆ ಮಾಡಲು ಪ್ರಾರಂಭಿಸಿದರೆ. 10 ಲಕ್ಷ ರೂ. ಪ್ರೀಮಿಯಂ ಪಾವತಿಸುತ್ತೀರಿ. ತಿಂಗಳಿಗೆ 1500 ರೂ.ಗಳನ್ನು ಹೂಡಿಕೆ ಮಾಡಿದರೆ. 55 ನೇ ವಯಸ್ಸಿನಲ್ಲಿ 31.60 ಲಕ್ಷ ರೂ, 58 ನೇ ವಯಸ್ಸಿನಲ್ಲಿ 33.40 ಲಕ್ಷ ಮತ್ತು 60ನೇ ವಯಸ್ಸಿನಲ್ಲಿ 34.60 ಲಕ್ಷ ರೂ. ಪಡೆಯಬಹುದು.
ಗ್ರಾಮೀಣ ಜನರಿಗೆ ಸಿಹಿ ಸುದ್ದಿ, ಇನ್ಮುಂದೆ ಬಾಪೂಜಿ ಸೇವಾ ಕೇಂದ್ರಗಳಲ್ಲಿ 44 ಹೆಚ್ಚುವರಿ ಸೇವೆಗಳು ಲಭ್ಯ.!
● 36 ತಿಂಗಳ ಕಾಲ ಪ್ರೀಮಿಯಂ ಪಾವತಿಸಿದ ನಂತರ ಪಾಲಿಸಿಯನ್ನು ಸರೆಂಡರ್ ಮಾಡಬಹುದು. ಆದರೆ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಯಾವುದೇ ಲಾಭ ಇರುವುದಿಲ್ಲ.
● ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆಗೆ ಹೂಡಿಕೆದಾರರಿಂದ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂ ಕಟ್ಟಬಹುದು.
● 30-ದಿನಗಳ ಗ್ರೇಸ್ ಅವಧಿ ಕೂಡ ಇರುತ್ತದೆ.
● ಅಂಚೆ ಕಚೇರಿ ಗ್ರಾಮ ಸುರಕ್ಷಾ ಯೋಜನೆಯನ್ನು ಖರೀದಿಸಿದ್ದರೆ ಮೇಲಾಧಾರವಾಗಿ ಬಳಸಿಕೊಂಡು ಹಣವನ್ನು ಸಾಲ ಪಡೆಯಬಹುದು. 48 ತಿಂಗಳ ಕಾಲ ಪ್ರೀಮಿಯಂಗಳನ್ನು ಪಾವತಿಸಿದ ನಂತರ ಸಾಲಕ್ಕೆ ಅರ್ಹರಾಗಿರುತ್ತಾರೆ. ಸಾಲದ ಮೇಲಿನ ಬಡ್ಡಿ ದರ ವಾರ್ಷಿಕವಾಗಿ 10%.
LIC ಯಲ್ಲಿ ಪಾಲಿಸಿ ಮಾಡಿಸಿದವರಿಗೆ ಗುಡ್ ನ್ಯೂಸ್ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂಪಾಯಿ ಪಿಂಚಣಿ.!
● ಸೆಕ್ಷನ್ 80C ಮತ್ತು ಸೆಕ್ಷನ್ 88 ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ಪಡೆಯಬಹುದು.
● ಒಂದು ವೇಳೆ ಪ್ರೀಮಿಯಂ ಗಳನ್ನು ಪಾವತಿಸದೆ ಸಸ್ಪೆಂಡ್ ಆಗಿದ್ದರೆ, ಪಾವತಿಸದ ಪ್ರೀಮಿಯಂಗಳನ್ನು ಪಾವತಿಸಿ ನಂತರ ಪಾಲಿಸಿಯನ್ನು ಪುನಃ ಮುಂದುವರೆಸಬಹುದು.
● ನಾಮಿನಿ ಫೆಸಿಲಿಟಿ ಲಭ್ಯವಿದೆ. ಹೂಡಿಕೆದಾರರು ಮೃ’ತ ಪಟ್ಟರೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತ ನಾಮಿನಿಗೆ ಸೇರುತ್ತದೆ.