ಗ್ರಾಮೀಣ ಭಾಗದ ಜನತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ (Rural and Panchayath Raj Department) ಸಿಹಿ ಸುದ್ದಿ ಇದೆ. ಅದೇನೆಂದರೆ ಪ್ರತಿ ಪಂಚಾಯಿತಿ ವ್ಯಾಪ್ತಿಯನ್ನು ಕೂಡ ಗ್ರಾಮ ಪಂಚಾಯಿತಿಯಲ್ಲಿಯೇ ಬಾಪೂಜಿ ಸೇವ ಕೇಂದ್ರಗಳು (Bapuji Seva Kendra) ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಸದ್ಯಕ್ಕೆ 28 ಯುಟಿಲಿಟಿ ಸೇವೆಗಳನ್ನು ಒದಗಿಸಲಾಗುತ್ತಿತ್ತು.
ಈಗ ಇದನ್ನು ವಿಸ್ತರಿಸಿ ಹೆಚ್ಚುವರಿಯಾಗಿ 44 ಸೇವೆಗಳನ್ನು ಸೇರ್ಪಡೆ (Extended Services) ಮಾಡಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆಯವರು (Minister Priyank Kharge) ಮಾಹಿತಿ ನೀಡಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ ಇದಕ್ಕೆ ಚಾಲನೆ ಸಹ ನೀಡಿದ್ದಾರೆ ಎಂದು ವಿಷಯ ಹಂಚಿಕೊಂಡಿದ್ದಾರೆ ಈ ಪ್ರಕಾರವಾಗಿ ಇನ್ನು ಮುಂದೆ ಗ್ರಾಮೀಣ ಭಾಗದ ಜನರು ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ , ವಿಳಾಸ ಪುರಾವೆ ಸೇರಿದಂತೆ ಇನ್ನು ಹೆಚ್ಚಿನ ಸೇವೆಗಳನ್ನು ತಮ್ಮ ಗ್ರಾಮ ಪಂಚಾಯಿತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಪಡೆಯಬಹುದಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಾಡಕಚೇರಿಗಳಲ್ಲಿ ಇರುವ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ (Nadalacheri Janasnehi Kendra) ಸಿಗಲಾಗುವ ಎಲ್ಲಾ ಸೇವೆಗಳನ್ನು ಕೂಡ ಗ್ರಾಮ ಪಂಚಾಯಿತಿ ಮಟ್ಟದಲ್ಲಿಗೆ ಬಾಪೂಜಿ ಸೇವ ಕೇಂದ್ರಗಳಲ್ಲಿ ಸಿಗುವಂತೆ ಅನುಕೂಲತೆ ಕಲ್ಪಿಸಬೇಕು, ಅದರಿಂದಾಗಿ ಗ್ರಾಮೀಣ ಪ್ರದೇಶದ ಜನರು ತಮ್ಮ ಅನುಕೂಲತೆಗೆ ಸಮಯದಲ್ಲಿ ಸರಿಯಾದ ಸಮಯಕ್ಕೆ ತ್ವರಿತವಾಗಿ ಈ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಇಲ್ಲವಾದಲ್ಲಿ ಹೋಬಳಿ ಮಟ್ಟದವರೆಗೆ ಹೋಗಬೇಕಾಗಿರುವುದರಿಂದ ಸಮಯ ಹಾಗೂ ಹಣ ಎರಡು ಕೂಡ ವ್ಯರ್ಥವಾಗುತ್ತಿದೆ ಮತ್ತು ಪ್ರಕ್ರಿಯೆ ಸಹ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಇನ್ನು ಮುಂದೆ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಸಿಗುವ ಎಲ್ಲಾ ಸೇವೆಗಳು ಗ್ರಾಮದ ಮಟ್ಟದಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಪ್ರತಿ ಹೋಬಳಿಯು 20 ರಿಂದ 50,000 ಜನಸಂಖ್ಯೆ ಹೊಂದಿರುತ್ತದೆ. 6 ರಿಂದ 7 ಗ್ರಾಮ ಪಂಚಾಯಿತಿಯು ಹೋಬಳಿ ಮಟ್ಟಕ್ಕೆ ಬರುವುದರಿಂದ ಅತಿ ಹೆಚ್ಚಿನ ಮನವಿಗಳು ಸಲ್ಲಿಕೆ ಆಗುತ್ತವೆ. ಇದರಿಂದ ತಮಗೆ ಬೇಕಾದ ದಾಖಲೆ ಪಡೆಯಲು ವಿಳಂಬವಾಗುತ್ತದೆ ಮತ್ತು ಇದು ತ್ರಾಸದಾಯಕ ಕೂಡ ಆದ್ದರಿಂದ ಇವುಗಳು ಪಂಚಾಯಿತಿ ಮಟ್ಟದಲ್ಲಿ ಲಭ್ಯವಾಗಬೇಕು ಎಂದು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಟಲ್ ಜಿ ಜನಸ್ನೇಹಿ ಕೇಂದ್ರಗಳ ಕೆಲಸದ ಹೊರೆ ಮತ್ತು ಒತ್ತಡ ಇದರಿಂದಾಗಿ ಗ್ರಾಮೀಣ ಭಾಗದವರಿಗೆ ಆಗುತ್ತಿರುವ ಅನಾನುಕೂಲತೆಯನ್ನು ತಪ್ಪಿಸಲು ಅಟಲ್ ಜಿ ಜನಸ್ನೇಹಿ ಕೇಂದ್ರದ ಭಾಗವಾಗಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ನು ಮುಂದೆ ಎಲ್ಲಾ ಸೇವೆಗಳು ಸಿಗಲಿದೆ ಎಂದಿದ್ದಾರೆ.
ಇದರಿಂದ ಇನ್ನು ಮುಂದೆ ಗ್ರಾಮೀಣ ಭಾಗದ ಜನರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡುವ ಸೇವೆಗಳ ಜೊತೆಗೆ ಕಾರ್ಮಿಕ, ಆರೋಗ್ಯ, ಕುಟುಂಬ ಕಲ್ಯಾಣ, ವಿದ್ಯುತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಒದಗಿಸುವ ಸೇವೆಗಳನ್ನು ಸಹ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.
ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಗ್ರಾಮೀಣ ಭಾಗದ ಜನತೆಗೆ ಬಹಳಷ್ಟು ಅನುಕೂಲತೆ ಆಗಲಿದೆ. ಇದುವರೆಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕರ್ನಾಟಕ ಸರ್ಕಾರದ, ಭಾರತ ಸರ್ಕಾರದ ಹಾಗೂ ಬಾಹ್ಯ ಅನುದಾನಿತ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದಾಗಿತ್ತು. ಈ ಯೋಜನೆಗಳ ಜೊತೆಗೆ ಇನ್ನು ಮುಂದೆ ಈ ಮೇಲೆ ತಿಳಿಸಿದ ಸೇವೆಗಳನ್ನು ಕೂಡ ಪಡೆಯಲು ಸಾಧ್ಯವಿದೆ.