LIC ಭಾರತದ ನಂಬಿಕಾರ್ಹ ವಿಮಾ ಸಂಸ್ಥೆಯಾಗಿದೆ. ದಶಕಗಳ ಕಾಲದಿಂದಲೂ ಕೂಡ ಭಾರತದ ಹಳ್ಳಿ ಹಳ್ಳಿವರೆಗೂ ಚಿರ ಪರಿಚಿತವಾಗಿರುವ LIC ಯ ಈ ಯೋಜನೆಗಳಿಂದ ಅನೇಕರು ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಕಡಿಮೆ ಮೊತ್ತದ ಪ್ರೀಮಿಯಂಗಳನ್ನು ಪಾಲಿಸುವ ಮೂಲಕ ಹೆಚ್ಚು ರಿಟರ್ನ್ಸ್ ಪಡೆಯಲು ಸಾಧ್ಯವಿರುವ ಈ LIC ಯೋಜನೆಗಳಲ್ಲಿ ಹತ್ತು ಹಲವು ವೈಶಿಷ್ಟ್ಯಗಳಿವೆ.
ಹಲವಾರು ಯೋಜನೆಗಳು ಲಭ್ಯವಿದ್ದು ಯಾವ ಪಾಲಿಸಿ ತಮಗೆ ಸೂಕ್ತ ಎನಿಸುತ್ತದೆ ಅದನ್ನು ಆರಿಸಿಕೊಂಡು ಹೂಡಿಕೆ ಮಾಡಬಹುದು. ಕಾಲಕಾಲಕ್ಕೆ ಅನುಗುಣವಾಗಿ LIC ಕಂಪನಿ ಕೂಡ ಹೊಸದಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂತೆಯೇ ಈಗ ಗ್ರಾಹಕ ಸ್ನೇಹಿಯಾದ ಮತ್ತೊಂದು ಯೋಜನೆ ಜಾರಿಯಾಗಿದ್ದು ಈ ಯೋಜನೆಯಲ್ಲಿ 60ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ಒಂದು ಲಕ್ಷ ರೂ. ವರೆಗೆ ಪೆನ್ಷನ್ ಪಡೆಯಬಹುದಾಗಿದೆ, ಪೂರ್ತಿ ವಿವರ ಇಲ್ಲಿದೆ ನೋಡಿ.
ಯೋಜನೆಯ ಹೆಸರು:- LIC ಜೀವನ್ ಶಾಂತಿ ಯೋಜನೆ (LIC Jeevan Shanthi Yojane)…
● ಈ ಪಾಲಿಸಿಯನ್ನು 30 ವರ್ಷ ಮೇಲ್ಪಟ್ಟ 79 ವರ್ಷಗಳ ಒಳಗಿನ ಯಾವುದೇ ವ್ಯಕ್ತಿ ತೆಗೆದುಕೊಳ್ಳಬಹುದು.
● LIC ಯ ಜೀವನ್ ಶಾಂತಿ ಯೋಜನೆಯಡಿ ಕನಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಕಡ್ಡಾಯ, ಯಾವುದೇ ಗರಿಷ್ಠ ಮಿತಿಯನ್ನು ನಿಗದಿಪಡಿಸಿಲ್ಲ.
● ಪೆನ್ಷನ್ ರೂಪದ ಯೋಜನೆ ಆಗಿರುವುದರಿಂದ 60 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಿದರೆ, ಆ ನಂತರ ಹೂಡಿಕೆ ಆಧಾರದ ಮೇಲೆ ನಿಮಗೆ ಪ್ರತಿ ತಿಂಗಳು ಪಿಂಚಣಿ ಬರುತ್ತದೆ.
● ಯೋಜನೆಯಲ್ಲಿ 6.81% ರಿಂದ 14.62 % ಬಡ್ಡಿದರ ಸಿಗಲಿದೆ.
● ಈ ಯೋಜನೆಯ ಮತ್ತೊಂದು ವಿಶೇಷತೆಯೇನೆಂದರೆ ಯಾವಾಗ ಬೇಕಾದರೂ ಪಾಲಿಸಿ ಸರೆಂಡರ್ ಮಾಡಬಹುದು.
● 60 ವರ್ಷದ ನಂತರ ಆಜೀವ ಪರ್ಯಂತ ಪಿಂಚಣಿ ಸೌಲಭ್ಯ ಸಿಗುತ್ತದೆ. ಹಿರಿಯ ನಾಗರಿಕರಿಗೆ ಇದು ಅತ್ಯುತ್ತಮ ಯೋಜನೆಯಾಗಿದೆ.
● ಮಾಸಿಕವಾಗಿ, ಅರ್ಥವಾಷಿಕವಾಗಿ, ತ್ರೈಮಾಸಿಕವಾಗಿ ಹಾಗೂ ವಾರ್ಷಿಕವಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
● LIC ಯ ಹೊಸ ಜೀವನ ಶಾಂತಿ ಯೋಜನೆಯು ವರ್ಷಾಶನ ಯೋಜನೆಯಾಗಿದೆ. ಪಾಲಿಸಿ ತೆಗೆದುಕೊಳ್ಳುವ ಸಮಯದಲ್ಲಿ ನೀವು ನಿಗದಿತ ಪಿಂಚಣಿ ಮೊತ್ತವನ್ನು ಆರಿಸಬೇಕು, ಆ ಪ್ರಕಾರವಾಗಿ ಪ್ರೀಮಿಯಂ ನಿಗಧಿ ಪಡಿಸಲಾಗುತ್ತದೆ.
● ನೀವು 50 ಸಾವಿರ ಮಾಸಿಕ ಪಿಂಚಣಿಗಾಗಿ ಬಯಸಿದರೆ 50 ಲಕ್ಷ ಹೂಡಿಕೆಯ ಮಾಡಿರಬೇಕು.
● ಇನ್ನು ನೀವು ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಬಯಸಿದರೆ, ನೀವು 60 ವರ್ಷಗಳವರೆಗೆ 1 ಕೋಟಿ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.
● 10 ಲಕ್ಷ ಹೂಡಿಕೆಯ ಮೇಲೆ 11,000 ರೂ. ಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಲಭ್ಯವಿದೆ.
● ಯೋಜನೆಯಲ್ಲಿ ನೀವು ಎರಡು ರೀತಿಯ ಆಯ್ಕೆಗಳನ್ನು ಪಡೆಯುತ್ತೀರಿ. ಇದರಲ್ಲಿ ಮೊದಲ ಆಯ್ಕೆಯಲ್ಲಿ ನೀವು ಒಬ್ಬರೇ ಪಿಂಚಣಿ ಪಡೆಯುತ್ತೀರಿ. ಎರಡನೇ ಆಯ್ಕೆ ಆರಿಸಿಕೊಂಡರೆ ನಿಮ್ಮ ಮರಣದ ನಂತರ ಸಂಗಾತಿಗೆ ಪಿಂಚಣಿ ಮುಂದುವರಿಯುತ್ತದೆ. ಅವರ ಮರಣದ ನಂತರ ಎರಡನೇ ನಾಮಿನಿಗೆ ಹಣ ಹೋಗುತ್ತದೆ.
● LIC ಜೀವನ್ ಶಾಂತಿ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ LIC ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು ಅಥವಾ ಪರಿಚಿತವಿರುವ LIC ಏಜೆಂಟ್ ಬಳಿ ಮಾಹಿತಿ ಪಡೆಯಬಹುದು ಅಥವಾ ಹತ್ತಿರದಲ್ಲಿರುವ LIC ಶಾಖೆಗೆ ಭೇಟಿ ಕೊಟ್ಟು ಪೂರ್ತಿ ಮಾಹಿತಿ ಪಡೆಯಬಹುದು.