ಕೆಲವರಿಗೆ ಬಹಳ ಕಡಿಮೆ ಬಜೆಟ್ ಇರುತ್ತದೆ ಮತ್ತು ಆ ಸಮಯದಲ್ಲಿ ಮನೆ ಮಾಡಿಕೊಳ್ಳುವುದು ಕೂಡ ಅಷ್ಟೇ ಅವಶ್ಯಕತೆಯ ವಿಷಯವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಇರುವ ಸಣ್ಣ ಉಳಿತಾಯದಲ್ಲಿ ಸುಂದರವಾದ ಮನೆ ಹೇಗೆ ಮಾಡಿಕೊಳ್ಳಬಹುದು. 10 ಲಕ್ಷದಲ್ಲಿ 2BHK ಮನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೇ ಅಥವಾ ಇದೇ ಉತ್ತಮವೇ ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ನೀವು ಮನೆ ಕಟ್ಟುವಾಗ ಮುಂದೆ ಇದನ್ನು ಹೆಚ್ಚಿಗೆ ಮಾಡಿಕೊಳ್ಳಬೇಕು ಎನ್ನುವ ಇಚ್ಛೆ ಇದ್ದರೆ ಕಾಲಮ್ ಸ್ಟ್ರಕ್ಚರ್ ಗೆ ಹೋಗಬೇಕಾಗುತ್ತದೆ, ಇಲ್ಲವಾದರೆ 10 ಲಕ್ಷ ಬಜೆಟ್ ಒಳಗೆ ಬರಬೇಕು, ಒಂದೇ ಫ್ಲೋರ್ ಸಾಕು ಎಂದರೆ ಫೌಂಡೇಶನ್ ಅಂದರೆ ಲೋಡ್ ಬೇರಿಂಗ್ ಸೆಕ್ಷನ್ ಗೆ ಹೋಗುವುದು ಉತ್ತಮ. ಕಾಲಮ್ ಸ್ಟ್ರಕ್ಚರ್ ಗೆ ಇದಕ್ಕಿಂತ 1 ಲಕ್ಷ ಹೆಚ್ಚು ಖರ್ಚಾಗಬಹುದು ಅಷ್ಟೇ ಮೇಲೆ ಎರಡು ಫ್ಲೋರ್ ವರೆಗೂ ಸ್ಟ್ರಾಂಗ್ ಆಗಿ ಕಟ್ಟಬಹುದು.
ಈ ಸುದ್ದಿ ಓದಿ:-ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
30*25 ಚದರದ ಮನೆ ಬಜೆಟ್ ಹೇಳುತ್ತಿದ್ದೇವೆ. ಸಂಪ್ ಬೇಕು ಎಂದರೆ ರೂ.50,000 ಹಾಗೂ ಕಾಂಪೌಂಡ್ ವಿಥ್ ಗೇಟ್ ಬೇಕು (4 ಇಂಚ್ ವಾಲ್) ಎಂದರೆ 50 ರಿಂದ 60,000 ಎಕ್ಸ್ಟ್ರಾ ಚಾರ್ಜಸ್ ಆಗುತ್ತದೆ. 30*25 ಜಾಗದ ಮಧ್ಯೆ ಪ್ಲಸ್ ಮಾರ್ಕ್ ಹಾಕಿ ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡರೆ.
ಒಂದು ಭಾಗದಲ್ಲಿ ಕಿಚನ್ ಒಂದು ಭಾಗದಲ್ಲಿ ಹಾಲ್ ಮತ್ತೆ ಎರಡು ಭಾಗದಲ್ಲಿ ಎರಡು ಬೆಡ್ರೂಮ್ ಬರುತ್ತದೆ ಒಂದು ಬೆಡ್ರೂಮ್ ನಲ್ಲಿ ಅಟ್ಯಾಚ್ ಬಾತ್ರೂಮ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ರೂಮ್ ಸ್ವಲ್ಪ ಚಿಕ್ಕದಾಗುತ್ತದೆ. ಈ ಪ್ಲಾನಿಂಗ್ ನಲ್ಲಿ ದೇವರ ಕೋಣೆ ಸೇರಿಸಿಲ್ಲ ನೀವು ರೆಡಿಮೇಡ್ ಮಂಟಪಗಳನ್ನು ತೆಗೆದುಕೊಂಡು ಹಾಲ್ ನಲ್ಲಿ ಇಟ್ಟುಕೊಳ್ಳಬಹುದು.
ಈ ಸುದ್ದಿ ಓದಿ:-ಕೃಷಿ ಹೊಂಡದಲ್ಲಿ ಮುತ್ತು ಬೆಳೆದು 20 ಲಕ್ಷ ಆದಾಯ ಮಾಡಿದ ರೈತ.!
ಯಾವುದಕ್ಕೆ ಎಷ್ಟು ಚಾರ್ಜ್ ಆಗಬಹುದು ಎನ್ನುವ ವಿವರ:-
* ಲೇಬರ್ ಚಾರ್ಜಸ್ 2.5 ಲಕ್ಷ
* ಫೌಂಡೇಶನ್ 1.5 ಲಕ್ಷ
* ಲಿವಿಂಗ್ 2 ಲಕ್ಷ
* ಸ್ಲ್ಯಾಬ್ 1.5 ಲಕ್ಷ
* ಪ್ಲಾಸ್ಟರಿಂಗ್, ವಿಂಡೋಸ್, ಡೋರ್, ಗ್ರಿಲ್, ಪೇಂಟಿಂಗ್, ಕಿಚನ್ ಸ್ಲ್ಯಾಬ್, ಸ್ಟೇರ್ ಕೇಸ್, ಪ್ಲಂಬಿಂಗ್, ಎಲೆಕ್ಟ್ರಿಕಲ್ ಇದೆಲ್ಲವೂ ಉಳಿದ 2.5 ಲಕ್ಷದಲ್ಲಿ ಮುಗಿಯಬೇಕು.
ಮೆಟೀರಿಯಲ್ಸ್ ಬಗ್ಗೆ ಹೇಳುವುದಾದರೆ ಟೈಲ್ಸ್ 2*2 ಸೆರಾಮಿಕ್ ಟೈಲ್ಸ್ ಬಳಸಿದರೆ ಒಂದಕ್ಕೆ 40rs ನಂತೆ ಸಿಗುತ್ತದೆ. 10mm, 12mm, 8mm ಕಾಂಬಿನೇಷನ್ ನಲ್ಲಿಯೇ ಕಂಬಿಗಳನ್ನು ಬಳಸಬೇಕು. 43 ಗ್ರೇಡ್ ಸಿಮೆಂಟ್ ಎಲ್ಲಾ ಕಡೆ ಬಳಸಬಹುದು, ಜುವಾರಿ ಅಥವಾ ಪ್ರಿಯಾ ಸಿಮೆಂಟ್ ಬೆಸ್ಟ್. ಹೊರಗಿನ ಗೋಡೆಗಳಿಗೆ ಆರು ಇಂಚಿನ ಬ್ರಿಕ್ಸ್ ಒಳಗಿನ ಗೋಡೆಗಳಿಗೆ ನಾಲ್ಕು ಇಂಚಿನ ಕಾಂಕ್ರೀಟ್ ಸಾಲಿಡ್ ಬ್ರಿಕ್ಸ್ ಗಳನ್ನು ಬಳಸಿ. ಎಲ್ಲಿ ಡೋರ್ ಹಾಗೂ ವಿಂಡೋ ಬರುತ್ತದೆ ಅಲ್ಲಿ ಮಾತ್ರ ಕಟ್ ಲಿಂಟಲ್ ಗಳನ್ನು ಮಾಡಿಸಿ.
ಈ ಸುದ್ದಿ ಓದಿ:-ಹೈ ಟೆಕ್ ರೆಡಿಮೇಡ್ ಮನೆಗಳು ಕಡಿಮೆ ಬೆಲೆಗೆ ಲಭ್ಯ ಸ್ವಂತ ಮನೆ ನಿರ್ಮಿಸುವ ಆಸೆ ಇದ್ದವರು ನೋಡಿ
ಪ್ರೈಮರಿ ಕೋಟೆಡ್ ಡೋರ್ ಗಳನ್ನು ಸೆಲೆಕ್ಟ್ ಮಾಡಿ, ಫ್ರಶ್ ಡೋರ್ ಗಳನ್ನು ಚೂಸ್ ಮಾಡಬಹುದು. ಅಲ್ಯೂಮಿನಿಯಂ ವಿಂಡೋಗಳನ್ನು ವಿಥ್ ಗ್ರಿಲ್ ಸೆಲೆಕ್ಟ್ ಮಾಡಿ. ಬಾತ್ ರೂಂಗೆ ಒಳ್ಳೆ ಗೇಜ್ ಇರುವ PVC ಡೋರ್ ಬಳಸಿ. ಪ್ಯಾರ ಗನ್ ಅಥವಾ ಮಾರ್ವೆಲ್ ಫಿಟ್ಟಿಂಗ್ ಗಳನ್ನು ಸೆಲೆಕ್ಟ್ ಮಾಡಿ. ಕಿಚನ್ ನಲ್ಲಿ ಮಾಡ್ಯುಲರ್ ಕಿಚನ್ ಬದಲು ಕಡಪ ಕಲ್ಲಿನಿಂದ ಸ್ಲಾಬ್ ಮಾಡಿಸಿ.
ಪೇಂಟಿಂಗ್ ವಿಚಾರಕ್ಕೆ ಬಂದರೆ ಪ್ರೈಮರ್ ಗೆ ನಿಮಗೆ ಯಾವ ಕಲರ್ ಬೇಕು ಸ್ಟೇನ್ ಮಾಡಿ ಎರಡು ಕೋರ್ಟ್ ಹೊಡೆದರೆ ಪೈಂಟ್ ಚಾರ್ಜಸ್ ಕೂಡ ಕಡಿಮೆ ಆಗುತ್ತದೆ. 500ltr ಟ್ಯಾಂಕ್ ಸಾಕು, ಎಲೆಕ್ಟ್ರಿಕಲ್ ಫಿಟ್ಟಿಂಗ್ಸ್ HiFi ಯೂಸ್ ಮಾಡಿ. ಈ ರೀತಿ ಮಾಡಿದರೆ ನಿಮ್ಮ ಬಜೆಟ್ ಗೆ ಮನೆ ಆಗುತ್ತದೆ.