ಜಮೀನು ಹೊಂದಿರುವ ಅಥವಾ ಜಮೀನನ್ನು ಖರೀದಿಸಬೇಕು ಎಂದು ಪ್ಲಾನಿಂಗ್ ನಲ್ಲಿರುವ ಪ್ರತಿಯೊಬ್ಬರೂ ಕೂಡ ಆಸ್ತಿಗೆ ಸಂಬಂಧಪಟ್ಟ ಹಾಗೆ ಕೆಲ ಮಾಹಿತಿಗಳನ್ನು ತಿಳಿದುಕೊಂಡಿರಲೇಬೇಕು. ಸದ್ಯದ ಪರಿಸ್ಥಿತಿಗೆ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಆಸ್ತಿಗೆ ಸಂಬಂಧಪಟ್ಟ ಹಾಗೆ ಕಾನೂನಿನ ಪ್ರಕ್ರಿಯೆಗಳು ಯಾವ ರೀತಿಯಲ್ಲಿ ಜರಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಗೊತ್ತಿರಬೇಕು.
ಇಲ್ಲವಾದಲ್ಲಿ ನಮ್ಮ ಕೆಲಸ ಕಾರ್ಯಗಳು ಜಟಿಲವಾಗುವುದರ ಜೊತೆಗೆ ಹೆಚ್ಚು ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಹಾಗಾಗಿ ಇಂದು ಈ ಅಂಕಣದಲ್ಲಿ ಒಂದು ಆಸ್ತಿ ಖರೀದಿಸಿದ ಮೇಲೆ ಅದರ ರಿಜಿಸ್ಟರ್ ಪ್ರಕ್ರಿಯೆ ನಡೆದ ಮೇಲೆ ಆಸ್ತಿ ಸಂಭಂದಿತ ಹಕ್ಕುಪತ್ರಗಳು ನಮ್ಮ ಹೆಸರಿಗೆ ಬದಲಾವಣೆ ಆಗುವ ತನಕ ಏನೆಲ್ಲ ಪ್ರಕ್ರಿಯೆಗಳು ನಡೆಯುತ್ತವೆ? ಯಾವ ಹಂತದಲ್ಲಿ ಯಾವ ರೀತಿಯಾದ ಕ್ರಮ ಕೈಗೊಳ್ಳಲಾಗುತ್ತದೆ? ಎನ್ನುವ ವಿಚಾರದ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರೊಡನೆ ಶೇರ್ ಮಾಡಿ.
ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!
ಆಸ್ತಿ ರಿಜಿಸ್ಟರ್ ಆದ ತಕ್ಷಣ ಆಸ್ತಿ ಪತ್ರಗಳಲ್ಲಿ ಹೆಸರು ಬದಲಾವಣೆಯಾಗಿದೆ ಎಂದು ಅರ್ಥವಲ್ಲ. ಆಸ್ತಿ ಮಾರಾಟ ಮಾಡಿದವರಿಂದ ಖರೀದಿ ಮಾಡಿದವರ ಹೆಸರಿಗೆ ಆಸ್ತಿ ಪತ್ರಗಳಲ್ಲಿ ಹೆಸರು ಬದಲಾವಣೆಯಾಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ, ಇದರ ನಡುವೆ ನಡೆಯುವ ಪ್ರಕ್ರಿಯೆಯನ್ನು ಮ್ಯೂಟೇಷನ್ ಪ್ರಕ್ರಿಯೆ ಎಂದು ಕರೆಯುತ್ತಾರೆ ಇದು ನಾಲ್ಕು ಹಂತಗಳಲ್ಲಿ ನಡೆಯುತ್ತದೆ.
1. ಆಸ್ತಿ ನೋಂದಣಿಯಾದ ಎಲ್ಲಾ ಕಡತಗಳು ಭೂಮಿ ಕೇಂದ್ರಕ್ಕೆ ರವಾನೆ ಆಗುತ್ತದೆ
2. ಭೂಮಿ ಕೇಂದ್ರದಿಂದ ಕಡತಗಳನ್ನು ನೇರವಾಗಿ ರಾಜಸ್ವ ನಿರೀಕ್ಷಕರು ಸ್ವೀಕಾರ ಮಾಡುತ್ತಾರೆ.
ಈ ಸುದ್ದಿ ಓದಿ:-ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
3. ಗ್ರಾಮ ಲೆಕ್ಕಾಧಿಕಾರಿ (Village Accountant) ಜೆ ಫಾರಂ (J Form) ಪ್ರಕ್ರಿಯೆ ನಡೆಯುತ್ತದೆ. (ತಮ್ಮ ವ್ಯಾಪ್ತಿಗೆ ಬರುವ ಈ ರಿಜಿಸ್ಟರ್ ನ ದಾಖಲೆಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಆಸ್ತಿ ವರ್ಗಾವಣೆ ಕುರಿತು ಯಾವುದಾದರೂ ತಕರಾರು ಇದ್ದರೆ 15 ದಿನಗಳ ವರೆಗೆ ಅವರಿಗೆ ತಕರಾರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಒಂದು ವೇಳೆ ಈ ಸಮಯದಲ್ಲಿ ಯಾವುದೇ ತಕರಾರು ದಾಖಲಾಗದೆ ಇದ್ದರೆ ಖರೀದಿದಾರರು ಹಾಗೂ ಮಾರಾಟಗಾರರಿಂದ ಸಹಿ ಹಾಕಿಸಿಕೊಂಡು ಕಡತವನ್ನು ರೆವಿನ್ ಇನ್ಸ್ಪೆಕ್ಟರ್ ಲಾಗಿನ್ ಗೆ ವರ್ಗಾಯಿಸುವುದಕ್ಕೆ J form ಪ್ರಕ್ರಿಯೆ ಎನ್ನುತ್ತಾರೆ).
4. ವಿಲೇಜ್ ಅಕೌಂಟೆಂಟ್ ಅವರ ಕಡೆಯಿಂದ ಜೆ ಫಾರಂ ಪ್ರಕ್ರಿಯೆ ನಡೆದ ಮೇಲೆ ಅದನ್ನು ರೆವೆನ್ಯೂ ಇನ್ಸ್ಪೆಕ್ಟರ್ (Revenue Inspector) ಲಾಗಿನ್ ಗೆ ಕಳುಹಿಸಿಕೊಡುತ್ತಾರೆ. RI ಅವರ ಲಾಗಿನ್ ಗೆ ಹೋದ ಕಡತಗಳಲ್ಲಿ ಯಾವುದೇ ತಕರಾರು ಇಲ್ಲದೆ ಇದ್ದರೆ RI ಕಡತಗಳನ್ನು ಪರಿಶೀಲಿಸಿ, ಅದನ್ನು ಸಕ್ರಿಯಗೊಳಿಸಿ ಬೆರಳಚ್ಚು ಕೊಟ್ಟರೆ ತಕ್ಷಣವೇ ಹಕ್ಕು ಬದಲಾವಣೆ ಪ್ರಕ್ರಿಯೆ ಮುಗಿಯುತ್ತದೆ.
ಈ ಸುದ್ದಿ ಓದಿ:-ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!
ಇಷ್ಟೆಲ್ಲ ಪ್ರಕ್ರಿಯೆಗಳು ನಡೆಯಲು ಕನಿಷ್ಠ 45 ದಿನಗಳ ಸಮಯ ತೆಗೆದುಕೊಳ್ಳಬಹುದು ಕೆಲವೊಂದು ಪ್ರಕರಣಗಳಲ್ಲಿ ಇನ್ನೂ ಹೆಚ್ಚಿನ ಸಮಯ ಆಗಬಹುದು. ಒಂದು ವೇಳೆ ತರಕಾರು ಏನಾದರೂ ಇದ್ದರೆ ಇಲ್ಲಿಂದ ಶಿರಸ್ಥೇದಾರರ ಲಾಗಿನ್ ಗೆ ಹೋಗಿ ವಿವಾದಾತ್ಮಕ ಪ್ರಕರಣ ಎಂದು ದಾಖಲೆ ಮಾಡಿ ಮುಂದಿನ ಕ್ರಮಕ್ಕಾಗಿ ತಹಶೀಲ್ದಾರ್ ಕಛೇರಿಗೆ ಕಡತಗಳನ್ನು ಕಳುಹಿಸಿ ಕೊಡಲಾಗುತ್ತದೆ. ಒಂದು ವೇಳೆ ಈ ಮೇಲೆ ತಿಳಿಸಿದಂತೆ ಯಾವುದೇ ತಕರಾರು ಇಲ್ಲದೆ ಇತ್ಯರ್ಥವಾದರೆ 45 ದಿನಗಳ ನಂತರ ಖರೀದಿ ಮಾಡಿದ ವ್ಯಕ್ತಿಯ ಹೆಸರಿನಲ್ಲಿ ಜಮೀನಿನ ಪಹಣಿ ಸೇರಿದಂತೆ ಎಲ್ಲಾ ದಾಖಲೆಗಳು ಸಿಗುತ್ತವೆ.