ಜೀವನದಲ್ಲಿ ಒಂದು ಹಂತಕ್ಕೆ ಬೆಳೆದ ನಂತರ ಉದ್ಯೋಗ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರಬೇಕು. ದುಡಿಮೆ ಮತ್ತು ತಾಳ್ಮೆ ಎಲ್ಲ ಸಮಸ್ಯೆಗೂ ಪರಿಹಾರ. ಉದ್ಯೋಗವು ಆ ವ್ಯಕ್ತಿಯ ಕುಟುಂಬದ ಪರಿಸ್ಥಿತಿ ಉತ್ತಮಗೊಳಿಸುವುದು ಮಾತ್ರವಲ್ಲದೆ ದೇಶದ ಆದಾಯದ ಮೇಲೆ ಕೂಡ ಪರಿಣಾತ್ಮಕವಾಗಿ ಪ್ರಭಾವ ಬೀರುತ್ತದೆ. ಆದರೆ ದುಡಿಮೆ ಒಂದೇ ಸಾಲುವುದಿಲ್ಲ.
ದುಡಿದ ಹಣವನ್ನು ಸರಿಯಾದ ರೀತಿಯಲ್ಲಿ ಉಳಿತಾಯ ಮಾಡುವ, ಉಳಿತಾಯದ ಉದ್ದೇಶದಿಂದ ಹೂಡಿಕೆ ಮಾಡುವ ಜಾಣತನ ಕೂಡ ಇರಬೇಕು. ಹೀಗೆ ದುಡಿಮೆ ಇದೆ ಎನ್ನುವ ಧೈರ್ಯದಿಂದ ಸಾಲಗಾರರಾದ ಉದಾಹರಣೆಯು ಕೂಡ ಕಣ್ಣೆದುರಿಗಿದೆ. ಹಾಗಾಗಿ ಇಬ್ಬರು ಯುವಕರ ಉದಾಹರಣೆಯೊಂದಿಗೆ ಉಳಿತಾಯ ಯಾಕೆ ಮುಖ್ಯ ಎನ್ನುವ ವಿಷಯವನ್ನು ಸುಲಭವಾಗಿ ಅರ್ಥೈಸುತಿದ್ದೇವೆ.
ರಾಹುಲ್ ಹಾಗೂ ನರೇಶ್ ಎನ್ನುವ ಇಬ್ಬರು ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಒಂದೇ ವಯಸ್ಸಿನಲ್ಲಿ 2004ರಲ್ಲಿ IT ಉದ್ಯೋಗಕ್ಕೆ ಸೇರುತ್ತಾರೆ. ಆಗ ಅವರ ಸ್ಯಾಲರಿ ರೂ.18,000 ಇರುತ್ತದೆ. ಕೆಲಸಕ್ಕೆ ಸೇರಿದ ತಕ್ಷಣವೇ ನೆನಪಿಗಾಗಿ ಏನಾದರೂ ತೆಗೆದುಕೊಳ್ಳಬೇಕು ಎಂದು ರೂ.5000 ಕಟ್ಟುವಂತೆ ಕಮಿಟ್ಮೆಂಟ್ ಮಾಡಿಕೊಂಡು ರಾಹುಲ್ ಲ್ಯಾಪ್ಟಾಪ್ ಖರೀದಿಸುತ್ತಾನೆ.
ಈ ಸುದ್ದಿ ಓದಿ:- ರಾಜ್ಯ ಸರ್ಕಾರದಿಂದ ಮತ್ತೊಂದು ಸೇವೆ.! ಇನ್ಮುಂದೆ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ನೀಡಲು ಮನೆ ಬಾಗಿಲಿಗೆ ಬರಲಿದ್ದಾರೆ ವೈದ್ಯರು.!
ಇದೆ ಸಮಯದಲ್ಲಿ ನರೇಶ್ Nippon growth fund ನಲ್ಲಿ ಹೂಡಿಕೆ ಮಾಡಲು ಆರಂಭಿಸುತ್ತಾನೆ. ಎರಡು ವರ್ಷ ಕಳೆಯುತ್ತದೆ. 2006ರಲ್ಲಿ ಇಬ್ಬರ ಸಂಬಳ ರೂ.30,000 ಆಗಿರುತ್ತದೆ. ಈಗ ಮತ್ತೊಮ್ಮೆ ರಾಹುಲ್ ತಾನು ಒಂದು ಬೈಕ್ ಖರೀದಿಸಬೇಕು ಎಂದುಕೊಂಡು ರೂ.10,000 EMI ಗೆ ಒಂದು ಬೈಕ್ ಖರೀದಿಸುತ್ತಾನೆ ಆದರೆ ನರೇಶ್ ಗೆ ಅದು ಇಷ್ಟ ಇರುವುದಿಲ್ಲ ಆತ SIP ನಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುತ್ತಾನೆ.
ಅಲ್ಲಿಗೆ ರಾಹುಲ್ ಹೆಸರಿಗೆ 2.5 ಲಕ್ಷ ಲೋನ್ ಮತ್ತು ತಿಂಗಳಿಗೆ ರೂ.27,000 EMI ಹೊರೆ ಬೀಳುತ್ತದೆ. ನರೇಶ್ ಅಲ್ಲಿಯವರೆಗೂ 7.5 ಲಕ್ಷ ಉಳಿಸಿರುತ್ತಾರೆ ತಿಂಗಳಿಗೆ ರೂ.30,000 ಉಳಿತಾಯವಾಗುತ್ತಿರುತ್ತದೆ. ಇನ್ನೆರಡು ವರ್ಷದ ನಂತರ 2008ರಲ್ಲಿ ಇಬ್ಬರು ಮದುವೆಯಾಗಲು ನಿರ್ಧರಿಸುತ್ತಾರೆ ರಾಹುಲ್ ಡೆಸ್ಟಿನೇಷನ್ ಮ್ಯಾರೇಜ್ ಆಗಬೇಕು ಎಂದು 10ಲಕ್ಷ ಸಾಲ ಮಾಡಿ ಮದುವೆಯಾಗುತ್ತಾರೆ.
ಈಗ ಅವರಿಗೆ ಒಟ್ಟು 12.5 ಲಕ್ಷ ಸಾಲ ಆಗಿರುತ್ತದೆ, ನರೇಶ್ ತನ ಉಳಿತಾಯದ ಅರ್ಥ ಭಾಗ ಮದುವೆಗೆ ಖರ್ಚು ಮಾಡಿ 3.5 ಲಕ್ಷ ಉಳಿಸಿರುತ್ತಾರೆ. ಮತ್ತೆರಡು ವರ್ಷ ಬಿಟ್ಟು 2010ರಲ್ಲಿ ಇಬ್ಬರ ಸ್ಯಾಲರಿ ರೂ.80,000 ಆಗಿರುತ್ತದೆ. ಈಗ ರಾಹುಲ್ ಕಾರ್ ಖರೀದಿಸಿ ಮತ್ತೊಂದು EMI ಕಮಿಟ್ ಮೆಂಟ್ ಮಾಡಿಕೊಳ್ಳುತ್ತಾರೆ, ಆದರೆ ನರೇಶ್ ಮತ್ತೊಂದು ಇದನ್ನು ವಿರೋಧಿಸಿ ಮತ್ತೊಂದು ಕಡೆ ಅದೇ EMI ಮೊತ್ತವನ್ನು ಉಳಿತಾಯ ಮಾಡಲು ಆರಂಭಿಸುತ್ತಾರೆ.
ಈ ಸುದ್ದಿ ಓದಿ:- ಬ್ಯಾಂಕ್ ಅಕೌಂಟ್ ನಲ್ಲಿ ಇನ್ಮೇಲೆ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ತೆರಿಗೆ ಕಟ್ಟಬೇಕು.! ಇಂದಿನಿಂದ ಹೊಸ ರೂಲ್ಸ್ ಜಾರಿ
ಇನ್ನೆರಡು ವರ್ಷ ಕಳೆದು 2012ರಲ್ಲಿ ರಾಹುಲ್ ಅಪಾರ್ಟ್ಮೆಂಟ್ ಖರೀದಿಸುತ್ತಾರೆ ಈಗ ಅವರಿಬ್ಬರ ಸ್ಯಾಲರಿ 1 ಲಕ್ಷ ಆಗಿರುತ್ತದೆ. ಆದರೆ 80%ಕಿಂತ ಹೆಚ್ಚು ಭಾಗ ರಾಹುಲ್ ಸಾಲವನ್ನೇ ಕಟ್ಟ ಬೇಕಾಗಿರುತ್ತದೆ ಆದರೆ ನರೇಶ್ ಮಾತ್ರ ಬುದ್ಧಿವಂತನಾಗಿ ತಾನು ಹೂಡಿಕೆ ಮಾಡಿದ್ದ ಹಣಕ್ಕೆ ರಿಟರ್ನ್ಸ್ ಪಡೆಯುತ್ತಿರುತ್ತಾರೆ. ಈಗ ನರೇಶ್ ಗೆ ಸಂಬಳ ಒಂದು ಲಕ್ಷದ ಜೊತೆಗೆ ಇನ್ನೊಂದು ಆದಾಯದ ಮೂಲ ಇರುತ್ತದೆ.
ಈಗ ಆದ್ದರಿಂದ ಬಂದ ಲಾಭದಿಂದ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಾರೆ. ಮೊದಲಿಗೆ ಕೋಟಿ ಹಣ ದುಡಿಯುವುದು ಕಷ್ಟ ಅದು ರೀಚ್ ಆದ ಮೇಲೆ ಹೆಚ್ಚು ಹೆಚ್ಚು ಹಣವನ್ನು ಆ ಕೋಟಿ ಹಣವೇ ದುಡಿಯುತ್ತದೆ. ಇದರ ಬಗ್ಗೆ ಇನ್ನು ಹೆಚ್ಚಿನ ಡೀಟೇಲ್ಸ್ ಪಡೆದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.