ಸಾಮಾನ್ಯವಾಗಿ ಹಳ್ಳಿಗಳಲ್ಲಿ ಜನರು ಮಾತನಾಡುವಾಗ ಸರ್ಕಾರಿ ಭೂಮಿ ಒತ್ತುವರಿಯಾಗಿತ್ತಂತೆ ಅಥವಾ ಇದು ಸರ್ಕಾರಿ ಭೂಮಿ ಎಂದು ಮಾತನಾಡುವದನ್ನು ಕೇಳಿಸಿಕೊಂಡಿರಬಹುದು. ಹೀಗಾಗಿ ಅನೇಕರಿಗೆ ನಮ್ಮ ಗ್ರಾಮದಲ್ಲಿ ಸರ್ಕಾರಿ ಜಮೀನು ನಮ್ಮ ಜಮೀನುಗಳ ಮಧ್ಯೆ ಹೇಗೆ ಬರುತ್ತದೆ ಎಂದು ಗೊಂದಲಗಳಾಗಿರುತ್ತವೆ.
ಇದಕ್ಕೆ ಸ್ಪಷ್ಟತೆ ಮತ್ತು ಹೇಗೆ ಇದು ಸರ್ಕಾರದ ಭೂಮಿ ಆಗುತ್ತದೆ ಮತ್ತು ಇದನ್ನು ಗುರುತಿಸುವುದು ಹೇಗೆ ನಮ್ಮ ಗ್ರಾಮದಲ್ಲಿ ಈ ಸರ್ಕಾಮಿ ಭೂಮಿ ಎಷ್ಟಿರಬಹುದು ಎಂದು ತಿಳಿದುಕೊಳ್ಳುವುದು ಹೇಗೆ? ಈ ಕುರಿತ ಎಲ್ಲಾ ಉಪಯುಕ್ತ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲು ಇಚ್ಛಿಸುತ್ತಿದ್ದೇವೆ.
ಸಮೀಕ್ಷೆಗಳ ಪ್ರಕಾರ ಬಗ್ಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಎಕರೆ ಸರ್ಕಾರಿ ಜಮೀನಿದೆ. ಈ ಜಮೀನುಗಳನ್ನು ಗೋಮಾಳ, ಗೈರಾಣ, ಪರಂಪೋಕ, ಭೂ ಪರಿವರ್ತನ ಜಮೀನುಗಳು ಎಂಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಒಂದು ಲೆಕ್ಕದಲ್ಲಿ ಹೇಳಬೇಕು ಎಂದರೆ ಎಲ್ಲಾ ಜಮೀನುಗಳು ಕೂಡ ಸರ್ಕಾರದ್ದೇ ಎನ್ನಬಹುದು.
ಈ ಸುದ್ದಿ ಓದಿ:- ಅನ್ನ ಭಾಗ್ಯ ಅಕ್ಕಿ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!
ಯಾವುದೇ ಜಮೀನಿನ ಮೇಲಿನ ಹಕ್ಕುಗಳು ಮಾತ್ರ ನಮ್ಮದಾಗಿರುತ್ತವೆ, ಅದರಾಚೆಗಿನ ಎಲ್ಲಾ ಸಂಪೂರ್ಣ ಅಧಿಕಾರವು ಸರ್ಕಾರಕ್ಕೆ ಆಗಿರುತ್ತದೆ. ಇದನ್ನು ಇನ್ನು ಸ್ಪಷ್ಟವಾಗಿ ಹೇಳಬೇಕು ಎಂದರೆ ಉದಾಹರಣೆಗೆ ಒಬ್ಬ ರೈತ ತನ್ನ ಹೆಸರಿನಲ್ಲಿ ಇರುವ ಜಮೀನಿನಲ್ಲಿ ಉಳಿಮೆ ಮಾಡುತ್ತಿರುತ್ತಾನೆ, ಉಳುವಾಗ ಆತನಿಗೆ ಬಂಗಾರದ ಅಥವಾ ಇನ್ಯಾವುದೇ ಬೆಲೆ ಬಾಳುವ ಅದಿರಿನ ಗಣಿಗಳು ಅಥವಾ ತೈಲ ಉತ್ಖನ್ನಗಳು ದೊರೆತಾಗ ತಕ್ಷಣವೇ ಸರ್ಕಾರವು ಹಕ್ಕು ಘೋಷಣೆ ಮಾಡಿ ವಶಪಡಿಸಿಕೊಳ್ಳುತ್ತದೆ.
ಹೀಗಾಗಿ ಜಮೀನಿನ ಮೇಲ್ಭಾಗ ಮಾತ್ರ ರೈತನಿಗೆ ಸೇರಿದ್ದು ಒಳಭಾಗದ ಸಂಪೂರ್ಣ ಸಂಪನ್ಮೂಲಗಳು ಕೂಡ ಸರ್ಕಾರಕ್ಕೆ ಸೇರಿದ್ದು ಎನ್ನಬಹುದು. ನಿಮ್ಮ ಗ್ರಾಮದಲ್ಲಿರುವ ಸರ್ಕಾರಿ ಜಾಗದ ಸಂಪೂರ್ಣ ಮಾಹಿತಿಯು ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಯಲ್ಲಿ ದೊರೆಯುತ್ತದೆ, ನಿಮ್ಮ ತಾಲೂಕಿನ ಸರ್ವೆ ಕಚೇರಿಯಲ್ಲಿ ಕೂಡ ಸಿಗುತ್ತದೆ.
ನಿರ್ದಿಷ್ಟ ಕಾರಣಗಳೊಂದಿಗೆ ಅರ್ಜಿ ಸಲ್ಲಿಸಿ ಸರ್ಕಾರಿ ಜಮೀನಿಗೆ ಸಂಬಂಧಪಟ್ಟ ನಕ್ಷೆ, ಟಿಪ್ಪಣಿ, ಪಹಣಿ ಇತ್ಯಾದಿ ದಾಖಲೆಗಳ ಪ್ರತಿಗಳನ್ನು ಪಡೆಯಬಹುದು. ನಿಮ್ಮ ಮೊಬೈಲ್ ನಲ್ಲಿ DISHAANK APP ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಕೂಡ ಪಡೆದುಕೊಳ್ಳಬಹುದು ಈ ಸರ್ಕಾರಿ ಜಾಗಗಳ ಬಗ್ಗೆ ಕಾಯ್ದೆ ಕೂಡ ತರಲಾಗಿದೆ.
ಈ ಸುದ್ದಿ ಓದಿ:- LPG ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ, ಸಿಲಿಂಡರ್ ಬೆಲೆ ಇಳಿಕೆ.!
ಈ ಮೇಲೆ ತಿಳಿಸಿದಂತೆ 60 ಲಕ್ಷ ಎಕರೆ ಸರ್ಕಾರಿ ಭೂಮಿ ಆಗಿದ್ದರು ಇದರಲ್ಲಿ 13 ಲಕ್ಷಕ್ಕಿಂತಲೂ ಹೆಚ್ಚು ಎಕರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಸರ್ಕಾರದ ಆಸ್ತಿಯನ್ನು ರಕ್ಷಿಸುವ ಸಲುವಾಗಿಯೇ ಕಾಯ್ದೆಗಳನ್ನು ಮಾಡಿ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮವನ್ನು ಕೂಡ ಸ್ಥಾಪನೆ ಮಾಡಿದೆ.
ಪ್ರತಿ ತಿಂಗಳೂ ಕೂಡ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಈ ರೀತಿ ಅಕ್ರಮವಾಗಿ ಒತ್ತುವರಿಯಾಗಿರುವ ಜಮೀನುಗಳನ್ನು ತೆರವುಗೊಳಿಸಬೇಕು ಎಂದು ಕಾನೂನು ತಂದಿದೆ. ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಇದಕ್ಕೆಂದೇ ಒಂದು ವಿಶೇಷ ನ್ಯಾಯಾಲಯವು ಕೂಡ ಸ್ಥಾಪನೆಯಾಗಿದೆ.
ಹೀಗಿದ್ದರೂ ಕೂಡ ಒತ್ತುವರಿ ತೆರವು ಗೊಳಿಸಲು ಸಾಧ್ಯವಾಗದ ಕಾರಣ ಈ ಕಾಯ್ದೆಗೆ ತಿದ್ದುಪಡಿ ತಂದು ಇನ್ನಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲು ವಿಧಾನ ಮಂಡಲ ಚರ್ಚೆಯಾಗುತ್ತಿದೆ. ಈ ಕಾಯ್ದೆ ತಿದ್ದುಪಡಿಯಾದರೆ ಸರ್ಕಾರಿ ಜಮೀನಿನ ಸಂಪೂರ್ಣ ಚಿತ್ರಣವು ವಿಸ್ತೀರ್ಣದ ಸಮೇತ ಪ್ರತಿ ಗ್ರಾಮದ ಲೆಕ್ಕಾಚಾರವಾಗಿ ಸಿಗುತ್ತದೆ.
ಈ ಸುದ್ದಿ ಓದಿ:- ತಿಂಗಳಿಗೆ 3 ಬಾರಿ ಜೇನುತುಪ್ಪ, ಒಂದು ಪೆಟ್ಟಿಗೆಯಲ್ಲಿ 15KG ಜೇನು, ಜೇನು ಸಾಕಾಣಿಕೆ ಮಾಡಿ ತಿಂಗಳಿಗೆ 4 ಲಕ್ಷ ಆದಾಯ ಗಳಿಸುತ್ತಿರುವ ಯುವಕ
ಕೃಷಿ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವಿಕೆ ಸಾಧ್ಯವಾಗುತ್ತದೆ, ಇದರಿಂದ ಸರ್ಕಾರದ ಆದಾಯ ಹೆಚ್ಚಾಗುತ್ತದೆ, ಸರ್ಕಾರ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬಹುದು ಎಂಬ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಆದರೆ ಈ ಬಗ್ಗೆ ಮುಂದೇನಾಗುತ್ತದೆ ಕಾದು ನೋಡೋಣ.!