ಸೇಲ್ ಡಿಡ್ (Sale deed) ಹಾಗೂ ಡೀಡ್ ಅಗ್ರಿಮೆಂಟ್ (deed agriment) ನಡುವೆ ಅನೇಕರು ಗೊಂದಲಕ್ಕೊಳಗಾಗುತ್ತಾರೆ. ಸೇಲ್ ಡೀಡ್ ಎಂದರೆ ಮಾರಾಟ ಪತ್ರ ಸೇಲ್ ಅಗ್ರಿಮೆಂಟ್ ಎಂದರೆ ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ಮಾರಾಟಕ್ಕೂ ಮುನ್ನ ಆಗುವ ಒಂದು ಕರಾರುಪತ್ರ ಎಂದು ಹೇಳಬಹುದು.
ಈ ಅಗ್ರಿಮೆಂಟ್ ನಲ್ಲಿ ಅಡ್ವಾನ್ಸ್ ತೆಗೆದುಕೊಂಡಿರುವುದು, ಯಾವ ರೂಪದಲ್ಲಿ ಹಣ ತೆಗೆದುಕೊಂಡಿದ್ದಾರೆ ಎನ್ನುವುದು, ಆಸ್ತಿಗೆ ವಾರಸುದಾರರು ಯಾರಾಗಿದ್ದಾರೆ, ಅವರ ವಿವರಗಳು, ಆಸ್ತಿಯ ವಿವರ ಮತ್ತು ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಎಲ್ಲರ ಸಹಿ ಜೊತೆಗೆ ಭವಿಷ್ಯಕ್ಕೆ ಸಂಬಂಧಿಸಿದ ಹಾಗೆ ಇರುವ ಕಂಡಿಷನ್ ಗಳು, ಯಾವ ದಿನಾಂಕದ ಒಳಗಡೆ ಕ್ರಯ ಮಾಡಿಕೊಡುತ್ತಾರೆ.
ಎನ್ನುವ ಮಾಹಿತಿ ಸೇರಿದಂತೆ ಒಂದು ವೇಳೆ ಮಾರಾಟಗಾರರು ಈ ಪ್ರಕ್ರಿಯೆ ಪೂರ್ತಿಗೊಳಿಸಿದೆ ಇದ್ದರೆ ನಂತರ ತೆಗೆದುಕೊಳ್ಳಬಹುದಾದ ಕ್ರಮಗಳೇನು ಎನ್ನುವುದನ್ನು ಬರೆದು ಸಹಿಯನ್ನು ಮಾಡಿ ಅಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ಸೆಲ್ ಅಗ್ರಿಮೆಂಟ್ ನಿಂದ ಆಸ್ತಿ ಹಕ್ಕು ವರ್ಗಾವಣೆ ಆಗುವುದಿಲ್ಲ ಆದರೆ ನಿಮಗೆ ಆಸ್ತಿ ಕೊಡುತ್ತೇನೆ ಎಂದು ಬರೆದುಕೊಡುವ ಒಪ್ಪಂದವಾಗಿರುತ್ತದೆ.
ಈ ರೀತಿ ಅಗ್ರಿಮೆಂಟ್ ಆದಮೇಲೆ ಏನೇ ತೊಡಕುಗಳು ಬಂದರೂ ಕೋರ್ಟ್ ಗೆ ಹೋಗಿ ಪರಿಹರಿಸಿಕೊಳ್ಳಬಹುದು. ಹಾಗಾಗಿ ಅಗ್ರಿ ಮೆಂಟ್ ಗೆ ಸಹಿ ಎಲ್ಲ ವಿಚಾರಗಳನ್ನು ಕುಲಂಕುಷವಾಗಿ ನೋಡಿ ಸಹಿ ಮಾಡಬೇಕು. ಕ್ರಯ ಪತ್ರ ಎಂದರೆ ಸಂಬಂಧಪಟ್ಟ ಸದರಿ ಆಸ್ತಿಯ ಹಕ್ಕನ್ನು ಹಣ ತೆಗೆದುಕೊಂಡು ಹಣ ನೀಡಿರುವ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಿಕೊಡುವುದು ಆಥವಾ ಕುಟುಂಬದೊಳಗೂ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗಿರಬಹುದು.
ರಿಜಿಸ್ಟ್ರೇಷನ್ ಆಕ್ಟ್ 1908 ರ ಅಡಿಯಲ್ಲಿ ಈ ಕ್ರಯ ಪತ್ರವನ್ನು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮಾಡಿಸುವುದು ಕಡ್ಡಾಯ. ಸೇಲ್ ಡೀಡ್ ನಲ್ಲಿ ಕೂಡ ಆಸ್ತಿ ಮಾರಾಟ ಮಾಡುವವರ ಖರೀದಿ ಮಾಡುವವರ ಹೆಸರು ಮತ್ತು ನಿಖರವಾದ ವಿಳಾಸ ಹಾಗೂ ಆಸ್ತಿಗೆ ಸಂಬಂಧಪಟ್ಟ ಪೂರ್ತಿ ವಿವರ ಇರಬೇಕು.
ಮಾರಾಟಗಾರನಿಗೆ ಆಸ್ತಿ ಯಾವ ಮೂಲದಿಂದ ಬಂದಿದೆ. ಪಿತ್ರಾರ್ಜಿತ ಆಸ್ತಿಯೋ ಅಥವಾ ಸ್ವಯಾರ್ಜಿತವೋ, ರಿಜಿಸ್ಟರ್ ಯಾವ ರಿಜಿಸ್ಟರ್ ಕಚೇರಿಯಲ್ಲಿ ಆಗಿದೆ ಇದನ್ನೆಲ್ಲವನ್ನು ಕೂಡ ಕ್ರಯಪತ್ರದಲ್ಲಿ ಕಾಣಿಸಬೇಕು. ಮಾರಾಟಗಾರರು ಹಾಗೂ ಕೊಂಡುಕೊಳ್ಳುವವರ ಹಾಗೂ ಸಾಕ್ಷಿಗಳ ಸಹಿ ಇರಬೇಕು.
ಮುಖ್ಯವಾಗಿ ಆಸ್ತಿಯ ಬೆಲೆ ಎಷ್ಟಿದೆ ಎನ್ನುವುದನ್ನು ಕೂಡ ನಮೂದಿಸಿರಬೇಕು ಸೇಲ್ ಡೀಡ್ ಆಸ್ತಿ ವರ್ಗಾವಣೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಆದರೆ ಕೆಲವರಿಗೆ ಸೇಲ್ ಅಗ್ರಿಮೆಂಟ್ ಎಂದು ಹೇಳಿ ಸೇಲ್ ಡಿಡ್ ಮಾಡಿಸಿ ಸಹಿ ಪಡೆದುಕೊಂಡು ಮೋ’ಸ ಮಾಡಿರುತ್ತಾರೆ.
ಇನ್ನು ಕೆಲವು ಪ್ರಕರಣಗಳಲ್ಲಿ ಈ ರೀತಿ ಮೋ’ಸ ಆಗಿದೆ ಎಂದು ಹೇಳಿ ಸೇಲ್ ಡೀಡ್ ಕ್ಯಾನ್ಸಲ್ ಮಾಡುವುದಕ್ಕೂ ಕೂಡ ಅರ್ಜಿ ಹಾಕಿರುತ್ತಾರೆ, ಆದರೆ ಈ ಪ್ರಕರಣಗಳಲ್ಲಿ ಖರೀದಿದಾರನಿಗೆ ಮೋ’ಸವಾಗಿರಬಹುದು. ಅದೇನೆ ಇದ್ದರೂ ಈ ರೀತಿ ಸೇಲ್ ಡೀಡ್ ಕ್ಯಾನ್ಸಲ್ ಮಾಡಬೇಕು ಎಂದರೆ ಕನಿಷ್ಠ ಮೂರು ವರ್ಷದ ಒಳಗಡೆ ನ್ಯಾಯಾಲಯದ ಗಮನಕ್ಕೆ ತರಬೇಕು.
ಈ ರೀತಿ ಮೋಸ ಮಾಡಿ ಕ್ರಯಾಪತ್ರ ಮಾಡಿಸಿಕೊಂಡಿದ್ದಾರೆ ಎಂದು ಹೇಳಿ ಕೇಸ್ ಹಾಕುವುದು ಸುಲಭವಲ್ಲ. ಯಾಕೆಂದರೆ ಎರಡು ಕಡೆಯವರು ಇರುತ್ತಾರೆ, ಸಾಕ್ಷಿಗಳು ಇರುತ್ತಾರೆ, ಅಧಿಕಾರಿಗಳು ಇರುತ್ತಾರೆ ಎಲ್ಲರ ಕಣ್ ತಪ್ಪಿಸಿ ಮೋ’ಸವಾಗಿದೆ ಎಂದು ಹೇಳುವುದು.
ಕೆಲವೊಮ್ಮೆ ನೋಂದಣಿ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದೆ ಶಾಮಿಲಾಗಿದ್ದರೆ ಅವರನ್ನು ಎರಡನೇ ಪಾರ್ಟಿ ಮಾಡಿ ಕೇಸ್ ಹಾಕಬಹುದು. ಯಾವಾಗ ಮೋ’ಸ ಆಯ್ತು ಯಾವಾಗ ತಿಳಿಯಿತು ಅದಕ್ಕೂ ಮುನ್ನ ಖರೀದಿಸಿದ ವ್ಯಕ್ತಿ ಪರಿಚಯ ಹೇಗಾಯಿತು ನ್ಯಾಯಲಯಕ್ಕೆ ದಾಖಲೆ ಹಾಗೂ ವಿವರ ನೀಡಬೇಕಾಗುತ್ತದೆ.
ಸುಳ್ಳು ಹೇಳಿ ಅಥವಾ ಹೆದರಿಸಿ ಬೆದರಿಕೆ ಹಾಕಿ ಹೇಗೆ ನಡೆಯಿತು ಎಂದು ಕೋರ್ಟ್ ಗೆ ಸರಿಯಾಗಿ ತಿಳಿಸಿದಾಗ ನಿಮ್ಮ ಕೇಸ್ ಮೇಲೆ ಕೋರ್ಟ್ ಗೆ ನಂಬಿಕೆ ಬರುತ್ತದೆ. ಸೇಲ್ ಡೀಡ್ ಕ್ಯಾನ್ಸಲ್ ಮಾಡುವುದು ಸುಲಭವಲ್ಲ ಸರಿಯಾದ ದಾಖಲೆ ಹಾಗೂ ಸಾಕ್ಷಿಗಳು ಬೇಕಾಗುತ್ತದೆ ಎನ್ನುವುದು ಗೊತ್ತಿರಲಿ. ಈ ವಿಚಾರದ ಕುರಿತು ಇನ್ನಷ್ಟು ವಿವರಕ್ಕಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.