Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ.? ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

Posted on January 22, 2024 By Rishi The Power No Comments on ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ.? ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

 

WhatsApp Group Join Now
Telegram Group Join Now

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹಣಕಾಸಿನ ಅಗತ್ಯತೆ ಬರುತ್ತದೆ. ಎಲ್ಲ ಸಮಯದಲ್ಲೂ ನಮ್ಮ ಉಳಿತಾಯದ ಹಣ ಸಾಲದೆ ಇರಬಹುದು, ಇಂತಹ ಪರಿಸ್ಥಿತಿಯಲ್ಲಿ ಸಾಲ ಪಡೆದುಕೊಂಡು ನಮ್ಮ ಕೆಲಸಗಳನ್ನು ಮುಂದುವರಿಸಬೇಕಾಗುತ್ತದೆ. ಈ ವಿಷಯ ಬಂದಾಗ ಹೆಚ್ಚಿನ ಜನರು ಬ್ಯಾಂಕ್ ಗಳಲ್ಲಿ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ (Loan) ಪಡೆದುಕೊಳ್ಳಲು ಮುಂದಾಗುತ್ತಾರೆ.

ನಾವು ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳಬೇಕು ಎಂದರೆ ಅದಕ್ಕೂ ಕೂಡ ನಮ್ಮ ಆಸ್ತಿ ಪತ್ರಗಳು ಅಥವಾ ಬೆಲೆಬಾಳುವ ಒಡವೆಗಳನ್ನು ಅಡಮಾನ ಇಡಬೇಕಾಗುತ್ತದೆ. ಈ ರೀತಿ ಯಾವುದೇ ಆಸ್ತಿ ಇಲ್ಲದಿದ್ದರೂ ಸಾಲ ಪಡೆದುಕೊಳ್ಳಲು ಒಂದು ಆಪ್ಷನ್ ಇದೆ, ಆದರೆ ಇದಕ್ಕೆ ನಿಮ್ಮ ಸಿಬಿಲ್ ಸ್ಕೋರ್ (Cibil Score) ಉತ್ತಮವಾಗಿರಬೇಕು. ಸಿಬಿಲ್ ಸ್ಕೋರ್ ಚೆನ್ನಾಗಿರುವವರಿಗೆ ಶೀಘ್ರವಾಗಿ ಪರ್ಸನಲ್ ಲೋನ್ ಗಳು ಸಿಗುತ್ತವೆ.

ಈ ಸುದ್ದಿ ನೋಡಿ:- ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಸಾಕು 44,995 ಬಡ್ಡಿ ಸಿಗುತ್ತೆ.! ಪೋಸ್ಟ್ ಆಫೀಸ್ ನಾ ವಿಶೇಷ ಯೋಜನೆ ಇದು.!

ಸಿಬಿಲ್ ಸ್ಕೋರ್ ಎಂದರೆ ಒಬ್ಬ ವ್ಯಕ್ತಿಯ / ಕಂಪನಿಯ ಹಣಕಾಸಿನ ವ್ಯವಹಾರದ ಪಾರದರ್ಶಕತೆ (transparency) ಎನ್ನಬಹುದು. ಒಬ್ಬ ವ್ಯಕ್ತಿ / ಕಂಪನಿ ಬ್ಯಾಂಕ್ ನಲ್ಲಿ ಎಷ್ಟು ಉತ್ತಮವಾಗಿ ವ್ಯವಹರಿಸುತ್ತಿದ್ದಾನೆ ಎನ್ನುವುದನ್ನು ಆತ ಹಣ ಹೂಡಿಕೆ ಮಾಡುವ ಮತ್ತು ಸಾಲ ಪಡೆದುಕೊಳ್ಳುವ ಹಾಗೂ ಆ ಸಾಲವನ್ನು ಮರುಪಾವತಿಯಲ್ಲಿ ಮಾಡುವ ವಿಧಾನದಿಂದ ಅಳೆಯಲಾಗುತ್ತದೆ.

ಸಿಬಿಲ್ ಸ್ಕೋರ್ ಕಳಪೆ ಮಟ್ಟದಲ್ಲಿದ್ದರೆ ಬ್ಯಾಂಕ್ ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ಹೆಚ್ಚಿನ ಅಡಮಾನ ಕೇಳಬಹುದು. ಸಿಬಿಲ್ ಸ್ಕೋರ್ ನ್ನು ಕ್ರೆಡಿಟ್ ಇನ್ಫಾರ್ಮಶನ್ ಬ್ಯೂರೋ ಇಂಡಿಯಾ ಲಿಮಿಟೆಡ್ (Credit Information Bureau India limited – CIBIL) ನಿರ್ವಹಿಸುತ್ತದೆ.

ಈ ಸುದ್ದಿ ನೋಡಿ:- ರೈಲ್ವೆ ನೇಮಕಾತಿ 5,696 ಹುದ್ದೆಗಳಿಗೆ ಅರ್ಜಿ ಆಹ್ವಾನ.! ITI SSLC ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಈ ಸಂಸ್ಥೆಯನ್ನು ಹೊರ ತುಪಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಎಕ್ಸ್ಪರಿಯನ್, ಇಕ್ವಿ ಫ್ಯಾಕ್ಸ್ ಮತ್ತು CIRF ಕ್ರೆಡಿಟ್ ಸ್ಕೋರ್ ನಿರ್ವಹಣೆಯ ಕಂಪನಿಗಳಾಗಿವೆ. ನೀವು ನಿಮ್ಮ ಮೊಬೈಲ್ ನಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡಿಕೊಳ್ಳುವುದಕ್ಕೆ ಅನುಕೂಲತೆ ಮಾಡಿಕೊಡಲಾಗಿದೆ.

RBI ಕೆಲವು ಹಣಕಾಸು ಸಂಸ್ಥೆಗಳಿಗೆ ತಮ್ಮ ಗ್ರಾಹಕರಿಗೆ ವಾರ್ಷಿಕವಾಗಿ ಸಿಬಿಲ್ ಸ್ಕೋರ್ ಸ್ಟೇಟಸ್ ತಿಳಿಸಬೇಕು ಎಂದು ಕೂಡ ಸೂಚನೆ ಕೊಟ್ಟಿದೆ. ಸಾಮಾನ್ಯವಾಗಿ 750 ರಿಂದ 900ರ ಅಂಕದೊಳಗೆ ಸಿಬಿಲ್ ಸ್ಕೋರ್ ಇದ್ರೆ ಅದನ್ನು ಅತ್ಯುತ್ತಮ ಸಿಬಿಲ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ, ಹೆಚ್ಚು ಪಾಯಿಂಟ್ ಗಳನ್ನು ನಿರ್ವಹಿಸಿರುವ ವ್ಯಕ್ತಿಗೆ ಸುಲಭವಾಗಿ ಸಾಲ ಸಿಗುತ್ತದೆ.

ಈ ಸುದ್ದಿ ನೋಡಿ:-ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯುವವರ ಪಟ್ಟಿ ಬಿಡುಗಡೆ, ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.!

650 ರಿಂದ 750ರ ನಡುವೆ ಸಿಬಿಲ್ ಸ್ಕೋರ್ ಇದ್ದರೆ ಅದನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. 550 ರಿಂದ 650 ರವರೆಗಿನ ಸಿಬಿಲ್ ಪಾಯಿಂಟ್ ಸರಾಸರಿ ಎಂದು ಗುರುತಿಸಲಾಗುತ್ತದೆ. ಹಾಗೆ 300 ರಿಂದ 500 ರ ಒಳಗಿನ ಸಿಬಿಲ್ ಸ್ಕೋರ್ ಕಳಪೆಯಾಗಿರುತ್ತದೆ. ಇಂತಹ ಸ್ಕೋರ್ ಹೊಂದಿರುವವರಿಗೆ ಬ್ಯಾಂಕ್ ಗಳಲ್ಲಿ ಸಾಲ ಸಿಗುವುದು ಬಹಳ ಕಷ್ಟ.

ಸಿಬಿಲ್ ಸ್ಕೋರ್ ಇಳಿಯುವುದಕ್ಕೆ ಕಾರಣವೇನೆಂದರೆ, ನೀವು ಪಡೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡದಿದ್ದರೆ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ, ಬ್ಯಾಂಕ್ ಖಾತೆಯನ್ನು ಹೊಂದಿದ್ದು ಸಾಕಷ್ಟು ದಿನ ಬ್ಯಾಂಕ್ ನಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಮಾಡದೆ ಇದ್ದರೆ ಸಿಬಿಲ್ ಸ್ಕೋರ್ ಡೌನ್ ಆಗುತ್ತದೆ.

ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ NPCI ಮತ್ತು E-KYC ಕಡ್ಡಾಯ, ಇಲ್ಲದಿದ್ರೆ 2,000 ಹಣ ಕ್ಯಾನ್ಸಲ್.!

ಸಿಬಿಲ್ ಸ್ಕೋರ್ ಉತ್ತಮವಾಗಿಸಿಕೊಳ್ಳಲು ನೀವು ಬ್ಯಾಂಕ್ ವ್ಯವಹಾರವನ್ನು ಸರಿಯಾಗಿ ಮಾಡಬೇಕು, ಸಾಲ ಪಡೆದುಕೊಂಡಿದ್ದರೆ ಪ್ರತಿ ತಿಂಗಳು EMI ಸರಿಯಾದ ಅವಧಿಗೆ ಪಾವತಿ ಮಾಡಬೇಕು. ಡ್ಯೂ ಡೇಟ್ (loan due date) ಮುಗಿಯೋದ್ರೊಳಗೆ ಕ್ರೆಡಿಟ್ ಕಾರ್ಡ್ ಸಾಲವನ್ನು ತೀರಿಸಬೇಕು. ಈ ರೀತಿ ನಿರ್ವಹಣೆ ಮಾಡಿದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗುತ್ತದೆ ಹಾಗೂ ಬ್ಯಾಂಕ್ ಗಳಿಂದ ತಕ್ಷಣ ಸಾಲ ಸಿಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Useful Information
WhatsApp Group Join Now
Telegram Group Join Now

Post navigation

Previous Post: ಮೋಸದಿಂದ ಕ್ರಯ ಪತ್ರ / ಮಾರಾಟ ಪತ್ರ ಆಗಿದ್ದರೆ ಮೋಸದ ಕ್ರಯ ಪತ್ರವನ್ನು ಸಾಬೀತುಪಡಿಸುವುದು ಮತ್ತು ರದ್ದುಗೊಳಿಸುವುದು ಹೇಗೆ ನೋಡಿ.!
Next Post: ರಾಮಮಂದಿರ ನಿರ್ಮಾಣವೇ ಧ್ಯೇಯ.! ಒಂದು ರೂಪಾಯಿ ಪಡೆಯದೆ ಕೋರ್ಟ್ ನಲ್ಲಿ ನಿರಂತರ ಹೋರಾಡಿ “ರಾಮಜನ್ಮ ಭೂಮಿ” ಕೊಡಿಸಿದ ವಕೀಲರ ಕುಟುಂಬ.!

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore