ಜನ ಯಾವಾಗಲೂ ಟ್ರೆಂಡಿಂಗ್ ಡಿಸೈನ್ ಗಳನ್ನೇ ಫಾಲೋ ಮಾಡುತ್ತಾರೆ. ಅದು ಬಟ್ಟೆ ವಿಚಾರದಲ್ಲೂ ಹಾಗೂ ಮನೆ ಕಟ್ಟುವ ವಿಚಾರದಲ್ಲೂ ಹೌದು. ನೀವು ಕೂಡ ಈಗ ಮನೆ ಕಟ್ಟಿಸುತ್ತಾ ಇದ್ದರೆ ಅಥವಾ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಪ್ಲಾನ್ ಮಾಡುತ್ತಿದ್ದರೆ ಇಂದು ಈ ಲೇಖನದಲ್ಲಿ ನಾವು ತಿಳಿಸುತ್ತಿರುವಂತಹ ಮಾಹಿತಿ ನಿಮಗೆ ಅನುಕೂಲವಾಗಬಹುದು.
ಯಾಕೆಂದರೆ ಈ ಅಂಕಣದಲ್ಲಿ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಮಾಡೆಲ್ ಶೈಲಿಯ ದೇವರ ಕೋಣೆ ಬಗ್ಗೆ ಹೊಸ ಹೊಸ ಐಡಿಯಾಗಳನ್ನು ತಿಳಿಸುತ್ತಿದ್ದೇವೆ. ಮನುಷ್ಯನ ದೇಹಕ್ಕೆ ಹೃದಯ ಎಷ್ಟು ಮುಖ್ಯವೋ ಹಾಗೆ ಮನೆ ಒಂದಕ್ಕೆ ದೇವರ ಮನೆಯೂ ಮುಖ್ಯ. ಆ ದೇವರ ಮನೆ ತುಂಬಾ ಪಾಸಿಟಿವ್ ಫೀಲ್ ಕೊಡುವುದರ ಜೊತೆಗೆ ಆಕರ್ಷಣೆಯ ಬಗ್ಗೆ ಇದ್ದಷ್ಟು ಚೆಂದ.
ಈ ಸುದ್ದಿ ಓದಿ:- ಒಂದು ಕ್ಯಾಪ್ಸೂಲ್ ಒಂದು ಮೂಟೆ ಗೊಬ್ಬರಕ್ಕೆ ಸಮ, ಕೇವಲ ರೂ.100 ರ ಈ ಕ್ಯಾಪ್ಸೂಲ್ ನಿಂದ ನಿಮ್ಮ ಬೆಳೆಯ ಇಳುವರಿ ದುಪ್ಪಟ್ಪಾಗುತ್ತದೆ.!
ನಮ್ಮ ಅನುಕೂಲತೆ ಹಾಗೂ ಬಜೆಟ್ ಗೆ ಅನುಗುಣವಾಗಿ ಕೂಡ ದೇವರ ಮನೆಗಳನ್ನು ಮಾಡಿಸಿ ಕೊಳ್ಳಬಹುದು. ಈ ವಿಷಯ ಬಂದಾಗ ಜನರ ಆಸಕ್ತಿ ಬೇರೆ ಬೇರೆ ರೀತಿ ಇರುತ್ತದೆ. ಸಾಂಪ್ರದಾಯಿಕ ಶೈಲಿಯಲ್ಲಿ ದೇವರ ಮನೆ ಮಾಡಿಸಲು ಕೆಲವರು ಬಯಸಿದರೆ, ಇನ್ನು ಕೆಲವರಿಗೆ ದೇವರ ಕೋಣೆ ವಿಶಾಲವಾಗಿರಬೇಕು ಎನ್ನುವ ಇಚ್ಛೆ ಇರುತ್ತದೆ.
ಕೆಲವರು ದೇವರ ಮನೆಯಲ್ಲಿ ಕೆಲವೇ ಫೋಟೋ ಇದ್ದು ಸಿಂಪಲ್ ಆಗಿರಬೇಕು ಎಂದು ಆಸೆ ಪಟ್ಟರೆ, ಇನ್ನೂ ಕೆಲವರು ಇರುವ ಸ್ಥಳದಲ್ಲಿ ಸರಿಯಾಗಿ ಉಪಯೋಗಿಸಿಕೊಂಡು ತುಂಬಾ ಗ್ರಾಂಡ್ ಲುಕ್ ಕೊಡುವ ರೀತಿ ಮಾಡಬೇಕು ಎನ್ನುವ ಬಯಕೆ ಇಟ್ಟು ಕೊಂಡಿರುತ್ತಾರೆ.
ಈ ಸುದ್ದಿ ಓದಿ:-ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ.! ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ತಿಳಿಯಲು ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!
ಸಾಮಾನ್ಯವಾಗಿ ದೇವರ ಮನೆ ವಸ್ತುಗಳನ್ನೆಲ್ಲಾ ಇಟ್ಟುಕೊಳ್ಳುವಷ್ಟು ದೇವರ ಮನೆಯಲ್ಲಿ ಕಬೋರ್ಡ್ ರೀತಿ ಅಚ್ಚುಕಟ್ಟಾದ ವ್ಯವಸ್ಥೆ ಇದ್ದು ಅದು ಕ್ಲೋಸಿಂಗ್ ಆಗಿರಬೇಕು ಎನ್ನುವ ಇತ್ಯಾದಿ ಕಲ್ಪನೆಗಳು ಇರುತ್ತವೆ. ದೇವರ ಮನೆ ಎಂದ ಮೇಲೆ ಖಂಡಿತವಾಗಿಯೂ ಅಲಂಕಾರ ಮತ್ತು ಗ್ರಾಂಡ್ ಎನ್ನುವುದೇ ಮನಸ್ಸಿಗೆ ಬರುತ್ತದೆ ಜೊತೆಗೆ ಸದಾ ಕಾಲ ದೀಪ ಉರಿಯಬೇಕು, ಬೆಳಕು ಬರಬೇಕು ಎನ್ನುವ ಭಾವನೆಯೂ ಇರುತ್ತದೆ.
ಇದಕ್ಕೆ ವುಡ್ ಮತ್ತು ಲ್ಯಾಮಿನೇಟ್ ಡಿಸೈನ್ ಗಳು ಹೇಳಿ ಮಾಡಿಸಿದ ರೀತಿ ಇರುತ್ತದೆ. ದೇವರ ಕೋಣೆ ಸದಾ ಬೆಳಕಿನಲ್ಲಿ ಇರುವ ಉದ್ದೇಶಕ್ಕಾಗಿ LED ಲೈಟ್ಸ್ ಡಿಸೈನ್ ಡೆಕೋರೇಷನ್ ಹೊಂದಿರುವ, ಟಫನ್ ಗ್ಲಾಸ್ ವಾಲ್ ಬಳಸಿ ಲೈಟ್ ಇಲ್ಲದೆ ಇದ್ದಾಗಲೂ ದೇವರ ಪ್ರತಿಬಿಂಬ ಸದಾ ಕಾಣುವಂತೆ ಇರುವ, ಇರುವ ಜಾಗವನ್ನೇ ಒಂದು ಚೂರು ವೆಸ್ಟ್ ಆಗದಂತೆ ಅಲ್ಲೇ ಕುಳಿತು ದೇವರ ಪೂಜೆ ಮಾಡಲು ಬೇಕಾದ ದೇವರ ಸಾಮಾನುಗಳನ್ನು ಇಟ್ಟುಕೊಳ್ಳಬಹುದು.
ಈ ಸುದ್ದಿ ಓದಿ:-ಮೇ 1 ರಿಂದ 4 ಹೊಸ ರೂಲ್ಸ್ ಜಾರಿ.! ಗ್ಯಾಸ್, ಬ್ಯಾಂಕ್ ಅಕೌಂಟ್, ವಾಹನ ಇರುವವರು ತಪ್ಪದೆ ತಿಳಿದುಕೊಳ್ಳಿ.!
ನೋಡುವುದಕ್ಕೆ ಡ್ರಾ ಇರುವ ಹಲವು ವೈವಿಧ್ಯಗಳು ಕಂಡುಬರುತ್ತದೆ. ವೈಟ್ ಲ್ಯಾಮಿನೇಟ್ ಗಳು ಬಳಸಿದರೆ ಅಮೃತಶಿಲೆಯಂತೆಯೇ ಕಾಣುತ್ತದೆ. ಡೋರ್ ಗಳಿಗೆ ಓಂ, ಗಣೇಶ ಮತ್ತು ಚಕ್ರಗಳ ರೀತಿಯಲ್ಲಿ ಡಿಸೈನ್ ಮಾಡಿಕೊಡಲಾಗುತ್ತಿದೆ. ಒಳಗೆ ಶೆಲ್ಫ್ ವ್ಯವಸ್ಥೆ ಕೂಡ ಇದ್ದು ಒಂದು ಗ್ರಾನೈಟ್ ಕಲ್ಲನ್ನು ಮೇನ್ ಆಗಿ ದೀಪ ಅಂಟಿಸುವ ಜಾಗಕ್ಕೆ ಇಟ್ಟು ಉಳಿದ ಕಡೆ ಶೆಲ್ಫ್ ವ್ಯವಸ್ಥೆ ಮಾಡಲಾಗುತ್ತದೆ.
ನಿಮ್ಮ ಮನೆಯ ಸ್ಪೇಸ್, ನಿಮ್ಮ ಇಂಟರೆಸ್ಟ್, ನಿಮ್ಮ ಹಣಕಾಸಿನ ಪರಿಸ್ಥಿತಿ ಇದಕ್ಕೆ ಹೊಂದುವಂತಹ ಅತ್ಯಂತ ಕಡಿಮೆ ಬೆಲೆಗೆ ಒಂದು ಸಕ್ಕತ್ ಆಗಿರುವ ಡಿಸೈನ್ ಮಾಡಿಸಬೇಕು ಎನ್ನುವ ಇಚ್ಛೆ ಇದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮಗೆ ಒಂದಷ್ಟು ಐಡಿಯಾ ಬರಬಹುದು. ಬಳಿಕ ಯಾವುದು ಉತ್ತಮ ಎನ್ನುವುದನ್ನು ಡಿಸೈಡ್ ಮಾಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.