ಕಾಂಗ್ರೆಸ್ ಪಕ್ಷವು (Congress party) ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಪಂಚಖಾತ್ರಿ ಯೋಜನೆಗಳ ಭರವಸೆಯಂತೆ (five Guarantee Schemes) ರಾಜ್ಯದಲ್ಲಿ ಬಹುಮತ ಬೆಂಬಲದೊಂದಿಗೆ ಅಧಿಕಾರ ಪಡೆದು ಸರ್ಕಾರ (Government) ಸ್ಥಾಪಿಸಿದ ಮೇಲೆ ಹಂತ ಹಂತವಾಗಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನಗಳನ್ನು ನಾಡಿನ ನಾಗರಿಕರು ಪಡೆಯುತ್ತಿದ್ದಾರೆ. ಈ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲಿಗೆ ಬಿಡುಗಡೆ ಆಗಿದ್ದೇ ಶಕ್ತಿ ಯೋಜನೆ (Shakthi Scheme), ಶಕ್ತಿ ಯೋಜನೆಯಡಿ ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಕೂಡ ಕರ್ನಾಟಕದ ಗಡಿಯೊಳಗೆ ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗದ ಸಾರಿಗೆ ಬಸ್ ಗಳಲ್ಲೂ ಕೂಡ ಉಚಿತವಾಗಿ ಪ್ರಯಾಣ (free travel) ಮಾಡಲು ಅವಕಾಶ ನೀಡಲಾಗಿದೆ.
ಕೀ ಪ್ಯಾಡ್ ಮೊಬೈಲ್ ಬಳಸುವವರಿಗೆ RBI ನಿಂದ ಗುಡ್ ನ್ಯೂಸ್.!
ಜೂನ್ 11ರಿಂದ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಕೂಡ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಸರ್ಕಾರ ನೀಡುವ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯನ್ನು ಲಾಂಚ್ ಮಾಡಿದ ಸಮಯದಲ್ಲಿಯೇ ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ (Transport minister Ramalinga Reddy) ಅವರು ಶಕ್ತಿ ಯೋಜನೆ ಕುರಿತು ಕೆಲ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದರು. ಅದರ ಪೈಕಿ ಮೂರು ತಿಂಗಳವರೆಗೆ ಈ ರೀತಿ ಗುರುತಿನ ಚೀಟಿ ತೋರಿಸಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು ಆದರೆ ಮೂರು ತಿಂಗಳ ಬಳಿಕ ಶಕ್ತಿ ಸ್ಮಾರ್ಟ್ ಕಾರ್ಡ್ (Shakthi Smart card) ಇದ್ದವರಿಗಷ್ಟೇ ಉಚಿತ ಪ್ರಯಾಣಕ್ಕೆ ಅವಕಾಶ ಇರುತ್ತದೆ.
ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ತಿಳಿಸಿದ ಸತ್ಯ.!
ಹಾಗಾಗಿ ಅರ್ಜಿ ಸಲ್ಲಿಸಿ ಎಲ್ಲರೂ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು ಶೀಘ್ರದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಆಗಲಿದೆ ಎಂದು ತಿಳಿಸಿದ್ದರು. ಶಕ್ತಿ ಸ್ಮಾರ್ಟ್ ಕಾರ್ಡ್ ನ ಒಂದು ಬದಿಯಲ್ಲಿ ಫಲಾನುಭವಿಯ ಭಾವಚಿತ್ರ, ಹೆಸರು, ಜನ್ಮ ದಿನಾಂಕ ಅವರ ವಿಳಾಸ ಜೊತೆಗೆ ಸ್ಮಾರ್ಟ್ ಕಾರ್ಡ್ ಅನ್ನು ಪಡೆದಿರುವ ದಿನಾಂಕ ಇರುತ್ತದೆ. ಹಾಗೆ ಕಾರ್ಡ್ ಇನ್ನೊಂದು ಬದಿಯಲ್ಲಿ ಶಕ್ತಿ ಯೋಜನೆಗೆ ಇರುವ ನಿಬಂಧನೆಗಳನ್ನು ಹಾಗೂ ನಿಯಮಗಳನ್ನು ತಿಳಿಸಲಾಗಿರುತ್ತದೆ ಎಂದು ಅದರ ಮಾದರಿಯನ್ನು ಕೂಡ ಸರ್ಕಾರ ಪರಿಚಯಿಸಿತ್ತು.
ಆದರೆ ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ ಎನ್ನುವ ವಿವರವನ್ನು ಕೂಡ ದಾಖಲಿಸುವ ಉದ್ದೇಶದಿಂದಾಗಿ ಇದಕ್ಕೆ ಇನ್ನಷ್ಟು ತಂತ್ರಜ್ಞಾನವನ್ನು ಅಳವಡಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳಿದೆ. ಹಾಗಾಗಿ ಸರ್ಕಾರ ಹೇಳಿರುವ ಅವಧಿ ಮುಳುಗಿದರೂ ಇನ್ನು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ವಿಳಂಬವಾಗುತ್ತಿದೆ ಎಂದು ಊಹಿಸಲಾಗಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ನೇಮಕಾತಿಗೆ ಅರ್ಜಿ ಆಹ್ವಾನ.! ವೇತನ 89,150
ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಸೂಚಿಸಿರುವ ಸೇವಾ ಸಿಂಧು ವೆಬ್ಸೈಟ್ ಪೋರ್ಟಲ್ ಗೆ (Sevasindhu portal) ಭೇಟಿಕೊಟ್ಟು ಶಕ್ತಿ ಯೋಜನೆ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ನಮೂನೆಯ ಡೌನ್ಲೋಡ್ ಹಾಗೂ ಅರ್ಜಿ ಸಲ್ಲಿಕೆ ಆಪ್ಷನ್ ಗಳು ಕೂಡ ಈಗ ಕಾಣುತ್ತಿವೆ. ಶೀಘ್ರದಲ್ಲಿಯೇ ಶಕ್ತಿ ಯೋಜನೆಗೆ ಅರ್ಜಿ ಸ್ವೀಕರಿಸಲಾಗುವುದು ಎನ್ನುವ ಘೋಷಣೆ ಕೂಡ ಕಾಣುತ್ತದೆ.
ಕೆಲ ದಿನಗಳಿಂದ ಈ ರೀತಿ ಆಪ್ಷನ್ ಓಪನ್ ಆಗಿರುವುದರಿಂದ ಸರ್ಕಾರವು ಶೀಘ್ರವಾಗಿಯೇ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭ ಮಾಡಲಿದೆ ಮತ್ತು ಈ ಬಾರಿಯೂ ಕೂಡ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಿದೆ ಎಂದು ಊಹಿಸಬಹುದಾಗಿದೆ.
ಬೇಕಾಗುವ ದಾಖಲೆಗಳು:-
● ಮಹಿಳೆಯ ಆಧಾರ್ ಕಾರ್ಡ್
● ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
● ಇತ್ತೀಚಿನ ಭಾವಚಿತ್ರ.