ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ನೇಮಕಾತಿಗೆ ಅರ್ಜಿ ಆಹ್ವಾನ.! ವೇತನ 89,150

 

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅನ್ನು ನಬಾರ್ಡ್ ಸಂಸ್ಥೆ ಎಂದು ಕರೆಯಲಾಗುತ್ತದೆ. ಇದರಿಂದ ದೇಶದಲ್ಲಿ ಹಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಎಂದು ಕರೆಸಿಕೊಂಡಿರುವ ನಬಾರ್ಡ್ (NABARD) ಹಲವಾರು ಯೋಜನೆಗಳ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ.

ನಬಾರ್ಡ್ ಶಾಖೆಗಳು ರಾಷ್ಟ್ರದಾದ್ಯಂತ ವಿವಿಧ ಭಾಗಗಳಲ್ಲಿ ಇದ್ದು ಇವುಗಳಲ್ಲಿ ಖಾಲಿ ಇರುವ ಉದ್ಯೋಗದ ಭರ್ತಿಗಾಗಿ ಅರ್ಜಿಗಳನ್ನು (NABARD Recruitments 2023) ಆಹ್ವಾನಿಸಿ ಅಧಿಸೂಚನೆಯನ್ನು (Notification) ಕೂಡ ಹೊರಡಿಸಲಾಗಿದೆ. ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಹುದ್ದೆಯ ಕುರಿತು ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋದ್ರೆ ತಪ್ಪದೇ ಈ 2 ಪ್ರಸಾದಗಳನ್ನು ಮನೆಗೆ ತಂದು ಈ ರೀತಿ ಮಾಡಿ. ಎಂತಹದೇ ನಾಗದೋಷ ಇದ್ದರೂ ಕೂಡ ಕ್ಲಿಯರ್ ಆಗುತ್ತದೆ.!

ಇಲಾಖೆ ಹೆಸರು:- ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್.

ಒಟ್ಟು ಹುದ್ದೆಗಳ ಸಂಖ್ಯೆ:- 150

ಹುದ್ದೆಗಳ ವಿವರ:-
● ಸಾಮಾನ್ಯ- 77
● ಕಂಪ್ಯೂಟರ್ / ಮಾಹಿತಿ ತಂತ್ರಜ್ಞಾನ – 40
● ಹಣಕಾಸು – 15
● ಕಂಪನಿ ಕಾರ್ಯದರ್ಶಿ – 03
● ಸಿವಿಲ್ ಇಂಜಿನಿಯರಿಂಗ್ – 03
● ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – 03
● ಜಿಯೋ ಇಂಫಾರ್ಮೇಟಿಕ್ಸ್ – 02
● ಅರಣ್ಯ – 02
● ಆಹಾರ ಸಂಸ್ಕರಣೆ – 02
● ಅಂಕಿ ಅಂಶಗಳು – 02ಢ
● ಸಮೂಹ ಸಂವಹನ / ಮಾಧ್ಯಮ ತಜ್ಞ – 01

ಉದ್ಯೋಗ ಸ್ಥಳ:- ಭಾರತದಾದ್ಯಂತ…

ವೇತನ ಶ್ರೇಣಿ:- ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅರ್ಹ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.44,500 ರಿಂದ ರೂ.89,150 ವೇತನ ಸಿಗುತ್ತದೆ.

ಹಾರ್ಟ್ ಅಟ್ಯಾಕ್ ಗೆ ಶಾಶ್ವತ ಪರಿಹಾರ.! ಹಾರ್ಟ್ ಅಟ್ಯಾಕ್ ಆಗಿರುವವರು ಸ್ಟಂಟ್ ಹಾಕಿಸಿಕೊಂಡಿರುವವರು ಇದನ್ನೊಮ್ಮೆ ನೋಡಿ.! ವೈದ್ಯರ ಸಲಹೆ ಇದು

ಶೈಕ್ಷಣಿಕ ವಿದ್ಯಾರ್ಹತೆ:-

ಆಯಾ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಶೈಕ್ಷಣಿಕ ಅರ್ಹತೆಯನ್ನು ಕೇಳಲಾಗಿದೆ ಹಾಗೆಯೇ ಶ್ರೇಣಿಯನ್ನು ಕೂಡ ನಿಗದಿಪಡಿಸಲಾಗಿದೆ. ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು ನಬಾರ್ಡ್ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅಧಿಸೂಚನೆಯನ್ನು ಮತ್ತೊಮ್ಮೆ ಓದಿ.

ವಯೋಮಿತಿ:-

● ಅರ್ಜಿ ಸಲ್ಲಿಸಲು ನೀಡಿರುವ ಕಡೆಯ ದಿನಾಂಕಕ್ಕೆ 18 ವರ್ಷಗಳನ್ನು ಪೂರೈಸಬೇಕು.
● ಅರ್ಜಿ ಸಲ್ಲಿಸಲು ನೀಡಿರುವ ಕಡೆಯ ದಿನಾಂಕಕ್ಕೆ 30 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:- 

● SC / ST ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● PWBD ಅಭ್ಯರ್ಥಿಗಳಿಗೆ 10 ವರ್ಷಗಳು

ಟಾಟಾ ನ್ಯಾನೋ ಗಿಂತ ಕಡಿಮೆ ಬೆಲೆಯ ಕಾರು ಬಿಡುಗಡೆ, ಕಾರು ಕೊಂಡುಕೊಳ್ಳುವುದಕ್ಕೆ ಮುಗಿಬಿದ್ದ ಜನತೆ.!

ಅರ್ಜಿ ಶುಲ್ಕ:-

● ಸಾಮಾನ್ಯ, OBC ಮತ್ತು EWS ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ರೂ.800
● SC/ST/PWBD ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ರೂ.150

ಆಯ್ಕೆ ವಿಧಾನ:-

● ಸ್ಪರ್ಧಾತ್ಮಕ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:-

● ಅರ್ಹ ಅಭ್ಯರ್ಥಿಗಳು ಮೊದಲಿಗೆ www.nabard.org ಅಧಿಕೃತ ವೆಬ್‌ಸೈಟ್‌ ನಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
● ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿ ಮಾಡಿರುವ ಮಾಹಿತಿಯನ್ನು ಕೂಡ ತುಂಬಿಸಬೇಕು.
● ಅರ್ಜಿ ಸ್ಪೀಕೃತಿ ಪತ್ರ ಮತ್ತು ಅರ್ಜಿ ಶುಲ್ಕ ಪಾವತಿಸಿರುವ ಇ-ರಶೀದಿ ಪ್ರಿಂಟ್ ಪಡೆದುಕೊಳ್ಳಬೇಕು.

ಬಾಡಿಗೆ ಮನೆಯಲ್ಲಿ ಇರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ.!

ಪ್ರಮುಖ ದಿನಾಂಕಗಳು:-

● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 02 ಸೆಪ್ಟೆಂಬರ್, 2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23 ಸೆಪ್ಟೆಂಬರ್, 2023
● ಪರೀಕ್ಷೆ ನಡೆಯುವ ದಿನಾಂಕ – 16 ಅಕ್ಟೋಬರ್, 2023.

Leave a Comment

%d bloggers like this: