ನಮಸ್ತೆ ಬಂಧುಗಳೇ… ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ, ಅಬ್ಬಬ್ಬಾ ಯಾವುದೇ ಡಿಗ್ರಿ ಇಲ್ಲದಿದ್ದರೂ ನಮ್ಮ ಊರಿನಲ್ಲಿಯೇ ನಮ್ಮ ಹಳ್ಳಿಯಲ್ಲಿ ತಿಂಗಳಿಗೆ 30 ರಿಂದ 40,000 ದುಡಿಬಹುದು.SHEEP FARMING ಕುರಿ ಸಾಕಾಣಿಕೆಯ ಮೂಲಕ ಪ್ರತಿ ತಿಂಗಳು ಸಂಪಾದನೆ ಮಾಡಬಹುದು. ನಮ್ಮ ಮನೆಯ ಅಂಗಳದಲ್ಲಿ ಸ್ವಲ್ಪ ಜಾಗವಿದ್ದರೆ ಸಾಕು ಲಾಭದಾಯಕವಾದ ಕುರಿ ಸಾಕಾಣಿಕೆಯು ನಮ್ಮ ಜೀವನವನ್ನು ಉದ್ಧಾರ ಮಾಡುತ್ತದೆ. ಎಲ್ಲೋ ನಗರದಲ್ಲಿ ಕಷ್ಟ ಪಡುವ ಬದಲು ನಾವು ಇದ್ದ ಹಳ್ಳಿಯಲ್ಲಿ ಕಷ್ಟಪಟ್ಟು ಕುರಿಗಳನ್ನು ಸಾಕುವುದರ ಮೂಲಕ ಆರ್ಥಿಕವಾಗಿ ಸಬಲರಾಗಬಹುದು. ಉತ್ತಮವಾದ ಜೀವನವನ್ನು ನಡೆಸಬಹುದು ಎಂಬುದಕ್ಕೆ ಈ ಅತ್ತೆ ಸೊಸೆ ಉತ್ತಮ ಉದಾಹರಣೆ.ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಂಧುಗಳೇ.. ಕುರಿ ಸಾಕಾಣಿಕೆ ಅನುಭವ ಸಿಗುವವರೆಗೂ 10 ಕುರಿಗಳನ್ನು ತೆಗೆದುಕೊಂಡು ಸಾಕಿಕೊಂಡು ನಂತರ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೋಗಬೇಕು. ಏಕಕಾಲದಲ್ಲಿಯೇ ಹೆಚ್ಚಿನ ಸಂಖ್ಯೆಯ ಕುರಿಗಳನ್ನು ತೆಗೆದುಕೊಂಡು ತಪ್ಪು ಮಾಡಬಾರದು. ಪ್ರಾಣಿಗಳನ್ನು ಸಾಕುವಾಗ ಅವುಗಳ ಪಾಲನೆ ಪೋಷಣೆಯನ್ನು ಮಾಡುತ್ತಾ ಅದರ ಜೊತೆಗೆ ಪ್ರಾಣಿಗಳ ಸೂಕ್ಷ್ಮತೆಯಿಂದ ಅರಿತುಕೊಳ್ಳಬೇಕು. ಆಗ ಮಾತ್ರ ಈ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತದೆ.
ಕುರಿಗಳನ್ನು ಸಾಕೋದಕ್ಕಾಗಿ ಮರ ಮತ್ತು ತಗಡು ಸೀಟುಗಳಿಂದ ಅವುಗಳನ್ನು ನಿಯಂತ್ರಿಸಲು ಕೊಟ್ಟಿಗೆ ನಿರ್ಮಿಸಬೇಕಾಗುತ್ತದೆ, ಹೀಗೆ ಸರಳವಾಗಿ ನಿರ್ಮಿಸಿಕೊಂಡ ಹಟ್ಟಣಿಗೆಗಳಲ್ಲಿ ಕುರಿ ಸಾಕಾಣಿಕೆ ಸುಲಭವಾಗಿ ಮಾಡಬಹುದು.
ಕುರಿಗಳ ಆಹಾರ ಮತ್ತು ತಿಂಡಿ !
ಕುರಿಗಳಿಗೆ ಆಹಾರ ಮತ್ತು ತಿಂಡಿಯನ್ನು ನಿರ್ದಿಷ್ಟ ಸಮಯದಲ್ಲಿ ನೀಡಬೇಕು, ಕುರಿಗಳು ಹೆಚ್ಚಿನ ತೂಕದಲ್ಲಿ ಹೆಚ್ಚುತ್ತಾ ಹೋದರೆ ಮಾತ್ರವೇ ಸಾಕುವುದರ ಲಾಭ ದೊರಕುತ್ತದೆ ಹಾಗಾಗಿ ಕುರಿಗಳಿಗೆ ಹೆಚ್ಚಾಗಿ ಕೊಬ್ಬಿನಂಶ ತುಂಬಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ನೀಡಬೇಕು ಅಂದರೆ ಹೊಣಹುಲ್ಲು , ರಾಗಿ ಹುಲ್ಲು, ಮೆಕ್ಕೆಜೋಳ ಹೀಗೆ ಹೆಚ್ಚಿನ ಕೊಬ್ಬಿನಂಶ ತುಂಬಿರುವ ಆಹಾರ ಪದಾರ್ಥಗಳನ್ನು ನೀಡುವುದರಿಂದ ಕುರಿಗಳು ಮೈಕಟ್ಟು ಉತ್ತಮವಾಗಿ ಹೊಂದಿ ತೂಕದಲ್ಲಿ ಹೇರಿಕೆಯಾಗುತ್ತದೆ. ಹಾಗಾಗಿ ಹಸಿರು ತುಂಬಿದ ಮೇವುಗಳನ್ನು ನಿಯಂತ್ರಿಸಬೇಕು.
ಕುರಿಗಳ ಆಹಾರವು ಹೆಚ್ಚಾಗಿ ಒಣಗಿದ ಸ್ಥಿತಿಯಲ್ಲಿರಬೇಕು ಹಾಗಾಗಿ ಉತ್ತಮವಾದ ಮೇವು ಸಿಕ್ಕಾಗ ಸಂಗ್ರಹಣೆ ಮಾಡುತ್ತಾ ಇರಬೇಕು ಇದರಿಂದ ಮಳೆಗಾಲದಲ್ಲಿಯೂ ಅಥವಾ ಅನಿರ್ದಿಷ್ಟ ಕಾಲದಲ್ಲಿಯೂ ಮೇವುಗಳ ಸಿಗುವಿಕೆಯಿಂದ ಕುರಿಗಳ ಪಾಲನೆ ಪೋಷಣೆಯಲ್ಲಿ ಹೇರಳಿತವಾಗುವುದಿಲ್ಲ.
ಕುರಿಗಳು ಬೆಳಿಗ್ಗೆಯಿಂದ ರಾತ್ರಿವರೆಗೆ ಅವುಗಳ ನಡವಳಿಕೆಯನ್ನು ಅಭ್ಯಸಿಸಬೇಕು, ಸೂಕ್ಷ್ಮವಾಗಿ ಗಮನಿಸುತ್ತಾ ಅವಶ್ಯಕವಾದ ಔಷಧಿಗಳನ್ನು ನೀಡಬೇಕು. ಇದರೊಂದಿಗೆ ಪಶು ವೈದ್ಯ ಅಧಿಕಾರಿಗಳ ಸಹಕಾರದೊಂದಿಗೆ ನಾವೇ ಔಷಧಿಗಳನ್ನು ಕೊಡುವುದನ್ನು ನಿಧಾನವಾಗಿ ಕಲಿತುಕೊಳ್ಳಬೇಕು, ಇದರಿಂದ ಅವಶ್ಯಕ ಸಮಯದಲ್ಲಿ ಔಷಧಿಗಳನ್ನು ನಾವೇ ನೀಡಬಹುದು. ಇದರಿಂದ ಇತರ ಮೇಲಿನ ಅವಲಂಬನೆ ತಪ್ಪುತ್ತದೆ ಎನ್ನುವುದು ಅತ್ತೆ ಸೊಸೆಯರ ಅಭಿಪ್ರಾಯ.
ಪ್ರತಿ ತಿಂಗಳು 40 ರಿಂದ 50,000 ವಾರ್ಷಿಕ 5 ಲಕ್ಷ ಆದಾಯ !
ಪ್ರತಿ ತಿಂಗಳು 40 ರಿಂದ 50,000 ವಾರ್ಷಿಕ 5 ಲಕ್ಷ ಆದಾಯ ಪಡೆದುಕೊಳ್ಳಬಹುದು ಹೌದು ಬಂದುಗಳೇ ಕುರಿಗಳನ್ನು ಸಾಕುವುದರಿಂದ ವಾರ್ಷಿಕವಾಗಿ 5 ಲಕ್ಷ ರೂ ತನಕ ಸಂಪಾದಿಸಬಹುದು ಮತ್ತು ಮಾಸಿಕವಾಗಿ 30 ರಿಂದ 50,000 ವರೆಗೆ ಸುಲಭವಾಗಿ ಸಂಪಾದಿಸಬಹುದಾಗಿದೆ. ಕುರಿಗಳನ್ನು ಮಾಂಸಕಾಗಿ ಮತ್ತು ಸಾಕಲು ಮಾರಬಹುದಾಗಿದೆ. ಕುರಿಗಳ ಗೊಬ್ಬರದಿಂದಲು ಪ್ರತಿ ತಿಂಗಳು ನಿರ್ದಿಷ್ಟ ಮಟ್ಟದ ಮೊತ್ತ ಕೈ ಸೇರುತ್ತದೆ. ಮಾರುಕಟ್ಟೆಯಲ್ಲಿ ಕುರಿಯ ಮಾಂಸಕ್ಕೆ 600 ರಿಂದ 750 ಗಳು ತನಕ ಬೆಲೆ ಇದೆ. ಜನಸಂಖ್ಯೆಯು ಪ್ರತಿವರ್ಷವು ಏರುತ್ತಾ ಇರುವುದರಿಂದ ಮಾಂಸಪ್ರಿಯರು ಹೆಚ್ಚಾಗಿ ಮಾಂಸ ಸೇವನೆ ಮಾಡುತ್ತಿದ್ದಾರೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೇಕಾಗಿರುವುದರಿಂದ ಕುರಿಗಳನ್ನು ಸಾಕುವುದರಿಂದ ಯಾವುದೇ ರೀತಿಯ ನಷ್ಟ ಉಂಟಾಗುವುದಿಲ್ಲ ಎಂಬುದು ತಿಳಿದ ಸಂಗತಿ.ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ