ಬಹಳ ರುಚಿಯಾದ ಹಾಗೂ ಎಷ್ಟೇ ಸಮಯ ಇಟ್ಟರು ಹೂವಿನಂತೆ ಮೃದುವಾಗಿರುವ ಕೇಸರಿಬಾತ್ ಮಾಡುವ ವಿಧಾ‌ನ.

ಕೇಸರಿಬಾತ್ ಎಂದರೆ ಎಲ್ಲರ ಬಾಯಿನಲ್ಲೂ ಕೂಡ ನೀರು ಬರುತ್ತದೆ, ಹೋಟೆಲ್ಗಳಲ್ಲಿ ಮಾಡುವ ಕೇಸರಿಬಾತ್ ಮದುವೆ ಮನೆಯಲ್ಲಿ ಕೊಡುವ ಕೇಸರಿಬಾತ್ ಹಾಗು ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಡುವ ಕೇಸರಿಬಾತ್ ನಮ್ಮ ಜನರಿಗೆ ಹೆಚ್ಚು ರುಚಿಯನ್ನು ಕೊಡುತ್ತದೆ. ನಮ್ಮ ಮನೆಯಲ್ಲಿ ಮಾಡುವ ಕೇಸರಿಬಾತ್ ಯಾಕೆ ಈ ರೀತಿ ಇರುವುದಿಲ್ಲ ಎಂದು ಅಂದುಕೊಳ್ಳುತ್ತಿರುತ್ತಾರೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಮನೆಯಲ್ಲಿ ಸಿಹಿ ಏನಾದರೂ ಮಾಡಬೇಕು ಎಂದರೆ ವಿಶೇಷ ಸಂದರ್ಭಗಳು ಬೇಕಾಗಿತ್ತು ಯಾವುದಾದರೂ ಮನೆಯಲ್ಲಿ ಶುಭ ಸಮಾರಂಭಗಳು ಅಥವಾ ಹಬ್ಬಗಳು ಅಥವಾ ದೇವರಿಗೆ ಪೂಜೆ ಇರುವ ಸಂದರ್ಭ ದಲ್ಲಿ ಈ ರೀತಿ ಸಿಹಿಗಳನ್ನು ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿ ಹೋಗಿದೆ. ಜನರು ಏನನ್ನೇ ತಿನ್ನಬೇಕು ಎಂದುಕೊಂಡರೂ ಕೂಡ ತಕ್ಷಣದಲ್ಲಿ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದಾದ ಅನುಕೂಲತೆ ಈಗ ಎಲ್ಲರ ಮನೆಯಲ್ಲೂ ಕೂಡ ಇದೆ.

WhatsApp Group Join Now
Telegram Group Join Now

ಆದರೆ ಎಲ್ಲರೂ ಕೂಡ ಮನೆಯಲ್ಲಿ ಮಾಡುವ ಕೇಸರಿಬಾತ್ ಹೋಟೆಲ್ ಶೈಲಿಯಲ್ಲಿ ಇರುವುದಿಲ್ಲ ಅಥವಾ ತುಂಬಾ ಗಟ್ಟಿಯಾಗಿರುತ್ತದೆ. ಹೋಟೆಲ್ ಅಥವಾ ಮದುವೆ ಮನೆಗಳಲ್ಲಿ ಕೊಡುವ ರೀತಿ ಸಾಫ್ಟ್ ಆಗಿ ತುಂಬಾ ಮೃದುವಾಗಿ ಮತ್ತು ಎಷ್ಟೇ ಹೊತ್ತು ಇಟ್ಟರೂ ಕೂಡ ಗಟ್ಟಿಯಾಗದ ರೀತಿ ಮನೆಯಲ್ಲಿ ಕೇಸರಿಬಾತ್ ಮಾಡುವುದು ಹೇಗೆ ಎಂದು ತಲೆ ಕೆಡಿಸಿಕೊಂಡಿರುತ್ತಾರೆ. ಈಗಾಗಲೇ ನಾಲ್ಕಾರು ಕಡೆ ಸರ್ಚ್ ಮಾಡಿ ಅದೇ ರೀತಿ ಮಾಡಿ ನೋಡಿದರೂ ಕೂಡ ಆ ರಿಸಲ್ಟ್ ಸಿಗದೇ ಇರಬಹುದು. ಅಂತವರು ನಿರಾಸೆ ಆಗದೆ ಇನ್ನೊಮ್ಮೆ ಈ ಪ್ರಯತ್ನವನ್ನು ಮಾಡಿ ನೋಡಿ ಖಂಡಿತ ಈ ಬಾರಿ ನೀವು ಮಾಡುವ ಕೇಸರಿಬಾತ್ 100% ರುಚಿಯಾಗಿರುತ್ತದೆ ಹಾಗೂ ಎಷ್ಟೇ ಹೊತ್ತು ಇಟ್ಟರೂ ಕೂಡ ನಿಮ್ಮ ಎಕ್ಸ್ಪೆಕ್ಟೆಶನ್ ರೀತಿಯಲ್ಲಿ ಹೂವಿನಂತೆ ಮೃದುವಾಗಿ ಇರುತ್ತದೆ.

ಮೊದಲಿಗೆ ಸಾಮಾನ್ಯವಾಗಿ ಕೇಸರಿಬಾತ್ ಮಾಡಲು ಬಳಸುವ ರೀತಿ ಎಲ್ಲಾ ಪದಾರ್ಥಗಳನ್ನು ತೆಗೆದುಕೊಳ್ಳಿ ಕೇಸರಿ ಬಾತ್ ಮಾಡಲು ಹೆಚ್ಚಿನ ಜನ ಸಣ್ಣ ರವೇ ಕೂಡ ಉಪಯೋಗಿಸುತ್ತಾರೆ. ಆದರೆ ಮೀಡಿಯಂ ರವೆ ಉಪಯೋಗಿಸುವುದು ಒಳ್ಳೆಯದು. ಇಂದು ಸಣ್ಣ ಲೋಟ ಅಥವಾ 100 ಗ್ರಾಂ ಮೀಡಿಯಂ ರವೆಯನ್ನು ತೆಗೆದುಕೊಳ್ಳಿ, ಇದರ ಜೊತೆಗೆ ಆರು ಸ್ಪೂನ್ ಆಗುವಷ್ಟು ತುಪ್ಪ ಮತ್ತು ಎಣ್ಣೆ ಬೇಕಾಗುತ್ತದೆ. ನೀವು ಎಷ್ಟು ಪ್ರಮಾಣದ ರವೆ ತೆಗೆದುಕೊಂಡಿದ್ದೀರೋ ಅಷ್ಟೇ ಪ್ರಮಾಣದ ಸಕ್ಕರೆ ಕೂಡ ತೆಗೆದುಕೊಳ್ಳಬೇಕಾಗುತ್ತದೆ. ಎರಡು ಪಿಂಚ್ ಏಲಕ್ಕಿ ಪೌಡರ್ ಹಾಗೆ ಕುದಿಸಿರುವ ನೀರು ರುಚಿಗೆ ಕೊಂಚ ಉಪ್ಪು ಹಾಗೂ ಅಲಂಕಾರಕ್ಕೆ ದ್ರಾಕ್ಷಿ ಮತ್ತು ಗೋಡಂಬಿ ಇಷ್ಟು ಇದ್ದರೆ ಸಾಕು. ರುಚಿಯಾದ ಕೇಸರಿಬಾತ್ ಅನ್ನು ಕ್ಷಣಮಾತ್ರದಲ್ಲಿ ಮಾಡಿ ಎಲ್ಲರಿಗೂ ಬಡಿಸಬಹುದು ಹಾಗೂ ಅವರ ಬಾಯಿಂದ ನೀವು ಮಾಡಿರುವ ಕೇಸರಿ ಬಾತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೂಡ ಕೇಳಿ ಖುಷಿ ಪಡಬಹುದು.

ಕೇಸರಿ ಬಾತ್ ಮಾಡಲು ತುಪ್ಪ ಹಾಗೂ ಎಣ್ಣೆಯ ಪ್ರಮಾಣ ತುಂಬಾ ಮುಖ್ಯ. ಹಾಗಾಗಿ ಮೊದಲಿಗೆ ಒಂದು ಬಾಣಲಿಯಲ್ಲಿ ಮೂರು ಚಮಚ ತುಪ್ಪ ಹಾಗು ಮೂರೂ ಚಮಚ ಎಣ್ಣೆಯನ್ನು ಹಾಕಿ ಕಾಯಲು ಇಡಿ, ಎಣ್ಣೆ ಯಾವುದನ್ನು ಹಾಕಬೇಕು ಎಂದು ಗೊಂದಲಕ್ಕೊಳಗಾಗುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ನೀವು ಮನೆಯಲ್ಲಿ ಅಡುಗೆಗೆ ಬಳಸುವ ಸನ್ ಫ್ಲವರ್ ಸನ್ಫ್ಯೂರ್ ಆಯಿಲ್ ಅನ್ನೇ ಬಳಸಬಹುದು. ಎಣ್ಣೆ ಸ್ವಲ್ಪ ಬಿಸಿಯಾದ ಮೇಲೆ ಅದರಲ್ಲಿ ಅರ್ಧ ಭಾಗದಷ್ಟು ತೆಗೆದುಕೊಂಡು ಇಡಬೇಕು ಇದನ್ನು ಕೊನೆಯಲ್ಲಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಈಗ ಉಳಿದಿರುವ ಎಣ್ಣೆಗೆ ಸ್ವಲ್ಪ ಒಣ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಉರಿದುಕೊಳ್ಳಬೇಕು. ಅದನ್ನು ಸಪರೇಟ್ ಎತ್ತಿಡುವ ಅಗತ್ಯ ಇಲ್ಲ. ಬದಲಿಗೆ ನೀವು ಅಳತೆ ಮಾಡಿ ತೆಗೆದುಕೊಂಡಿರುವ ಒಂದು ಲೋಟದಷ್ಟು ಮೀಡಿಯಂ ರವೆಯನ್ನು ಇದರ ಜೊತೆ ಹಾಕಿ ಚೆನ್ನಾಗಿ ಉರಿಯಿರಿ.

ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಮೂರು ನಾಲ್ಕು ನಿಮಿಷಗಳ ವರೆಗೆ ಅಂದರೆ ಎಣ್ಣೆ ತುಪ್ಪದಲ್ಲಿ ರವೆ ಚೆನ್ನಾಗಿ ಹೊಂದಿಕೊಂಡು ಬಿಳಿ ಬಣ್ಣ ಬಂದು ಊದಿಕೊಳ್ಳುವವರೆಗೂ ಚೆನ್ನಾಗಿ ಉರಿಯಬೇಕು. ಉರಿಯುವಾಗ ಎಷ್ಟು ತಾಳ್ಮೆಯಿಂದ ನೋಡಿಕೊಳ್ಳುತ್ತೇವೆಯೋ ಅಷ್ಟು ಕೇಸರಿಬಾತ್ ಚೆನ್ನಾಗಿ ಬರುತ್ತದೆ. ಅವಸರ ಮಾಡಿ ರವೆಯನ್ನು ಉರಿಯುವುದರಿಂದ ಅದರ ರುಚಿ ಬೇರೆಯಾಗಿ ಬಿಡುತ್ತದೆ. ಈಗ ಈ ಹದದಲ್ಲಿ ರವೆ ಇರುವಾಗ ನೀವು ಎಷ್ಟು ರವೆ ತೆಗೆದುಕೊಂಡಿದ್ದೀರಾ ಅಷ್ಟೇ ಪ್ರಮಾಣದ ಸಕ್ಕರೆಯನ್ನು ಅದಕ್ಕೆ ಹಾಕಬೇಕು ಅಥವಾ ಸಿಹಿ ಹೆಚ್ಚು ಇರಬೇಕು ಎಂದು ಇಷ್ಟಪಡುವವರು ಅದಕ್ಕಿಂತ ಸ್ವಲ್ಪ ಹೆಚ್ಚಿಗೆ ಸಕ್ಕರೆ ಸೇರಿಸಿ ರವೆ ಉರಿದಿರುವ ಬಾಣಲೆಯಲ್ಲಿ ಹಾಕಿ. ಈ ಸಮಯದಲ್ಲಿ ಸಕ್ಕರೆ ಅಂಶವನ್ನು ಬ್ಯಾಲೆನ್ಸ್ ಮಾಡಲು ಸ್ವಲ್ಪ ಉಪ್ಪು ಹಾಕುವುದನ್ನು ಮರೆಯಬಾರದು. ಈಗ ಕಡಿಮೆ ಉರಿಯಲ್ಲಿ ಇರುವಾಗಲೇ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ರವೆ ಉಪ್ಪು ಮತ್ತು ಸಕ್ಕರೆ ಎಲ್ಲಾ ಚೆನ್ನಾಗಿ ಮಿಕ್ಸ್ ಆಗುತ್ತದೆ.

ಬಣ್ಣ ಹಾಕದೆ ಕೇಸರಿಬಾತ್ ಮಾಡಲು ಇಚ್ಚಿಸುವವರು ಈ ಸಮಯದಲ್ಲಿ ಕೇಸರಿ ಹೂವನ್ನು ಬಿಸಿ ನೀರಿನಲ್ಲಿ ನೆನೆಸಿ ಇಟ್ಟುಕೊಂಡಿದ್ದು ಅದನ್ನು ಹಾಕಿ ಅವುಗಳ ಜೊತೆ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಆದರೆ ಹೋಟೆಲ್ಗಳಲ್ಲಿ ಇದಕ್ಕೆ ಬಣ್ಣವನ್ನು ಬಳಸುತ್ತಾರೆ. ಕೇಸರಿ ಹೂ ಇಲ್ಲ ಎಂದರೆ ಎರಡು ಚಿಟಕಿ ಫುಡ್ ಕಲರ್ ಕೂಡ ಬಳಸಬಹುದು. ಒಂದು ಲೋಟ ರವೆಗೆ ಎರಡೂವರೆ ಲೋಟ ಬಿಸಿ ನೀರನ್ನು ಚೆನ್ನಾಗಿ ಕುದಿಸಿಕೊಂಡು ಇಟ್ಟುಕೊಳ್ಳಬೇಕು. ಈಗ ಆ ನೀರನ್ನು ಕಡಿಮೆ ಉರಿಯಲ್ಲಿ ಉರಿಯುತ್ತಿದ್ದ ರವೆ ಮತ್ತು ಸಕ್ಕರೆ ಮಿಶ್ರಣಕ್ಕೆ ಹಾಕಬೇಕು. ಬಿಸಿ ನೀರನ್ನು ಹಾಕಿ ಈ ಮಿಶ್ರಣವನ್ನು ತಿರಿಗಿಸುತ್ತಿದ್ದರೆ 2 ರಿಂದ 3 ನಿಮಿಷಗಳಲ್ಲಿ ಇದು ಒಂದು ಹದಕ್ಕೆ ಬರುತ್ತದೆ ಎಣ್ಣೆ ತುಪ್ಪದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮತ್ತೊಮ್ಮೆ ಮಿಕ್ಸ್ ಮಾಡಿ ಇದರ ಮೇಲೆ ಒಂದು ತಟ್ಟೆಯನ್ನು ಮುಚ್ಚಿ ಒಂದರಿಂದ ಎರಡು ನಿಮಿಷ ಕಡಿಮೆ ಉರಿಯಲ್ಲಿ ಹಾಗೆ ಬಿಟ್ಟರೆ ರುಚಿರುಚಿಯಾದ ಹಾಗೂ ಸಾಫ್ಟ್ ಆದ ಕೇಸರಿಬಾತು ತಿನ್ನಲು ರೆಡಿಯಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now