ಭಾರತಕ್ಕೆ ಅಂಚೆ ಸೇವೆ ಬಂದು ಒಂದೂವರೆ ದಶಕಕ್ಕಿಂತ ಹೆಚ್ಚು ಸಮಯವೇ ಆಯಿತು. ಇದಾದ ನಂತರ ಟೆಕ್ನಾಲಜಿ ಇಂಪ್ರೂ ಆಗಿ ಅನೇಕ ಸಂಗತಿ ಬದಲಾಗಿದ್ದರೂ ಅಂಚೆ ಕಚೇರಿಗೆ ಡಿಮ್ಯಾಂಡ್ಗಳು ಕಡಿಮೆಯಾಗಿಲ್ಲ ಯಾಕೆಂದರೆ ಅಂಚೆ ಕಚೇರಿಗಳು ಕೂಡ ಈಗ ಬರಿ ಪತ್ರ ವ್ಯವಹಾರಕ್ಕೆ ಸೀಮಿತವಾಗಿಲ್ಲ ಹಲವು ಸೇವೆಗಳನ್ನು ಕಲ್ಪಿಸಿಕೊಡುವ ಮೂಲಕ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ನಮ್ಮ ದೇಶದ ಅಂಚೆ ಇಲಾಖೆಯು ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುತ್ತಿದೆ ಸದ್ಯಕ್ಕೆ ದೇಶದಲ್ಲಿ 1.5 ಲಕ್ಷಕ್ಕಿಂತ ಹೆಚ್ಚು ಅಂಚೇ ಕಚೇರಿಗಳು ಇದ್ದು, ಇದರಲ್ಲಿ 80% ಕ್ಕಿಂತ ಹೆಚ್ಚು ಹಳ್ಳಿಗಳ ಭಾಗದಲ್ಲಿಯೇ ಇದೆ ಆದರೆ ಇನ್ನೂ ಸಹ ಎಲ್ಲಾ ಹಳ್ಳಿಗಳಿಗೂ ತಲುಪಿಸಲು ಸಾಧ್ಯವಾಗಿಲ್ಲ ಹಾಗಾಗಿ ಈಗ ನಾಗರಿಕರಿಗೂ ಈ ವಿಚಾರವಾಗಿ ಅವಕಾಶ ಮಾಡಿಕೊಡಲಾಗಿದೆ.
ಅಂಚೆ ಕಚೇರಿಯ ಫ್ರಾಂಚೈಸಿಯನ್ನು ತೆರೆದು ಈ ಸೇವೆಗಳನ್ನು ನೀಡುವ ಮೂಲಕ ಅವರು ಲಾಭ ಮಾಡಬಹುದಾಗಿದೆ, ಇದರ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನೀವು ಫ್ರಾಂಚೈಸಿ ತೆರೆಯಲು ನಿರ್ಧರಿಸಿದರೆ ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು ಇಂಡಿಯನ್ ಪೋಸ್ಟ್ ಆಫೀಸ್ ಎರಡು ರೀತಿಯ ಅವಕಾಶ ನೀಡುತ್ತಿದೆ.
● ಫ್ರಾಂಚೈಸಿ ಔಟ್ಲೆಟ್:-
1. ಫ್ರಾಂಚೈಸಿ ಔಟ್ಲೆಟ್ ತೆರೆಯುವುದಾದರೆ ನಿಮಗೆ ನಿಮ್ಮದೇ ಆದ 200-250Sq.ft ಸ್ವಂತ ಜಾಗ ಇರಬೇಕು.
2. ಪೋಸ್ಟಲ್ ಸರ್ವಿಸ್ ನೀಡುವುದಕ್ಕೆ ಕೆಲ ಸಾಧನಗಳನ್ನು ಕೂಡ ನೀವು ಇಟ್ಟುಕೊಳ್ಳಬೇಕು.
3. ಪೋಸ್ಟ್ ಆಫೀಸ್ ಫ್ರಾಂಚೈಸಿಯವರೇ ನಿಮಗೆ ಇದಕ್ಕೆ ಬೇಕಾದ ಔಟ್ಲೆಟ್ ಹಾಗೂ ನೌಕರರಿಗೆ ಮತ್ತು ನಿಮಗೆ ಫ್ರಾಂಚೈಸಿ ನಡೆಸುವುದರ ಬಗ್ಗೆ ತರಬೇತಿ ಸಹ ನೀಡುತ್ತಾರೆ
4. ಮನಿ ಆರ್ಡರ್, ಫಾರ್ಮ್ ಫಿಲ್ಲಿಂಗ್ ಪೋಸ್ಟಲ್ ಇನ್ಸೂರೆನ್ಸ್ ಮತ್ತು ಟ್ರಾನ್ಸಾಕ್ಷನ್ಸ್ ಇನ್ನು ಮುಂತಾದ ಬಹುತೇಕ ಅಂಚೆ ಕಚೇರಿ ಎಲ್ಲ ಸೇವೆಗಳನ್ನು ನೀಡಬಹುದು.
● ಪೋಸ್ಟ್ ಆಫೀಸ್ ಸ್ಟೇಷನರೀಸ್:-
1. ಅಂಚೆ ಇಲಾಖೆಗೆ ಸಂಬಂಧಿಸಿದಂತಹ ಫಾರಂಗಳು, ಚೀಟಿಗಳು ಇತ್ಯಾದಿ ಸ್ಟೇಷನರಿ ವಸ್ತುಗಳನ್ನು ನೀವು ಇದರಲ್ಲಿ ಸೇಲ್ ಮಾಡಬಹುದು.
2. ಪೋಸ್ಟಲ್ ಸರ್ವಿಸ್ ಗಿಂತ ಈ ಉದ್ಯಮಕ್ಕೆ ಹೆಚ್ಚು ಬಂಡವಾಳ ಬೇಕಾಗುತ್ತದೆ.
3. ಇದರಲ್ಲಿ ನಿಮಗೆ ಕೆಲವೇ ಕೆಲವು ಸೇವೆಗಳನ್ನು ನೀಡಲು ಅನುಮತಿಸಲಾಗಿರುತ್ತದೆ.
ಫ್ರಾಂಚೈಸಿ ಆರಂಭಿಸಲು ಅರ್ಹತೆಗಳು:-
● ಭಾರತೀಯರಿಗೆ ಮಾತ್ರ ಫ್ರಾಂಚೈಸಿ ತೆರೆಯಲು ಅನುಮತಿ
● 8ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿರಬೇಕು
● 18 ವರ್ಷ ಮೇಲ್ಪಟ್ಟವರು ಮಾತ್ರ ಫ್ರಾಂಚೈಸಿ ತೆರೆಯಬಹುದು.
● ಇನ್ನೊಂದು ಬಹು ಮುಖ್ಯವಾದ ಕಂಡಿಷನ್ ಏನೆಂದರೆ ನೀವು ಈ ರೀತಿ ಪ್ರಾರಂಭಿಸರಬೇಕೆಂದರೆ ನೀವು ಆಯ್ದುಕೊಳ್ಳುವ ಸ್ಥಳದ ಸುತ್ತಮುತ್ತ 10 ಕಿ.ಮೀ ಅಂತರದಲ್ಲಿ ಭಾರತೀಯ ಅಂಚೆ ಇಲಾಖೆಯ ಠಾಣೆಗಳು ಇರಬಾರದು.
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ವಿಳಾಸ ಪುರಾವೆ
● ಜನನ ಪ್ರಮಾಣ ಪತ್ರ
● ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ಪುರಾವೆಗಳು
● ಇತ್ತೀಚಿನ ಭಾವಚಿತ್ರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಗೃಹಲಕ್ಷ್ಮೀ ಯೋಜನೆ 2ನೇ ಕಂತಿನ ಹಣ ಯಾವಾಗ ಬಿಡುಗಡೆ.? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿಖರ ಮಾಹಿತಿ.!
ಪ್ರಾಚೈಂಸಿ ಪಡೆದುಕೊಳ್ಳುವ ಮತ್ತು ನಿಮಗೆ ಆದಾಯ ಬರುವ ವಿಧಾನದ ಮಾಹಿತಿ:-
● ಆನ್ಲೈನ್ ನಲ್ಲಿ ಇಂಡಿಯನ್ ಪೋಸ್ಟ್ ಆಫೀಸ್ ಸರ್ವಿಸಸ್ ವೈಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿ ಫ್ರಾಂಚೈಸಿ ಪಡೆದುಕೊಳ್ಳಬಹುದು
● ಹತ್ತಿರದಲ್ಲಿರುವ ಅಂಚೆ ಕಚೇರಿಗೆ ಹೋಗಿ ಕೂಡ ಆಫ್ ಲೈನ್ ನಲ್ಲಿ ಇದಕ್ಕೆ ಅರ್ಜಿ ಸಲ್ಲಿಸಬಹುದು ಆ ಸಮಯದಲ್ಲಿ ಅಪ್ಡೇಟ್ ಆಗಿರುವ ಎಲ್ಲಾ ದಾಖಲೆ ಪತ್ರಗಳನ್ನು ಕೂಡ ನೀವು ಸಲ್ಲಿಸಬೇಕು.
● ಡೆಪೋಸಿಟ್ ಆಗಿ ನೀವು ಆರಂಭದಲ್ಲಿ 5,000 ಯನ್ನು ಕಟ್ಟಬೇಕು ನೀವು ಇರುವ ಪ್ರದೇಶದ ಮೇಲೆ ಈ ಡೆಪಾಸಿಟ್ ಮೊತ್ತ ವ್ಯತ್ಯಾಸವಾಗುತ್ತದೆ.
● ಅಂಚೆಕಛೇರಿ ಪ್ರತಿಯೊಂದು ಸೇವೆಗೂ ಇಂತಿಷ್ಟು ಕಮಿಷನ್ ಅಥವಾ ಇಷ್ಟು ಪರ್ಸೆಂಟ್ ಪ್ರಾಫಿಟ್ ಶೇರ್ ಪಡೆದುಕೊಳ್ಳಲು ಅವಕಾಶವಿರುತ್ತದೆ. ನೀವು ನಿಮ್ಮ ಇಚ್ಛೆಯ ಆಯ್ಕೆಯನ್ನು ಸೆಲೆಕ್ಟ್ ಮಾಡಬಹುದು.
ಬೇಕಾಗಬಹುದಾದ ಬಂಡವಾಳ:-
ನೀವು ಚಿಕ್ಕದಾದ ಚೊಕ್ಕದಾದ ಫ್ರಾಂಚೈಸಿ ಓಪನ್ ಮಾಡಲು ಬಯಸಿದರೂ 2-3 ಲಕ್ಷ ಖರ್ಚಾಗುತ್ತದೆ. ಅದರ ಮೇಲೆ ನೀವು ನಿಮ್ಮ ಆಸಕ್ತಿ ಅನುಸಾರ ಅಥವಾ ಲಾಭ ನಷ್ಟ ನೋಡಿಕೊಂಡು ಅದನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ವಿಸ್ತರಿಸಿಕೊಳ್ಳಬಹುದು.