ಪೂರ್ವ ಜನ್ಮದ ನೆನಪು, ಜನ್ಮರಹಸ್ಯ, ಜನುಮ ಜನುಮದ ಅನುಬಂಧ ಈ ರೀತಿ ಪದಗಳು ಬಹಳ ಕುತೂಹಲವನ್ನು ಉಂಟು ಮಾಡುತ್ತವೆ. ಹಾಗೆಯೇ ಸ್ವಲ್ಪ ಭಯವನ್ನು ಕೂಡ ತರಿಸುತ್ತವೆ. ಯಾಕೆಂದರೆ ಒಬ್ಬ ನಾರ್ಮಲ್ ವ್ಯಕ್ತಿಗೆ ಆತನ ಹಿಂದಿನ ಜನ್ಮದ ಯಾವ ನೆನಪು ಸಹ ಇರುವುದಿಲ್ಲ.
ಆದರೆ ಕೆಲವರು ವಿಚಾರದಲ್ಲಿ ಇದು ಸಂಪೂರ್ಣವಾಗಿ ಇದು ಮರೆತು ಹೋಗಿರುವುದಿಲ್ಲ, ಅದರಲ್ಲೂ ಬಾಲ್ಯದ ದಿನಗಳಲ್ಲಿ ಹೆಚ್ಚಾಗಿ ಹಿಂದಿನ ಜನ್ಮದ ಜೊತೆಗಿನ ನೆನಪುಗಳು ಕನೆಕ್ಟ್ ಆಗುತ್ತಿರುತ್ತವೆ ಎಂದು ಹೇಳಲಾಗುತ್ತದೆ. ಕೆಲವೊಂದು ಸೂಚನೆಗಳು ಹಾಗೂ ಸಂಕೇತಗಳು ನಮಗೆ ಪೂರ್ವ ಜನ್ಮದ ಬಗ್ಗೆ ಸುಳಿವು ನೀಡುತ್ತಿರುತ್ತವೆ.
ಪೋಸ್ಟ್ ಆಫೀಸ್ ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ 1 ಲಕ್ಷ ಲಾಭ ಪಡೆಯಿರಿ.!
ಆದರೆ ಇದು ಸಂಪೂರ್ಣವಾಗಿ ಸ್ಪಷ್ಟವಾಗಿ ನೆನಪಾಗುವುದಿಲ್ಲ ಅಂತಹ ಕೆಲವು ವಿಷಯಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನಿಮಗೂ ಈ ಅನುಭವವಾಗಿದೆಯೇ ಚೆಕ್ ಮಾಡಿಕೊಳ್ಳಿ.
● ಕೆಲವರು ಮೊದಲ ಬಾರಿಗೆ ಯಾವುದಾದರೂ ಒಂದು ಜಾಗಕ್ಕೆ ಹೋದಾಗ ಹೆಚ್ಚಾಗಿ ಮಕ್ಕಳಿಗೆ ಈ ಅನುಭವ ಆಗಿರುತ್ತದೆ. ಅವರು ಅದೇ ಮೊದಲ ಬಾರಿಗೆ ಆ ಜಾಗಕ್ಕೆ ಹೋದರು ಅಲ್ಲಿನ ಎಲ್ಲಾ ದಾರಿಗಳು, ವಿಷಯಗಳು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ ಹಲವು ಬಾರಿ ಈ ಜಾಗಕ್ಕೆ ಬಂದ ರೀತಿ ಅನಿಸುತ್ತಿರುತ್ತದೆ ಇದು ಪೂರ್ವ ಜನ್ಮದ ನಂಟನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
● ನಿತ್ಯ ಜೀವನದ ಕೆಲವು ಘಟನೆಗಳು ಕೂಡ ಹಿಂದಿನ ಜನ್ಮದೊಂದಿಗೆ ಕನೆಕ್ಟ್ ಆಗಿರುತ್ತವೆ. ಒಂದು ವೇಳೆ ನೀವು ವಿಪರೀತವಾಗಿ ಭಯ ಪಡುತ್ತಿದ್ದರೆ ಅಥವಾ ವಿನಾಕಾರಣ ಚಿಂತೆಯಲ್ಲಿ ಇದ್ದರೆ ನಿಮ್ಮ ಕಳೆದ ಜನ್ಮದ ಸಾ.ವು ಅಸ್ವಾಭಾವಿಕವಾಗಿ ಇತ್ತು ಎಂದೇ ಅರ್ಥ. ಅದರಲ್ಲೂ ನೀವು ತುಂಬಿದ ಕೆರೆ ನೀರು, ಎತ್ತರದ ಪ್ರದೇಶ, ಬೆಂಕಿ, ಹರಿತವಾದ ವಸ್ತು, ಕತ್ತಲು ಇವುಗಳ ಬಗ್ಗೆ ಬಾಲ್ಯದಿಂದಲೇ ವಿಪರೀತವಾಗಿ ಭಯ ಪಡುತ್ತಿದ್ದರೆ, ನಿಮ್ಮ ಹಿಂದಿನ ಜನ್ಮಕ್ಕೆ ಇದು ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ.
● ಯಾವುದಾದರೂ ಬಣ್ಣ ರುಚಿ ವಾಸನೆ ಇವುಗಳಿಗೆ ನೀವು ಭಯ ಪಡುತ್ತಿದ್ದರೆ ಅದು ಕೂಡ ಅಸಹಜ ಎಂದು ಹೇಳಲಾಗುತ್ತದೆ ಅದರ ಜೊತೆಗೂ ನಿಮಗೆ ಹಿಂದಿನ ಜನ್ಮದ ಗಂಟಿರಬಹುದು
● ಇನ್ನು ಕೆಲವರಿಗೆ ಯಾವುದೇ ಹೊಸ ವ್ಯಕ್ತಿಯ ಪರಿಚಯವು, ನೀವು ಮೊದಲ ಬಾರಿಗೆ ಅವರನ್ನು ಭೇಟಿಯಾದರು ಅನೇಕ ದಿನಗಳಿಂದ ಅವರು ನಿಮಗೆ ಗೊತ್ತಿರುವ ರೀತಿ ಫೀಲ್ ಬರುತ್ತದೆಹ ಆ ರೀತಿ ಆದಾಗ ಅವರು ನಿಮ್ಮ ಜೊತೆ ಹಿಂದಿನ ಜನ್ಮದಲ್ಲಿ ನಂಟು ಹೊಂದಿದ್ದವರಾಗಿರಬಹುದು ಎಂದು ಹೇಳಲಾಗುತ್ತದೆ.
ಗೃಹಲಕ್ಷ್ಮೀ ಯೋಜನೆ 2ನೇ ಕಂತಿನ ಹಣ ಯಾವಾಗ ಬಿಡುಗಡೆ.? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿಖರ ಮಾಹಿತಿ.!
● ಪದೇಪದೇ ಕನಸಿನಲ್ಲಿ ನೀವು ಇದುವರೆಗೂ ನೋಡಿರದೆ ಇದ್ದ ಒಂದು ಮನೆ ಅಥವಾ ವ್ಯಕ್ತಿಗಳು ಬರುತ್ತಾ ಇದ್ದರೆ ಅದು ಕೂಡ ನಿಮ್ಮ ಪೂರ್ವಜನ್ಮದ ನೆನಪು ಆಗಿರಬಹುದು ಎಂದು ಹೇಳಲಾಗುತ್ತದೆ.
● ಇನ್ನು ಕೆಲವು ಸಂಶೋಧನೆಗಳ ಪ್ರಕಾರ ನೀವು ನಿಮ್ಮ ದೇಹದಲ್ಲಿ ಹೊಂದಿರುವ ಮಚ್ಚೆಗಳು ಅಥವಾ ಇನ್ಯಾವುದೇ ಮಾರ್ಕ್ ಗಳು ನಿಮ್ಮ ಕಳೆದ ಜನ್ಮದ ಘಟನೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳುತ್ತಾರೆ.
● ನೀವು ಯಾವುದೇ ವಿಶೇಷ ಕಾರಣ ಇಲ್ಲದೆ ಒಂದು ವಸ್ತುವನ್ನು ಅಥವಾ ವಿಷಯವನ್ನು ವಿಪರೀತವಾಗಿ ಇಷ್ಟಪಡುವುದು ಅಥವಾ ವಿನಾಕಾರಣವಾಗಿ ಅದನ್ನು ದ್ವೇಷಿಸುವುದು ಮಾಡುತ್ತಿದ್ದರೆ ಅದು ಕೂಡ ಈ ಜನ್ಮದಲ್ಲಿ ಸಂಬಂಧಪಡದೆ ಈ ರೀತಿ ಆಗುತ್ತಿದ್ದರೆ ಅದು ಕಳೆದ ಜನ್ಮದ ಕಾರಣದಿಂದ ಹೀಗಾಗುತ್ತಿದೆ ಎಂದು ಹೇಳಲಾಗುತ್ತಿದೆ.