ಹಣ ಗಳಿಸುವುದು, ಹಣವನ್ನು ಬಳಸುವುದು ಬಂದ ಹಣವನ್ನು ಸರಿಯಾಗಿ ನಿರ್ವಹಿಸುವುದು ಅಷ್ಟು ಸುಲಭವಾದ ವಿಚಾರವಲ್ಲ. ಕೈ ತುಂಬಾ ಹಣ ಬರುತ್ತಿದ್ದರು ಅದರ ಬೆಲೆ ಗೊತ್ತಿಲ್ಲ ಎಂದರೆ ಅಥವಾ ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದರೆ ಸಂಬಳ ಪಡೆದ ನಾಲ್ಕೈದು ದಿನಕ್ಕೆ ಮತ್ತೊಬ್ಬರ ಬಳಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ.
ಇದನ್ನು ತಪ್ಪಿಸಲು ಪ್ರತಿಯೊಬ್ಬರೂ ಕೂಡ ಈ ರೀತಿ ಹಣಕಾಸಿನ ಬಗ್ಗೆ ನಾಲೆಡ್ಜ್ ಹೊಂದಿರಲೇಬೇಕು. ನೀವು ಕೂಡ ಫೈನಾನ್ಸಿಯಲ್ ಸ್ಕಿಲ್ ಕಲಿಯಬೇಕಿದ್ದರೆ ಮುಖ್ಯವಾಗಿ ಈಗ ನಾವು ಹೇಳುವ ಅಂಶಗಳ ಬಗ್ಗೆ ಹೆಚ್ಚು ಕೊಡಿ.
ಹಿಂದಿನ ಜನ್ಮದಲ್ಲಿ ನಿಮ್ಮ ಮೃ’ತ್ಯು ಯಾವ ಕಾರಣದಿಂದ ಆಗಿತ್ತು ಎಂದು ತಿಳಿಸುವ 7 ಸಂಕೇತಗಳು ಇವು.!
● ಬೇಸಿಕ್ ಬಜೆಟ್:- ನೀವು ನಿಮ್ಮ ಪ್ರತಿಯೊಂದು ಖರ್ಚು ವೆಚ್ಚವನ್ನು ಬಜೆಟ್ ಮಾಡಿ ಇಡಬೇಕು. ಈ ರೀತಿ ಬಳಕೆ ಮಾಡಿದ ಹಣಕ್ಕೆ ಲೆಕ್ಕ ಬಿಡದೆ ಹೋದರೆ ಅದೊಂದು ಅಶಿಸ್ತು ಆಗುತ್ತದೆ. ನಮ್ಮ ಹಣ ಸರಿಯಾದ ರೀತಿಯಲ್ಲಿ ಬಳಕೆ ಆಗಬೇಕು ಎಂದರೆ ನಾವು ಅದನ್ನು ಬಜೆಟ್ ಮಾಡಿ ನೋಡಿದಾಗ ಸ್ಪಷ್ಟ ಚಿತ್ರಣ ಬರುತ್ತದೆ.
ಯಾವುದು ಬೇಕು ಯಾವುದು ಎಷ್ಟು ಪ್ರಮಾಣದಲ್ಲಿ ಬೇಕು ಮತ್ತು ಯಾವುದು ಅಗತ್ಯ ಹಾಗೂ ಅನಿವಾರ್ಯ ಎಲ್ಲೆಲ್ಲಿ ಹಣ ದುಂದು ವೆಚ್ಚವಿಗಿದೆ ಎನ್ನುವುದರ ಸರಿಯಾಗಿ ಚಿತ್ರಣ ಸಿಗುತ್ತದೆ. ನೀವು ಎರಡು ರೀತಿ ಬಜೆಟ್ ಮಾಡಬಹುದು. ಒಂದು ತಿಂಗಳು ಪೂರ್ತಿ ನೀವು ಖರ್ಚು ಮಾಡಿದ ಎಲ್ಲಾ ಹಣದ ಲೆಕ್ಕಾಚಾರ ಅಥವಾ ಖರ್ಚು ಮಾಡುವ ಮುಂದೆಯೇ ಈ ತಿಂಗಳು ನೀವು ಯಾವುದಕ್ಕೆಲ್ಲ ಖರ್ಚು ಮಾಡಬೇಕು ಎನ್ನುವುದರ ಲೆಕ್ಕಾಚಾರ.
ಪೋಸ್ಟ್ ಆಫೀಸ್ ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ 1 ಲಕ್ಷ ಲಾಭ ಪಡೆಯಿರಿ.!
● ಅನಾಲಿಟಿಕಲ್ ಸ್ಕಿಲ್:- ಈ ವಿಧಾನದಲ್ಲಿ ಮಾರುಕಟ್ಟೆಯಲ್ಲಿ ಯಾವ ರೀತಿಯಲ್ಲಿ ಹೊಸ ಯೋಜನೆಗಳು ಬಂದಿವೆ. ಯಾವುದರ ಬಗ್ಗೆ ಹೆಚ್ಚು ಜನಸಾಮಾನ್ಯರು ಆಸಕ್ತಿ ತೋರುತ್ತಿದ್ದಾರೆ ಯಾವುದು ಹೆಚ್ಚು ಲಾಭದಾಯಕವಾಗಿದೆ ಎನ್ನುವುದರ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳುತ್ತಿರಬೇಕು.
● ಡಿಜಿಟಲ್ ಸ್ಕಿಲ್:- ಭಾರತವು ಕೂಡ ಡಿಜಿಟಲ್ ಇಂಡಿಯಾವನ್ನು ಬೆಂಬಲಿಸುತ್ತದೆ, ಎಲ್ಲ ಕ್ಷೇತ್ರಗಳಲ್ಲೂ ಆನ್ಲೈನ ಮೂಲಕವೇ ಹಣಕಾಸಿನ ವಹಿವಾಟುಗಳು ನಡೆಯುತ್ತಿವೆ. ಹಾಗೆ ಬ್ಯಾಂಕಿಂಗ್ ಕ್ಷೇತ್ರ ಕೂಡ ಡಿಜಿಟಲೈಸ್ ಆಗಿದೆ. ನಾವು ಯಾರಿಗೆ ಹಣವನ್ನು ಕೊಡಬೇಕಿದ್ದರೂ UPI ಆಧಾರಿತ ಆಪ್ ಗಳ ಮೊರೆ ಹೋಗುತ್ತೇವೆ ಅಥವಾ ನಮಗೆ ಯಾವುದೇ ಮೂಲದಿಂದ ಹಣ ಬರಬೇಕಾದರೂ ನೇರವಾಗಿ DBT ಮೂಲಕ ಬ್ಯಾಂಕ್ ಖಾತೆಗೆ ಬರುತ್ತದೆ.
ಆದ್ದರಿಂದ ಇದರ ಬಗ್ಗೆ ನಾಲೆಡ್ಜ್ ಇರುವುದು ಮುಖ್ಯ. ಯಾಮಾರಿದರೆ ಬ್ಯಾಂಕ್ ಖಾತೆಯ ಪೂರ್ತಿ ಹಣ ಲೂಟಿಯಾಗಿ ಬಿಡುತ್ತದೆ. ಅನಧಿಕೃತ ಲಿಂಕ್ ಅಥವಾ ಆಪ್ ಗಳ ಮೂಲಕ ಸಾಲ ನೀಡುವುದು ಇವುಗಳ ಬಗ್ಗೆ ಜಾಗೃತರಾಗಿರಬೇಕು. ಇತ್ತೀಚೆಗೆ ಸೈಬರ್ ವಂಚನೆಯ ಹೆಚ್ಚಾಗುತ್ತಿದೆ.
● ಅಗತ್ಯತೆಗಳು ಹಾಗೂ ಆಸೆಗಳ ನಡುವಿನ ಸ್ಪಷ್ಟ ವ್ಯತ್ಯಾಸ ನಿಮಗೆ ಗೊತ್ತಿರಬೇಕು. ನೀವು ದೊಡ್ಡ ಮೊತ್ತದ ಹಣವನ್ನು ಕ್ಷಣ ಕಾಲದ ಆಸೆಗಳ ಮೇಲೆ ವಿನಿಯೋಗಿಸುತ್ತಿದ್ದರೆ ಆ ತಪ್ಪನ್ನು ಮಾಡಬೇಡಿ ಅದಕ್ಕೆ ಇನ್ನೂ ಸ್ವಲ್ಪ ದಿನ ಮುಂದೂಡಿ.
● ಸಾಲ:- ನೀವು ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಬಹುದು ಅಥವಾ ಬ್ಯಾಂಕ್ ಗಳಿಂದ, ಇನ್ನಿತರ ಮೂಲಗಳಿಂದ ಸಾಲವನ್ನೇ ಪಡೆದಿರಬಹುದು. ಈ ರೀತಿ ಪಡೆದ ಸಾಲಗಳಿಗೆ ನಿಮ್ಮ ವಂತಿಕೆಯನ್ನು ತಪ್ಪದೆ ಪಾವತಿಸಬೇಕು. ನೀವು ಒಂದು ವೇಳೆ ಒಂದು ತಿಂಗಳು, ಎರಡು ತಿಂಗಳು ಇದನ್ನು ಮಿಸ್ ಮಾಡಿದ್ದಲ್ಲಿ ಅದಕ್ಕೆ ಬೀಳುವ ದಂಡದ ಹಣ ಸೇರಿಸಿ ನೀವು ಕಟ್ಟಬೇಕಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಕುಸಿಯುತ್ತದೆ. ಹಾಗಾಗಿ ಈ ವಿಚಾರವಾಗಿ ಎಚ್ಚರಿಕೆ ಇರಲಿ, ಆದಷ್ಟು ಬೇಗ ಸಾಲಮುಕ್ತರಾಗಲು ಮೊದಲು ಪ್ರಯತ್ನಿಸಿ
● ಉಳಿತಾಯ:- ನಿಮಗೆ ಬರುವ ಸಂಬಳದಲ್ಲಿ ನೀವು ಕನಿಷ್ಠ 20%-30% ಕಡ್ಡಾಯವಾಗಿ ಮುಂದಿನ ಭವಿಷ್ಯಕ್ಕಾಗಿ ಉಳಿತಾಯ ಮಾಡಲೇಬೇಕು. ಯಾವುದಾದರೂ ಉತ್ತಮವಾದ ಯೋಜನೆಯನ್ನು ಆರಂಭಿಸಿ ಉಳಿತಾಯ ಮಾಡಿ ಹಣ ಬಂದ ತಕ್ಷಣ ಮೊದಲು ಉಳಿತಾಯ ನಂತರ ನಿಮ್ಮ ಪ್ರತಿ ತಿಂಗಳ ಖರ್ಚು ವೆಚ್ಚ ಇವುಗಳಿಗೆ ಹಣವನ್ನು ವಿನಿಯೋಗಿಸಿ.