ಮನುಷ್ಯನಾಗಿ ಹುಟ್ಟಿದಂತಹ ಎಲ್ಲರಿಗೂ ಕೂಡ ಸ್ವಂತ ಮನೆ ನಿರ್ಮಾಣ ಮಾಡಬೇಕು ಎಂಬ ಆಸೆ ಕನಸು ಇದ್ದೇ ಇರುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದಂತಹ ಜನರಿಗೆ ಸ್ವಂತ ಮನೆ ಕಟ್ಟುವಂತಹ ಕನಸು ಕನಸಾಗಿಯೇ ಉಳಿಯುತ್ತದೆ. ಹಾಗಾಗಿ ಇಂತಹ ವರ್ಗದ ಜನರಿಗೆ ಮನೆ ಕಟ್ಟಿಕೊಳ್ಳುವುದಕ್ಕೆ ಇದೀಗ ಕೇಂದ್ರ ಸರ್ಕಾರ ಸಹಾಯ ಧನವನ್ನು ಘೋಷಣೆ ಮಾಡಿದೆ.
ಹೌದು ಜನರ ಮೂಲಭೂತ ಸೌಕರ್ಯಗಳಲ್ಲಿ ಒಂದಾದಂತಹ ಮನೆ ನಿರ್ಮಾಣ ಮಾಡಿಕೊಡುವುದು ಇದೀಗ ಕೇಂದ್ರ ಸರ್ಕಾರದ ಧ್ಯೇಯ ಉದ್ದೇಶವಾಗಿದೆ. ಬಡ ವರ್ಗದ ಜನರು ತಮ್ಮದೇ ಸ್ವಂತ ಸೂರನ್ನು ನಿರ್ಮಾಣ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದಾಗಿ ಪ್ರಧಾನಮಂತ್ರಿ ಆದಂತಹ ನರೇಂದ್ರ ಮೋದಿಯವರು ಈ 2024 ಫೆಬ್ರವರಿಯಲ್ಲಿ ಮಂಡಣೆ ಆಗುವಂತಹ ಬಜೆಟ್ ನಲ್ಲಿ ವಸತಿ ನಿರ್ಮಾಣಕ್ಕಾಗಿಯೇ ವಿಶೇಷವಾದಂತಹ ಕೊಡುಗೆಯನ್ನು ನೀಡಿದ್ದಾರೆ.
ಈ ಸುದ್ದಿ ಓದಿ:- ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಇನ್ಮುಂದೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರಲ್ಲ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!
ಈ ವಿಚಾರವನ್ನು ಸ್ವತಃ ಹಣಕಾಸು ಮಂತ್ರಿ ಆದಂತಹ ನಿರ್ಮಲಾ ಸೀತಾರಾಮನ್ ಅವರೇ ತಿಳಿಸಿದ್ದಾರೆ. ಭಾರತದಲ್ಲಿ ಇದೀಗ 130 ಕೋಟಿಗೂ ಅಧಿಕ ಜನಸಂಖ್ಯೆ ಇದ್ದು 20 ಕೋಟಿಗೂ ಅಧಿಕ ಜನರು ಸ್ವಂತ ಮನೆ ಇಲ್ಲದೆ ಬದುಕುತ್ತಿದ್ದಾರೆ. ಹಾಗಾಗಿ ಇಂತಹ ಬಡ ವರ್ಗದ ಜನರಿಗೆ ಸ್ವಂತ ಮನೆಯನ್ನು ನಿರ್ಮಿಸಿ ಕೊಡುವ ಉದ್ದೇಶದಿಂದಾಗಿ 2024-25ರ ಬಜೆಟ್‌ನಲ್ಲಿ 1,013 ಶತಕೋಟಿ ರೂಪಾಯಿಗಳನ್ನು ವಸತಿ ನಿರ್ಮಾಣ ಮಾಡಲು ಬಳಸಲು ಸರ್ಕಾರ ನಿರ್ಧರಿಸಿದೆ.
ಈ ಒಂದು ಸವಲತ್ತನ್ನು ಮನೆ ಇಲ್ಲದವರು ಪಡೆದುಕೊಳ್ಳಬಹುದಾಗಿದೆ ಗ್ರಾಮೀಣ ಭಾಗದಲ್ಲಿ ವಾಸ ಮಾಡುವಂತಹ ಜನರು ಹಾಗೂ ಪಟ್ಟಣ ಪ್ರದೇಶದಲ್ಲಿ ಸ್ವಂತ ಮನೆ ಇಲ್ಲದೆ ಇರುವಂತಹ ಜನರು ಈ ಒಂದು ವಸತಿ ಯೋಜನೆ ಅಡಿ ತಮ್ಮ ಕನಸಿನ ಮನೆಯನ್ನು ನನಸಾಗಿ ಮಾಡಿಕೊಳ್ಳಬಹುದಾಗಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಗೃಹ ಸಾಲ ಪಡೆದು ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸುವವರಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಸಬ್ಸಿಡಿ ನೀಡುವ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಿದೆ.
ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ.? ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!
ಸರ್ಕಾರ ಕೇವಲ ಇದಿಷ್ಟು ಸವಲತ್ತುಗಳನ್ನು ಮಾತ್ರ ಒದಗಿಸಿ ಕೊಡುವುದಲ್ಲದೆ ಬ್ಯಾಂಕ್ ಗಳೊಂದಿಗೆ ಕೂಡ ಮಾತುಕತೆಯನ್ನು ನಡೆಸಿ ಕಡಿಮೆ ಬಡ್ಡಿ ದರದಲ್ಲಿ ಮನೆ ಕಟ್ಟುವವರಿಗೆ ಸಾಲವನ್ನು ನೀಡುವಂತೆ ಮಾರ್ಗಸೂಚಿಯನ್ನು ಹೊರಡಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಸ್ವಂತ ಮನೆಯನ್ನು ಕಟ್ಟಿಕೊಳ್ಳುವಂತಹ ಜನರಿಗೆ ಸರ್ಕಾರದ ವತಿಯಿಂದ ಸಬ್ಸಿಡಿ ಹಣ ದೊರೆಯುವುದು ಮಾತ್ರವಲ್ಲದೆ. ಬ್ಯಾಂಕ್ ಗಳ ಮುಖಾಂತರವೂ ಕೂಡ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿಕೊಡುವುದಕ್ಕೆ ಸಂಪೂರ್ಣವಾದಂತಹ ಬೆಂಬಲವನ್ನು ಸೂಚಿಸಿದೆ.
ಸ್ವಂತ ಮನೆ ಕಟ್ಟು ಕೊಳ್ಳುವಂತಹ ಆಸೆ ಇರುವಂತವರು ಫೆಬ್ರವರಿ 2024ರ ಬಜೆಟ್ ಮಂಡನೆಯ ನಂತರ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಇನ್ನೇನು 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಎಲ್ಲ ಪಕ್ಷದವರು ಕೂಡ ಜನರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಂತಹ ನಿಟ್ಟಿನಲ್ಲಿದ್ದಾರೆ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿಗೆ ಸಿಗಲಿದೆ 5 ಲಕ್ಷ.!
ಹಾಗೆಯೇ ಇದೀಗ ಆಡಳಿತ ಪಕ್ಷದಲ್ಲಿ ಇರುವಂತಹ ಬಿಜೆಪಿ ಸರ್ಕಾರವು ಕೂಡ ಜನರಿಗೆ ಬಹು ಮುಖ್ಯವಾಗಿ ಬೇಕಾದಂತಹ ಮನೆಯನ್ನು ಕಟ್ಟಿಕೊಡುವಂತಹ ಕೆಲಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಈ ಕಾರಣಕ್ಕಾಗಿಯೇ ಸಬ್ಸಿಡಿ ಹಣ ಮಾತ್ರವಲ್ಲದೆ ಎಲ್ಲ ರೀತಿಯಾದಂತಹ ಸೌಲಭ್ಯವನ್ನು ಒದಗಿಸಿ ಕೊಡುತ್ತಿರುವುದು. ಅದೇನೇ ಆಗಲಿ ಒಟ್ಟಾರೆಯಾಗಿ ಬಡವರ್ಗದ ಜನರಿಗೂ ಕೂಡ ತಮ್ಮ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವಂತಹ ಕನಸು ಆದಷ್ಟು ಬೇಗ ಈಡೇರಲಿ ಎಂಬುದಷ್ಟೇ ನಮ್ಮ ಆಶಯ ಈ ಮಾಹಿತಿಯನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ ಧನ್ಯವಾದಗಳು.!