ಅಂಚೆ ಕಚೇರಿಯ ಉಳಿತಾಯ ಯೋಜನೆಗಳ (Post Office Saving Schemes) ಬಹು ಮುಖ್ಯ ಉಪಯೋಗವೇನೆಂದರೆ, ನಾವು ಹೂಡಿಕೆ ಮಾಡಿದ ಹಣಕ್ಕೆ ನೂರಕ್ಕೆ ನೂರರಷ್ಟು ಸರ್ಕಾರವೇ ಭದ್ರತೆ ನೀಡುತ್ತದೆ ಎನ್ನುವುದು. ಇದರೊಂದಿಗೆ ಇನ್ನು ಹೆಚ್ಚಿನ ಅನುಕೂಲತೆ ಏನೆಂದರೆ ಇತ್ತೀಚೆಗೆ ಅಂಚೆ ಕಚೇರಿಗಳು ಕೂಡ ತಮ್ಮ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಿವೆ (Intrest rates) ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಇದು ಪರೀಷ್ಕೃತಗೊಳ್ಳುತ್ತಿರುತ್ತದೆ.
ಪ್ರಸ್ತುತವಾಗಿ ಅಂಚೆ ಕಛೇರಿಯಲ್ಲಿ 12ಕ್ಕೂ ಹೆಚ್ಚು ಉಳಿತಾಯ ಯೋಜನೆಗಳಿವೆ. ಅದರಲ್ಲಿ ಗಂಡ ಹೆಂಡತಿ ಇಬ್ಬರಿಂದ ಗರಿಷ್ಠ 5 ಲಕ್ಷ ಲಾಭ ಪಡೆಯಬಹುದಾದ ಒಂದು ಉತ್ತಮ ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ (Post Office Monthly Income Scheme) ಎನ್ನುವುದು ಅಂಚೆ ಕಚೇರಿ ಯೋಜನೆಗಳಲ್ಲಿ ಬಹಳ ವಿಶೇಷವಾಗಿದ್ದು.
ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಬೇಸರದ ಸುದ್ದಿ.! ಹೋಂ ಲೋನ್, ಗೋಲ್ಡ್ ಲೋನ್, ಎಜುಕೇಶನ್ ಲೋನ್, ಪರ್ಸನಲ್ ಲೋನ್, EMI ಇನ್ನಿತರ ಸಾಲ ಮಾಡಿದವರು ನೋಡಿ.!
ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಮೊತ್ತದ ಹಣವನ್ನು ಮೆಚ್ಯುರಿಟಿ ಅವಧಿಯಲ್ಲಿ ಹಿಂಪಡೆಯಬಹುದು. ಇದರಲ್ಲಿ ಲಾಭವೇನೆಂದರೆ, ನೀವು ಹೂಡಿಕೆ ಮಾಡಿದ ಹಣಕ್ಕೆ ಗರಿಷ್ಠ ಬಡ್ಡಿ ದರದಲ್ಲಿ ಪ್ರತಿ ತಿಂಗಳು ಲಾಭರೂಪದ ಆದಾಯವು ನಿಮ್ಮ ಬ್ಯಾಂಕ್ ಖಾತೆ ಸೇರುತ್ತದೆ. ನೀವು ಈ ಯೋಜನೆಯನ್ನು ಖರೀದಿಸಿದ ದಿನದಿಂದ ಮುಂದಿನ ಐದು ವರ್ಷಗಳವರೆಗೆ ಪ್ರತಿ ತಿಂಗಳು ಕೂಡ ನೀವು ಈ ನಿಶ್ಚಿತ ಆದಾಯವನ್ನು ಪಡೆಯಬಹುದು.
ಪ್ರಸ್ತುತವಾಗಿ 7.4% ಬಡ್ಡಿದರ ಅನ್ವಯವಾಗುತ್ತಿತ್ತು. ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೇಗೆ 5 ಲಕ್ಷ ಲಾಭ ಪಡೆಯಬಹುದು ಎನ್ನುವ ವಿಧಾನ ಹೀಗಿದೆ ನೋಡಿ. ಅಂಚೆ ಕಛೇರಿಯ ಮಾಸಿಕ ಉಳಿತಾಯ ಯೋಜನೆಯಲ್ಲಿ ವ್ಯಕ್ತಿಯೊಬ್ಬ ಸಿಂಗಲ್ ಆಗಿ ಅಥವಾ ಜಂಟಿಯಾಗಿ ಖಾತೆ ತೆರೆಯಬಹುದು. ಒಬ್ಬ ವ್ಯಕ್ತಿಯು ತನ್ನ ಗರಿಷ್ಠ ಹೂಡಿಕೆವರೆಗೆ ಖಾತೆ ಬೇಕಾದರೂ ಖಾತೆ ತೆರೆಯಬಹುದು.
ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ.!
2023-24ನೇ ಸಾಲಿನ ಕೇಂದ್ರದ ಬಜೆಟ್ ಸಮಯದಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು (Finance Minister) ಈ ಯೋಜನೆ ಮೇಲಿದ್ದ ಹೂಡಿಕೆ ಮೊತ್ತವನ್ನು ವಿಸ್ತರಿಸಿದ್ದಾರೆ. ಆ ಪ್ರಕಾರವಾಗಿ ವ್ಯಕ್ತಿಯೊಬ್ಬ ಕನಿಷ್ಠ 9 ಲಕ್ಷದವರೆಗೆ ಮತ್ತು ಜಂಟಿಯಾಗಿ 15 ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ನೀವೇನಾದರೂ 9 ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಈಗಿರುವ ಬಡ್ಡಿದರದ ಅನ್ವಯ ಒಂದು ತಿಂಗಳಿಗೆ ರೂ.5,550 ಆದಾಯ ಸಿಗುತ್ತದೆ, ವಾರ್ಷಿಕವಾಗಿ ರೂ.66,600 ಮತ್ತು 5 ವರ್ಷಕ್ಕೆ ರೂ.3,33,000ಗಳನ್ನು ಪಡೆಯಲಿದ್ದೀರಿ, ಅದೇ ನೀವು ಜಂಟಿಯಾಗಿ ಖಾತೆ ತೆರೆದಿದ್ದರೆ ಐದು ವರ್ಷಕ್ಕೆ ನಿಮಗೆ 15 ಲಕ್ಷಕ್ಕೆ ಸಿಗುವ ಬಡ್ಡಿದರವು 5 ಲಕ್ಷಕ್ಕಿಂತ ಹೆಚ್ಚಿಗೆ ಇರುತ್ತದೆ.
ಈ ವಾಹನಗಳ ಫಾಸ್ಟ್ ಟ್ಯಾಗ್ ಬಂದ್ ಆಗಲಿದೆ ಕೆಂದ್ರ ಸರ್ಕಾರದ ಆದೇಶ.!
ಗಂಡ ಹೆಂಡತಿ ಮಾತ್ರವಲ್ಲದೆ ತಂದೆ ಮಕ್ಕಳು ಅಥವಾ ಸಹೋದರ ಸಹೋದರಿ ಹೀಗೆ ಯಾವುದೇ ವ್ಯಕ್ತಿಗಳಿಬ್ಬರು ಜಂಟಿಯಾಗಿ ಈ ಯೋಜನೆಯ ಖಾತೆ ತೆರೆಯಬಹುದು. ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ. ವಯಸ್ಸಿನ ಮಿತಿ ಇಲ್ಲದೆ 10ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಸಿಂಗಲ್ ಆಗಿ ಅಥವಾ ಜಂಟಿಯಾಗಿ ಖಾತೆ ತೆರೆಯಬಹುದು.
ನೀವು ಈ ಯೋಜನೆಯಲ್ಲಿ ಬರುವ ಮಾಸಿಕ ಆದಾಯವನ್ನು ನಿಮ್ಮ ಅಂಚೆ ಕಚೇರಿಯ ಉಳಿತಾಯ ಖಾತೆಯ ಬದಲು ಇತರ ಯಾವುದೇ ಬ್ಯಾಂಕ್ ಖಾತೆಗೆ ಕೂಡ ವರ್ಗಾಯಿಸಬಹುದು ಅಥವಾ ಇದರ ಆದಾಯವನ್ನು ನೀವು ಪ್ರತಿ ತಿಂಗಳು ಪಡೆದು ಅಂಚೆ ಕಚೇರಿಯ ಇನ್ನಿತರ ಯೋಚನೆಗಳು ಹೂಡಿಕೆ ಮಾಡಿದರೆ ಇನ್ನು ಹೆಚ್ಚಿನ ಲಾಭ ಪಡೆಯಬಹುದು. ಈ ಯೋಜನೆ ಕುರಿತ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಸಂಪರ್ಕಿಸಿ.